ಅಧ್ಯಾದೇಶ ತಂದಾದರೂ ಕಂಬಳ ಉಳಿಸೋಣ: ಅಭಯಚಂದ್ರ


Team Udayavani, Jan 29, 2017, 3:45 AM IST

28mood2-(4).jpg

ಮೂಡಬಿದಿರೆ: ಕೃಷಿ ಸಂಸ್ಕೃತಿಯ ಅವಿಭಾಜ್ಯ ಅಂಗವಾದಕಂಬಳವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಈ ಭಾಗದ ಜನಪ
ದೀಯ ಸಂಸ್ಕೃತಿ, ಸ್ವಾಭಿಮಾನಕ್ಕೆ ಧಕ್ಕೆಯಾದರೆ ಯಾವುದೇ ಹೋರಾಟಕ್ಕೆ ನಾವು ಸಿದ್ಧ ಎಂಬ ಸಂದೇಶ ಮೂಡಬಿದಿರೆಯಲ್ಲಿ ಶನಿವಾರ ನಡೆದ “ಕಂಬಳಿ ಉಳಿಸಿ -ಹಕ್ಕೊತ್ತಾಯ’ ಕಾರ್ಯಕ್ರಮದ ಮೂಲಕ ಹೊರ ಹೊಮ್ಮಿತು.

ಕಂಬಳ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಡೆದ ಈ ಹಕ್ಕೊತ್ತಾಯ ಜಾಥಾದಲ್ಲಿ ಓಟದ ಕೋಣಗಳ ಮಾಲಕರು, ಓಟಗಾರರು, ಅಭಿಮಾನಿಗಳು ಹೀಗೆ ಸುಮಾರು ಹತ್ತು ಸಹಸ್ರ ಮಂದಿ ಪಕ್ಷ , ಜಾತಿ, ಮತ ಬೇಧ ಮರೆತು ಪಾಲ್ಗೊಂಡು “ತುಳುನಾಡು ನಮ್ಮ ನೆಲ, ಕಂಬಳಕ್ಕೆ ನಮ್ಮ ಬೆಂಬಲ’ ಎಂದು ಘೋಷಿಸಿದರು.

ಮುಂಜಾನೆ 9ರ ವೇಳೆಗೆ ಮೂಡಬಿದಿರೆ ಸ್ವರಾಜ್ಯ ಮೈದಾನದಿಂದ ಕಡಲಕೆರೆಯ ಕೋಟಿ-ಚೆನ್ನಯ ಕಂಬಳ ಕ್ರೀಡಾಂಗಣದತ್ತ ಜಾಥಾ ಸಾಗುವುದೆಂದು ತಿಳಿಸಲಾಗಿದ್ದರೂ ದೂರದ ಊರುಗಳಿಂದ ವಾಹನಗಳಲ್ಲಿ ಕಂಬಳದ ಕೋಣಗಳನ್ನು ಕರೆತರುವಾಗ ಕೊಂಚ ತಡವಾಯಿತು. ಆದರೂ 10.30ರ ವೇಳೆಗೆ ಕೊಂಬು, ಬ್ಯಾಂಡು ವಾಲಗಗಳಿಂದ “ವಿಷಾದದೊಳಗೂ ಒಂದು ಸಾರ್ಥಕ ಹೋರಾಟದ ಕೆಚ್ಚಿನೊಂದಿಗೆ’ ಕಂಬಧಿಳದ ಹಮ್ಮಿàರರು ಹೊಸದಾದ ರಿಂಗ್‌ರೋಡ್‌ ಮೂಲಕ ಹಾದು ಸುಮಾರು 2 ಕಿ. ಮೀ. ದೂರದಲ್ಲಿರುವ ಕಡಲಕೆರೆ ಕೋಟಿ ಚೆನ್ನಯ ಕಂಬಳ ಕ್ರೀಡಾಂಗಣ ತಲುಪಿದರು.

ಅಧ್ಯಾದೇಶ  ಪಡೆಯೋಣ
ನಾವು ಶಾಂತಿ ಪ್ರಿಯರು. ಕಾನೂನು ಗೌರವಿಸುವವರು. ಕಂಬಳವಿಲ್ಲದ ನಮ್ಮ ಬದುಕಿನ ನೋವು ಸರಕಾರಕ್ಕೆ, ನ್ಯಾಯಪೀಠಕ್ಕೆ ಅರ್ಥವಾಗಬೇಕು. ಜಿಲ್ಲೆಯ ಎಲ್ಲ ಶಾಸಕರು ಕಂಬಳದ ಪರ ನಿಂತು ಬೆಂಬಲ ನೀಡಬೇಕು. ಅಧ್ಯಾದೇಶ ತಂದಾದರೂ ಕಂಬಳ ಉಳಿಸಲು ಪ್ರಯತ್ನಿಸೋಣ ಎಂದ ಮೂಡಬಿದಿರೆ ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಕೆ. ಅಭಯಚಂದ್ರ ಹೇಳಿದರು. 

