ಕೌನ್ಸೆಲಿಂಗ್‌ ನೆಪದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ


Team Udayavani, Feb 4, 2017, 12:22 PM IST

pricipal.jpg

ಬೆಂಗಳೂರು: ಕೌನ್ಸೆಲಿಂಗ್‌ ನೆಪದಲ್ಲಿ ಪ್ರಾಂಶುಪಾಲನೊಬ್ಬ ವಿದ್ಯಾರ್ಥಿನಿಯರನ್ನು ತನ್ನ ಕೊಠಡಿಗೆ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಸದಾಶಿವ ನಗರ ಠಾಣೆ ಪೊಲೀಸರು ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಚತ್ತೀಸ್‌ಗಢ ಮೂಲದ ಕುಮಾರ್‌ ಠಾಕೂರ್‌ ಎಂಬುವವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಜ.31ರಂದು ಜಾಮೀನು ಪಡೆದಿರುವ ಅವರು ಬಿಡುಗಡೆಯಾಗಿದ್ದಾರೆ. 

ಪ್ರಾಂಶುಪಾಲನ ಕಿರುಕುಳ ಸಂಬಂಧ ಮಕ್ಕಳ ಸಹಾಯವಾಣಿಗೆ ಬಂದ ಕರೆ ಆಧರಿಸಿ ಪ್ರಾಥಮಿಕ ತನಿಖೆ ನಡೆಸಿದ ಸಹಾಯವಾಣಿ ಅಧಿಕಾರಿಗಳು ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಆರೋಪಿ ಪ್ರಾಂಶುಪಾಲರನ್ನು ಪೊಲೀಸರು ಬಂಧಿಸಿದ್ದರು. ಕುಮಾರ್‌ ಠಾಕೂರ್‌ ಕಳೆದ ಮೂರು ವರ್ಷದಿಂದ ಸದಾಶಿವ ನಗರ ಠಾಣಾ ವ್ಯಾಪ್ತಿಯ ಕೇಂದ್ರ ಸರ್ಕಾರಿ ಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದರು. ಓದಿನಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ 2016ರ ಡಿ.23 ರಿಂದ ಜ.2ರವರೆಗೆ ವಿಶೇಷ ಸ್ಟಡಿ ಕ್ಯಾಂಪ್‌ ಆಯೋಜಿಸಲಾಗಿತ್ತು. 

ಸಂತ್ರಸ್ತ ವಿದ್ಯಾರ್ಥಿನಿ ಕೂಡ ಓದುವುದರಲ್ಲಿ ಹಿಂದುಳಿದಿದ್ದ ಕಾರಣ ಪ್ರಾಂಶುಪಾಲ ಆಕೆಯನ್ನು ತಮ್ಮ ಕಚೇರಿಗೆ ಕರೆಸಿಕೊಂಡು 20 ನಿಮಿಷಗಳ ಕಾಲ ಕೌನ್ಸೆಲಿಂಗ್‌ ನಡೆಸಿದ್ದರು. ಈ ವೇಳೆ ಪ್ರಾಂಶುಪಾಲ ಕುಮಾರ್‌ ವಿದ್ಯಾರ್ಥಿನಿ ಬಳಿ ಅಶ್ಲೀಲವಾಗಿ ವರ್ತಿಸಿದ್ದು, ಅಶ್ಲೀಲ ಪ್ರಶ್ನೆಗಳನ್ನು ಕೇಳಿದ್ದಾನೆ. ಇದರಿಂದ ಗಾಬರಿಗೊಂಡು ಸಂತ್ರಸ್ತ ವಿದ್ಯಾರ್ಥಿನಿ ಹೊರ ಬಂದು ನಡೆದ ಘಟನೆಯನ್ನು ತನ್ನ ಸ್ನೇಹಿತೆಯರು ಮತ್ತು ಶಿಕ್ಷಕರಿಗೆ ಹೇಳಿದ್ದಳು.

ಜ.14 ರಂದು ಮಕ್ಕಳ ಸಹಾಯವಾಣಿಗೆ ಶಾಲೆಯಿಂದ ಅನಾಮಧೇಯ ಫೋನ್‌ ಕರೆ ಬಂದಿದ್ದು, ಪ್ರಾಂಶುಪಾಲನ ವರ್ತನೆ ಬಗ್ಗೆ ಹೇಳಿಕೊಂಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಹಾಯವಾಣಿ ಅಧಿಕಾರಿಗಳು ತನಿಖೆ ನಡೆಸಿ ಪ್ರಾಂಶುಪಾಲನ ವಿರುದ್ಧ ಸದಾಶಿವ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಪೊಕೊÕà ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿತ್ತು.

