ಫುಟ್ಬಾಲ್ ಶೈಲಿಯಲ್ಲಿ ಟೆಸ್ಟ್,ಏಕದಿನ ಲೀಗ್‌ಗೆ ಐಸಿಸಿ ಸಜ್ಜು: ವರದಿ
Team Udayavani, Feb 4, 2017, 11:39 AM IST
ದುಬಾಯಿ : ಫುಟ್ಬಾಲ್ ಮಾದರಿಯಲ್ಲಿ ಏಕದಿನ ಅಂತಾರಾಷ್ಟ್ರೀಯ ಮತ್ತು ಟೆಸ್ಟ್ ಪಂದ್ಯಗಳ ಸ್ವರೂಪ ಮಹತ್ತರ ಬದಲಾವಣೆಗಳನ್ನು ಕಾಣಲಿವೆ; ಅಫ್ಘಾನಿಸ್ಥಾನ ಮತ್ತು ಅಯರ್ಲಂಡ್ ಗೆ ಟೆಸ್ಟ್ ಕ್ರಿಕೆಟ್ ಸ್ಥಾನಮಾನ ಲಭಿಸಲಿದೆ ಎಂದು ವರದಿಗಳು ತಿಳಿಸಿವೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಎರಡು ವರ್ಷಗಳ ಟೆಸ್ಟ್ ಲೀಗ್, 13 ತಂಡಗಳ ಏಕದಿನ ಲೀಗ್ ಮತ್ತು ವಿಶ್ವ ಟ್ವೆಂಟಿ – ಟ್ವೆಂಟಿಗೆ ಪ್ರಾದೇಶಿಕ ಅರ್ಹತೆ ಮೊದಲಾದ ಕ್ರಾಂತಿಕಾರಕ ಬದಲಾವಣೆ ತರುವುದನ್ನು ಪ್ರಸ್ತಾವಿಸಲಾಗಿದೆ.
ಐಸಿಸಿ ಮಂಡಳಿ ಈ ಪ್ರಸ್ತಾವಗಳಿಗೆ ಅನುಮೋದನೆ ನೀಡಿದಲ್ಲಿ, 2019ರಿಂದಲೇ 9-3ರ ನಮೂನೆಯಲ್ಲಿ ಎರಡು ವರ್ಷಗಳ ಆವರ್ತನ ಟೆಸ್ಟ್ ಲೀಗ್ ಆರಂಭಗೊಳ್ಳಲಿದೆ.
ಈ ನೂತನ ಪ್ರಸ್ತಾವಗಳ ಪ್ರಕಾರ ಟೆಸ್ಟ್ ಆಡುತ್ತಿರುವ ಉನ್ನತ 9 ದೇಶಗಳು ತಮ್ಮೊಳಗೆ ಮಾತ್ರವಲ್ಲದೆ ಮೂರು ಕೆಳ ಕ್ರಮಾಂಕದ ತಂಡಗಳೊಂದಿಗೆ ಆಡಲಿವೆ.
ಮೂರು ವರ್ಷಗಳ – 13 ತಂಡಗಳ – ಒನ್‌ಡೇ ಲೀಗ್ ಹಾಗೂ ಅಂತಿಮವಾಗಿ 50 ಓವರ್‌ಗಳ ವಿಶ್ವ ಏಕದಿನ ಕ್ರಿಕೆಟ್ ಕ್ರಮವನ್ನು ಜಾರಿಗೆ ತರುವುದಕ್ಕೆ ಸಿಇಸಿ ಅನುಮೋದನೆ ನೀಡಿರುವುದಾಗಿ ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.