ಅಧ್ಯಾದೇಶ ಬೇಕು
ಕಾನೂನಿಗೆ ಗೌರವಿಸಿ ತಲೆಬಾಗಿದ್ದೇವೆ. ಕಂಬಳ ಬೇಕೇ ಬೇಕು. ಸರಕಾರ ಅತಿ ಶೀಘ್ರವೇ ಅಧ್ಯಾದೇಶ ಹೊರಡಿಸಿ ಕಂಬಳ ಬೆಂಬಲಿಸಬೇಕು ಎಂದು ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಆಗ್ರಹಿಸಿದರು.

ಆಧ್ಯಾತ್ಮಿಕ ಸ್ಪರ್ಶವಿದೆ
ಜಾನಪದ ಕ್ರೀಡೆ ಕಂಬಳಕ್ಕೆ ಆಧ್ಯಾತ್ಮಿಕ ಸ್ಪರ್ಶವಿದೆ. ಅಲ್ಲಿ ಅಹಿಂಸೆಯಿಲ್ಲ. ನ್ಯಾಯಾಲಯವೂ ಕಂಬಳ ಬೆಂಬಲಿಸಿ ತೀರ್ಪು ನೀಡುವ ವಿಶ್ವಾಸವಿದೆ ಎಂದು ಬಾಳೆಕೋಡಿ ಶಶಿಕಾಂತಮಣಿ ಸ್ವಾಮೀಜಿ ಹೇಳಿದರು.

ಪೇಟದವರ ತಾಳ್ಮೆ ಪರೀಕ್ಷೆ: ಮಿಥುನ್‌ ರೈ
ಪ್ರಾಣಿ ದಯಾ ಸಂಘಟನೆಯವರು (ಪೇಟಾ) ತುಳುವರ ತಾಳ್ಮೆ ಪರೀಕ್ಷಿಸುತ್ತಿದ್ದಾರೆ. ಅನಗತ್ಯವಾಗಿ ವಿವಾದ ಮಾಡುತ್ತಿರುವ ಪೇಟಾದವರು ಇನ್ನು ದ.ಕ.ಜಿಲ್ಲೆಗೆ ಬಂದರೆ ತಕ್ಕ ಉತ್ತರ ನೀಡಲಿದ್ದೇವೆ ಎಂದು ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಹೇಳಿದರು.

ತುಳು ಚಲನ ಚಿತ್ರ ನಟರ ಬೆಂಬಲ
ಕಲಾವಿದರಾದ ಭೋಜರಾಜ್‌ ವಾಮಂಜೂರು, ದೇವದಾಸ್‌ ಕಾಪಿಕಾಡ್‌, ನವೀನ್‌ ಡಿ. ಪಡೀಲ್‌ ಕಂಬಳಕ್ಕೆ ಬೆಂಬಲ ವ್ಯಕ್ತಪಡಿಸಿದರು. ಹಿರಿಯ ಕಂಬಳ ವಿದ್ವಾಂಸ, ಮೂಡಬಿದಿರೆ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಗುಣಪಾಲ ಕಡಂಬ ಪ್ರಸ್ತಾವನೆಗೈದರು. 

ಪಕ್ಷ ಬೇಧ ಮರೆತರು 
ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ವಿನಯ ಕುಮಾರ್‌ ಸೊರಕೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ. ಜಗದೀಶ ಅಧಿಕಾರಿ, ಕೆ. ಭುವನಾಭಿರಾಮ ಉಡುಪ, ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟ್ಯಾನ್‌, ಸುದರ್ಶನ ಎಂ., ಜಿಲ್ಲಾ ವಕ್ತಾರ ಕೆ. ಕೃಷ್ಣರಾಜ ಹೆಗ್ಡೆ. ವಿಹಿಂಪದ ಜಗದೀಶ ಶೇಣವ, ಜೆಡಿಎಸ್‌ ಕ್ಷೇತ್ರಾಧ್ಯಕ್ಷ ಅಶ್ವಿ‌ನ್‌ ಜೆ. ಪಿರೇರಾ, ತೋಡಾರು ದಿವಾಕರ ಶೆಟ್ಟಿ, ದ.ಕ. ಜಿಲ್ಲಾ ಯುವ ಜೆಡಿಎಸ್‌ ಅಧ್ಯಕ್ಷ ಅಕ್ಷಿತ್‌ ಸುವರ್ಣ ಉಪಸ್ಥಿತರಿದ್ದರು.

