ಎರಡು ಇಂಟರೆಸ್ಟಿಂಗ್ ಪ್ರಶ್ನೆಗಳು
Team Udayavani, Jan 31, 2017, 3:45 AM IST
ಕ್ಯಾಂಪಸ್ಸಲ್ಲೇಕೆ ಪಾರು, ದೇವದಾಸ್?
ಅರ್ಧ ಮುಗಿದ ಕನಸಿಗೆ ಯಾವತ್ತೂ ಕೊನೆ ಇರುವುದಿಲ್ಲ. ಅದು ಕಾಡುತ್ತಲೇ ಇರುತ್ತದೆ. ಪ್ರೇಮವೂ ಅಷ್ಟೇ. ಹೈಸ್ಕೂಲಲ್ಲಿ, ಕಾಲೇಜಲ್ಲಿ ಒಂದು ಮುಗ್ಧ ಪ್ರೇಮವೊಂದು ಅರಳಿಕೊಳ್ಳುತ್ತದೆ. ಅದು ಪ್ರೀತಿಯ ಹೆಸರಲ್ಲಾಗಬಹುದು, ನಗುವಿನ ಕಾರಣದಿಂದಾಗಬಹುದು, ಒಂದು ನೋಟದಿಂದಲೇ ಆಗಬಹುದು. ಆ ಭಾವದ ಕೈ ಹಿಡಿದು ಸಾಗುವವರೆಗೆ ಅದು ಕನಸಿನ ಲೋಕ. ಅಲ್ಲೇ ಅಡ್ಡಾಡುತ್ತಿರಬೇಕು ಅನ್ನಿಸುತ್ತದೆ. ಆದರೆ ಈ ಲೋಕಕ್ಕೆ ಒಂದು ಕೊನೆಯಿದೆ. ಯಾವುದೋ ಒಂದು ತಿರುವಲ್ಲಿ ಹುಡ್ಗನೋ ಹುಡ್ಗಿಯೋ ತಿರುಗಿ ಹೋಗುತ್ತಾರೆ. ಅವನು ತಿರುಗಿದ ಅಂತ ಇವಳು, ಇವಳು ದಾಟಿ ಹೋದಳು ಅಂತ ಅವನೂ ಲೋಕದಿಂದಾಚೆ ನಡೆದುಬಿಡಬಹುದು. ಸಿಂಪಲ್ಲಾಗಿ ಹೇಳುವುದಾದರೆ ಬ್ರೇಕಪ್ ಆಗಬಹುದು.
ಆದರೆ ಪ್ರೀತಿ ಸಾಯುವುದಿಲ್ಲ. ಪ್ರೀತಿಸಿದವರ ನೆನಪು ಸಾಯುವುದಿಲ್ಲ. ಕಾಲೇಜಲ್ಲಿ ಯಾಕೆ ಭಗ್ನ ಪ್ರೇಮದ ಕತೆಗಳು ಇವತ್ತಿಗೂ ಚಾಲ್ತಿಯಲ್ಲಿರುತ್ತದೆ ಅಂದರೆ ಅದಕ್ಕೆ ಇದೇ ಕಾರಣ. ಎಲ್ಲರೊಳಗೊಂದು ಭಗ್ನಗೊಂಡ ಕನಸಿನರಮನೆಯಿದೆ. ಬೇರೆಯವರ ಕತೆಯಲ್ಲಿ ನಾವು ನಮ್ಮ ಕತೆಯನ್ನು ಹುಡುಕುತ್ತೇವೆ. ಅದಕ್ಕೆ ಸಾವಿರ ವರ್ಷ ಕಳೆದರೂ ಆ ಕತೆ ನಡೆದೇ ಇಲ್ಲ ಅನ್ನಿಸಿದರೂ ನಮಗೆ ಇವತ್ತಿಗೂ ರಾಧೆ, ಕೃಷ್ಣ, ದೇವದಾಸ್ ಪಾರ್ವತಿ ಇಷ್ಟವಾಗುತ್ತಾರೆ. ಮನಸ್ಸಲ್ಲಿ ಕೂತಿರುತ್ತಾರೆ.
ಕಾರಿಡಾರಲ್ಲೇಕೆ ಫೀಲಿಂಗ್ ಸಾಂಗುಗಳು?
