ಪಡಿತರ ಕೊಡುವ ಪದ್ಧತಿಯೇ ಇರಲಿ


Team Udayavani, Feb 1, 2017, 12:29 PM IST

dvg2.jpg

ದಾವಣಗೆರೆ: ನಗರ ಪ್ರದೇಶದಲ್ಲಿ ಅನ್ನಭಾಗ್ಯ ಯೋಜನೆಯ ಆಯ್ದ ಕಾರ್ಡ್‌ದಾರರಿಗೆ ಪಡಿತರ ಬದಲಿಗೆ ನಗದು ರೂಪದಲ್ಲಿ ಸಹಾಯಧನ ವಿತರಿಸುವ ಪದ್ಧತಿ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಸ್ಲಂ ಜನಾಂದೋಲನ, ಸಾವಿತ್ರಿ ಬಾ ಫುಲೆ ಮಹಿಳಾ ಸಂಘಟನೆ, ಮಾನವ ಹಕ್ಕುಗಳ ವೇದಿಕೆ, ದಲಿತ ಸಂಘಟನೆಗಳ ಒಕ್ಕೂಟ, ಆಲ್‌ ಇಂಡಿಯಾ ತಂಜೀಮ್‌-ಎ-ಇನ್ಸಾಫ್‌, ಎಐಟಿಯುಸಿ, ಕೊಳಗೇರಿ ನಿವಾಸಿಗಳ ಸಂಘಗಳಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

ಆಹಾರ ಭದ್ರತಾ ಕಾಯ್ದೆಯಂತೆ ಹಸಿವುಮುಕ್ತ ವಾತಾವರಣ ನಿರ್ಮಾಣ ಮಾಡುವುದು ಸರ್ಕಾರಗಳ ಕರ್ತವ್ಯ. ಅನ್ನಭಾಗ್ಯ ಯೋಜನೆ ಜಾರಿಗೆ ತಂದಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಈಚೆಗೆ ಇಡೀ ಯೋಜನೆಯನ್ನೇ ರದ್ಧುಪಡಿಸುವ ಹುನ್ನಾರ ನಡೆಸುತ್ತಿದೆ. ಅದರ ಭಾಗವಾಗಿ ಪಡಿತರದ ಬದಲಿಗೆ ನಗದು ರೂಪದಲ್ಲಿ ಸಹಾಯಧನ ವಿತರಿಸಲು ಮುಂದಾಗಿರುವುದು ಖಂಡನೀಯ.

ಆಯ್ದ ಕುಟುಂಬಗಳು ಬಯಸಿದರೆ ಮಾತ್ರವೇ ನಗದು ನೀಡುವುದಾಗಿ ಸುಳ್ಳು ಹೇಳುತ್ತಿರುವ ಸರ್ಕಾರ, ಇಡೀ ಯೋಜನೆಯನ್ನೇ ಸ್ಥಗಿತಗೊಳಿಸುವ ಹುನ್ನಾರ ನಡೆಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಆಹಾರ ಭದ್ರತಾ ಕಾಯ್ದೆ ಅನ್ವಯ ಎಲ್ಲಅರ್ಹ ಕುಟುಂಬಕ್ಕೆ ಆಹಾರ ಪದಾರ್ಥ  ಒದಗಿಸುವ ಮೂಲಕ ಹಸಿವು ನೀಗಿಸಬೇಕು. 

ಆಹಾರ ಧಾನ್ಯಗಳ ಬದಲಿಗೆ ಹಣ ನೀಡುವುದರಿಂದ ಹಸಿವು ದೂರ ಮಾಡಲಿಕ್ಕೆ ಆಗುವುದಿಲ್ಲ, ಪಡಿತರದ ಬದಲಿಗೆ ಹಣ ನೀಡುವುದರಿಂದ ಹಸಿವು ಮುಕ್ತ ಸಮಾಜ ನಿರ್ಮಾಣ ಸಾಧ್ಯವೇ ಇಲ್ಲ. ಆ ಕುಟುಂಬದ ಮುಖ್ಯಸ್ಥ 800 ರೂಪಾಯಿಯನ್ನೂ ಖರ್ಚು ಮಾಡಿದರೆ ಆ ಕುಟುಂಬಕ್ಕೆ ತಿಂಗಳಿಗೆ ಬೇಕಾದ ಪಡಿತರ ದೊರೆಯುವುದೇ ಇಲ್ಲ.

ಹಾಗಾಗಿ ರಾಜ್ಯ ಸರ್ಕಾರ ನೇರ ನಗದು ಸಬ್ಸಿಡಿ, ಪಡಿತರ ವಿತರಣಾ ವ್ಯವಸ್ಥೆಯನ್ನು  ಸಾರ್ವತೀಕರಣಗೊಳಿಸಿ, ಎಲ್ಲ ಬಡ ಜನರಿಗೆ ಆಹಾರ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು. ಯೂನಿಟ್‌ ಪದ್ಧತಿ ರದ್ದುಗೊಳಿಸಿ, ಪ್ರತಿ ಬಿಪಿಎಲ್‌ ಕುಟುಂಬಕ್ಕೆ 30 ಕೆಜಿ ಅಕ್ಕಿ, ಪೌಷ್ಠಿಕ ಆಹಾರ ಧಾನ್ಯ ವಿತರಣೆ, ಪಡಿತರಕ್ಕೆ ಆಧಾರ್‌ ಕಾರ್ಡ್‌ ಕಡ್ಡಾಯ ಜೋಡಣೆ ರದ್ಧತಿ, ಅರ್ಹ ಬಿಪಿಎಲ್‌ ಕುಟುಂಬಕ್ಕೆ 10 ದಿನಗಳಲ್ಲಿ ಪಡಿತರ ಕಾರ್ಡ್‌ ವಿತರಣೆ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.  

