ಪುಸ್ತಕ ಓದಿ-ಮಸ್ತಕ ತುಂಬಿಸಿಕೊಳ್ಳಿ


Team Udayavani, Jan 30, 2017, 12:29 PM IST

dvg2.jpg

ದಾವಣಗೆರೆ: ಪ್ರತಿಯೊಬ್ಬರು ಉತ್ತಮ ಪುಸ್ತಕ ಓದುವ ಮೂಲಕ ಮಸ್ತಕವನ್ನು ಭರ್ತಿ ಮಾಡಿಕೊಂಡು ಸಾರ್ಥಕ ಜೀವನ ಸಾಗಿಸಬೇಕು ಎಂದು ಚಿತ್ರದುರ್ಗ ಬೃಹನ್ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ. ಭಾನುವಾರ ಶ್ರೀ ಶಿವಯೋಗಿ ಮಂದಿರದಲ್ಲಿ ಬಯಲು ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಬದುಕಿಗೆ ಪ್ರೇರಣೆ, ಸ್ಫೂರ್ತಿ ನೀಡುವಂಥಹ ಪುಸ್ತಕ, ಗ್ರಂಥಗಳನ್ನು ಓದುವ ಮೂಲಕ ತಲೆ ಎಂಬ ಗ್ರಂಥಿಯನ್ನು ತುಂಬಿಸಿಕೊಳ್ಳಬೇಕು.

ಗ್ರಂಥಾಧ್ಯಯನದ ಮುಖೇನ ಸುಧಾರಣೆ, ಜಾಗೃತಿಗೆ ಒಳಗಾಗಬೇಕು.ಜಗತ್ತನ್ನು ಒಳ್ಳೆಯದರ ಕಡೆಗೆ ಕೊಂಡೊಯ್ಯುವಂಥಹ ಶಕ್ತಿ ಪುಸ್ತಕಕ್ಕೆ ಇದೆ ಎಂದರು. ಪುಸ್ತಕ ಓದುವುದು ಅತ್ಯಂತ ವಿಧಾಯಕ, ಪ್ರೇರಣೆ, ಸ್ಫೂರ್ತಿ ನೀಡುವಂಥಹ ಉತ್ತಮೋತ್ತಮ ಹವ್ಯಾಸ. ಎಲ್ಲರೂ ಜೀವನ ಎಂದರೆ ಸದಾ ಸುಖದ ಸುಪ್ಪತ್ತಿಗೆ ಎಂದೇ ಭಾವಿಸುತ್ತಾರೆ. ಜೀವನದಲ್ಲಿ ಸುಖ ಎನ್ನುವುದು ಪಾರ್ಟ್‌ ಟೈಮ್‌. ಕಷ್ಟ- ನಷ್ಟಗಳೇ ಪುಲ್‌ ಟೈಮ್‌. ಸುಖ-ದುಖದ ಮೂಲಕ ಜೀವನದ ಅನುಭವ ದಕ್ಕುತ್ತದೆ.

ನಮ್ಮೆಲ್ಲರ ಜೀವನದ ಅನಾವರಣಕ್ಕೆ ಓದುವ ಹವ್ಯಾಸ ಅತೀ ಮುಖ್ಯ. ಹಾಗಾಗಿ ಎಲ್ಲರೂ ಓದುವ ಪ್ರಕ್ರಿಯೆಗೆ ಒಳಗಾಗಬೇಕು ಎಂದು ತಿಳಿಸಿದರು. ನಾವೆಲ್ಲರೂ ಬಯಲು ರಂಗಮಂದಿರ, ಶೌಚಾಲಯದ ಬಗ್ಗೆ ಕೇಳಿರುತ್ತೇವೆ. ಅಂಥದ್ದರಲ್ಲಿ ಬಯಲು ಗ್ರಂಥಾಲಯ ಎಂಬುದು ವಿಶೇಷ ಚಿಂತನೆ ಮತ್ತು ಪರಿಕಲ್ಪನೆ. ಹಚ್ಚ ಹಸಿರಿನ ವಾತಾವರಣದ ನಡುವೆ ತಮಗೆ ಇಷ್ಟವಾದ ಪುಸ್ತಕ, ಗ್ರಂಥ, ದಿನ, ವಾರಪತ್ರಿಕೆ ಓದಿ, ಅನೇಕ ವಿಷಯಗಳನ್ನು ತಿಳಿದುಕೊಳ್ಳುವಂಥದ್ದು ತುಂಬಾ ಒಳ್ಳೆಯದು.

