ಎಸ್‌ಎಂಎಸ್‌ನಲ್ಲೇ ಓಪನ್ ಆಗುತ್ತೆ ಸ್ಮಾರ್ಟ್ ಲಾಕ್!
Team Udayavani, Jan 30, 2017, 3:45 AM IST
ಬೆಂಗಳೂರು: ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ನೂರಾರು ಕಿ.ಮೀ. ದೂರದಲ್ಲಿರುವ ನಿಮ್ಮ ಮನೆ ಅಥವಾ ಕಚೇರಿ ಬೀಗವನ್ನು ಇಂಟರ್‌ನೆಟ್ ಸೌಲಭ್ಯವಿಲ್ಲದೆ ತೆಗೆಯಬಹುದು!
ಹೌದು, ಬೆಂಗಳೂರು ಮೂಲದ “ಓಪನ್ ಆ್ಯಪ್’ ಎಂಬ ಸ್ಟಾರ್ಟ್‌ಅಪ್ ಕಂಪನಿ ಇಂತಹದ್ದೊಂದು ವಿನೂತನ ವ್ಯವಸ್ಥೆಯನ್ನು
ಅನ್ವೇಷಿಸಿದೆ.
ಈ ಸೌಲಭ್ಯಕ್ಕಾಗಿ ನೀವು ಮಾಡಬೇಕಾದ್ದಿಷ್ಟೆ. ಮನೆ ಅಥವಾ ಕಚೇರಿಗಳಿಗೆ ಅಳವಡಿಸಿರುವ “ಸ್ಮಾರ್ಟ್ ಲಾಕ್’ಗೆ ಸಂಬಂಧಿಸಿದ ಆ್ಯಪ್ ಲಿಂಕ್ ಅನ್ನು ಆ ಸ್ಥಳದಲ್ಲಿ ಹಾಜರಿರುವ ವ್ಯಕ್ತಿಗೆ ಸೀಮಿತ ಅವಧಿಗೆ ಎಸ್‌ಎಂಎಸ್ ಕಳುಹಿಸಿದರೆ ಸಾಕು. ಆ ಎಸ್‌ಎಂಎಸ್ ಸ್ವೀಕರಿಸಿದ ವ್ಯಕ್ತಿ ಕ್ಲಿಕ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅಟೋಮೆಟಿಕ್ ಆಗಿ ಬೀಗ ತೆರೆದುಕೊಳ್ಳುತ್ತದೆ.
ಇದಲ್ಲದೆ, ನೇರವಾಗಿ ಮಾಲಿಕ ಕೂಡ ಇಂಟರ್‌ನೆಟ್ ಸೌಲಭ್ಯದಿಂದ ಕುಳಿತಲ್ಲಿಂದಲೇ ಈ “ಸ್ಮಾರ್ಟ್ ಲಾಕ್’ ಬೀಗ ತೆಗೆಯಬಹುದು. ಜಗತ್ತಿನಲ್ಲಿ ಸ್ಮಾರ್ಟ್ ಲಾಕ್ ತಯಾರಿಸುವ ಕಂಪನಿಗಳು ಇರುವುದು ಕೇವಲ ಐದರಿಂದ ಆರು. ಅದರಲ್ಲೂ ಇಂಟರ್‌ನೆಟ್ ಸೌಲಭ್ಯವಿಲ್ಲದೆ ಈ ಮಾದರಿಯ ಬೀಗವನ್ನು ತೆಗೆಯುವ ತಂತ್ರಜ್ಞಾನ ಅಭಿವೃದಿಟಛಿಪಡಿಸಿದ ಏಕೈಕ ಕಂಪನಿ ಓಪನ್ ಆ್ಯಪ್ ಆಗಿದೆ.
ಸಾಮಾನ್ಯವಾಗಿ ಈಗಿರುವ ಸ್ಮಾರ್ಟ್ ಲಾಕ್‌ಗಳು ಇಂಟರ್‌ನೆಟ್ ಸರ್ವಿಸ್ ಪ್ರೊವೈಡರ್‌ಗಳನ್ನು ಅವಲಂಬಿಸಿವೆ. ಹಾಗಾಗಿ,
ಅಂತರ್ಜಾಲ ವ್ಯವಸ್ಥೆ ಇದ್ದರೆ ಮಾತ್ರ ಈ ಬೀಗಗಳನ್ನು ತೆಗೆಯಲು ಸಾಧ್ಯ. ಆದರೆ ಹೊಸ ಮಾದರಿಯ ಸ್ಮಾರ್ಟ್ ಲಾಕ್‌ನಲ್ಲಿ ತನ್ನದೇ ಆದ ಇಂಟರ್‌ನೆಟ್ ಅಥವಾ ವೈ-ಫೈ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಮೊಬೈಲ್‌ನಲ್ಲಿ ವೈ-ಫೈ ಆನ್ ಆಗುತ್ತಿದ್ದಂತೆ ಸಿಗ್ನಲ್ ಬರುತ್ತದೆ. ಆ ಮೂಲಕ ಬೀಗ ತೆಗೆಯಬಹುದು. ಇದೆಲ್ಲಕ್ಕಿಂತ ಹೆಚ್ಚಾಗಿ ಇದು ಮೇಕ್ ಇನ್ ಇಂಡಿಯಾದ ಉತ್ಪನ್ನ. ಇದರ ಮೇಲೆ ಹಕ್ಕುಸ್ವಾಮ್ಯ ಪಡೆಯಲು ಫೆಬ್ರವರಿಯಲ್ಲಿ ಅರ್ಜಿ ಸಲ್ಲಿಸಲು ಉದ್ದೇಶಿಸಲಾಗಿದೆ ಎಂದು ಓಪನ್ ಆ್ಯಪ್ ಸಂಸ್ಥಾಪಕ, ಕಾರ್ಯನಿರ್ವಹಣಾ ನಿರ್ದೇಶಕ ಗೌತಮ್ ಗೌಡ ಹೆಮ್ಮೆ ವ್ಯಕ್ತಪಡಿಸುತ್ತಾರೆ.
