ಹೊಟೇಲ್ ಮಾಣಿ ಸಲಹೆಯಿಂದ ಸಚಿನ್ ಬ್ಯಾಟಿಂಗ್ ಸುಧಾರಿಸಿತು!
Team Udayavani, Jan 31, 2017, 10:30 PM IST
ಮುಂಬಯಿ: ಚೆನ್ನೈನ ಹೊಟೇಲ್ ಮಾಣಿಯೊಬ್ಬ ನೀಡಿದ ಸಲಹೆಯಿಂದ ತನ್ನ ಬ್ಯಾಟಿಂಗ್ ಸುಧಾರಿಸಿತು ಎಂದು 24 ವರ್ಷಗಳ ಕಾಲ ಕ್ರಿಕೆಟ್ ಆಡಿ ಅನೇಕ ವಿಶ್ವ ದಾಖಲೆ ನಿರ್ಮಿಸಿರುವ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಹೇಳಿಕೊಂಡಿದ್ದಾರೆ.
“ಒಂದು ದಿನ ಚೆನ್ನೈನಲ್ಲಿದ್ದಾಗ ಅಲ್ಲಿಯ ಹೊಟೇಲ್ ಮಾಣಿಯೊಬ್ಬ ನನ್ನ ಬಳಿಗೆ ಬಂದು ನನ್ನದೊಂದು ಸಲಹೆ ನೀಡಬಹುದೇ ಎಂದು ಕೇಳಿದ. ಕೂಡಲೇ ನಾನು ಒಪ್ಪಿಗೆ ನೀಡಿದೆ. ನಿಮ್ಮ ಮೊಣಕೈಗೆ ಕಟ್ಟಿಕೊಳ್ಳುವ ಗಾರ್ಡ್ನಿಂದ ನಿಮ್ಮ ಬ್ಯಾಟ್ ಸರಿಯಾಗಿ ಹೊರಳುತ್ತಿಲ್ಲ ಎಂದು ತಿಳಿಸಿದ. ಮೊಣಕೈ ಗಾರ್ಡ್ನಿಂದ ನನಗೇನೋ ಕಿರಿಕಿರಿಯಾಗುತ್ತಿದೆ ಎಂದು ನನಗೂ ಅನಿಸಿದ್ದರಿಂದ ಸಲಹೆಯನ್ನು ಒಪ್ಪಿಕೊಂಡೆ. ತತ್ಕ್ಷಣವೇ ಅದರ ವಿನ್ಯಾಸವನ್ನು ಬದಲಿಸಿದೆ. ಅನಂತರ ನನ್ನ ಬ್ಯಾಟಿಂಗ್ ಸುಧಾರಿಸಿತು’ ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ. ಸಚಿನ್ ಇಷ್ಟೆಲ್ಲ ಮಾತುಗಳನ್ನಾಡಲು ವೇದಿಕೆಯಾಗಿದ್ದು ಮುಂಬಯಿಯಲ್ಲಿ ಸಚಿನ್ ಕ್ರೀಡೋಪಕರಣಗಳ ಬಿಡುಗಡೆ ಸಮಾರಂಭ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.