“ನಾವೀಗ ಮಾತು ಸೋತ ಭಾರತದಲ್ಲಿದ್ದೇವೆ’
Team Udayavani, Jan 31, 2017, 3:45 AM IST
ಧಾರವಾಡ: ಗಾಂಧೀಜಿ ಕುಟುಂಬದ 4ನೇ ತಲೆಮಾರು ಇಂದಿಗೂ ಎಲೆಮರೆ ಕಾಯಿಯಂತೆ ಗ್ರಾಮೀಣ ಅಭಿವೃದ್ಧಿ, ಸ್ವತ್ಛತೆ, ಶೌಚಾಲಯ ನಿರ್ಮಾಣ, ಅಸ್ಪೃಶ್ಯತೆ ನಿವಾರಣೆ ಕುರಿತು ತನ್ನ ಸುಪರ್ದಿಯಲ್ಲೇ ಕಾರ್ಯ ನಿರ್ವಹಿಸುತ್ತಿದೆ.
ಈ ಪೈಕಿ ಒಬ್ಬರು ಮಹಾತ್ಮಾ ಗಾಂಧೀಜಿ ಯವರ ಮರಿ ಮೊಮ್ಮಗ ತುಷಾರ ಗಾಂಧಿ. (ಗಾಂಧೀಜಿ ಅವರ ಮಗ ಮನಿಲಾಲ್ ಗಾಂಧಿ ವಂಶಜರು) ಅವರು ಸೋಮವಾರ ಧಾರವಾಡದ ಕವಿವಿಗೆ ಭೇಟಿ ಕೊಟ್ಟಿದ್ದರು. ಈ ಸಂದರ್ಭ “ಉದಯವಾಣಿ’ಗೆ ಅವರು ನೀಡಿದ ವಿಶೇಷ ಸಂದರ್ಶನ ಇಲ್ಲಿದೆ.
– ಗಾಂಧೀಜಿ ವಿಚಾರ ಧಾರೆ ಇಂದಿಗೂ ಪ್ರಸ್ತುತ ಎನ್ನುವುದಾದರೆ ಹೇಗೆ ?
ಗಾಂಧೀಜಿ ವಿಚಾರಧಾರೆಗಳು 21ನೇ ಶತಮಾನಕ್ಕೂ ಭಾರತವಷ್ಟೇ ಅಲ್ಲ, ವಿಶ್ವದ ಎಲ್ಲ ರಾಷ್ಟ್ರಗಳಿಗೂ ಸಹ ಒಂದಿಲ್ಲ
ಒಂದು ರೀತಿಯಲ್ಲಿ ಮಾದರಿಯಾಗಿ ನಿಲ್ಲಬಲ್ಲವು. ಹೀಗಾಗಿ ಗಾಂಧೀಜಿಯನ್ನು ಅರ್ಥೈಸಿಕೊಳ್ಳುವುದರ ಮೇಲೆ ಅವರ
ವಿಚಾರಧಾರೆಗಳು ಯಾಕೆ ಬೇಕು ಎನ್ನುವುದು ಅರ್ಥವಾಗುತ್ತ ಹೋಗುತ್ತದೆ.
– ರಂಗು ರಂಗಾದ ಕನಸು ಕಾಣುವ ಯುವಕರಿಗೆ ಗಾಂಧಿ ವಿಚಾರ ತಲುಪಬಲ್ಲದೇ ?
ಖಂಡಿತವಾಗಿಯೂ ಗಾಂಧೀಜಿ ವಿಚಾರಗಳು ಎಲ್ಲರಿಗೂ ತಲುಪುತ್ತವೆ. ಆದರೆ ಅದನ್ನು ತಲುಪಿಸುವ ಕೆಲಸವನ್ನು ಸರ್ಕಾರಗಳು ಮಾಡುತ್ತಿಲ್ಲ. ಅಷ್ಟೇ ಅಲ್ಲ, ಇಂದಿನ ಯುವ ಪೀಳಿಗೆ ಗಾಂಧೀಜಿ ಬದುಕನ್ನು ಓದುತ್ತಿಲ್ಲ. ಓದಿದರೂ ಅದನ್ನು ಅನುಸರಿಸುವುದಕ್ಕೆ ಕಷ್ಟ ಪಡುತ್ತಿದ್ದಾರೆ. ನಮ್ಮ ಆರೋಗ್ಯಕ್ಕೆ ಖಾದಿ ಉತ್ತಮ ಎಂದು ಅವರೇ ಅರ್ಥ ಮಾಡಿಕೊಳ್ಳಲು ಕೊಂಚ ಸಮಯ ಬೇಕಾಗಬಹುದು. ಅದು ಗಾಂಧಿಯನ್ನು ಓದಿದಾಗ ಅವರಿಗೆ ಅರ್ಥವಾಗುತ್ತದೆ.