ಸ್ಲಂ ಜನಾಂದೋಲನದ ಜಿಲ್ಲಾ ಸಂಚಾಲಕಿ ರೇಣುಕ ಹಾವೇರಿ ಯಲ್ಲಮ್ಮ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್‌.ಕೆ. ರಾಮಚಂದ್ರಪ್ಪ, ತಾಲೂಕು ಕಾರ್ಯದರ್ಶಿ ಆವರಗೆರೆ ವಾಸು, ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಕಾರ್ಯದರ್ಶಿ  ಎಲ್‌.ಎಚ್‌. ಅರುಣ್‌ಕುಮಾರ್‌, ದಲಿತ ಸಂಘಟನೆಯ ಸಿ. ಬಸವರಾಜ್‌, ಇನ್ಸಾಫ್‌ ತಂಜೀಮುಲ್‌ನ ಸೈಯದ್‌ ಖಾಜಾಪೀರ್‌, 

ಎಚ್‌.ವಿ. ಪ್ರಭುಲಿಂಗಪ್ಪ, ಶಶಿರೇಖಾ, ಕೆ.ಎಚ್‌. ಹನುಮಂತಪ್ಪ, ಶಬೀºರ್‌ಸಾಬ್‌, ಮರಿಯಪ್ಪ, ಶೇಖ್‌ ಅನ್ವರ್‌ ಸಾಬ್‌, ಟಿ.ಎಂ. ಮುರುಗೇಶ್‌, ನಯಾಜ್‌ ಅಹ್ಮದ್‌, ಮಹಮ್ಮದ್‌ ಸಲೀಂ, ಡಿ. ನಾಗರಾಜ್‌ ಇತರರು ಇದ್ದರು. ಶ್ರೀ ಜಯದೇವ ವೃತ್ತದಿಂದ ತಹಶೀಲ್ದಾರ್‌ ಕಚೇರಿವರೆಗೆ ಮೆರವಣಿಗೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.   

ಟಾಪ್ ನ್ಯೂಸ್

High-Court

High Court: ಮರಗಳಿಗೆ ಕತ್ತರಿ: ಸರಕಾರ, ಜಿಲ್ಲಾಡಳಿತಕ್ಕೆ ನೋಟಿಸ್‌

High-Court

High Court: ಕೋರ್ಟ್‌ ಕಲಾಪದ ವೀಡಿಯೋ ಹಂಚಿಕೆಗೆ ತಡೆ: ಇಂದು ವಿಚಾರಣೆ

pratp

Challenge: ಮಹಿಷ ದಸರಾಕ್ಕೆ ಮುಂದಾದರೆ ಚಾಮುಂಡಿ ಚಲೋ: ಪ್ರತಾಪ್‌ ಸಿಂಹ

Balachandra

Thirupathi: ಲಡ್ಡು ವಿವಾದ ಬಳಿಕ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ: ಶಾಸಕ ಬಾಲಚಂದ್ರ

Eshawar-Khandre

Mysuru Dasara: ಆನೆಗಳೊಂದಿಗೆ ಸೆಲ್ಫಿ ,ರೀಲ್ಸ್‌ , ಫೋಟೋ ನಿಷೇಧ: ಸಚಿವ ಈಶ್ವರ ಖಂಡ್ರೆ

Accident-Logo

Mysuru: ಕಾರು ಢಿಕ್ಕಿ: ಬೈಕಿನಲ್ಲಿದ್ದ ಮಗು ಸ್ಥಳದಲ್ಲೇ ಸಾವು; ಹೆತ್ತವರಿಗೆ ಗಂಭೀರ ಗಾಯ

Udupi; ಗೀತಾರ್ಥ ಚಿಂತನೆ-44: ಸ್ವಭಾವಕ್ಕೆ ತಕ್ಕುದಾಗಿ ವ್ಯಕ್ತಿಯ ಬೆಳವಣಿಗೆ

Udupi; ಗೀತಾರ್ಥ ಚಿಂತನೆ-44: ಸ್ವಭಾವಕ್ಕೆ ತಕ್ಕುದಾಗಿ ವ್ಯಕ್ತಿಯ ಬೆಳವಣಿಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

Davanagere: Judicial custody of 14 accused in Ganesh procession stone pelting case

Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Kudali

Shivamogga: ತಿರುಪತಿ ಲಡ್ಡಿಗೆ ಅಪಚಾರ: ಕೂಡಲಿ ಶ್ರೀಗಳಿಂದ 3 ದಿನ ಉಪವಾಸ ವ್ರತ

High-Court

High Court: ಮರಗಳಿಗೆ ಕತ್ತರಿ: ಸರಕಾರ, ಜಿಲ್ಲಾಡಳಿತಕ್ಕೆ ನೋಟಿಸ್‌

High-Court

High Court: ಕೋರ್ಟ್‌ ಕಲಾಪದ ವೀಡಿಯೋ ಹಂಚಿಕೆಗೆ ತಡೆ: ಇಂದು ವಿಚಾರಣೆ

1-eqweewe

Bihar; ಮತ್ತೊಂದು ಸೇತುವೆ ಕುಸಿತ: ನಾಲ್ಕು ತಿಂಗಳಲ್ಲಿ 17ನೇ ಪ್ರಕರಣ

pratp

Challenge: ಮಹಿಷ ದಸರಾಕ್ಕೆ ಮುಂದಾದರೆ ಚಾಮುಂಡಿ ಚಲೋ: ಪ್ರತಾಪ್‌ ಸಿಂಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.