ಕಂಬಳ ಪ್ರಮುಖರು ಶಾಂತಾರಾಮ ಶೆಟ್ಟಿ, ನವೀನ್‌ಚಂದ್ರ ಆಳ್ವ, ವಿನೂ ವಿಶ್ವನಾಥ ಶೆಟ್ಟಿ, ಮಾಲಾಡಿ ಅಜಿತ್‌ ಕುಮಾರ್‌ ರೈ, ಸುಧಾಕರ ಹೇರಂಜೆ, ಅಶೋಕ್‌ ಮಾಡ, ಶಶಿಧರ ಮಡಮಕ್ಕಿ, ಕದ್ರಿ ನವನೀತ ಶೆಟ್ಟಿ, ಅರ್ಜುನ್‌ ಕಾಪಿಕಾಡ್‌, ಸತೀಶ್ಚಂದ್ರ ಸಾಲ್ಯಾನ್‌, ಶಶಿಧರ ಮಡಮಕ್ಕಿ, ಪಿ.ಆರ್‌. ಶೆಟ್ಟಿ, ಉದಯ ಎಸ್‌. ಕೋಟ್ಯಾನ್‌,  ಪ್ರವೀಣ್‌ಚಂದ್ರ ಆಳ್ವ, ಹರಿಣಾಕ್ಷಿ ಸುವರ್ಣ, ಸುರೇಶ್‌ ಪ್ರಭು, ರತ್ನಾಕರ ಸಿ. ಮೊಲಿ ಪಾಲ್ಗೊಂಡಿದ್ದರು. 

ಸುಮಾರು 10,000 ಮಂದಿ ಪಾಲ್ಗೊಂಡು ಈ “ಹಕ್ಕೊತ್ತಾಯ’ ಕಾರ್ಯಕ್ರಮವನ್ನು ಚಾರಿತ್ರಿಕವಾಗಿ ದಾಖಲಿಸಿದರು.

ಕೋಣಗಳ ಮೆರವಣಿಗೆ
ಸ್ವರಾಜ್ಯ ಮೈದಾನದಿಂದ ಆರಂಭವಾದ ಹಕ್ಕೊತ್ತಾಯ ಜಾಥಾಗೆ ಶಾಸಕ, ಮೂಡುಬಿದಿರೆ ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ
ಅಭಯಚಂದ್ರ ಜೈನ್‌ ತೆಂಗಿನಕಾಯಿ ನೆಲಕ್ಕೆ ಹೊಡೆದು ಚಾಲನೆ ನೀಡಿದರು. ಕರಾವಳಿಯ ವಿವಿಧ ಕಂಬಳ ಸಮಿತಿಗಳ ಗಣ್ಯರು, ಕಂಬಳಾಭಿಮಾನಿಗಳ ಜತೆಗೂಡಿ ಎಲ್ಲೆಡೆಗಳಿಂದ ಶೃಂಗರಿಸಿಕೊಂಡು ಬಂದಿದ್ದ ನೂರೈವತ್ತಕ್ಕೂ ಅಧಿಧಿಕ ಜತೆ ಕೋಣಗಳು ಹಕ್ಕೊತ್ತಾಯಕ್ಕಾಗಿ ರಸ್ತೆಯಲ್ಲಿ ಹೆಜ್ಜೆ ಹಾಕಿದವು. ಜತೆಯಲ್ಲಿ ಹಳದಿ, ಕೆಂಪು, ನೀಲಿ ಹೀಗೆ ಮುಂಡಾಸು ಸುತ್ತಿಕೊಂಡ ಮಾಲಕರು, ಸಮವಸ್ತ್ರ ಧರಿಸಿದ್ದ ಓಟಗಾರರು, ಪರಿಚಾರಕರು, ಕಂಬಳ ಉಳಿಸಿಕೊಡಿ ಇತ್ಯಾದಿ ಪೋಸ್ಟರ್‌ಗಳನ್ನು ಹಿಡಿದವರು, ಚೆಂಡೆ,ಕೊಂಬು, ನಾಸಿಕ್‌ ಬ್ಯಾಂಡ್‌, ಸಂಗೀತ, ವಾದ್ಯ, ಘೋಷಗ ಳೊಂದಿಗೆ ರಿಂಗ್‌ ರೋಡ್‌ ರಸ್ತೆಯಾಗಿ ಕಡಲಕೆರೆ ನಿಸರ್ಗಧಾಮದ ಕಂಬಳದ ಸ್ಥಳಕ್ಕೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

“ಪಾಸ್‌ ಆರ್ಡಿನೆನ್ಸ್‌, ಸೇವ್‌ ಕಂಬಳ’, “ಬ್ಯಾನ್‌ ಪೆಟಾ ಸೇವ್‌ ಕಂಬಳ’, “ಶೀಘ್ರ ಆದೇಶ ನೀಡಿ, ಕಂಬಳ ಉಳಿಸಿ’ ಫಲಕಗಳು ಜಾಥಾದಲ್ಲಿ ಕಾಣಿಸಿಕೊಂಡಿದ್ದವು.

ಟಾಪ್ ನ್ಯೂಸ್

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Hampankatte: ಸಿಟಿ ಮಾರ್ಕೆಟ್‌ ರಸ್ತೆಗೆ ಬೇಕಿದೆ ಕಾಯಕಲ್ಪ

7

Mangaluru: ಪಿ.ಎಂ. ರಾವ್‌ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ

4

ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್‌

3

Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

10-uv-fusion

Nature: ಪ್ರಕೃತಿ ಮಡಿಲಲ್ಲಿ ಒಂದು ಕ್ಷಣ

9-uv-fusion

Grandfather: ಬಡ ತಾತನ ಹೃದಯ ಶ್ರೀಮಂತಿಕೆ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.