ಲಾಭದ ಹಳಿಗೆ “ಸುವರ್ಣ ರಥ’ ತರಲು ಕಸರತ್ತು
Team Udayavani, Feb 3, 2017, 3:45 AM IST
ಬೆಂಗಳೂರು: ಐಷಾರಾಮಿ ಸುವರ್ಣ ರಥ ಹಿರಿಮೆಯ “ಗೋಲ್ಡನ್ ಚಾರಿಯೆಟ್’ ಪ್ರವಾಸಿ ರೈಲು ಸಂಚಾರವನ್ನು ಲಾಭದ ಹಳಿಗೆ
ತಂದು ಪ್ರವಾಸಿ ಸ್ನೇಹಿಯಾಗಿಸಲು ರಾಜ್ಯ ಪ್ರವಾಸೋದ್ಯಮ ಅಭಿವೃದಿಟಛಿ ನಿಗಮ ಆಕರ್ಷಕ “ಪ್ಯಾಕೇಜ್’ ಜಾರಿಗೆ ಮುಂದಾಗಿದೆ.
ಬೇಸಿಗೆಯಲ್ಲಿ ವಾರಾಂತ್ಯ ಪ್ರವಾಸ, ಕಾರ್ಪೋರೇಟ್ ಕ್ಷೇತ್ರದವರಿಗೆ ದರ ವಿಶೇಷ ರಿಯಾಯಿತಿ, ಪ್ರವಾಸಿ ದಿನಗಳ ಸಂಖ್ಯೆ ಬದಲಾವಣೆ ಈ ಪ್ಯಾಕೇಜ್‌ನಲ್ಲಿ ಸೇರಿದೆ.
ಗೋಲ್ಡನ್ ಚಾರಿಯೆಟ್ ಪ್ರವಾಸಿ ರೈಲು ಸೇವೆಯನ್ನು ಜನಪ್ರಿಯಗೊಳಿಸುವ ಜತೆಗೆ ಆರ್ಥಿಕವಾಗಿಯೂ ಲಾಭಕರವನ್ನಾಗಿಸುವುದು. ವಿದೇಶಿಗರಷ್ಟೇ ಹೆಚ್ಚಾಗಿ ಬಳಸುತ್ತಿರುವ ರೈಲಿನ ಸೇವೆಯನ್ನು ರಾಜ್ಯದ ಹಾಗೂ ದೇಶೀಯ ಪ್ರವಾಸಿಗರು ಬಳಸುವಂತೆ ಮಾಡುವುದು ಇದರ ಮೂಲ ಉದ್ದೇಶ. ಆ ನಿಟ್ಟಿನಲ್ಲಿ ಪ್ರವಾಸೋದ್ಯಮ ನಿಗಮ ಕಾರ್ಯೋನ್ಮುಖವಾಗಿದೆ.
ಪ್ಯಾಕೇಜ್ ಪ್ರವಾಸ: ವಿದೇಶಿಗರ ವಾರ್ಷಿಕ ಭೇಟಿ ಅವಧಿ ಆಧಾರದ ಮೇಲೆ ಈವರೆಗೆ ಸುವರ್ಣ ರಥ ಮಳೆಗಾಲ, ಚಳಿಗಾಲದಲ್ಲಿ ಅಂದರೆ ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಸಂಚರಿಸುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಬೇಸಿಗೆಯಲ್ಲೂ ಸೇವೆ ಒದಗಿಸಲು ಸಜ್ಜಾಗಿದೆ. ಅದರಂತೆ ಏಪ್ರಿಲ್‌ನಿಂದ ಜೂನ್ ಮಧ್ಯದವರೆಗೆ ವಾರಾಂತ್ಯದ ಪ್ರವಾಸಗಳನ್ನು ಆಯೋಜಿಸುತ್ತಿದೆ.