ದಾವಣಗೆರೆ ಜನರು ಈ ಬಯಲು ಗ್ರಂಥಾಲಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಅನೇಕರು ಸಂಜೆ ವೇಳೆಯನ್ನು ಎಲ್ಲೆಲಿಯೋ ಕಳೆಯುತ್ತಾರೆ. ಕ್ಲಬ್‌, ಪಬ್‌ ಎಂದು ಗಬ್ಟಾಗುತ್ತಾರೆ. ಮನೆಗೆ ಬರುವ ಅವರನ್ನು ಸುಗಂಧದ್ರವ್ಯ ಹಾಕಿಯೇ ಒಳಕ್ಕೆ ಕರೆದುಕೊಳ್ಳಬೇಕಾದ ಸ್ಥಿತಿಯಲ್ಲಿರುತ್ತಾರೆ. ಅಥಂದ್ದರ ಬದಲಿಗೆ ಸಂಜೆಯ ಸಮಯವನ್ನು ಒಳ್ಳೆಯ ಪುಸ್ತಕ ಓದುವ ಮೂಲಕ ಕಳೆಯುವಂತಾಗಬೇಕು. 

ಅತ್ಯಮೂಲ್ಯ ಸಮಯವನ್ನು ಆ ರೀತಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈಗಿನ ವಾತಾವರಣದಲ್ಲಿ ಟಿವಿ, ಮೊಬೈಲ್‌, ಕಂಪ್ಯೂಟರ್‌ಗಳಲ್ಲಿ ಬೇಡವಾದುದ್ದನ್ನು ನೋಡುವುದೇ ಹೆಚ್ಚಾಗಿದೆ. ಪುಸ್ತಕ, ಗ್ರಂಥ ಓದುವ ಮೂಲಕ ತಿಳಿಯುವುದು, ತಿಳಿಯಧಿ ಪಡಿಸುವುದಕ್ಕಿಂತಲೂ ನೋಡಬಾರದೇ ಇರುವುದನ್ನು ನೋಡುವಂಥದ್ದು ಹೆಚ್ಚಾದ ಪರಿಣಾಮ ಬದುಕು ಎಂಬುದೇ ರಣರಂಗವಾಗುತ್ತಿದೆ.

ಜಗತ್ತು ಕೆಟ್ಟದ್ದರ ಕಡೆ ವೇಗವಾಗಿ ಸಾಗುತ್ತಿದೆ. ಜೀವನವನ್ನು ಹಸನು ಮಾಡಿಕೊಳ್ಳಲು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಮಾಜಿ ಶಾಸಕ ಯಜಮಾನ್‌ ಮೋತಿ ವೀರಣ್ಣ, ಎಂ. ಜಯಕುಮಾರ್‌, ಡಾ| ಜಿ.ಸಿ. ಬಸವರಾಜ್‌, ಪಲ್ಲಾಗಟ್ಟೆ ಕೊಟ್ರೇಶಪ್ಪ ಇತರರು ಇದ್ದರು. ಪತ್ರಕರ್ತ ಸುಭಾಷ್‌ ಬಣಕಾರ್‌ ಪ್ರಾಸ್ತಾವಿಕ ಮಾತುಗಳಾಡಿದರು. ಎಂ.ಕೆ. ಬಕ್ಕಪ್ಪ ನಿರೂಪಿಸಿದರು.  

ಟಾಪ್ ನ್ಯೂಸ್

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

8-

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

Waqf Protest: People will overthrow the state government: Protest in Davangere

Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

3-vitla

Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

1-mundaragi

Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.