3 ಲಕ್ಷ ಲಾಕ್‌ಗಳಿಗೆ ಬೇಡಿಕೆ: ಮೊದಲ ಹಂತದಲ್ಲಿ ಈ ಸ್ಮಾರ್ಟ್ ಲಾಕ್ ಸೌಲಭ್ಯವನ್ನು ಬಿ2ಬಿ (ಬ್ಯುಸಿನೆಸ್ ಟು ಬ್ಯುಸಿನೆಸ್) ಗೆ ಪರಿಚಯಿಸಲಾಗಿದೆ. ಮುಖ್ಯವಾಗಿ ಇ-ಕಾಮರ್ಸ್, ಬ್ಯಾಂಕಿಂಗ್‌ನಲ್ಲಿ ಕ್ಯಾಷ್ ಲಾಜಿಸ್ಟಿಕ್ಸ್ (ಹಣ ಸಾಗಣೆ) ಮತ್ತು ಲಾಕರ್ ಗಳು, ಜವಳಿ ಕ್ಷೇತ್ರಗಳಲ್ಲಿ ಜಾರಿಯಲ್ಲಿದೆ.
ಸುಮಾರು 8 ಗ್ರಾಹಕರನ್ನು ಹೊಂದಿದ್ದು, 3 ಲಕ್ಷಕ್ಕೂ ಅಧಿಕ ಸ್ಮಾರ್ಟ್ ಲಾಕ್‌ಗಳಿಗಾಗಿ ಬೇಡಿಕೆ ಇದೆ. ಚೀನಾ, ಅಮೆರಿಕದಿಂದಲೂ ಬೇಡಿಕೆಗಳು ಬರುತ್ತಿವೆ. ಪ್ರತಿ ತಿಂಗಳು 12ರಿಂದ 17 ಸಾವಿರ ಈ ಮಾದರಿಯ ಬೀಗಗಳನ್ನು ತಯಾರಿಸಲಾಗುತ್ತಿದೆ. ಒಂದು ಬೀಗಕ್ಕೆ 1,200 ರೂ.ಗಳಿಂದ 3 ಸಾವಿರ ರೂ.ವರೆಗೂ ತಗಲುತ್ತದೆ. ಮನೆಗಳಿಗೆ ಅಳವಡಿಸಲಿಕ್ಕೂ ಸಿದಟಛಿತೆ ನಡೆದಿದೆ ಎಂದು ಅವರು ವಿವರಿಸಿದರು.
ಹೇಗೆ ಕೆಲಸ ಮಾಡುತ್ತೆ?: ಸ್ಮಾರ್ಟ್ ಲಾಕ್‌ನಲ್ಲಿ ಸಣ್ಣ ಚಿಪ್ ಇರುತ್ತದೆ. ಅದರಲ್ಲಿ ಲಾಕ್ ಹೊಂದಿದ ಮಾಲಿಕರ ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಗಳನ್ನು ನಮೂದಿಸಲಾಗಿರುತ್ತದೆ. ಅದರಂತೆ ಸ್ಮಾರ್ಟ್ ಲಾಕ್ ಆ್ಯಪ್ ಮೊಬೈಲ್‌ನಲ್ಲಿ ಡೌನ್‌ಲೋಡ್ ಆಗಿರುತ್ತದೆ. ಆ್ಯಪ್‌ನ ಗುಂಡಿ ಒತ್ತುತ್ತಿದ್ದಂತೆ, ಅಧಿಕೃತ ಮಾಹಿತಿಗಳೊಂದಿಗೆ ಅನುಮತಿ ಕೇಳುತ್ತದೆ. ಅನುಮತಿ ಕೊಡುತ್ತಿದ್ದಂತೆ ಬೀಗ ತೆರೆಯುತ್ತದೆ. ಆದರೆ, ಇದಕ್ಕೆ ಮೊಬೈಲ್‌ನಲ್ಲಿ ಇಂಟರ್‌ನೆಟ್/ ವೈ-ಫೈ ಸೇವೆ ಇರಲೇಬೇಕು.
– ವಿಜಯ್‌ಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.