ಬಳಕೆಯ ವಸ್ತುಗಳಿಗೆ ಪ್ರತ್ಯೇಕ ಸುರಕ್ಷತಾ ಆಯೋಗ


Team Udayavani, Jan 30, 2017, 3:45 AM IST

consumer.jpg

ಸಾಮಾನ್ಯ ಬಳಕೆದಾರರು ತಮ್ಮ ದಿನನಿತ್ಯದ ವ್ಯವಹಾರದಲ್ಲಿ ಬಳಸುವ ವಸ್ತುಗಳ ಸುರಕ್ಷತೆ ಬಗ್ಗೆ ಸಾಕಷ್ಟು ಚರ್ಚೆ, ಅಧ್ಯಯನ ನಡೆದು ವರದಿಗಳು ಪ್ರಕಟವಾಗುತ್ತಿದೆ. ಅನೇಕ ಸರ್ಕಾರಿ ಮತ್ತು ಸ್ವಯಂಸೇವಾ ಸಂಸ್ಥೆಗಳು ತಾವು ಪತ್ತೆಹಚ್ಚಿರುವ ಮಾಹಿತಿಯನ್ನು ಹಾಗೂ ಅದನ್ನು ಸರಿಪಡಿಸಲು ಅಗತ್ಯ ಕ್ರಮದ ಬಗ್ಗೆ ವರದಿ ಸಲ್ಲಿಸಿದ್ದು, ಅನೇಕ ವರದಿಗಳು ಸರ್ಕಾರದ ಇಲಾಖೆಗಳ ರೆಕಾರ್ಡ್‌ ರೂಂ ಸೇರಿದೆ. ಅದೇನೆ ಇರಲಿ, ಬಳಕೆದಾರರಿಗೆ ನೀಡಿರುವ ಸುರಕ್ಷತೆಯ ಹಕ್ಕಿಗೆ ಮಾನ್ಯತೆ ದೊರೆಯಬೇಕಾದರೆ ಕೆಲವೊಂದು ನಿರ್ಧಿಷ್ಟ ಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ. ಹೆಚ್ಚುತ್ತಿರುವ ಅನಾಹುತಗಳು ಮತ್ತು ಅವಘಡಗಳನ್ನು ಗಮನಿಸಿದಾಗ ಸುರಕ್ಷತೆಗೆ ಹೆಚ್ಚಿನ ಪ್ರಾಶಸ್ತÂ ನೀಡುವುದು ಅಗತ್ಯವಾಗಿ ಕಾಣುತ್ತಿದೆ. 

ಇತ್ತೀಚಿನ ದಿನಗಳಲ್ಲಿ ಬಳಕೆದಾರರು ಬಳಸುತ್ತಿರುವ ಸರಕುಗಳಿಂದ ಆರಂಭವಾಗಿ ವಾಸಿಸುತಿರುವ ಕಟ್ಟಡಗಳವರೆಗೂ ಸುರಕ್ಷತೆಯನ್ನು ಕಡೆಗಣಿಸಿರುವುದು ಕಂಡು ಬರುತ್ತದೆ. ರಸ್ತೆ ಮತ್ತು ಕಟ್ಟಡಗಳ ಅಪಘಾತಗಳ ವಿಷಯ ಸಾಕಷ್ಟು ಬೆಳಕಿಗೆ ಬರುವಂತೆ ಇತರೆ ಸುರಕ್ಷಿತವಲ್ಲದ ವಿಷಯ ಬೆಳಕಿಗೆ ಬರುವುದಿಲ್ಲ. ಉದಾಹರಣೆಗೆ ಮಕ್ಕಳ ಆಟದ ವಸ್ತುಗಳು, ಮನೆಯೊಳಗೆ ಉಪಯೋಗಿಸುವ ಪೇಯಿಂಟ್‌, ಬಾತ್‌ರೂಂ ಮತ್ತು ಟಾಯ್ಲೆಟ್‌ ಕ್ಲೀನರ್‌, ವಿದ್ಯುತ್‌ ಉಪಕರಣಗಳು ಮತ್ತು ವಿದ್ಯುತ್‌ ತಂತಿ, ಸೌಂದರ್ಯ ವರ್ಧಕಗಳು ಇತ್ಯಾದಿ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದರೊಟ್ಟಿಗೆ ಬಳಕೆದಾರರು ಮನೋರಂಜನೆಗಾಗಿ ಉಪಯೋಗಿಸುವ ಉಪಕರಣಗಳು, ಸಾಧನಗಳು ಸಹ ಸುರಕ್ಷಿತವಲ್ಲ ಎಂದು ತಿಳಿದುಬಂದಿದೆ. ಕಟ್ಟಡ ಕುಸಿತ, ಅಸಮರ್ಪಕ ಲಿಫ್ಟ್, ಜಯಂಟ್‌ ವೀಲ್‌, ಈಜುವ ಕೊಳ, ಪಾರ್ಕ್‌ ಮತ್ತು ಉದ್ಯಾನವನದಲ್ಲಿರುವ ಉಪಕರಣಗಳಿಂದ ಗಾಯಗೊಂಡ ಪ್ರಕರಣಗಳು ಆಗಾಗ ವರದಿಯಾಗುತ್ತಿರುತ್ತದೆ. ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ಉಪ್‌ಹಾರ್‌ ಚಿತ್ರಮಂದಿರದ ಘಟನೆ, ಭೂಪಾಲ್‌ ದುರಂತ ಇತ್ಯಾದಿಗೆ ಸಿಗುವಷ್ಟು ಪ್ರಚಾರ ತಾಲ್ಲೂಕು ಅಥವಾ ಗ್ರಾಮಾಂತರ ಪ್ರದೇಶದಲ್ಲಿ ನಡೆಯುವ ಅವಘಡಗಳಿಗೆ  ಸಿಗುವುದಿಲ್ಲ. 

