ಥ್ರಿಲ್‌ಗಾಗಿ ಎರಡು ಕಿಕ್‌ ಕೊಡುವ ಅಡ್ವೆಂಚರ್‌ ಆಟಗಳು


Team Udayavani, Jan 28, 2017, 3:57 PM IST

7.jpg

“ಕಿಕ್‌’ ಸಿನಿಮಾದ ಹೀರೋ ಕಿಕ್‌ ಹುಡುಕಿಕೊಂಡು ಹೋಗುವವ. ಲೈಫ‌ಲ್ಲಿ ಥ್ರಿಲ್‌ ಇರಬೇಕು ಅನ್ನೋದು ಅವನ ವಾದ. ಅದಕ್ಕಾಗಿ ಅವನು ಫೈಟ್‌ ಮಾಡುತ್ತಾನೆ, ಯಾರನ್ನೋ ಕಾಪಾಡುತ್ತಾನೆ ಹೀಗೆ ಏನೇನೋ ಸಾಹಸ ಮಾಡುತ್ತಾ ಇರುತ್ತಾನೆ. ಆ ಲೆವೆಲ್‌ಗೆ ಅಲ್ಲದಿದ್ದರೂ ಬಹುತೇಕ ತರುಣ, ತರುಣಿಯರಿಗೆ ಥ್ರಿಲ್‌ ಬೇಕು. ಹಾಗಾಗಿ ಅಡ್ವೆಂಚರ್‌ ಆಟಗಳನ್ನು ಅವರು ಇಷ್ಟ ಪಡುತ್ತಿರುತ್ತಾರೆ. ಕೆಲವರು ಟ್ರೆಕ್ಕಿಂಗ್‌ ಹೋಗುತ್ತಾರೆ. ಈಗೀಗಂತೂ ರಾತ್ರಿ ಟ್ರೆಕ್ಕಿಂಗ್‌ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಅದೇ ಥರ ಅಡ್ವೆಂಚರ್‌ ಆಟಗಳೂ ಹೆಚ್ಚಿದೆ. ರ್ಯಾಫ್ಟಿಂಗ್‌, ಬಂಗಿ ಜಂಪ್‌, ಸ್ಕೈ ಡೈವಿಂಗ್‌ ಹೀಗೆ ಅಡ್ವೆಂಚರ್‌ ಆಟಗಳ ಪಟ್ಟಿ ಮುಂದುವರಿಯುತ್ತದೆ. ಯಾರಿಗೆಲ್ಲಾ ಅಡ್ವೆಂಚರ್‌ ಆಟಗಳ ಬಗೆಗೆ ಆಸಕ್ತಿ ಮತ್ತು ಅಡ್ವೆಂಚರ್‌ ಆಟಗಳನ್ನು ಆಡಬೇಕು ಎಂಬ ಆಸೆ ಇದೆಯೋ ಅವರಿಗಾಗಿ ಎರಡು ಅಡ್ವೆಂಚರ್‌ ಆಟಗಳ ಪರಿಚಯ.

ಝಿಪ್‌ಲೈನ್‌
ಎರಡು ಬೆಟ್ಟ ಇದೆ. ಆಚೆ ಒಂದು ಬೆಟ್ಟ ಈಚೆ ಒಂದು ಬೆಟ್ಟ. ಈಗ ಒಂದು ಬೆಟ್ಟದಿಂದ ಮತ್ತೂಂದು ಬೆಟ್ಟಕ್ಕೆ ಹಗ್ಗದಲ್ಲಿ ಜಾರಿಕೊಂಡು ಹೋಗಬೇಕು. ಅದನ್ನೇ ಝಿಪ್‌ಲೈನ್‌ ಅಂತ ಕರೆಯುವುದು. ಅಡ್ವೆಂಚರ್‌ ಆಟಗಳಲ್ಲಿ ಇದಕ್ಕೆ ಮಹತ್ವದ ಸ್ಥಾನ ಇದೆ. ಯಾಕೆಂದರೆ ಹಾಗೆ ಮೇಲಿಂದ ಜಾರಿಕೊಂಡು ಹೋಗುವಾಗ ಕೆಳಕ್ಕೆ ನೋಡಿದರೆ ಭಾರಿ ಭಯ ಆಗುತ್ತದೆ. ಆ ಭಯವನ್ನು ಮೀರಬೇಕು. ಕೆಲವು ಕಡೆ ಕೂತು ಹಗ್ಗದಲ್ಲಿ ಇನ್ನೊಂದು ಕಡೆ ಹೋಗುವುದಿದೆ. ಇನ್ನು ಕೆಲವು ಕಡೆ ಮಲಗಿಕೊಂಡು ಜುಂಯ್‌ ಅಂತದ ಹಾರಿ ಹೋಗಬಹುದು. ನಿಮಗೆ ಝಿಪ್‌ಲೈನ್‌ ಫೋಟೋ ನೋಡಿದರೆ ಈ ಆಟ ಹೇಗಿರುತ್ತದೆ ಅಂತ ಪೂರ್ತಿ ಗೊತ್ತಾಗುತ್ತದೆ. ಕೆಲವು ಕಡೆ ನದಿಯಲ್ಲಿ ಒಂದು ದಡದಿಂದ ಇನ್ನೊಂದು ದಡಕ್ಕೆ ಝಿಪ್‌ ಲೈನ್‌ ಹಾಕಿರುತ್ತಾರೆ. ಹಕ್ಕಿ ಥರ ಹಾರುತ್ತಾ ಕೆಳಗೆ ನೋಡುವುದು ಒಂಥರಾ ಮಜಾ. ಥ್ರಿಲ್‌ ಬಯಸೋರಿಗಂತೂ ಇದು ಹೇಳಿ ಮಾಡಿಸಿದ ಆಟ.

