ನಂದಿಯ ಮಡಿಲಲ್ಲಿ…ಮೋಡದ ಜೊತೆಯಲ್ಲಿ…
Team Udayavani, Feb 4, 2017, 3:01 PM IST
ತಿಳಿ ಮೋಡ. ಆಗಾಗ ಬಂದು ಮುಖಕ್ಕೆ ಅಪ್ಪಳಿಸಬೇಕು. ಬಿಸಿ, ಬಿಸಿ ಗಾಳಿ ಹತ್ತಿರಕ್ಕೂ ಕೂಡ ಬರಬಾರದು. ಸಾಕಪ್ಪಾ ಈ ಬೆಂಗಳೂರು ಸಹವಾಸ ಅಂತ ನಿಮ್ಮ ಮನಸ್ಸು ಹೇಳುತ್ತಿದ್ದರೆ ನೇರ ನಂದಿ ಬೆಟ್ಟಕ್ಕೆ ಹೋಗಿ.
ಅರೇ, ಇದರಲ್ಲೇ ವಿಶೇಷ ಅಂತ ಕೇಳಬೇಡಿ.
ನಂದಿ ಬೆಟ್ಟ ಋತುಮಾನಕ್ಕೆ ತಕ್ಕಂತೆ ಬದಲಾಗುತ್ತದೆ. ಹೊಸ, ಹೊಸ ಸೀರೆ ಉಡುವ ತರುಣಿಯಂತೆ ಕಾಣುತ್ತದೆ. ಈಗಂತೂ ನಂದಿ ನೋಡಲು ಇದೇ ಸರಿಯಾದ ಸಮಯ. ಬೆಟ್ಟದ ಮೇಲೆ ನಿಂತು ಒಮ್ಮೆ ಎರಡೂ ಕೈಯನ್ನು ಅಗಲಿಸಿ ನೋಡಿ. ಆಕಾಶದ ಮೋಡಗನ್ನು ನಿಮ್ಮನ್ನು ಮುತ್ತಿಕೊಂಡು ಹೋಗುತ್ತದೆ. ಕಣ್ಣ ದಾಟಿಸಿದಷ್ಟೂ ವಿಶಾಲವಾದ ಮೋಡಸಮುದ್ರ. ಆಗಾಗ ಅಲೆಯಂತೆ ಅಪ್ಪಳಿಸುವ ಗಾಳಿ. ನೀವು ತೀರ ಅದೃಷ್ಟವಂತರಾದರೆ ಮೋಡಗಳನ್ನು ಹಿಡಿದು ಕೆನ್ನೆಗೆ ಮೆತ್ತಿಕೊಳ್ಳಬಹುದು. ಅಷ್ಟೊಂದು ಮೋಡದಾಟ.
ಬೆಳ್ಳಂಬೆಳಗ್ಗೆ ಎದ್ದರೆ ಬೆಂಗಳೂರ ತಾಪ ಮರೆಸುವಷ್ಟು ತಂಪು, ತಂಪು. ಗಿರಿಶೃಂಗಗಳಿಂದ ಕೂಗುವ ಥರಹೇವಾರಿ ಪಕ್ಷಿಗಳ ಕಲರವವೇ ಜೋಗಳವಾದೀತು. ನಂದಿಗೆ ಹೋದರೆ ಬೆಳಗಿನ ವಾಕಿಂಗ್ ಮರೆಯಬೇಡಿ. ಸಸ್ಯಸಂಕುಲದ ಮಧ್ಯೆ ವಾಕ್ ಮಾಡೋದು ಆರೋಗ್ಯ ಒಳ್ಳೆಯದು. ಇಲ್ಲಿ ಅಪರೂಪದ ಗಿಡಮೂಲಿಕೆಗಳೂ ಇರುವುದರಿಂದ ವಿಶಿಷ್ಟವಾದ ವಾಕ್ ಅನುಭೂತಿಯಾದೀತು.
ನಂದಿ ಬೆಟ್ಟ 4,851 ಅಡಿ ಎತ್ತರದಲ್ಲಿದೆ. ಬೆಟ್ಟವನ್ನು ಹತ್ತುತ್ತಿದ್ದಾಗೇ ಬೇಸಿಗೆಯ ಹಬೆ ಇಳಿಯಾತ್ತಾ ಬೆಟ್ಟದ ಪಾದಕ್ಕೆ ಸೇರಿರುತ್ತದೆ.