ಸುರಕ್ಷತೆಯ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಸಾಕಷ್ಟು ಕಾನೂನುಗಳಿವೆ. ಅದಕ್ಕೇನು ಕೊರತೆ ಇಲ್ಲ. ಸುರಕ್ಷತಾ ದೃಷ್ಟಿಯಿಂದ ಕಟ್ಟಡದ ವಿನ್ಯಾಸ ಹೇಗಿರಬೇಕು ಎಂಬುದನ್ನು ತಿಳಿಸುವ ಮಾನಕಗಳಿದೆ. ಲಿಫ್ಟ್ ಸಂರಚನೆಯ ಬಗ್ಗೆ ಪ್ರತ್ಯೇಕ ಕಾನೂನು ಇದೆ. ರಾಷ್ಟ್ರೀಯ ಬಿಲ್ಡಿಂಗ್‌ ಕೋಡ್‌ ಎಂಬ ನಿಯಮವಿದೆ. ಆಟದ ವಸ್ತುಗಳಿಗೆ ಮಾನಕಗಳಿದೆ.

ಸುರಕ್ಷತಾ ಕಾನೂನು ಮತ್ತು ಮಾನಕಗಳನ್ನು ಜಾರಿಗೊಳಿಸವ ಜವಾಬ್ದಾರಿ ಹೊತ್ತಿರುವ ಸಂಸ್ಥೆಗಳು ಮತ್ತು ಇಲಾಖೆಗಳಿದೆ. ಆದರೆ, ವಾಸ್ತವದಲ್ಲಿ ಎನಾಗುತ್ತಿದೆ? ಎಲ್ಲ ಇಲಾಖೆಗಳಲ್ಲಿರುವಂತೆ ಸಿಬ್ಬಂದಿಯ ಕೊರತೆ, ಆರ್ಥಿಕ ಮುಗ್ಗಟ್ಟು ಇತ್ಯಾದಿಯ ಪರಿಣಾಮ ಕಾನೂನುಗಳು ಪುಸ್ತಕದಲ್ಲಿ ಅಥವಾ ವೆಬ್‌ಸೈಟ್‌ನಲ್ಲೇ ಉಳಿದುಕೊಂಡಿವೆ. ಬಳಕೆದಾರರ ಸುರಕ್ಷತೆಯ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಯೋಚಿಸುವ ಕಾಲ ಬಂದಿದೆ. ಸುರಕ್ಷತೆಯ ವಿಷಯದಲ್ಲಿ ನಾವು ಅಮೇರಿಕದ ಬಳಕೆಯ ವಸ್ತುಗಳ ಸುರಕ್ಷತಾ ಆಯೋಗದತ್ತ ಗಮನ ಹರಿಸಬೇಕಿದೆ. ಅದರಂತೆ ಸಾಕಷ್ಟು ಪಾಠ ಕಲಿಯಬಹುದಾಗಿದೆ. 

