ಬಿಎಸ್ಎಫ್ ಯೋಧರಿಂದ ಭಾರತ-ಪಾಕ್ ಗಡಿ ಸಮೀಪ 4 ಕಿಲೋ ಹೆರಾಯಿನ್ ವಶ
Team Udayavani, Jan 30, 2017, 3:44 PM IST
ಅಮೃತ್ಸರ : ಪಾಕಿಸ್ಥಾನದಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಲ್ಪಡುತ್ತಿದ್ದ ನಾಲ್ಕು ಕಿಲೋ ಹೆರಾಯಿನ್ ಮಾದಕ ದ್ರವ್ಯವನ್ನು ಗಡಿ ರಕ್ಷಣಾ ಪಡೆ ಸಿಬಂದಿಗಳು ಭಾರತ-ಪಾಕ್ ಗಡಿ ಸಮೀಪ ಇಂದು ಬೆಳಗ್ಗೆ ವಶಪಡಿಸಿಕೊಂಡಿದ್ದಾರೆ.
ಅತ್ತಾರಿ – ವಾಘಾ ಗಡಿ ಸಮೀಪದ ಅಮೃತ್ಸರ ವಲಯದ ಪುಲ್ಮೋರಾನ್ ಹೊರ ಠಾಣೆ ಬಳಿ 4 ಕಿಲೋ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಯಿತು ಎಂದು ಬಿಎಸ್ಎಫ್ ಡಿಐಜಿ ಆರ್ ಕೆ ಕಟಾರಿಯಾ ತಿಳಿಸಿದ್ದಾರೆ.
ಗಡಿ ಬೇಲಿಯ ಆಚೆಯಿಂದ ನಸುಕಿನ ವೇಳೆ ಯಾವುದೋ ಶಂಕಾಸ್ಪದ ಸದ್ದು ಕೇಳಿ ಬಂದಾಗ ಜಾಗೃತರಾದ ಬಿಎಸ್ಎಫ್ ಯೋಧರು ವಿಶೇಷ ಶೋಧ ಕಾರ್ಯಾಚರಣೆ ನಡೆಸಿದರು. ಆಗ ಒಂದು ಕಿಲೋ ತೂಕದ ನಾಲ್ಕು ಹೆರಾಯಿನ್ ಪೊಟ್ಟಣಗಳು ಗಡಿ ಬೇಲಿಯಾಚೆ ಬಿದ್ದುಕೊಂಡಿರುವುದು ಕಂಡು ಬಂತು. ಒಡನೆಯೇ ಅದನ್ನು ಯೋಧರು ವಶಪಡಿಸಿಕೊಂಡರು ಎಂದು ಕಟಾರಿಯಾ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.