ನಂದಿ ಬೆಟ್ಟ ಹತ್ತಲು ಪ್ರತ್ಯೇಕ ಮೆಟ್ಟಿಲುಗಳೂ ಇವೆ. ಸಾಹಸಿಗರು ಈ ಮೂಲಕವೂ ಬೆಟ್ಟ ಹತ್ತಬಹುದು. ಮೆದುಹೃದಯಿಗಳಿಗೆ ಇದಕ್ಕಿಂತ ರಸ್ತೆಯ ಮೂಲಕ ಸಾಗುವುದೇ ಸೇಫು.
ಬೆಟ್ಟದ ಮೇಲೆ ತೋಟಗಾರಿಕೆ ಇಲಾಖೆಯ ಗೆಸ್ಟ್‌ಹೌಸ್ ಇದೆ. ರಾತ್ರಿ ತಂಗುವ ವ್ಯವಸ್ಥೆಯ ಕೂಡ ಇದೆ. ತಿಂಡಿ-ಊಟಕ್ಕೆ ಯಾವುದೇ ಚಿಂತೆ ಇಲ್ಲ. ಬೆಟ್ಟ ಹತ್ತಿದರೆ ಇಲ್ಲೊಂದು ವಿಶಿಷ್ಟವಾದ ಪ್ರಪಂಚವೇ ತೆರೆದುಕೊಳ್ಳುತ್ತದೆ.
ನಂದಿ ಬೆಟ್ಟದ ಮೇಲೆ ಟಿಪ್ಪು ಡ್ರಾಪ್ ಇದೆ. ಈಗಂತೂ ರೂಪ್‌ವೇ ನಿರ್ಮಾಣ ಮಾಡಿರುವುದರಿಂದ ಬೆಟ್ಟದ ಮೇಲಿಂದ ಜಗತ್ತನ್ನು ನೋಡಬಹುದು. ಸಂಜೆ ಮತ್ತು ಬೆಳಗ್ಗೆಯ ಹೊತ್ತು ಇಲ್ಲಿ ಸುರಿಯುವ ಮಂಜನ್ನು ಕಣ್ತುಂಬಿಕೊಳ್ಳುವುದೇ ಸ್ವರ್ಗ ಸುಖ.
ತಲುಪುವ ಮಾರ್ಗ
ಬೆಂಗಳೂರಿನಿಂದ ನಂದಿ ಬೆಟ್ಟ ಕೇವಲ ಒಂದೂವರೆ ಗಂಟೆ ಪ್ರಯಾಣ. ಸುಮಾರು 60ಕಿ.ಮೀ ದೂರದಲ್ಲಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 30ಕಿ.ಮೀ ಅಂತರ. ಬಸ್ಸುಗಳು ಬೇಕಾದಷ್ಟಿದೆ. ಸ್ವಂತ ವಾಹನವಿದ್ದರೆ ಅನುಕೂಲ. ಇಲ್ಲಿ ವಸತಿ, ಊಟ ಸೌಕರ್ಯವಿದೆಯಾದರೂ ಮೊದಲೇ ಬುಕ್ ಮಾಡಿ ಹೋಗಬೇಕು. ನಂದಿಯ ಹೊರತಾಗಿ ನಂದಿ ಕೆಳಗೆ ಪುರಾತನ ಭೋಗ ನಂದೀಶ್ವರ ದೇವಾಲಯವಿದೆ. ದಾರಿಯ ಮಧ್ಯೆ ದೇವನಹಳ್ಳಿ, ಅಲ್ಲಿರುವ ಟಿಪ್ಪುಸುಲ್ತಾನರ ಕೋಟೆ, ಟಿಪ್ಪು ಹುಟ್ಟಿದ ಸ್ಥಳವನ್ನು ನೋಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್ ಡೌನ್…AQI ಮಟ್ಟ 2000!
Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್ ವಿವಾಹ?
Belthangady: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ
Max Movie: ಬಿಗ್ ಬಾಸ್ ವೇದಿಕೆಯಲ್ಲಿ ʼಮ್ಯಾಕ್ಸ್ʼ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.