ಕಾಲೇಜು ಹುಡ್ಗರ ಅಡ್ಡದಲ್ಲಿ ಫೀಲಿಂಗ್ ಹಾಡುಗಳು ಜಾಸ್ತಿ ಕೇಳಿಬರುತ್ತವೆ ಯಾಕೆ? ಹರೆಯದ ಹುಡ್ಗಿ ಸೋನು ನಿಗಮ್ ಹಾಡೋ ಫೀಲಿಂಗ್ ಸಾಂಗನ್ನು ಯಾಕೆ ಇಷ್ಟ ಪಡುತ್ತಾಳೆ? ಮುಕೇಶ್‌ನ ಹಾಡುಗಳನ್ನು ಜನ ಹುಚ್ಚಾಗಿ ಕೇಳುತ್ತಿದ್ದದ್ದು ಯಾಕೆ? ಇವೆಲ್ಲವೂ ಮುಗಿಯದ ಕುತೂಹಲಗಳೇ. ನಮಗೆ ನೋವು ಇಷ್ಟವಾಗುತ್ತದಾ? ಇಲ್ಲ ಅನ್ಸತ್ತೆ. ಆದರೂ ನಾವು ನೋವಿನ ಕತೆಗಳನ್ನೇ, ಹಾಡುಗಳನ್ನೇ ಇಷ್ಟಪಡುತ್ತೇವೆ ಅಂದರೆ ಏನು ಕಾರಣ?
ನೋವು ಶಾಶ್ವತವಲ್ಲ. ಕೃಷ್ಣ ಹೊರಟು ಹೋದ ಹತ್ತು ವರ್ಷ ರಾಧೆಗೆ ಅವನ ಸಾಂಗತ್ಯ ತೀವ್ರವಾಗಿ ಕಾಡಿರಬಹುದು. ಆಮೇಲಾಮೇಲೆ ಆ ತೀವ್ರತೆ ಕಮ್ಮಿಯಾಗಿರಬಹುದು. ನಂತರ ಕೃಷ್ಣ ದೂರ ಆಗಿರಬಹುದು. ಆದರೆ ಆ ಭಾವ ಶಾಶ್ವತ. ಒಂದು ಚೆಂದದ ಗಳಿಗೆಯಲ್ಲಿ ರಾಧೆ ತಾನು ಕೃಷ್ಣನ ಕೈ ಹಿಡಿದು ಬೃಂದಾವನದಲ್ಲಿ ಅಡ್ಡಾಡಿದ ಗಳಿಗೆಯನ್ನು ನೆನೆಸಿಕೊಂಡು ನಗುತ್ತಾಳಲ್ಲ, ಆ ಹೊತ್ತಲ್ಲಿ ಅವಳಿಗೆ ಮುಕೇಶನ ಹಾಡು ಬೇಕಾಗಿರಬಹುದೇನೋ. ರಾಧೆ ಪ್ರತಿಯೊಬ್ಬ ಹೆಣ್ಣಿನ ಪ್ರತಿರೂಪ. ಕೃಷ್ಣ ಅರ್ಧ ಮುಗಿದ ಕನಸಿನ ಪ್ರತಿಬಿಂಬ. ಈ ಇಬ್ಬರಲ್ಲಿ ಯಾರು ಯಾರನ್ನು ಕಾಣುತ್ತಾರೆ ಅನ್ನೋದು ಕೊನೆಗೂ ಬಗೆಹರಿಯದ ಕತೆಯೇ. ಹಾಗೆ ಬಗೆ ಹರಿಯದೇ ಇರುವುದೇ ಚೆಂದ. ಅಲ್ಲಿ ಕುತೂಹಲ ಇರುತ್ತದೆ. ಅವರವರ ಚಿತ್ರ ಮನಸ್ಸಲ್ಲಿ ರೂಪುಗೊಳ್ಳುತ್ತಿರುತ್ತದೆ. ಕತೆಯಾಗುತ್ತದೆ. ಆಮೇಲೆ ಬದುಕಾಗುತ್ತದೆ. ಫೀಲಿಂಗ್ ಸಾಂಗುಗಳಲ್ಲಿ ನಮ್ಮ ಹುಡ್ಗ, ಹುಡ್ಗಿàರು ಆ ಸಮಾಧಾನವನ್ನು ಹೊಂದುತ್ತಿರುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.