ಡೊನಾಲ್ಡ್ ಟ್ರಂಪ್ ವಲಸೆ ನೀತಿಗೆ ಐಟಿ ದಿಗ್ಗಜರ ಖಂಡನೆ
Team Udayavani, Jan 30, 2017, 3:45 AM IST
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೂತನ ವಲಸೆ ನೀತಿಯನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು ಕಟು ಮಾತಿನಲ್ಲಿ ಟೀಕಿಸಿದ್ದಾರೆ. ಹೊಸ ನೀತಿ ಘೋಷಣೆ ಯಾದ ಬೆನ್ನಲ್ಲೇ ಗೂಗಲ್ ಸಿಇಒ ಸುಂದರ್ ಪಿಚೈ, ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಮುಂದುವರಿದ ಭಾಗವಾಗಿ ಆ್ಯಪಲ್, ನೆಟ್‌ಫ್ಲಿಕ್ಸ್, ಮೈಕ್ರೋಸಾಫ್ಟ್, ಟೆಸ್ಲಾ, ಉಬರ್ ಸಹಿತ ಪ್ರಮುಖ ಕಂಪೆನಿಗಳ ಮುಖ್ಯ ಸ್ಥರು ಟ್ರಂಪ್ ನೀತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಮಾತ ನಾಡಿ, ನಾನೊಬ್ಬ ವಲಸಿಗನಾಗಿದ್ದುಕೊಂಡು ನಮ್ಮ ಕಂಪೆನಿ, ದೇಶ ಮತ್ತು ಇಡೀ ವಿಶ್ವಕ್ಕೆ ವಲಸೆ ಯಿಂದಾಗುವ ಧನಾತ್ಮಕ ಪರಿಣಾಮಗಳನ್ನು ಗಮನಿಸಿದ್ದೇನೆ. ಆದ್ದರಿಂದ ಈ ಕ್ರಮದ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ. ಇದನ್ನು ಮೈಕ್ರೋಸಾಫ್ಟ್ ಅಧ್ಯಕ್ಷ ಬ್ರಾಡ್ ಸ್ಮಿತ್ ಕೂಡ ಬಹಿರಂಗವಾಗಿ ಬೆಂಬಲಿಸಿದ್ದಾರೆ. ಹೊಸ ನಿಯಮದಿಂದ ಮೈಕ್ರೋಸಾಫ್ಟ್ನ 76 ಉದ್ಯೋಗಿ ಗಳಿಗೆ ತೊಂದರೆಯಾಗಿದೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ. ವಲಸೆ ನೀತಿಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ.
ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ಉದ್ಯೋಗಿಗಳ ಬಗ್ಗೆ ವೈಯಕ್ತಿಕ ವಾಗಿಯೂ ಗಮನ ಹರಿಸುತ್ತೇವೆ. ಅವರು ವಲಸಿಗರಾಗಿದ್ದರೂ ಅವರ ಬಗ್ಗೆ ಗಮನ ಹರಿಸುತ್ತೇವೆ ಎಂದು ಸ್ಮಿತ್ ಹೇಳಿದ್ದಾರೆ. ಟ್ವೀಟರ್ ಸಿಇಒ ಜಾಕ್ ಡೋರ್ಸೆ, ಈ ನಿಷೇಧ ಬೇಸರ ಮೂಡಿಸಿದೆ ಎಂದಿದ್ದಾರೆ. ಆ್ಯಪಲ್ ಸಿಇಒ ಟಿಮ್ ಕುಕ್ ಮಾತನಾಡಿ ಅಧ್ಯಕ್ಷರು ಹೊರಡಿಸಿದ ಆದೇಶದಿಂದ ಕಳವಳಗೊಂಡಿರುವುದಾಗಿ ಹೇಳಿ ದ್ದಾರೆ. ವಲಸಿಗರಿಂದಲೇ ಆ್ಯಪಲ್ ಕಂಪೆನಿ ಹೆಚ್ಚಿನ ಯಶಸ್ಸು ಸಾಧಿಸಿದೆ ಎಂದು ಪ್ರತಿಪಾದಿಸಿದ್ದಾರೆ.
ಸಮರ್ಥನೆಗೆ ಯತ್ನ: ಹೊಸ ನೀತಿಗೆ ವಿಶ್ವದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದನ್ನು ಸಮರ್ಥಿಸಿ ಕೊಂಡಿದ್ದಾರೆ. ಈ ಕ್ರಮ ಇಡೀ ಮುಸ್ಲಿಂ ಜನಾಂಗದ ವಿರುದ್ಧವಾಗಿಲ್ಲ. ಜತೆಗೆ ಈ ಕ್ರಮವನ್ನು ಬಹಳ ಮೃದುವಾಗಿ ಜಾರಿಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಹೊಸ ನಿಯಮ ಖಂಡಿಸಿ ಅಮೆರಿಕದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಟ್ರಂಪ್‌ಗೆ ಬಹಿಷ್ಕಾರ ಹೇರಿ: ಮುಸ್ಲಿಂ ದೇಶಗಳಿಗೆ ಹೇರಿರುವ ನಿಷೇಧವನ್ನು ಹಿಂಪಡೆಯುವ ವರೆಗೂ ಡೊನಾಲ್ಡ್ ಟ್ರಂಪ್‌ಗೆ ಬ್ರಿಟನ್ ಪ್ರವೇಶ ನಿರ್ಬಂ ಧಿಸಿ ಎಂದು ಅಲ್ಲಿನ ವಿರೋಧ ಪಕ್ಷದ ನಾಯಕ ಜೆರೋಮಿ ಕಾರ್ಬಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೇಬರ್ ಪಕ್ಷದ ನಾಯಕರೂ ಆಗಿರುವ ಜರೋಮಿ, ಟ್ರಂಪ್‌ನ ನೀತಿಗಳನ್ನು ಪ್ರಧಾನಿ ಥೇರೆಸಾ ಮೇ ಅವರು ಒಪ್ಪಿಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.
