ಅಮರಾವತಿ ಟ್ರೇಲರ್‌ ವೈರಲ್‌

Team Udayavani, Jan 30, 2017, 11:32 AM IST

Amaravathi.jpg

ನಿರ್ದೇಶಕ “ಜಟ್ಟ’ ಗಿರಿರಾಜ್‌ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಸುದ್ದಿಯಾಗೋಕೆ ಕಾರಣ, “ಅಮರಾವತಿ’ ಚಿತ್ರ. ಹೌದು, ಈ ಸಿನಿಮಾವನ್ನು ಸದ್ದಿಲ್ಲದೆಯೇ ಮಾಡಿ ಮುಗಿಸಿರುವ ಗಿರಿರಾಜ್‌, ಇದೀಗ ರಿಲೀಸ್‌ ಮಾಡೋಕೆ ಅಣಿಯಾಗುತ್ತಿದ್ದಾರೆ. ಇದಷ್ಟೇ ವಿಷಯ ಆಗಿದ್ದರೆ, ಅವರು ಸುದ್ದಿಯಾಗುತ್ತಿರಲಿಲ್ಲ. ಅವರು ಹರಿಬಟ್ಟಿರುವ “ಅಮರಾವತಿ’ ಚಿತ್ರದ ಟ್ರೇಲರ್‌ ಎಲ್ಲೆಡೆ ಜೋರು ಸದ್ದು ಮಾಡಿದ್ದರಿಂದಲೇ ಗಿರಿರಾಜ್‌ ಪುನಃ ಸುದ್ದಿಯಾಗಿದ್ದಾರೆಂಬುದು ವಿಶೇಷ.

ಈಗಾಗಲೇ “ಅಮರಾವತಿ’ ಚಿತ್ರದ ಟ್ರೇಲರ್‌ ನೋಡಿದವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯೂ ಟ್ಯೂಬ್‌ ಸೇರಿದಂತೆ ಫೇಸ್‌ಬುಕ್‌ನಲ್ಲೂ ಹೆಚ್ಚು ಹಿಟ್‌ ಆಗಿರುವ ಟ್ರೇಲರ್‌ನಿಂದಾಗಿ ಗಿರಿರಾಜ್‌ಗೆ ಸಹಜವಾಗಿಯೇ ಖುಷಿ ಇದೆಯಂತೆ. ಅವರೇ ಹೇಳುವಂತೆ, “ನನ್ನ ನಿರ್ದೇಶನದಲ್ಲಿ ಮೂಡಿಬಂದ ಚಿತ್ರಗಳ ಪೈಕಿ “ಅಮರಾವತಿ’ ಚಿತ್ರದ ಟ್ರೇಲರ್‌ಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಅದರಲ್ಲೂ ಮೊದಲ ಹಿಟ್‌ ಟ್ರೇಲರ್‌ ಇದು.

ಹಾಗಂತ ಇದೇನೋ, ಲಕ್ಷಾಂತರ ಮಂದಿ ನೋಡಿದ ದಾಖಲೆಯಂತೂ ಅಲ್ಲ, ಆದರೆ, ನನ್ನ ಮಟ್ಟಿಗೆ ಇದು ಪಾಸಿಟಿವ್‌ ಬೆಳವಣಿಗೆ ಎನ್ನುತ್ತಾರೆ ಗಿರಿರಾಜ್‌. ಸಿನಿಮಾದಲ್ಲಿ ಅಚ್ಯುತ ಹೈಲೆಟ್‌. ಅವರಿಲ್ಲಿ ಪಾಲಿಕೆಯ ಕಾರ್ಮಿಕರಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಈ ಕಥೆಯ ಯೋಚನೆ ಬಂದಿದ್ದು ಎಲ್ಲಿಂದ ಗೊತ್ತಾ? ಗಿರಿರಾಜ್‌ ಅವರು, ಏಳೆಂಟು ವರ್ಷಗಳಿಂದ “ಕಸ’ ಸಮಸ್ಯೆ ಬಗ್ಗೆ  ತಿಳಿದಿದ್ದರಂತೆ.

