ಟ್ರಂಪ್ ವಲಸೆ ನೀತಿಗೆ ಸೆಡ್ಡು ಹೊಡೆದ ಅಟಾರ್ನಿ ಜನರಲ್ ವಜಾ
Team Udayavani, Jan 31, 2017, 12:07 PM IST
ವಾಷಿಂಗ್ಟನ್ : ಮುಸ್ಲಿಂ ಬಹುಸಂಖ್ಯಾಕರಿರುವ ಏಳು ದೇಶಗಳ ಮೇಲೆ ವಲಸೆ ನಿಷೇಧ ಹೇರಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶಕ್ಕೆ ಸೆಡ್ಡು ಹೊಡೆದ ಅಮೆರಿಕದ ಅಟಾರ್ನಿ ಜನರಲ್ ಸ್ಯಾಲಿ ಯೇಟ್ಸ್ ಅವರನ್ನು ಟ್ರಂಪ್ ಅವರು ಹುದ್ದೆಯಿಂದ ಕಿತ್ತು ಹಾಕಿದ್ದಾರೆ.
ಅಮೆರಿಕನ್ ಒಕ್ಕೂಟ ಸರಕಾರದ ಉನ್ನತ ವಕೀಲೆಯಾಗಿರುವ ಅಟಾರ್ನಿ ಜನರಲ್ ಸ್ಯಾಲಿ ಯೇಟ್ಸ್ ಅವರು ಅಭೂತಪೂರ್ವ ಕ್ರಮವೊಂದರಲ್ಲಿ ಟ್ರಂಪ್ ಅವರ ವಲಸೆ ನಿಷೇಧ ಆದೇಶವನ್ನು ಅನುಷ್ಠಾನಿಸಲಾಗದೆಂದು ಹೇಳುವ ಮೂಲಕ ಶ್ವೇತ ಭವನಕ್ಕೆ ಸೆಡ್ಡು ಹೊಡೆದಿದ್ದರು. ಇದನ್ನು ಅನುಸರಿಸಿ ಟ್ರಂಪ್ ಅವರು ಕೂಡಲೇ ಯೇಟ್ಸ್ ಅವರನ್ನು ಹುದ್ದೆಯಿಂದ ವಜಾಗೊಳಿಸಿದರು.
ಯೇಟ್ಸ್ ಅವರನ್ನು ಅಟಾರ್ನಿ ಜನರಲ್ ಹುದ್ದೆಯಿಂದ ಕಿತ್ತು ಹಾಕಿದ ಬೆನ್ನಿಗೇ ಶ್ವೇತಭವನವು ತನ್ನ ಟ್ವಿಟರ್ ಖಾತೆಯ ಮೂಲಕ ಡ್ಯಾನಾ ಬಾಯೆಂಟ್ ಅವರನ್ನು ಹೊಸ ಅಟಾರ್ನಿ ಜನರಲ್ ಆಗಿ ನೇಮಿಸಲಾಗಿದೆ ಎಂದು ಪ್ರಕಟಿಸಿತು. ಡ್ಯಾನಾ ಬಾಯೆಂಟ್ ಅವರು ಪ್ರಕೃತ ಪೂರ್ವದ ಜಿಲ್ಲೆಯಾಗಿರುವ ವರ್ಜಿನಿಯಾದ ಅಟಾರ್ನಿ ಜನರಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸ್ಯಾಲಿ ಯೇಟ್ಸ್ ಅವರು ಸೋಮವಾರ ನ್ಯಾಯಾಂಗ ಇಲಾಖೆಯ ವಕೀಲರಿಗೆ ಪತ್ರ ಬರೆದು ನಿರಾಶ್ರಿತರು ಅಮೆರಿಕ ಪ್ರವೇಶಿಸುವುದಕ್ಕೆ ಅಧ್ಯಕ್ಷ ಟ್ರಂಪ್ ಹೇರಿರುವ 120 ದಿನಗಳ ತಡೆ, ಸಿರಿಯದಿಂದ ಬರುತ್ತಿರುವ ನಿರಾಶ್ರಿತರ ಮೇಲಿನ ಶಾಶ್ವತ ತಡೆ ಹಾಗೂ ಇರಾಕ್, ಇರಾನ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯ ಮತ್ತು ಯೆಮೆನ್ ದೇಶಗಳಿಂದ ವಲಸೆ ಬರುತ್ತಿರುವವರ ಮೇಲಿನ 90 ದಿನಗಳ ನಿಷೇಧವನ್ನು ತಾವು ಅನುಷ್ಠಾನಿಸಲಾರೆವು ಎಂದು ಹೇಳುವ ಮೂಲಕ ಅಧ್ಯಕ್ಷ ಟ್ರಂಪ್ಗೆ ನೇರ ಸೆಡ್ಡು ಹೊಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
Pakistan: ಪಾಕ್ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.