130 ಹೆಂಡ್ತಿಯರು, 203 ಮಕ್ಕಳನ್ನು ಬಿಟ್ಟು ಚಿರನಿದ್ರೆಗೆ
Team Udayavani, Feb 1, 2017, 3:45 AM IST
ಅಬುಜಾ: ಆರು ಅಂತಸ್ತಿನ ದೊಡ್ಡ ಕಟ್ಟಡ, ಅಲ್ಲಿ ಐವತ್ತಕ್ಕೂ ಅಧಿಕ ಕೋಣೆಗಳು, ಪ್ರತಿ ಕೋಣೆಯಲ್ಲೂ ಅವನ ಪತ್ನಿಯರು, ಮಕ್ಕಳು! 93 ವರ್ಷದ ಮಸಾಬಾ ಬಾಬಾ ಮಂಗಳವಾರ ಅಸುನೀಗುವಾಗ ಆ ಮನೆಯಲ್ಲಿ ಅನಾಥವಾಗಿದ್ದು 130 ಪತ್ನಿಯರು, 203 ಮಕ್ಕಳು!
ನೈಜೀರಿಯಾದ ದೇವಮಾನವ ಅಂತಲೇ ಖ್ಯಾತಿಪಡೆದಿದ್ದ ಮಸಾಬಾ ಬಾಬಾ ಈಗ ಚಿರನಿದ್ರೆಗೆ ಜಾರಿದ್ದಾರೆ. ಇಸ್ಲಾಮ್ ಧರ್ಮದ ಪ್ರಕಾರ, ಹೆಚ್ಚೆಂದರೆ ವ್ಯಕ್ತಿ ನಾಲ್ಕು ಮದುವೆಯಾಗಬಹುದು. ಆದರೆ, ಧರ್ಮದ ಕಾನೂನಿಗೆ ವಿರುದ್ಧವಾಗಿ ಬದುಕಿದ್ದ ಬಾಬಾ 2008ರಲ್ಲಿ ಬಿಬಿಸಿಗೆ ಸಂದರ್ಶನ ನೀಡಿ ವಿಶ್ವದಾದ್ಯಂತ ಸುದ್ದಿಯಾದರು. ಆಗ ಬಾಬಾ 86 ಪತ್ನಿಯರೊಂದಿಗೆ ವಾಸಿಸುತ್ತಿದ್ದರು. ಸಂದರ್ಶನ ನೋಡಿದ ಇಸ್ಲಾಮ್ ಧಾರ್ಮಿಕ ಗುರುಗಳು, 48 ಗಂಟೆಗಳಲ್ಲಿ 82 ಪತ್ನಿಯರಿಗೆ ತಲಾಖ್ ನೀಡಲು ಇವರಿಗೆ ಸೂಚಿಸಿದ್ದರು. ಆದರೆ, ಬಾಬಾ “ನನಗೆ ಇಷ್ಟೊಂದು ಪತ್ನಿ ಜೊತೆ ಸಂಸಾರ ನಡೆಸಲು ಅಲ್ಲಾಹುನಿಂದ ಸೂಚನೆ ಬಂದಿದೆ. ಸಾಯುವ ತನಕ ನಿಖಾ ಆಗು ಎಂದು ದೇವರು ಅನುಮತಿ ನೀಡಿದ್ದಾನೆ’ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದರು. ಈಗಿನ 130 ಪತ್ನಿಯರಲ್ಲಿ ಕೆಲವರು ಗರ್ಭಿಣಿಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.