– ಗ್ರಾಮಾಭಿವೃದ್ಧಿ ಕುರಿತು ಸರ್ಕಾರದ ಯೋಜನೆಗಳು ಸರಿ ಎನಿಸುತ್ತವೆಯೇ?
ಮಹಾತ್ಮನ ಹೆಸರಿಟ್ಟಿರುವ ನರೇಗಾ ಯೋಜನೆಯೇ ಅವರ ತತ್ವಗಳಿಗೆ ವಿರುದ್ಧವಾಗಿ ನಡೆಯುತ್ತಿದೆ. ಇದು
ಬಡವರಿಗಿಂತ ರಾಜಕಾರಣಿಗಳ ಹಿಂಬಾಲಕರಿಗೆ ಹೆಚ್ಚು ಅನುಕೂಲ ಮಾಡುತ್ತಿದೆ. ಇದರ ಆಶಯ ಬಡವರಿಗೆ ಉದ್ಯೋಗ ಕೊಡುವುದಾಗಿರಬೇಕಿತ್ತು. ಆದರೆ ಇದು ಯಂತ್ರ ಬಳಸಿ ಹಣ ಗಳಿಸುವವರ ಯೋಜನೆಯಾಗಿದ್ದು ದುರುದೃಷ್ಟಕರ.
– ಗ್ರಾಮ ಭಾರತದ ಏಳ್ಗೆಗೆ ಸಲಹೆ?
ಗ್ರಾಮಾಭಿವೃದ್ಧಿಗೆ ಗಾಂಧೀಜಿ ಅವರ ವಿಚಾರಗಳ ಅನುಷ್ಠಾನವೇ ನನ್ನ ಸಲಹೆ. ಅವರ ಬದುಕೇ ನಮಗೆಲ್ಲ ಸಂದೇಶ.
ಹಳ್ಳಿಗ ತಮ್ಮೂರಿನಲ್ಲಿಯೇ ಬದುಕು ಕಂಡುಕೊಳ್ಳಬೇಕು. ಅಲ್ಲಿ ಸ್ವದೇಶಿ, ಗ್ರಾಮ ಹಿತ ಚಿಂತನೆ, ಸ್ವತ್ಛತೆ, ನೈರ್ಮಲೀಕರಣ ನಡೆಯಬೇಕು. ಕೃಷಿ ಆಧಾರಿತ ಸಣ್ಣ ಉದ್ಯಮಗಳಿಗೆ ಮರು ಜೀವ ತುಂಬಬೇಕು. ಆಗಲೇ ಗ್ರಾಮಾಭಿವೃದ್ಧಿ ಸಾಧ್ಯ.
– ನದಿ ಜೋಡಣೆ ರಾಜ್ಯಗಳ ನಡುವಿನ ನೀರಿನ ದಾಹ ತಣಿಸಬಲ್ಲದೇ ?
ನನ್ನ ಪ್ರಕಾರ ಇದು ಸಾಧ್ಯವೇ ಇಲ್ಲ. ನದಿ ಜೋಡಣೆಯಿಂದ ಸಮಸ್ಯೆಗಳೇ ಹೆಚ್ಚಾಗಬಹುದು. ಆದರೆ ಆ ನೀರನ್ನು
ಬಳಸುವ ಹಕ್ಕು ದೇಶದ ಎಲ್ಲರಿಗೂ ಇದೆ. ದೊಡ್ಡ ನೀರಾವರಿ ಯೋಜನೆ, ದೊಡ್ಡ ಕಾರ್ಖಾನೆಗಳ ಸ್ಥಾಪನೆ, ಹೀಗೆ ದೊಡ್ಡ
ದೊಡ್ಡದ್ದನ್ನು ಮಾಡುವುದಕ್ಕೆ ಹೋಗಿಯೇ ಸರಕಾರಗಳು ಇಂದು ಬಡವರ ಬದುಕನ್ನೇ ನರಕ ಸದೃಶ ಮಾಡಿಟ್ಟಿದೆ. ನದಿ ಜೋಡಣೆ ನಂತರವೂ ಇನ್ನಷ್ಟು ಗಲಾಟೆಗಳು ನಡೆಯುವುದು ಶತಸಿದ್ಧ.