ಬಳಕೆದಾರರ ಸುರಕ್ಷತೆಯ ವಿಷಯದಲ್ಲಿ ಅಮೇರಿಕಾ ನೀಡಿರುವ ಪ್ರಾಮುಖ್ಯತೆಯನ್ನು ನಾವು ಅನುಸರಿಸಬೇಕಿದೆ. ಎಪ್ಪತ್ತರ ದಶಕದಲ್ಲಿ ಅಮೇರಿಕ ಕನ್ಸೂಮರ್‌ ಪ್ರಾಡಕ್ಟ್ ಸೇಫ್ಟಿ ಕಮೀಷನ್‌ (ಸಿಪಿಎಸ್‌ಸಿ) ಎಂಬ ಆಯೋಗವನ್ನು ಸ್ಥಾಪಿಸಿತು. 1973ರಲ್ಲಿ ಅಸ್ತಿತ್ವಕ್ಕೆ ಬಂದ ಈ ಆಯೋಗ  ಸ್ವತಂತ್ರವಾಗಿದ್ದು ಐದು ಆಯುಕ್ತರನ್ನು ಹೊಂದಿದೆ. ಏಳು ವರ್ಷಕ್ಕೊಮ್ಮೆ ಅವರನ್ನು ನೇಮಕ ಮಾಡಲಾಗುವುದು. ಈ ಆಯೋಗದ ಮುಖ್ಯ ಉದ್ದೇಶಗಳು ನಾಲ್ಕು.

ಮೊದಲನೆಯದಾಗಿ ಸಾರ್ವಜನಿಕರು ಬಳಸುವ ವಸ್ತುಗಳು ಮತ್ತು ಸರಕುಗಳಿಂದ ಉಂಟಾಗಬಹುದಾದ ಅಪಾಯಗಳಿಂದ ಅವರನ್ನು ರಕ್ಷಿಸುವುದು. ಮಾರಾಟವಾಗುತ್ತಿರುವ ಯಾವುದಾದರು ವಸ್ತು ಹಾನಿಕರ ಎಂದು ತಿಳಿದುಬಂದಲ್ಲಿ ಅದನ್ನು ಮಾರುಕಟ್ಟೆಯಿಂದ ಬಹಿಷ್ಕರಿಸುವುದೂ ಸೇರಿದೆ. ಆಯೋಗವು ಮತ್ತೂಂದು ರೀತಿಯಲ್ಲಿ ಬಳಕೆದಾರರ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ. ದಿನನಿತ್ಯದ ಸರಕುಗಳ ಬಗ್ಗೆ ತುಲನಾತ್ಮಕ ವರದಿಯನ್ನು ಪ್ರಕಟಿಸಿ ಅದರ ಮೂಲಕ ಬಳಕೆದಾರರಲ್ಲಿ ಜಾಗೃತಿ ಉಂಟು ಮಾಡುತ್ತದೆ. ಆಯೋಗವು ನೀಡುವ ವರದಿಯನ್ನು ಆಧರಿಸಿ ಬಳಕೆದಾರರು ಸರಕುಗಳನ್ನು ಖರೀದಿಸುವ ಅಭ್ಯಾಸ ಬೆಳಸಿಕೊಂಡಿದ್ದಾರೆ. ಒಂದು ವೇಳೆ ವರದಿಯ ಪ್ರಕಾರ ಯಾವುದೆ ವಸ್ತು/ಸರಕು ಜನರಿಗೆ ಮಾರಕ ಎಂದು ತಿಳಿದ ಕೂಡಲೆ ಅದನ್ನು ಬಹಿಷ್ಕರಿಸುತ್ತಾರೆ. ತಯಾರಕರೇ ಅದನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯುತ್ತಾರೆ. ಮಾರುಕಟ್ಟೆಯಲ್ಲಿ ಆ ಕಂಪನಿಗಳ ಷೇರ್‌ ಮೌಲ್ಯ ಕುಸಿಯುತ್ತದೆ. 