ಅಶ್ಲೀಲ ಪದ ಬಳಸಿಲ್ಲ: ಶಾಲಾ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರ ಹೇಳಿಕೆ ಮೇರೆಗೆ ಪ್ರಾಂಶುಪಾಲರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನು ಅಶ್ಲೀಲ ಪದಗಳು ಬಳಸಿ ಮಾತನಾಡಿಸಿಲ್ಲ. ಬಾಯ್‌ಫ್ರೆಂಡ್‌ ಇದ್ದಾನಾ ನಿನಗೆ’ ಎಂದು ಮಾತ್ರ ಕೇಳಿದ್ದಾಗಿ ಹೇಳಿಕೆ ನೀಡಿದ್ದಾರೆ. 

ಶಾಲೆಗೆ ಉಗ್ರಪ್ಪ ಭೇಟಿ: ಮಾಹಿತಿ ಸಂಗ್ರಹ
ಬೆಂಗಳೂರು: ಪ್ರಾಂಶುಪಾಲರಿಂದಲೇ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳದ ಅರೋಪ ಕೇಳಿಬಂದಿರುವ ಸದಾಶಿವನಗರದ ಕೇಂದ್ರೀಯ ವಿದ್ಯಾಲಯಕ್ಕೆ ಲೈಂಗಿಕ 
ಕಿರುಕುಳ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್‌.ಉಗ್ರಪ್ಪ ಶುಕ್ರವಾರ ಭೇಟಿ ನೀಡಿ ಮಾಹಿತಿ ಪಡೆದರು. 

ಈ ವೇಳೆ ಶಾಲೆಯು, ಲೈಂಗಿಕ ದೌರ್ಜನ್ಯ ತಡೆ ಸಂಬಂಧ ವಿಶಾಖ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸದಿರುವುದು ಕಂಡುಬಂದಿದೆ. ಇದರಿಂದ  ಶಾಲಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಉಗ್ರಪ್ಪ ಅವರು, ವಿಶೇಷ ತರಗತಿ ನೆಪದಲ್ಲಿ ವಿದ್ಯಾರ್ಥಿಗಳನ್ನು ಶಾಲೆಯಲ್ಲೇ ಉಳಿಸಿಕೊಂಡಾಗ ಅವರ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಯಾವ ಕಾರಣಕ್ಕಾಗಿ ಶಾಲೆ ಬಳಿಕ ವಿದ್ಯಾರ್ಥಿನಿಯರನ್ನು ಶಾಲೆಯಲ್ಲಿ ಉಳಿಸಿಕೊಳ್ಳಲಾ ಗುತ್ತಿತ್ತು  ಮತ್ತು ರಾತ್ರಿ ವೇಳೆಯೇ ಏಕೆ ವಿಶೇಷ ತರಗತಿ ನಡೆಸುತ್ತಿದ್ದಿರಿ ಎಂಬ ಬಗ್ಗೆ ಉತ್ತರಿಸುವಂತೆ ಸೂಚಿಸಿದರು. 

