ಸ್ತ್ರೀ ಪಾದರಕ್ಷೆಯಲ್ಲಿ ಹಿಂಬದಿ ಪಟ್ಟಿ ಇಲ್ಲದಿದ್ದರೆ ಸ್ಯಾಂಡಲ್
Team Udayavani, Jan 30, 2017, 3:45 AM IST
ನವದೆಹಲಿ: ಸಾಮಾನ್ಯವಾಗಿ ಹಿಂಬದಿ ಪಟ್ಟಿ ಇಲ್ಲದೆ ಧರಿಸುವ ಪಾದರಕ್ಷೆಗಳನ್ನು ಚಪ್ಪಲಿ ಎಂದು ಕರೆಯಲಾಗುತ್ತದೆ. ಆದರೆ, ಮಹಿಳೆಯರು ಹಿಂಬದಿ ಪಟ್ಟಿ ಇಲ್ಲದೆ ಧರಿಸುವ ಪಾದರಕ್ಷೆಗಳು ಚಪ್ಪಲಿ ಅಲ್ಲ, ಅದು ಸ್ಯಾಂಡಲ್ (ಇದಕ್ಕೆ ಚಪ್ಪಲಿಗೆ ಬಳಸುವ ಸಾಮಗ್ರಿಗಳನ್ನು ಬಳಸುವುದಿಲ್ಲ. ಸಾಮಾನ್ಯ ಹವಾಯ್ ಚಪ್ಪಲಿಯಂತೆ ಕಾಣುತ್ತದೆ) ಎಂಬುದಾಗಿ ದೆಹಲಿ ಹೈಕೋರ್ಟ್ ತಿಳಿಸಿದೆ. ಈ ಸ್ಯಾಂಡಲ್ಗಳನ್ನು ಚಪ್ಪಲಿ ಎಂದು ಪರಿಗಣಿಸಿ ಆದಾಯ ತೆರಿಗೆ ಇಲಾಖೆ ಇದರ ರಫ್ತು ಮಾಡುವ ವೇಳೆ ಶೇ.5ರಷ್ಟು ಮಾತ್ರ ತೆರಿಗೆ ವಿನಾಯ್ತಿ ನೀಡಿತ್ತು. ಇದನ್ನು ಪ್ರಶ್ನಿಸಿ ಚೆನ್ನೈ ಮೂಲದ ಪಾದರಕ್ಷೆ ತಯಾರಿಕೆ ಸಂಸ್ಥೆ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಮಹಿಳೆಯರು ಹಿಂಬದಿ ಪಟ್ಟಿ ಇಲ್ಲದೆ ಧರಿಸುವ ಪಾದರಕ್ಷೆಗಳು ಚಪ್ಪಲಿಯಲ್ಲ. ಸ್ಯಾಂಡಲ್ ಆಗಿವೆ. ಹೀಗಾಗಿ ಆದಾಯ ತೆರಿಗೆ ಇಲಾಖೆ ವಿಧಿಸುತ್ತಿರುವ ಶೇ.10ರಷ್ಟು ತೆರಿಗೆ ವಿನಾಯ್ತಿ ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಈ ಅರ್ಜಿಯನ್ನು ಕೈಗೆತ್ತಿಕೊಂಡ ದೆಹಲಿ ಹೈಕೋರ್ಟ್, ತೆರಿಗೆ ಇಲಾಖೆಯ ವಾದವನ್ನು ತಳ್ಳಿ ಹಾಕಿ, ಪಾದರಕ್ಷೆ ತಯಾರಿಕೆ ಕಂಪನಿ ಪರ ತೀರ್ಪಿತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.