ನೀವು ನೈಮರ್ ಜೂನಿಯರ್ ಫುಟ್ಬಾಲ್ ನೋಡ್ತೀರಾ?
Team Udayavani, Jan 28, 2017, 3:45 PM IST
ನೈಮರ್ ಜೂನಿಯರ್ ರೂಟ್ಸ್‌ನ ನಿಜವಾದ ಪುಟ್ಬಾಲ್, ನೈಮರ್ ಜೂನಿಯರ್ 5 ಸ್ಟೈಲ್‌ಗಳ ಪ್ರತಿಬಿಂಬವಿದು. ಈ ಫೈವ್ ಎ ಸೈಡ್ ಪುಟ್ಬಾಲ್ ಗೇಮ್ ಸಾಧ್ಯವಾದಷ್ಟು ವೇಗವಾಗಿ ಸಾಧ್ಯವಾದಷ್ಟು ಹೆಚ್ಚು ಗೋಲ್ ಗಳಿಸುವ ಉದ್ದೇಶ ಹೊಂದಿದೆ. ಗೋಲ್ ಹೊಡೆಸಿಕೊಂಡ ಒಂದು ತಂಡ ಒಂದು ಆಟಗಾರರನ್ನು ಅಂಗಳದಿಂದ ಆಚೆ ಕಳುಹಿಸುತ್ತದೆ. ಒಂದು ತಂಡ ಎಲ್ಲ 5 ಆಟಗಾರರನ್ನು ಕಳೆದುಕೊಳ್ಳುವ ತನಕ ಅಥವಾ 10 ನಿಮಿಷಗಳ ಕಾಲ ಆಟ ಮುಂದುವರಿಯುತ್ತದೆ. 2017ರ ರಾಷ್ಟ್ರೀಯ ಫೈನಲ್‌ಗೆ ಕಳೆದ ವರ್ಷ ಅಕ್ಟೋಬರ್ ಮತ್ತು ಡಿಸೆಂಬರ್‌ನಲ್ಲಿ ಸಿಟಿ ಅರ್ಹತೆ ಸುತ್ತು ನಡೆದಿತ್ತು. ಅಹಮದಾಬಾದ್, ಗೋವಾ, ಕೊಚ್ಚಿನ್, ಗೌಹಾಟಿ, ಕೋಲ್ಕತಾ, ಮುಂಬೈ, ಬೆಂಗಳೂರು ಮತ್ತು ಹೈದ್ರಾಬಾದ್ ಸೇರಿದಂತೆ ದೇಶದ 12 ನಗರಗಳಲ್ಲಿ ಈ ಸುತ್ತು ನಡೆದಿತ್ತು. ಇಲ್ಲಿನ ವಿಜೇತ ತಂಡಗಳು ಈಗ ರಾಷ್ಟ್ರೀಯ ಫೈನಲ್‌ನಲ್ಲಿ ಸೆಣಸಲಿವೆ. ಜೊತೆಗೆ ಕಾರ್ಪೊರೇಟ್ ಲೆಗ್ ವಿಜೇತರು ಬ್ರೆಜಿಲ್‌ನಲ್ಲಿ ನಡೆಯುವ ನೈಮರ್ ಫೈವ್ ವರ್ಲ್ಡ್ ಫೈನಲ್‌ನಲ್ಲಿ ಅವಕಾಶ ಪಡೆಯಲಿದ್ದಾರೆ.
ಕಾರ್ಪೊರೇಟ್ ಲೆಗ್‌ಗೆ ನೋಂದಣಿ ಆರಂಭವಾಗಿದೆ. ಭಾರತದಲ್ಲಿ ನೊದಲ ನೈಮರ್ ಜೂನಿಯರ್ 5 ಅರ್ಹತಾ ಸುತ್ತು 2016ರಲ್ಲಿ ನಡೆದಿದ್ದು, ಬೆಂಗಳೂರಿನ ಯುವ ತಂಡ ಡ್ರೀಮ್ ಟೀಂ ಗೆದ್ದು ಜುಲೈನಲ್ಲಿ ನೈಮರ್ ಜೂನಿಯರ್ ವರ್ಲ್ಡ್ ಫೈನಲ್ಸ್‌ನಲ್ಲಿ ಆಡಲು ಬ್ರೆಜಿಲ್‌ಗೆ ಪ್ರಯಾಣಿಸಿತ್ತು. ನಿಶ್ಚಿತವಾಗಿಯೂ ಬ್ರೆಜಿಲ್‌ಗೆ ಫುಟ್ಬಾಲ್ ಪ್ರಯಾಣ ಜೀವನದಲ್ಲಿ ಮರೆಯಲಾಗದ ಅನುಭವ ಎನ್ನುತ್ತಾರೆ ಡ್ರೀಮ್ಸ್ ತಂಡದವರು. ನೈಮರ್ ಜೂನಿಯರ್ 5 ಮಾದರಿ ಸಾಕಷ್ಟು ಮನರಂಜನೆ ಹೊಂದಿದೆ. ಇಲ್ಲಿನ ನೀತಿಗಳು ಸಾಕಷ್ಟು ಮನರಂಜನೆ ಹಾಗೂ ಸ್ಪ$ರ್ಧೆಯನ್ನು ಹೊಂದಿವೆ. ಒಂದು ಕ್ಷಣಕ್ಕೆ ನೀವು ಗೇಮ್‌ನ್ನು ಸೋಲುತ್ತೀರಿ ಮತ್ತ ಒಂದು ಆಟಗಾರರನ್ನು ಕಳೆದುಕೊಳ್ಳುತ್ತೀರಿ. ಈ ಮಾದರಿ ಭಾರತೀಯ ಆಟಗಾರರಿಗೆ ಕಠಿಣ ಶ್ರಮಕ್ಕೆ ಉತ್ತೇಜನಕಾರಿ. ನಾವು ಬ್ರೆಜಿಲ್‌ನಲ್ಲಿ 5 ದಿನ ಉಳಿದಿದ್ದು, ಅಲ್ಲಿನ ಪ್ರತಿ ಕ್ಷಣವೂ ನೆನಪಿನಲ್ಲಿ ಉಳಿಯುವಂಥದ್ದು. ನೈಮರ್ ಜೂನಿಯರ್ ಸ್ವಕ್ಷೇತ್ರ ಸ್ಯಾಂಟೋಸ್‌ಗೆ ಭೇಟಿ ನೀಡಿದೆವು. ಸ್ಯಾಂಟೋಸ್ ಸ್ಟೇಡಿಯಂಗೆ ಭೇಟಿ ಕೊಟ್ಟೆವು. ಮುಂದಿನ 2 ದಿನ ನೈಮರ್ ಸ್ಟೇಡಿಯಂನಲ್ಲಿ ಟೂರ್ನಿಮೆಂಟ್ ಆಡಿದೆವು. 2ನೇ ದಿನ ನೈಮರ್ ಜೂನಿಯರ್ ಅವರೇ ಬಂದಿದ್ದರು. ಅದೊಂದು ಅವಿಸ್ಮರಣೀಯ ಕ್ಷಣ ಎನ್ನುತ್ತಾರೆ ಡ್ರೀಮ್ಸ್ ತಂಡದ ಆಟಗಾರರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.