ಟಾಪ್ ನ್ಯೂಸ್

ಎಂ.ಟಿ.ಪಿ.ಕಿಟ್‌ ಅಕ್ರಮ ಮಾರಾಟ ವಿರುದ್ಧ ಆರೋಗ್ಯ ಇಲಾಖೆ ಎಚ್ಚರಿಕೆ

Mangaluru ಎಂ.ಟಿ.ಪಿ.ಕಿಟ್‌ ಅಕ್ರಮ ಮಾರಾಟ ವಿರುದ್ಧ ಆರೋಗ್ಯ ಇಲಾಖೆ ಎಚ್ಚರಿಕೆ

Toll Plaza ಹೆದ್ದಾರಿ ಬದಿ ತಾತ್ಕಾಲಿಕ ಅಂಗಡಿ ತೆರವು: ಜು.20ರ ಗಡುವು ನೀಡಿದ ಅಧಿಕಾರಿ

Toll Plaza ಹೆದ್ದಾರಿ ಬದಿ ತಾತ್ಕಾಲಿಕ ಅಂಗಡಿ ತೆರವು: ಜು.20ರ ಗಡುವು ನೀಡಿದ ಅಧಿಕಾರಿ

ಹುಲ್ಕಡಿಕೆ: ಬೈಂದೂರು ತಾ.ಪಂ. ಇಒ ಭೇಟಿ

Kundapura ಹುಲ್ಕಡಿಕೆ: ಬೈಂದೂರು ತಾ.ಪಂ. ಇಒ ಭೇಟಿ

Rain-M

Heavy Rain: ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ಜು.6 ರಂದು ರಜೆ

1—dsdsadas

Doctors ಭೇಟಿ ಬಿಟ್ಟು ವಾಂಖೇಡೆಗೆ ಬಂದ ರೋಹಿತ್‌ ತಾಯಿ; Video Viral

TN-BSP-Armstrong

Tamil Nadu: ಬಿಎಸ್‌ಪಿ ಮುಖ್ಯಸ್ಥ ಆರ್ಮ್‌ಸ್ಟ್ರಾಂಗ್ ಹತ್ಯೆ

iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ

iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-bng

Bengaluru: ಅಕ್ರಮ ಆಸ್ತಿ: ಬೆಸ್ಕಾಂ ಎಇಇಗೆ 3 ವರ್ಷ ಸಜೆ,1 ಕೋಟಿ ರೂ. ದಂಡ ವಿಧಿಸಿದ ಕೋರ್ಟ್‌

10-bng

Bengaluru: ಶೋಕಿಲಾಲನಿಗೆ ನಕಲಿ ಎ.ಕೆ.47 ಕೊಡಿಸಿದ್ದ ವ್ಯಕ್ತಿಗೆ ನೋಟಿಸ್‌

9-crime

Bengaluru: ಬೈಕ್‌ಗೆ ಲಾರಿ ಡಿಕ್ಕಿ : ರಿಯಲ್‌ ಎಸ್ಟೇಟ್‌ ಏಜೆಂಟ್‌ ಸಾವು

8-bng

Bengaluru: ಹಳೇ ದ್ವೇಷಕ್ಕೆ ವ್ಯಕ್ತಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

7-bng

Bengaluru: ವಿಚಾರಣಾಧೀನ ಕೈದಿಯ ಗುದದ್ವಾರದಲ್ಲಿ 2 ಮೊಬೈಲ್‌

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

ಎಂ.ಟಿ.ಪಿ.ಕಿಟ್‌ ಅಕ್ರಮ ಮಾರಾಟ ವಿರುದ್ಧ ಆರೋಗ್ಯ ಇಲಾಖೆ ಎಚ್ಚರಿಕೆ

Mangaluru ಎಂ.ಟಿ.ಪಿ.ಕಿಟ್‌ ಅಕ್ರಮ ಮಾರಾಟ ವಿರುದ್ಧ ಆರೋಗ್ಯ ಇಲಾಖೆ ಎಚ್ಚರಿಕೆ

1-ghgg

T20 World Cup ವಿಜಯೋತ್ಸವವೆಲ್ಲ ಮುಗಿದ ಬಳಿಕ ಕೊಹ್ಲಿ-ಕೋಚ್‌ ಆತ್ಮೀಯ ಅಪ್ಪುಗೆ

Toll Plaza ಹೆದ್ದಾರಿ ಬದಿ ತಾತ್ಕಾಲಿಕ ಅಂಗಡಿ ತೆರವು: ಜು.20ರ ಗಡುವು ನೀಡಿದ ಅಧಿಕಾರಿ

Toll Plaza ಹೆದ್ದಾರಿ ಬದಿ ತಾತ್ಕಾಲಿಕ ಅಂಗಡಿ ತೆರವು: ಜು.20ರ ಗಡುವು ನೀಡಿದ ಅಧಿಕಾರಿ

ಹುಲ್ಕಡಿಕೆ: ಬೈಂದೂರು ತಾ.ಪಂ. ಇಒ ಭೇಟಿ

Kundapura ಹುಲ್ಕಡಿಕೆ: ಬೈಂದೂರು ತಾ.ಪಂ. ಇಒ ಭೇಟಿ

Rain-M

Heavy Rain: ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ಜು.6 ರಂದು ರಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.