ಬ್ಲೌಸ್‌ ಬಿಚ್ಚಿ ತೋರಿಸು!:ಏರ್‌ಪೋರ್ಟ್‌ ಸಿಬಂದಿಗಳ ಕೀಳುವರ್ತನೆ


Team Udayavani, Feb 1, 2017, 12:11 PM IST

55555.jpg

ಫ್ರಾಂಕ್‌ಫ‌ರ್ಟ್‌ (ಜರ್ಮನಿ ): ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಭಾರತೀಯ ಮೂಲದ ಸಿಂಗಾಪುರದ ಮಹಿಳೆಯೊಬ್ಬರೊಂದಿಗೆ ಭದ್ರತಾ ಸಿಬಂದಿಗಳು ಕೀಳಾಗಿ ವರ್ತಿಸಿದ್ದು, ಮಗುವಿಗೆ ಹಾಲುಣಿಸುತ್ತಿರುವುದನ್ನು ಧೃಡೀಕರಿಸಲು ಬ್ಲೌಸ್‌ ಬಿಚ್ಚಿ  ಸ್ತನಗಳಿಂದ ಹಾಲು ಹಿಂಡಿ ತೋರಿಸಲು ಹೇಳಿ ತೇಜೊವಧೆ ಮಾಡಿದ ಬಗ್ಗೆ ವರದಿಯಾಗಿದೆ. 

ಬಿಬಿಸಿ ವರದಿಯಂತೆ  ಸಿಂಗಾಪುರದಲ್ಲಿ  ಟ್ರಾನ್ಸ್‌ಪೋರ್ಟ್  ಕಂಪೆನಿಯೊಂದರಲ್ಲಿ ಮ್ಯಾನೇಜರ್‌ ಆಗಿರುವ 33 ವರ್ಷ ಪ್ರಾಯದ ಗಾಯತ್ರಿ ಬೋಸ್‌ ಎನ್ನುವವರು  ವಿಮಾನ ನಿಲ್ದಾಣದಲ್ಲಿ  ತನ್ನನ್ನು ಕೀಳಾಗಿ ನಡೆಸಿಕೊಂಡ ಭದ್ರತಾ ಸಿಬಂದಿಗಳ ವಿರುದ್ದ ದೂರು ದಾಖಲಿಸಿದ್ದಾರೆ. 

ಗಾಯತ್ರಿ ಬೋಸ್‌ ಅವರಿಗೆ  3 ವರ್ಷ ಮತ್ತು 7 ತಿಂಗಳ ಪ್ರಾಯದ ಮಕ್ಕಳಿದ್ದು, ಸಣ್ಣ ಮಗುವಿಗೆ ಈಗಲೂ ಹಾಲುಣಿಸುತ್ತಿದ್ದಾರೆ. ತನ್ನ ಪ್ಯಾರಿಸ್‌ ಪ್ರಯಾಣದ ವೇಳೆ ಮಗುವನ್ನು ಬಿಟ್ಟು ಹೋಗಿದ್ದು  ಬ್ರೆಸ್ಟ್‌ ಪಂಪ್‌ (ಹಾಲು ಹಿಂಡುವ ಸಾಧನ) ಜೊತೆಯಲ್ಲಿ ಒಯ್ದಿದ್ದರು. 

ಗಾಯತ್ರಿ ಅವರ ಭದ್ರತಾ ಪರಿಶೀಲನೆ ವೇಳೆ ಹ್ಯಾಂಡ್‌ ಬ್ಯಾಗ್‌ನಲ್ಲಿದ್ದ ಬ್ರೆಸ್ಟ್‌ ಪಂಪ್‌ ನೋಡಿದ ಭದ್ರತಾ ಸಿಬಂದಿ ‘ನೀನು ಮಗುವಿಗೆ ಹಾಲುಣಿಸುತ್ತಿರುವುದು ನಮಗೆ ಧೃಡಪಡಬೇಕಿದೆ? ಎಲ್ಲಿದೆ ನಿನ್ನ ಮಗು ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ. ಅಲ್ಲಿದ್ದ  ಮಹಿಳಾ ಸಿಬಂದಿಗಳು ನನ್ನನ್ನು ಕೀಳು ಮಟ್ಟದಲ್ಲಿ ನಡೆಸಿಕೊಂಡಿದ್ದಾರೆ’ ಎಂದು ಗಾಯತ್ರಿ ವಿವರಿಸಿದ್ದಾರೆ.

ಬ್ಲೌಸ್‌ ಬಿಚ್ಚುವಂತೆ ಹೇಳಿ ಹಾಲು ಹಿಂಡಿ ತೋರಿಸಿದ ಬಳಿಕವಷ್ಟೇ ನನ್ನನ್ನು ಹೊರ ಬಿಟ್ಟಿದ್ದು, ಹೊರ ಬಂದ ಬಳಿಕ ನಾನು ಗಳಗಳನೆ ಅತ್ತು ಬಿಟ್ಟೆ. ಆ ಸಂದರ್ಭ ನಾನು ಅಸಹಾಯಕಳಾಗಿದ್ದೆ, ತೀವ್ರ ನೊಂದುಕೊಂಡೆ.ನನ್ನ ಪಾಸ್‌ಪೋರ್ಟನ್ನು ಅವರು ವಶಕ್ಕೆ ಪಡೆದಿದ್ದರು ಎಂದಿದ್ದಾರೆ. 

ನೀವು ನಡೆದುಕೊಂಡಿರುವ ಕ್ರಮ ಸರಿಯಲ್ಲ ನೀವು ಏನು ಮಾಡಿದ್ದೀರೆಂದು ನಿಮಗೆ ಗೊತ್ತಿದೆಯೆ  ಎಂದು ನಾನು ಪ್ರಶ್ನಿಸಿದೆ. ನನ್ನ ಪ್ರಶ್ನೆಗುತ್ತರವಾಗಿ ಆಯಿತಲ್ಲ ..ನೀನಿನ್ನು ಮುಂದುವರಿ.. ಎಂದು ಬೇಜವಾಬ್ದಾರಿ  ತನದಲ್ಲಿ ಏನೂ ಆಗಿಲ್ಲ ಎನ್ನುವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು ಎಂದು ಗಾಯತ್ರಿ ನೋವು ತೋಡಿಕೊಂಡಿದ್ದಾರೆ. 

ಈ ಬಗ್ಗೆ  ಪ್ರತಿಕ್ರಿಯೆ ನೀಡಿರುವ ಜರ್ಮನ್‌ ಪೊಲೀಸರು ಭದ್ರತಾ ದೃಷ್ಟಿಯಿಂದ ಪರಿಶೀಲನೆ ನಡೆಸುವುದು ಅಗತ್ಯ ಆದರೆ ಈ ರೀತಿ ಪರಿಶೀಲನೆ ನಡೆಸುವ ವಾಡಿಕೆ ಇಲ್ಲ ಎಂದಿದ್ದಾರೆ. 

ಟಾಪ್ ನ್ಯೂಸ್

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

1-tume

Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.