ರಾಜ್ಯದಲ್ಲಿ ಕಾಂಗ್ರೆಸ್ ಉಳಿಯಬೇಕಾದರೆ ಪರಮೇಶ್ವರ್ ಸಿಎಂ ಆಗಬೇಕು
Team Udayavani, Feb 3, 2017, 3:45 AM IST
ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬದುಕುಳಿಯಬೇಕಾದರೆ ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿರುವ ಡಾ| ಜಿ. ಪರಮೇಶ್ವರ್ ಮುಖ್ಯಮಂತ್ರಿಯಾಗಬೇಕು. ಅವರಿಗೆ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ. ಜನ ಬೆಂಬಲವೂ ಇದೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ದಲಿತ ನಾಯಕಧಿರೊಬ್ಬರು ಮುಖ್ಯಮಂತ್ರಿ ಆಗಬಾರಧಿದೇಕೆ ಎಂದು ಪ್ರಶ್ನಿಸಿದರು.
ಪಕ್ಷ ಬಲವರ್ಧನೆಗೆ
ಬ್ರಹ್ಮ ಬರಬೇಕಾಗಿಲ್ಲ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಲಪಡಿಸಲು ಬ್ರಹ್ಮ ದೇವ ಬರಬೇಕಾಗಿಲ್ಲ. ಪಕ್ಷದ ಹಿರಿಯರು ಕೊಡುವ ಸಲಹೆಧಿಗಳನ್ನು ಮುಖ್ಯಮಂತ್ರಿ ಪಾಲಿಸಿದರೆ ಸಾಕು ಎಂದು ಪೂಜಾರಿ ತಿಳಿಸಿದರು.
ಇದು ಕಾರ್ಯಕರ್ತರು ಕಟ್ಟಿದ ಪಕ್ಷ. ನೀವು ಕಟ್ಟಿದ್ದಲ್ಲ. ಕಾರ್ಯಕರ್ತರ ಸಲಹೆ ಆಲಿಸುವ ಹಾಗೂ ರಾಜ್ಯದ 6 ಕೋಟಿ ಜನರು ಬಯಸುತ್ತಿರುವುದು ಏನು ಎಂಬುದನ್ನು ಅರ್ಥ ಮಾಡಿಕೊಳ್ಳುವ ತಾಳ್ಮೆಯ ಮನೋಭಾವ ನಿಮ್ಮಲ್ಲಿರಬೇಕು ಎಂದು ಅವರು ಮುಖ್ಯಮಂತ್ರಿಗೆ ಸಲಹೆ ನೀಡಿದರು.
ಕಾಂಗ್ರೆಸ್‌ಗೆ ರಾಜೀನಾಮೆ ನೀಡಿಧಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಜತೆ ಹೋಗಲು ಇನ್ನೂ ಕೆಲವರು ಸಿದ್ಧರಾಗಿದ್ದಾರಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಪೂಜಾರಿ, ಇದು ಮುಖ್ಯಮಂತ್ರಿ ಅವರಿಗೆ ತಟ್ಟಿದ ಶನಿ ಕಾಟ ಎಂದು ನಾನು ಈ ಹಿಂದೆಯೇ ತಿಳಿಸಿದ್ದೇನೆ. ಶನಿ ಕಾಟ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದರು.
ಶಾಸಕ ಮೊದಿನ್ ಬಾವಾ
ಕ್ಷಮೆ ಯಾಚಿಸಲಿ
ಶಾಸಕ ಮೊದಿನ್ ಬಾವಾ ಅವರು ರಸ್ತೆ ದುರಸ್ತಿ ವಿಚಾರದಲ್ಲಿ ಕೆಎಐಡಿಬಿ ಅಧಿಕಾರಿಯೊಬ್ಬರನ್ನು ಏಕವಚನದಲ್ಲಿ ಬೈದು ನಿಂದಿಸಿದ್ದಾರೆ ಎನ್ನಲಾದ ಪ್ರಕರಣ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿ ಹರಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಜನಾರ್ದನ ಪೂಜಾರಿ, ಅದರ ಫಲವನ್ನು ಅವರು (ಶಾಸಕರು) ಅನುಭವಿಸುತ್ತಾರೆ. ತಪ್ಪು ಮಾಡುವುದು ಸಹಜ. ಆದ್ದರಿಂದ ಈ ಬಗ್ಗೆ ಅವರು ಜನತೆಯ ಕ್ಷಮೆ ಯಾಚಿಸಬೇಕು ಎಂದು ಹೇಳಿದರು.
ಉದ್ಯಮಿಗಳಿಗೆ ಚಹಾಕೂಟ:
ಜೇಟ್ಲಿ ವಿರುದ್ಧ ಟೀಕೆ
ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಬೆಳಗ್ಗೆ ಉದ್ಯಮಿಗಳಿಗೆ ಚಹಾ ಕೂಟ ಏರ್ಪಡಿಸಿರುವುದನ್ನು ಪೂಜಾರಿ ಟೀಕಿಸಿದರು.
ಉದ್ಯಮಿಗಳನ್ನು ಚಹಾಕೂಟಕ್ಕೆ ಕರೆದು ಅವರಿಂದ ಅಹವಾಲು ಅಲಿಸಿದ ವಿತ್ತ ಸಚಿವರ ಕ್ರಮ ಸರಿಯಲ್ಲ. ಬದಲಾಗಿ ಅವರು ಹಳ್ಳಿಗಳಿಗೆ ಹೋಗಿ ರೈತರ ಮತ್ತು ಬಡವರ ಸಮಸ್ಯೆ ಆಲಿಸಬೇಕಿತ್ತು. ಬರಗಾಲದ ಪರಿಣಾಮ ಸಾಲ ಮರು ಪಾವತಿಸಲಾಗದೆ ರೈತರು ಆತ್ಮಹತ್ಯೆ ಮೊರೆ ಹೋಗುತ್ತಾರೆಯೇ ಹೊರತು ಬೇರೆ ಯಾವುದೇ ಕಾರಣದಿಂದ ಅಲ್ಲ. ರೈತರ ಸಾಲ ಮನ್ನಾ ಮಾಡುವ ಬಗ್ಗೆ ಬಜೆಟ್‌ನಲ್ಲಿ ಪ್ರಕಟಿಸಿದ್ದರೆ ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗುತ್ತಿತ್ತು. ಪ್ರಧಾನಿ ಮೋದಿ ಬಾಯಿಯಲ್ಲಿ ಆಡುತ್ತಿರುವ ಮಾತುಗಳು ಕೃತಿಗಿಳಿಯಬೇಕಾಗಿತ್ತು ಎಂದು ಪೂಜಾರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಉಮೇಶ್ಚಂದ್ರ, ಅರುಣ್ ಕುವೆಲ್ಲೊ, ಕರುಣಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.