ಮೈಸೂರು ಹಾಗೂ ಹಂಪಿಗೆ ತಿಂಗಳಲ್ಲಿ ತಲಾ ಎರಡು ವಾರಾಂತ್ಯ (ಶನಿವಾರ, ಭಾನುವಾರ) ಪ್ಯಾಕೇಜ್ ಪ್ರವಾಸ ಆಯೋಜಿಸಿದೆ. ಏಳು ದಿನದ ಪ್ರವಾಸ ಹೋಗಲಾಗದವರು ಎರಡು ದಿನದಲ್ಲೇ ಪ್ರಯಾಣದ ಮೋಜು ಸವಿಯಬಹುದು ಎಂಬುದು ನಿಗಮದ ಚಿಂತನೆ. ಇದಲ್ಲದೆ ಕಾರ್ಪೋರೇಟ್ ಕ್ಷೇತ್ರದ ಪ್ರವಾಸಿಗರನ್ನೂ ಸೆಳೆಯಲು ಕೆಲ ಆಕರ್ಷಣೆಗಳನ್ನೂ ಪ್ರಕಟಿಸಿದೆ. ದಿನವೊಂದಕ್ಕೆ 15 ಲಕ್ಷ ರೂ. ದರದಂತೆ ಸುವರ್ಣ ರಥವನ್ನು ಬಾಡಿಗೆಗೆ ಪಡೆದು ವ್ಯಾವಹಾರಿಕ ಸಭೆಗಳ ಜತೆಗೆ ಸುತ್ತಾಟ ಕೈಗೊಳ್ಳಲು ಅವಕಾಶವಿದೆ. ಗರಿಷ್ಠ 80- 90 ಮಂದಿ ಒಟ್ಟಿಗೆ ರೈಲಿಯಲ್ಲಿ ಚರ್ಚೆ, ಸಭೆ ನಡೆಸುತ್ತಾ, ಐಷಾರಾಮಿ ಸೇವೆಗಳೊಂದಿಗೆ ಸುತ್ತಾಟಕ್ಕೆ ವೇದಿಕೆ ಕಲ್ಪಿಸಲಾಗಿದೆ.
ವಿದೇಶಿಗರಿಗೆ ಏಳು ದಿನದ ಪ್ರವಾಸಕ್ಕೆ 3 ಲಕ್ಷ ರೂ. ದರ ನಿಗದಿಪಡಿಸಲಾಗಿದೆ. ಆದರೆ ದೇಶೀಯ ಪ್ರವಾಸಿಗರಿಗೆ ಅರ್ಧದಷ್ಟು ಶುಲ್ಕ ಅಂದರೆ 1.50 ಲಕ್ಷ ರೂ. ನಿಗದಿಪಡಿಸಲಾಗಿತ್ತು. ಆದರೆ ಇದೂ ದುಬಾರಿ ಎಂಬ ಮಾತು ಕೇಳಿಬಂದ ಹಿನ್ನೆಲೆಯಲ್ಲಿ ದೇಶೀಯ
ಪ್ರವಾಸಿಗರಿಗೆ ಶೇ.40ರಷ್ಟು ರಿಯಾಯಿತಿ ಪ್ರಕಟಿಸಿದ್ದು, 80,000 ರೂ.ಗೆ ಇಳಿಸಲಾಗಿದೆ.
ಶೇ.33ರಷ್ಟು ಆಸನವಷ್ಟೇ ಭರ್ತಿ: “ಸುವರ್ಣ ರಥ’ ಪ್ರವಾಸಿ ರೈಲು ಸೇವೆ 2008ರಲ್ಲಿ ಆರಂಭವಾದಾಗ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದವರೂ ಸಂಭ್ರಮಿಸಿದ್ದರು. “ಪ್ರೈಡ್ ಆಫ್ ಸೌತ್’ ಹೆಸರಿನಡಿ ಕರ್ನಾಟಕ, ಗೋವಾ ಪ್ರವಾಸ ಹಾಗೂ “ಸದರನ್ ಸ್ಪೆಡರ್’ ಹೆಸರಿನಡಿ ತಮಿಳುನಾಡು, ಕೇರಳ, ಪಾಂಡಿಚೆರಿಗೆ ತಲಾ ಏಳು ದಿನಗಳ ಪ್ರವಾಸ ಪ್ಯಾಕೇಜ್ ರೂಪಿಸಲಾಗಿತ್ತು. ಆದರೆ ಪ್ರಯಾಣ ದರ ದುಬಾರಿಯೆಂಬ ಕಾರಣಕ್ಕೆ ಹೆಚ್ಚಿನ ಸ್ಪಂದನೆ ಸಿಗಲಿಲ್ಲ. ಕ್ರಮೇಣ ವಾರ್ಷಿಕ ಟ್ರಿಪ್‌ಗ್ಳ ಸಂಖ್ಯೆ ಗಣನೀಯವಾಗಿ
ಕುಸಿಯಲಾರಂಭಿಸಿತು. 2008ರಲ್ಲಿ ವಾರ್ಷಿಕ 31 ಟ್ರಿಪ್ ಗಳಲ್ಲಿ ಸಂಚರಿಸಿದ್ದ ಸುವರ್ಣ ರಥವು 2009ರಲ್ಲಿ ವಾರ್ಷಿಕ 26 ಟ್ರಿಪ್‌ಗೆ ಸುತ್ತಾಟ ಮೊಟಕುಗೊಂಡಿತು. ನಂತರದ ಕೆಲ ವರ್ಷಗಳಲ್ಲಿ ವಾರ್ಷಿಕ 18ರಿಂದ 21 ಟ್ರಿಪ್‌ಗೆ ಇಳಿಕೆಯಾಗಿತ್ತು. ಆನಂತರದ 2-3
ವರ್ಷಗಳಲ್ಲಿ ವಾರ್ಷಿಕ 10- 11 ಟ್ರಿಪ್‌ಗೆ ಸೀಮಿತವಾಗಿತ್ತು. ಗರಿಷ್ಠ 100 ಮಂದಿ ಪ್ರಯಾಣಿಸಬಹುದಾದ ಸೌಲಭ್ಯವಿರುವ ಸುವರ್ಣ
ರಥದಲ್ಲಿ ಸರಾಸರಿ ಶೇ.33ರಷ್ಟು ಆಸನಗಳಷ್ಟೇ ಭರ್ತಿಯಾಗುತ್ತಿವೆ. ಇದರಿಂದ ನಿರೀಕ್ಷಿತ ಆದಾಯ ಸಂಗ್ರಹವಾಗುತ್ತಿರಲಿಲ್ಲ.