– ಹಾಗಿದ್ದರೆ ಕೃಷಿಗೆ ಮತ್ತು ಕುಡಿಯುವುದಕ್ಕೆ ಬೇಕಾದ ನೀರಿನ ಸಮಸ್ಯೆಗೆ ಪರಿಹಾರವೇನು ?
ಮಳೆ ನೀರು ಸಂಗ್ರಹ, ಹಳ್ಳಕೊಳ್ಳಗಳ ಸಂರಕ್ಷಣೆ, ಜಲಮೂಲಗಳ ರಕ್ಷಣೆಯಿಂದ ಕೃಷಿಗೆ ನೀರು ಲಭಿಸುತ್ತದೆ. ದೇಶಿ ಜ್ಞಾನ ಪರಂಪರೆ ಆಧಾರಿತ ತಂತ್ರಗಳನ್ನು ಬಳಸಿಕೊಂಡು ನೀರು ಸಂಗ್ರಹಿಸಬೇಕಿದೆ, ದೊಡ್ಡ ಅಣೆಕಟ್ಟಿನಿಂದಲ್ಲ.
ರಾಜಾಸ್ತಾನದಂತಹ ಮರುಭೂಮಿಯಲ್ಲಿ ಬತ್ತಿದ ನದಿಯನ್ನೇ ಡಾ|ರಾಜೇಂದ್ರಸಿಂಗ್ ಹರಿಯುವಂತೆ ಮಾಡಿದ್ದಾರೆ. ಅದು
ಎಲ್ಲರಿಗೂ ಮಾದರಿಯಾಗಬೇಕು.
– ಹಣದ ಅಪನಗದೀಕರಣ ಮತ್ತು ಬಜೆಟ್ ಬಗ್ಗೆ ನಿಮಗೇನನ್ನಿಸುತ್ತದೆ ?
ಕಪ್ಪು ಹಣಕ್ಕೆ ಇದು ಮಾರಕವಾಗಿದ್ದು ನಿಜ. ನೋಟುಗಳ ಅಪನಗದೀಕರಣದಿಂದ ಬಡವರಿಗೆ ತೊಂದರೆಯಾಗಿದ್ದು ನಿಜ. ಆದರೆ ಇದನ್ನು ದೇಶಭಕ್ತಿ ಜತೆ ಜೋಡಿಸಬಾರದು. ಇನ್ನು ಬಜೆಟ್ ಒಂದು ಲೆಕ್ಕಪತ್ರವಷ್ಟೇ.
– ಅಮೆರಿಕ ನೂತನ ಅಧ್ಯಕ್ಷ ಟ್ರಂಪ್ ನಡೆಯುತ್ತಿರುವ ಹಾದಿ ಬಗ್ಗೆ?
ನಿಜಕ್ಕೂ ಈ ಬಗ್ಗೆ ನನಗೆ ಖೇದವಿದೆ. ಆಡಳಿತ ಆರಂಭಕ್ಕೂ ಮುನ್ನವೇ ಅವರು ತಮಗೆ ಬೇಕಾದವರು ಮತ್ತು ಬೇಡವಾದವರು ಎಂದು ಇಬ್ಭಾಗ ಮಾಡಿಕೊಂಡಿದ್ದಾರೆ. ಇದು ವಸುದೈವ ಕುಟುಂಬಕಂ ಎಂಬ ಗಾಂಧಿ ವಿಚಾರಧಾರೆಗೆ ತದ್ವಿರುದ್ಧವಾಗಿದೆ. 2020ರ ಈ ಸಂದರ್ಭ ಪ್ರತೀ ದೇಶ, ಗಡಿ, ಭಿನ್ನಾಭಿಪ್ರಾಯ, ಯುದ್ಧ ಎಲ್ಲವನ್ನೂ ಮೀರಿ ಮಾನವೀಯತೆ ಆಧಾರದ ಮೇಲೆ ನಿಲ್ಲಬೇಕಿದೆ.