ಟ್ರಂಪ್ ಕ್ರಮಕ್ಕೆ ನ್ಯಾಯಾ ಲಯ ತಡೆ: ಟ್ರಂಪ್ ಅವರು ಶನಿವಾರ ಮುಸ್ಲಿಂ ವಲಸೆ ವಿರೋಧಿ ಆದೇಶ ಜಾರಿ ಮಾಡುತ್ತಿದ್ದಂತೆ ಇಬ್ಬರು ಇರಾನ್ ನಾಗರಿಕರನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಇದರ ವಿರುದ್ಧ ಅಮೆರಿಕ ನಾಗರಿಕ ಹಕ್ಕು ಸಂಘಟನೆ ಅರ್ಜಿ ಸಲ್ಲಿಸಿತ್ತು. ಇದನ್ನು ಪರಿಗಣಿಸಿರುವ ನ್ಯಾಯಾಲಯ ಟ್ರಂಪ್ ಕ್ರಮಕ್ಕೆ ತಾತ್ಕಾಲಿಕ ತಡೆ ನೀಡಿ, ಅಮೆರಿಕದ ನಾಗರಿಕತ್ವ ಮತ್ತು ವಲಸೆ ಇಲಾಖೆಯಿಂದ ಮಾನ್ಯತೆ ಹೊಂದಿರುವ ನಿರಾಶ್ರಿತರು ಮತ್ತು ಇನ್ನಿತರ ಪ್ರಮಾಣಿತ ವೀಸಾ ಹೊಂದಿರುವವರನ್ನು ಹೊರಹಾಕದಂತೆ ಸೂಚಿಸಿದೆ.
ಟ್ರಂಪ್‌ರತ್ತ ಗುಂಡು ಹಾರಿಸಿದ್ದ’ ಭಾರತೀಯ ಶಿಕ್ಷಕಿ ಅಮಾನತು
ಹೌಸ್ಟನ್: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕಾರ ವೀಡಿಯೋ ಮೇಲೆ ವಾಟರ್ ಗನ್‌ನಿಂದ ಶೂಟ್ ಮಾಡಿದ್ದ ಭಾರತೀಯ ಮೂಲದ ಶಿಕ್ಷಕಿ ಪಾಯಲ್ ಮೋದಿಯನ್ನು ಅಮಾನತುಗೊಳಿಸಲಾಗಿದೆ. ಜ.20ರಂದು ಟ್ರಂಪ್ ಪ್ರಮಾಣವಚನ ಸ್ವೀಕಾರ ಸಮಾರಂಭ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಾಗ ಅದರ ಮೇಲೆ ಡಲ್ಲಾಸ್‌ನ ಆ್ಯಡಮ್ಸನ್ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿರುವ ಪಾಯಲ್ ಪಿಚಕಾರಿಯಿಂದ ಶೂಟ್ ಮಾಡಿ, ಸಾಯಿ ಎಂದು ಅರಚಿದ್ದರು. 8 ಸೆಕೆಂಡ್‌ಗಳ ಈ ವೀಡಿಯೋ ಇನ್‌ಸ್ಟಾಗ್ರಾಂನಲ್ಲಿ ಪ್ರಕಟವಾಗಿತ್ತು. ಇದು ವಿಶ್ವಾದ್ಯಂತ ಗುಲ್ಲೆಬ್ಬಿಸಿತ್ತು.
ಐಸಿಸ್ ನಾಶಕ್ಕೆ ಯೋಜನೆ ಸಿದ್ಧಪಡಿಸಿ: ಸೇನೆಗೆ ಟ್ರಂಪ್ ಸೂಚನೆ
ಅಧಿಕಾರಕ್ಕೆ ಬರುವ ಮುನ್ನ ಇಸ್ಲಾಂ ಉಗ್ರಗಾಮಿ ಸಂಘಟನೆ ಐಸಿಸ್ ನಿಷೇಧಕ್ಕೆ ಕಠಿನ ತೆಗೆದುಕೊಳ್ಳುವುದಾಗಿ ಘೋಷಿಸಿದ್ದ ಟ್ರಂಪ್ ಈಗ ಆ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. 30 ದಿನದೊಳಗೆ ಐಸಿಸ್ ನಾಶಕ್ಕೆ ಸಮಗ್ರ ಯೋಜನೆ ಸಿದ್ಧಪಡಿಸುವಂತೆ ತನ್ನ ಸೇನಾಡಳಿತಕ್ಕೆ ಸೂಚಿಸಿದ್ದಾರೆ. ಐಸಿಸ್ ಅತ್ಯಂತ ಅಪಾಯಕಾರಿ, ಆಕ್ರಮಣಕಾರಿ ಸಂಘಟನೆ, ಅದು ತನ್ನದೇ ರಾಜ್ಯವನ್ನು ಕಟ್ಟುವ ಹುನ್ನಾರ ಹೊಂದಿದೆ. ಆದ್ದರಿಂದಲೇ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಟ್ರಂಪ್ ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.