ಮೂರನೆಯದಾಗಿ, ಆಯೋಗವು ವಸ್ತು ಮತ್ತು ಸರಕುಗಳಿಗೆ ಹೊಂದುವ ಮಾನಕಗಳನ್ನು ಸಿದ್ಧಪಡಿಸುತ್ತದೆ. ನಮ್ಮಲ್ಲಿ ಬಿಐಎಸ್‌ ಇದ್ದಂತೆ. ಕೆಲವೊಂದು ಮಾನಕಗಳನ್ನು ಖಡ್ಡಾಯಗೊಳಿಸಲಾಗಿದೆ. ಆದರೆ ಅಲ್ಲಿಗೂ ನಮ್ಮಲ್ಲಿಗೂ ಇರುವ ವ್ಯತ್ಯಾಸ ಇರುವುದು ಈ ಮಾನಕಗಳ ಅನುಷ್ಠಾನದಲ್ಲಿ. ಬಾಟಲ್‌ ನೀರಿಗೆ ಮಾನಕ ಖಡ್ಡಾಯಗೊಳಿಸಲಾಗಿದೆ. ಆದರೆ ಮಾನಕವಲ್ಲದ ಬಾಟಲ್‌ ನೀರು ದೊರೆಯುತ್ತಿಲ್ಲವೆ? ಮಾನಕವನ್ನೆ ತಪ್ಪುತಪ್ಪಾಗಿ ಮುದ್ರಿಸಿ ಬಳಕೆದಾರರನ್ನು ವಂಚಿಸುತ್ತಿರುವ ವರ್ತಕರಿಗೆ ಏನೆನ್ನಬೇಕು. ಬಿಐಎಸ್‌ ನೀಡುವ ಚಿಹ್ನೆಯನ್ನೇ ಕನಿಷ್ಟ ಆರು ರೀತಿಯಲ್ಲಿ ಬಳಸಿ ಜನರನ್ನು ವಂಚಿಸಲಾಗುತ್ತಿದೆ ಎಂಬ ವರದಿ ಇದೆ. ನಿಖರವಾದ ಬಿಐಎಸ್‌ ಚಿಹ್ನೆ ಯಾವುದು? ನಕಲಿ ಚಿನ್ನೆ ಯಾವುದು? ಎಂಬುದನ್ನು ಗುರುತಿಸುವುದೇ ಕಷ್ಟವಾಗಿದೆ. ನಾಲ್ಕನೆಯದಾಗಿ ಸಿಪಿಎಸ್‌ಸಿ ತಯಾರಕರು, ಉತ್ಪಾದಕರು ಮತ್ತು ವಿತರಕರ ಮನವೊಲಿಸಿ, ಇಚ್ಛೆಯಿಂದ ಮಾನಕಗಳಂತೆ ವಸ್ತುಗಳನ್ನು ತಯಾರಿಸಲು ಪ್ರೇರೇಪಣೆ ನೀಡುತ್ತದೆ. ಈ ಆಯೋಗ ಪ್ರಕಟಿಸುವ ವರದಿಗಳ ಹಿನ್ನೆಲೆಯಲ್ಲಿ ಅನೇಕ ಮಾನಕಗಳು ಸಿದ್ಧವಾಗುತ್ತದೆ. ಯಾವ ವಸ್ತು/ಸರಕಿನಿಂದ ಅಪಾಯ ಸಂಭವಿಸಿತು, ಯಾವ ಬ್ರಾಂಡ್‌ ಸರಕು, ತಯಾರಕರು ಯಾರು, ಘಟನಾ ಸ್ಥಳ, ಬಳಕೆದಾರರಿಗೆ ಆದ ನೋವು, ನಷ್ಟ, ಅಪಘಾತಕ್ಕೆ ಕಾರಣ ಇತ್ಯಾದಿ ಎಲ್ಲವನ್ನೂ ಬಳಕೆದಾರರಿಗೆ ಅರ್ಥವಾಗುವ ರೀತಿಯಲ್ಲಿ ವರದಿಯನ್ನು ಪ್ರಕಟಿಸುತ್ತದೆ. 

ಕೇಂದ್ರ ಸರ್ಕಾರದ ಮುಂದಿರುವ ಗ್ರಾಹಕ ಸಂರಕ್ಷಣಾ ಮಸೂದೆ 2015ರಲ್ಲಿ ಸುರಕ್ಷತೆ ಬಗ್ಗೆ ಗಮನ ನೀಡಲಾಗಿದೆ. ಸುರಕ್ಷತೆಗೆ ಪ್ರತ್ಯೇಕವಾದ ಆಯೋಗದ ರಚನೆ ಬಗ್ಗೆ ಉಲ್ಲೇಖವಿಲ್ಲದಿದ್ದರೂ, ಬಳಕೆದಾರರ ಸಂರಕ್ಷಣಾ ಆಯೋಗ ಸ್ಥಾಪಿಸುವ ಉಲ್ಲೇಖವಿದೆ. ಇದರಡಿಯಲ್ಲಿ ಸುರಕ್ಷತೆಗೆ ಪ್ರತ್ಯೇಕವಾದ ಘಟಕ ಸ್ಥಾಪನೆಯಾಗುವ ಸಾಧ್ಯತೆ ಇದೆ. ಸಂರಚನೆ ಹೇಗೇ ಇರಲಿ, ಬಳಕೆದಾರರ ಸುರಕ್ಷತೆಗೆ ಮಾನ್ಯತೆ ದೊರೆಯುವುದು ಮುಖ್ಯ. 

– ವೈ.ಜಿ.ಮುರಳೀಧರನ್‌
ಸದಸ್ಯರು: ಕೇಂದ್ರ ಗ್ರಾಹಕ ಸಂರಕ್ಷಣಾ ಪರಿಷತ್ತು, ಭಾರತ ಸರ್ಕಾರ

 

ಟಾಪ್ ನ್ಯೂಸ್

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.