ಎಲ್ಲೆಲ್ಲಿ- ಸರ್ಜಾಪುರ ರಸ್ತೆಯಲ್ಲಿರುವ ಪ್ಲೇ ಅರೆನಾ (9886098819), ಕನಕಪುರ ರಸ್ತೆಯಲ್ಲಿರುವ ಗುಹಾಂತರ(080 28432465). ಇದಲ್ಲದೇ ಭೀಮೇಶ್ವರಿಯಲ್ಲೂ ಝಿಪ್‌ಲೈನ್‌ ಇದೆ. 

ವಾಲ್‌ ಕ್ಲೈಂಬಿಂಗ್‌
ಬೆಟ್ಟ ಹತ್ತೋದು, ಬಂಡೆಗಳನ್ನು ಹತ್ತೋದು ಇವೆಲ್ಲಾ ತುಂಬಾ ಹಳೆಯ ಮತ್ತು ಅಷ್ಟೇ ರೋಚಕ ಆಟಗಳು. ಸಿನಿಮಾಗಳಲ್ಲೆಲ್ಲಾ ಹೀರೋಗಳು ಈ ಥರ ಬೆಟ್ಟ ಹತ್ತೋ ದೃಶ್ಯಗಳಿರುತ್ತವೆ. ಕಷ್ಟ ಪಟ್ಟು ಒಂದೊಂದೇ ಹೆಜ್ಜೆ ಹತ್ತಿಡುತ್ತಾ ಮೇಲೆ ಹತ್ತುತ್ತಿರುತ್ತಾರೆ. ಆಗೆಲ್ಲಾ ಕಾಲು ಜಾರುವ ಸೀನ್‌ ಬಂದರಂತೂ ಎದೆ ಝಲ್‌ ಅನ್ನುತ್ತದೆ. ನೀವೂ ಇಂಥಾ ಸಾಹಸ ಮಾಡಬಹುದು. ಇಲ್ಲಿ ಹಲವಾರು ಕಡೆ ಡೂಪ್ಲಿಕೇಟ್‌ ಬಂಡೆಗಳಿವೆ. ಅವುಗಳನ್ನು ಹತ್ತುವ ಸಾಹಸಕ್ಕೆ ನೀವು ಮನಸ್ಸು ಮಾಡಬಹುದು. ಕೆಲವು ಕಡೆ ಮಕ್ಕಳಿಗೆ ವಾಲ್‌ಕ್ಲೈಂಬಿಂಗ್‌ ಆಟಗಳಿವೆ. ಪುಟಾಣಿ ಮಕ್ಕಳು ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಗೋಡೆ ಹತ್ತುತ್ತಾ ಇರುತ್ತಾರೆ. ಆಸಕ್ತಿ ಇದ್ದರೆ ನೀವೂ ಬಂಡೆ ಹತ್ತುವ ಸಾಹಸವನ್ನು ಮಾಡಬಹುದು. ಈ ಕಿಕ್‌ ಪಡೆಯಬಹುದು.

ಎಲ್ಲೆಲ್ಲಿ- ರೆಸಿಡೆನ್ಸಿ ರಸ್ತೆಯಲ್ಲಿರುವ ಈಕ್ವಿಲಿಬ್ರಿಯಂ ಕ್ಲೈಂಬಿಂಗ್‌ ಸ್ಟೇಷನ್‌(88616 84444), ಡಬಲ್‌ ರೋಡ್‌ನ‌ಲ್ಲಿರುವ ಕೋರ್ಟ್‌ಯಾರ್ಡ್‌ ಕೆಫೆ, ಕಂಠೀರವ ಸ್ಟೇಡಿಯಂನಲ್ಲೂ ದೊಡ್ಡ ಗೋಡೆ ಇದೆ. ಅದಲ್ಲದೇ ಪ್ಲೇ ಅರೆನಾದಲ್ಲೂ ವಾಲ್‌ ಕ್ಲೈಂಬಿಂಗ್‌ ಇದೆ. 

ಟಾಪ್ ನ್ಯೂಸ್

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

1-wqweeqw

Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.