ಒಲಿಂಪಿಕ್ಸ್ ಟಾಸ್ಕ್ ಫೋರ್ಸ್‌ನಲ್ಲಿ ಬಿಂದ್ರಾ, ಗೋಪಿಚಂದ್
Team Udayavani, Jan 31, 2017, 3:45 AM IST
ಹೊಸದಿಲ್ಲಿ: ಮುಂದಿನ ಮೂರು ಒಲಿಂಪಿಕ್ಸ್‌ಗಳಿಗಾಗಿ ಕ್ರಿಯಾ ಯೋಜನೆ ರೂಪಿಸಲು ಕ್ರೀಡಾ ಸಚಿವಾಲಯ ಸ್ಥಾಪಿಸಿದ ಎಂಟು ಸದಸ್ಯರ ಟಾಸ್ಕ್ ಫೋರ್ಸ್‌ನಲ್ಲಿ ಒಲಿಂಪಿಕ್ಸ್ ಚಿನ್ನ ವಿಜೇತ ಅಭಿನವ್ ಬಿಂದ್ರಾ ಮತ್ತು ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಸ್ಥಾನ ಪಡೆದಿದ್ದಾರೆ.
ರಿಯೋ ಒಲಿಂಪಿಕ್ಸ್ ಮುಗಿದ ಕೆಲವು ದಿನಗಳ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಂಬರುವ ಒಲಿಂಪಿಕ್ಸ್‌ನ ದೃಷ್ಟಿಯಲ್ಲಿಟ್ಟುಕೊಂಡು ಟಾಸ್ಕ್ ಫೋರ್ಸ್ ರಚಿಸುವುದಾಗಿ ಪ್ರಕಟಿಸಿದ್ದರು. 2020, 2024 ಮತ್ತು 2028ರ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಪರಿಣಾಮಕಾರಿಯಾಗಿ ಭಾಗವಹಿಸಲು ಕ್ರಿಯಾ ಯೋಜನೆ ರೂಪಿಸಲು ಈ ಟಾಸ್ಕ್ ಫೋರ್ಸ್ ಅನ್ನು ಸ್ಥಾಪಿಸಲಾಗಿದೆ.
ಬಿಂದ್ರಾ, ಗೋಪಿಚಂದ್ ಮತ್ತು ಭಾರತೀಯ ಹಾಕಿ ತಂಡದ ಮಾಜಿ ನಾಯಕ ವಿರೇನ್ ರಸ್ಕಿನ್ಹ ಟಾಸ್ಕ್ ಫೋರ್ಸ್‌ನಲ್ಲಿ ಕಾಣಿಸಿಕೊಂಡಿರುವ ಕೇವಲ ಮೂವರು ಕ್ರೀಡಾಪಟುಗಳಾಗಿದ್ದಾರೆ. ಸ್ಕೂಲ್ ನ್ಪೋರ್ಟ್ಸ್ ಪ್ರಮೋಶನ್ ಬೋರ್ಡ್ ಮುಖ್ಯಸ್ಥ ಓಂ ಪಾಠಕ್, ಹಾಕಿ ಕೋಚ್ ಎಸ್. ಬಲದೇವ್ ಸಿಂಗ್, ಪ್ರೊ| ಜಿಎಲ್ ಖನ್ನಾ, ಪತ್ರಕರ್ತ ರಾಜೇಶ್ ಕಲಾÅ ಮತ್ತು ಗುಜರಾತ್ ಕ್ರೀಡಾ ಪ್ರಾಧಿಕಾರದ ಪ್ರಧಾನ ನಿರ್ದೇಶಕ ಸಂದೀಪ್ ಪ್ರಧಾನ್ ಟಾಸ್ಕ್ ಫೋರ್ಸ್‌ನಲ್ಲಿರುವ ಇನ್ನುಳಿದ ಐವರು ಸದಸ್ಯರಾಗಿದ್ದಾರೆ.
ಸಮಿತಿಯ ಅವಧಿ ಮೂರು ತಿಂಗಳು ಅಥವಾ ಸಮಿತಿ ತನ್ನ ವರದಿ ಸಲ್ಲಿಸುವ ಸಮಯದವರೆಗೆ ಎಂದು ಟಾಸ್ಕ್ ಫೋರ್ಸ್ ಅನ್ನು ಪ್ರಕಟಿಸಿದ ಕ್ರೀಡಾ ಸಚಿವ ವಿಜಯ್ ಗೋಯೆಲ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Rey Mysterio Sr: ಖ್ಯಾತ ರೆಸ್ಲರ್ ರೇ ಮಿಸ್ಟೀರಿಯೊ ಸೀನಿಯರ್ ಇನ್ನಿಲ್ಲ
WPL 2025: ವನಿತಾ ಪ್ರೀಮಿಯರ್ ಲೀಗ್ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ
ಸಿನೆಮಾ ಪೋಸ್ಟರ್ ಗಳ ಕೋಣೆಯಲ್ಲಿ-ಹಾಲಿವುಡ್ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ
Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.