4ಜಿ ಸ್ಪೀಡ್‌ನಲ್ಲಿ ರಿಲಯನ್ಸ್ ಜಿಯೋಗಿಂತ ಏರ್‌ಟೆಲ್ ಮುಂದೆ
Team Udayavani, Feb 2, 2017, 7:35 PM IST
ಮುಂಬಯಿ : ಮುಕೇಶ್ ಅಂಬಾನಿ ಅವರ ರಿಲಯನ್ಸ್ ಜಿಯೋ ಕಂಪೆನಿ ದೇಶದಲ್ಲಿ ಶೇ.90 ಡಾಟಾ ಟ್ರಾಫಿಕ್ ನಿರ್ವಹಿಸುತ್ತಿದೆ. ಅಂತೆಯೇ ರಿಲಯನ್ಸ್ ಜಿಯೋ ಜಾಲವು ಇತರೆಲ್ಲ ಸ್ಫರ್ಧಿಗಳಿಗಿಂತ ಗಮನಾರ್ಹವಾಗಿ ಮುಂದಿದೆ; ಆದರೂ 4ಜಿ ಸ್ಪೀಡ್‌ನಲ್ಲಿ ಏರ್‌ಟೆಲ್‌ಗಿಂತ ಅದು ಹಿಂದಿದೆ; ಆದರೆ ಉಚಿತ ಕೊಡುಗೆಯಿಂದಾಗಿ ರಿಲಯನ್ಸ್ ಜಿಯೋ ನೆಟ್‌ವರ್ಕ್ ಮೇಲೆ ಹೆಚ್ಚಿನ ಒತ್ತಡ ಬಿದ್ದಿರುವುದರಿಂದ ಇದು ಹೀಗಾಗಿರಬಹುದು ಎಂದು Credit Suisse ವರದಿ ಮಾಡಿದೆ.
ಸಮೀಕ್ಷೆ ಮಾಡಲಾದ ನಗರಗಳಲ್ಲಿ ಜಿಯೋ ನೆಟ್‌ವರ್ಕ್ ಶೇ.80ರಷ್ಟಿದೆ. ಇತರ ಕಂಪೆನಿಗಳ ನೆಟ್‌ವರ್ಕ್ ಶೇ.30ಕ್ಕಿಂತಲೂ ಕಡಿಮೆ ಇರುವುದನ್ನು ಕಂಡರೆ ಜಿಯೋ ನೆಟ್‌ವರ್ಕ್ ಉಳಿದವರಿಗಿಂತ ಬಹಳ ದೊಡ್ಡದಿರುವುದು ಶ್ರುತಪಟ್ಟಿದೆ. ಆದರೆ 4ಜಿ ಜಾಲವನ್ನು ಮಾತ್ರವೇ ಹೋಲಿಸಿದಲ್ಲಿ ರಿಲಯನ್ಸ್ ಜಿಯೋ ಜಾಲ ಶೇ.15ಕ್ಕಿಂತ ಕಡಿಮೆ ಇದೆ ಎಂದು ವರದಿ ಹೇಳಿದೆ.
ವೇಗದ ಜಾಲ ಯಾರದ್ದೆಂಬ ಪ್ರಶ್ನೆ ಬಂದಾಗ ಏರ್‌ಟೆಲ್‌ನ 4ಜಿ, ರಿಲಯನ್ಸ್ ಜಿಯೋವನ್ನು ಹಿಂದಿಕ್ಕುತ್ತದೆ ಎಂದು ವರದಿ ಹೇಳಿದೆ.
“ಈ ಎಲ್ಲ ತಾಣಗಳಲ್ಲಿ ನಾವು ನೆಟ್‌ವರ್ಕ್ ಸ್ಪೀಡ್ ಅಧ್ಯಯನ ಮಾಡಿದ್ದೇವೆ. ಸಾಮಾನ್ಯವಾಗಿ ಏರ್‌ಟೆಲ್ 4ಜಿ ಅತ್ಯಂತ ವೇಗದ ಡೌನ್‌ಲೋಡ್ (12 ಎಂಬಿಪಿಎಸ್ ಪ್ಲಸ್) ಒದಗಿಸುತ್ತದೆ. ಜಿಯೋ, ವೋಡಾಫೋನ್ ಮತ್ತು ಐಡಿಯಾ (7-8 ಎಂಬಿಪಿಎಸ್) ಪರಸ್ಪರ ಅತ್ಯಂತ ನಿಕಟವಾಗಿವೆ. ರಿಲಯನ್ಸ್ ಜಿಯೋ ಜಾಲವು ಅದರ ಫ್ರೀ ಆಫರ್ ಅವಧಿಯಿಂದಾಗಿ ಅಧಿಕ ಒತ್ತಡಕ್ಕೆ ಗುರಿಯಾಗಿರುವುದು ಇದಕ್ಕೆ ಕಾರಣವೆಂದು ನಾವು ತಿಳಿಯುತ್ತೇವೆ’ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.