ಭಾರಿ ನಷ್ಟ
ಒಡಂಬಡಿಕೆ ಪ್ರಕಾರ ಕೆಎಸ್‌ಟಿಡಿಸಿ ಸಾಗಣೆ ಶುಲ್ಕವನ್ನು (ಹಾಲೇಜ್ ಚಾರ್ಜ್) ರೈಲ್ವೆ ಇಲಾಖೆ ಭರಿಸಬೇಕಿದೆ. ಕಳೆದ 8 ವರ್ಷಗಳಲ್ಲಿ
ಸುವರ್ಣ ರಥ ಸಂಚಾರದಿಂದ ಸಂಗ್ರಹವಾದ ಅಷ್ಟೂ ಆದಾಯ ರೈಲ್ವೆ ಇಲಾಖೆಗೆ ಸಾಗಣೆ ಶುಲ್ಕ ಪಾವತಿಗೆ ವಿನಿಯೋಗವಾಗಿದೆ. ಇನ್ನುಳಿದ ಊಟ, ಆತಿಥ್ಯ ಸೇವೆ ಇತರೆ ನಿರ್ವಹಣೆಗೆ ಇಲಾಖೆಯೇ ಸ್ವಂತ ಹಣ ಭರಿಸುತ್ತಿದ್ದು, ಹೀಗಾಗಿ, ಭಾರಿ ನಷ್ಟ ಅನುಭವಿಸುತ್ತಿತ್ತು.
ಗೋಲ್ಡನ್ ಚಾರಿಯೆಟ್’ ಪ್ರವಾಸಿ ರೈಲು ಸೇವೆಯನ್ನು ಎಲ್ಲ ಕನ್ನಡಿಗರು ಹಾಗೂ ಭಾರತೀಯರು ಪಡೆಯುವಂತಾಗಬೇಕೆಂಬ ಉದ್ದೇಶದಿಂದ ಕೆಲ ರಿಯಾಯಿತಿ ಹಾಗೂ ಹೊಸ ಯೋಜನೆ ಪ್ರಕಟಿಸಲಾಗುತ್ತಿದೆ. ಈಗಾಗಲೇ ಪ್ರಯಾಣ ದರಕ್ಕೆ ಶೇ.40ರಷ್ಟು ರಿಯಾಯಿತಿ ನೀಡಲಾಗಿದೆ. ಹಾಗೆಯೇ ಏಳು ದಿನ ಪ್ರವಾಸದ ಜತೆಗೆ 2- 3 ದಿನಗಳ ಪ್ರವಾಸ ಪ್ಯಾಕೇಜ್‌ಗಳಿಗೂ ಅಔವಕಾಶವಿದೆ.
ಏಪ್ರಿಲ್‌ನಿಂದ ಜೂನ್ ಮಧ್ಯದವರೆಗೆ ಮೈಸೂರು, ಹಂಪಿಗೆ ವಾರಾಂತ್ಯದ ಎರಡು ದಿನದ ಪ್ರವಾಸ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಕಾರ್ಪೋರೇಟ್ ಕಂಪನಿಗಳಿಗೆ ಸಭೆ, ಸುತ್ತಾಟಕ್ಕೂ ಪೂರಕ ಪ್ಯಾಕೇಜ್ ರೂಪಿಸಲಾಗಿದೆ.
ಕುಮಾರ್ ಪುಷ್ಕರ್, ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.