ಕೊನೆಗೆ ಆ ಕುರಿತು ಹಲವು ಬಾರಿ ಬೀದಿನಾಟಕಗಳನ್ನು ಮಾಡಿದ್ದರು. ಕಸ ಸಮಸ್ಯೆ ಕುರಿತಂತೆ ಸಾಕಷ್ಟು ಪ್ರತಿಭಟನೆಗಳೂ ನಡೆದಿದ್ದವು. ಆದರೆ, ಅದು ಸಮಸ್ಯೆಯಾಗಿಯೇ ಉಳಿದಿದೆ. ಹೊರತು, ಯಾವುದೇ ಪರಿಹಾರ ಸಿಕ್ಕಿಲ್ಲ. ಕಾರ್ಮಿಕರು ಇಲ್ಲದಿರುವುದೇ ಮೂಲ ಸಮಸ್ಯೆ. ಆ ಲೇಬರ್‌ ಸಮಸ್ಯೆ, ಅದಕ್ಕೊಂದು ಕಾಂಟ್ರ್ಯಾಕ್ಟ್ ಮಾಫಿಯಾ ಸೇರಿದಂತೆ ಇತರೆ ಘಟನೆಗಳನ್ನು ಇಟ್ಟುಕೊಂಡು ಕಥೆ ಹೆಣೆದು ಚಿತ್ರ ಮಾಡಲಾಗಿದೆಯಂತೆ.

ಗಿರಿರಾಜ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದರೆ, ಮಾಧವ್‌ರೆಡ್ಡಿ ಈ ಸಿನಿಮಾಗೆ ಹಣ ಹಾಕಿದ್ದಾರೆ. ಸಾಮಾಜಿಕ ಸಮಸ್ಯೆಗಳ ಕುರಿತ ಸಿನಮಾ ಮಾಡುಬೇಕು ಅಂದುಕೊಂಡಿದ್ದ ಅವರಿಗೆ ಈ ಕಥೆ ಇಷ್ಟವಾಗಿ, ಸಿನಿಮಾ ಮಾಡಿದ್ದಾರೆ. ಚಿತ್ರಕ್ಕೆ ಕಿರಣ್‌ ಹಂಪಾಪುರ್‌ ಕ್ಯಾಮೆರಾ ಹಿಡಿದರೆ, ಜೋಯಲ್‌ ಹಾಗೂ ಅಭಿಲಾಶ್‌ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ವೈಶಾಲಿ ದೀಪಕ್‌, ಹೇಮಂತ್‌ ಸುಶೀಲ್‌ ಮತ್ತು ರಂಗಭೂಮಿಯ 18 ಪ್ರತಿಭೆಗಳು ನಟಿಸಿದ್ದಾರೆ.  

ಟಾಪ್ ನ್ಯೂಸ್

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

cyber crime

Cyber ​​fraud ಬ್ಯಾಂಕ್‌ ಹೊಣೆ: ಸುಪ್ರೀಂಕೋರ್ಟ್‌

Supreme Court

Supreme Court; ಮೀಸಲಿಂದ ಹೊರಗಿಡುವ ಬಗ್ಗೆ ಶಾಸಕಾಂಗ, ಕಾರ್‍ಯಾಂಗ ನಿರ್ಧರಿಸಲಿ

BJP Symbol

Delhi BJP;ಮಹಾರಾಷ್ಟ್ರ ಮಾದರಿ ಯೋಜನೆ: ವರದಿ

rajnath 2

Aero India 2025:ಇಂದು ರಾಯಭಾರಿಗಳ ಜತೆಗೆ ರಾಜನಾಥ್‌ ಸಭೆ

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ

Teertharoopa Tandeyavarige: ತೀರ್ಥರೂಪರ ಜೊತೆ ರಚನಾ

Teertharoopa Tandeyavarige: ತೀರ್ಥರೂಪರ ಜೊತೆ ರಚನಾ

15

Sathish Ninasam: ಅಶೋಕನಿಗೆ ನೀನಾಸಂ ಸತೀಶ್‌ ಸಾಥ್‌

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

cyber crime

Cyber ​​fraud ಬ್ಯಾಂಕ್‌ ಹೊಣೆ: ಸುಪ್ರೀಂಕೋರ್ಟ್‌

Supreme Court

Supreme Court; ಮೀಸಲಿಂದ ಹೊರಗಿಡುವ ಬಗ್ಗೆ ಶಾಸಕಾಂಗ, ಕಾರ್‍ಯಾಂಗ ನಿರ್ಧರಿಸಲಿ

BJP Symbol

Delhi BJP;ಮಹಾರಾಷ್ಟ್ರ ಮಾದರಿ ಯೋಜನೆ: ವರದಿ

rajnath 2

Aero India 2025:ಇಂದು ರಾಯಭಾರಿಗಳ ಜತೆಗೆ ರಾಜನಾಥ್‌ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.