– ಅಸಹಿಷ್ಣುತೆ/ವಾಕ್‌ಸ್ವಾತಂತ್ರÂದ ಬಗ್ಗೆ ?
ಬಾಪು ಕಂಡ ಭಾರತ ಸಹಿಷ್ಣುತೆಯನ್ನೇ ಒಳಗೊಂಡಿದ್ದು ಮತ್ತು ವಾಕ್ ಸ್ವಾತಂತ್ರÂವನ್ನು ಒಳಗೊಂಡಿದೆ. ಆದರೆ ಸತ್ಯ
ಹೇಳಿದವರನ್ನು ಹತ್ಯೆ ಮಾಡುವ ಹಂತಕ್ಕೆ ಹೋಗಿದೆ. ಗಾಂಧೀಜಿಯನ್ನೇ ಹತ್ಯೆ ಮಾಡಿದ ದುಷ್ಟ ಶಕ್ತಿಗಳು ಈಗ ಮತ್ತೆ ಜಾಗೃತವಾಗಿದ್ದು, ಪನ್ಸಾರೆ, ದಾಬೋಲ್ಕರ್ ಮತ್ತು ಡಾ|ಎಂ. ಎಂ.ಕಲಬುರ್ಗಿ ಅವರನ್ನು ಹತ್ಯೆ ಮಾಡಿವೆ. ಇಂತಹ ಮೃಗೀಯ ಶಕ್ತಿಗಳು ಎಂದಿಗೂ ದೇಶದ ಸಹಿಷ್ಣುತೆಯನ್ನು ಕದಲುತ್ತಲೇ ಬಂದಿವೆ. ಆದರೆ ಈ ದೇಶಕ್ಕೆ ಗಾಂಧೀಜಿ
ಹಾಕಿದ ಶಾಂತಿ, ಸಹಿಷ್ಣುತೆ ಬುನಾದಿ ಇನ್ನೂ ಗಟ್ಟಿಯಾಗಿದೆ.
– ಗಾಂಧೀಜಿ ವಿಚಾರಗಳನ್ನು ನೀವು ಹೇಗೆ ಜನರಿಗೆ ತಲುಪಿಸುತ್ತೀರಿ?
ತುಂಬಾ ಉತ್ತಮ ಪ್ರಶ್ನೆ. ನಾನು ಗಾಂಧೀಜಿ ಅವರಲ್ಲಿ ಮಹಾತ್ಮ ಮತ್ತು ಬಾಪು ಇಬ್ಬರನ್ನೂ ಬೇರೆ ಮಾಡಲು ಬಯಸುತ್ತೇನೆ. ಮಹಾತ್ಮಾ ಗಾಂಧೀಜಿ ತುಂಬಾ ಎತ್ತರದಲ್ಲಿ ನಿಂತು ಬಿಟ್ಟಿದ್ದಾರೆ. ನನಗೆ ಬಾಪು ಇಷ್ಟ. ಬಾಪು, ಶೌಚಾಲಯ ಸ್ವತ್ಛತೆ ಬಗ್ಗೆ, ಗ್ರಾಮಾಭಿವೃದ್ಧಿ ಬಗ್ಗೆ, ಇಂದಿನ ಶಿಕ್ಷಣ ನೀತಿಯ ಬಗ್ಗೆ, ಇಂದಿನ ಎಲ್ಲ ಸಮಸ್ಯೆಗಳ ಬಗ್ಗೆ
ಮಾತನಾಡುವ ಶಕ್ತಿ ಹೊಂದಿದ್ದಾರೆ. ಮಹಾತ್ಮ ಎಂದಾಗ, ತುಂಬಾ ದೊಡ್ಡವರು, ಅವರನ್ನು ಅನುಸರಿಸುವುದು ಕಷ್ಟ
ಎನ್ನುವ ಭಾವ ಬಂದು ಬಿಡುತ್ತದೆಯೇನೋ? ಹೀಗಾಗಿ ನಾನು ನಮ್ಮ ಮುತ್ತಜ್ಜನನ್ನು ಬಾಪುವಾಗಿ ಸಾಮಾನ್ಯ ಜನರಿಗೆ ತಲುಪಿಸುವ ಯತ್ನ ಮಾಡುತ್ತಿದ್ದೇನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.