ಪ್ರಬಂಧ ಗೊರಕಾ ಪುರಾಣ
Team Udayavani, Feb 5, 2017, 3:45 AM IST
ನಮ್ಮದು ಸಾಗರದ ಹತ್ತಿರ ಒಂದು ಸಣ್ಣ ಹಳ್ಳಿ. ಹಳ್ಳಿ ಮನೆಗಳಲ್ಲಿ ಎಲ್ಲರೂ ಸೇರುವುದೇ ಒಂದು ಖುಷಿ. ಮೊನ್ನೆ ನನ್ನ ನಾದಿನಿಯ ಮದುವೆಯಾಯಿತು. ನಾವೆಲ್ಲರೂ “ಛೋಡಾಯೆ ಹಮ್ ವೋ ಗಲಿಯಾ’ ಎಂದು ಒಂದು ವಾರದ ಮಟ್ಟಿಗೆ ಆಫೀಸಿನ ಜಂಜಾಟ, ಪಟ್ಟಣದ ಧಾವಂತಗಳನ್ನು ಬದಿಗೊತ್ತಿ ಹಳ್ಳಿ ಮನೆಯಲ್ಲಿ ನಿರಾಳವಾಗಿ ಸೇರಿ¨ªೆವು. ಎಲ್ಲರೂ ಸೇರಿದಾಗ ರಾತ್ರಿಯ ಹೊತ್ತು ಊಟದ ನಂತರ ಗಪ್ಪೆ ಹೊಡೆಯುವುದೇ ಒಂದು ಮಜಾ. ಹೀಗೇ ಮಾತನಾಡುತ್ತ ಎಲ್ಲರಿಗೂ ಹಾಸಿಗೆ ಮಾಡುತ್ತಿ¨ªಾಗ ಸೋದರಮಾವನೊಬ್ಬರು, “ಗಣಪತಿ ಎಲ್ಲಿ ಮಲಗುತ್ತಾನೋ ನಾನು ಅಲ್ಲಿಂದ ನಾಲ್ಕು ಹಾಸಿಗೆ ಆಚೆ ಮಲಗುತ್ತೇನೆ’ ಎಂದಾಗ ಎಲ್ಲರಿಗೂ ಕಾರಣವೇನೆಂದು ಕುತೂಹಲ. ಕಾರಣ ಕೇಳಿದ ಮೇಲಂತೂ ನಕ್ಕು ನಕ್ಕು ಹೊಟ್ಟೆ ಹುಣ್ಣಾಗುವುದು ಬಾಕಿ. ಕಾರಣ ಗಣಪತಿಯ ಗೊರಕೆ. ಗಣಪತಿಯಂತೂ ಇಡೀ ಸುತ್ತಮುತ್ತಲಿನಲ್ಲಿ ಗೊರಕೆಗೆ ಫೇಮಸ್ಸು. ಅವನು ಮಲಗಿದ ಕಡೆ ಅವನ ಸುತ್ತಮುತ್ತ ಒಂದು ಕಿ. ಮೀ. ದೂರದಲ್ಲಿ ಯಾರೂ ಮಲಗುವಂತಿಲ್ಲ. ಹೀಗೆ ಪ್ರಾರಂಭವಾದ ಮಾತು ಗೊರಕೆಯ ಸುತ್ತ ಗಿರಕಿ ಹೊಡೆಯತೊಡಗಿತು. ಗೊರಕೆಯ ಬಗ್ಗೆ ಎಲ್ಲರೂ ತಮ್ಮ ತಮ್ಮ ಅನುಭವಗಳನ್ನು/ಅನುಭವಿಸಿದ ಬವಣೆಗಳನ್ನು ಬಿಚ್ಚಿಕೊಳ್ಳತೊಡಗಿದರು.
ನಮ್ಮ ಸೋದರಮಾವನ ಮಗಳೊಬ್ಬಳು ತಮ್ಮ ಮನೆಯಲ್ಲಿ ನಡೆದ ಕತೆಯನ್ನು ರೋಚಕವಾಗಿ ಹೇಳಿದಾಗ ನಮಗಂತೂ ನಕ್ಕೂ ನಕ್ಕೂ ಶಕ್ತಿಯೇ ಉಡುಗಿಹೋದಂತಾಯಿತು. ಅವಳಮನೆಯಲ್ಲಿ ಒಂದು ಬೆಕ್ಕನ್ನು ಸಾಕಿದ್ದರು. ಆ ಬೆಕ್ಕು ರಾತ್ರಿಯ ಹೊತ್ತು ಯಾವಾಗಲೂ ಮನೆಯ ಕುರ್ಚಿಯೊಂದರ ಮೇಲೆ ಮಲಗುತ್ತಿತ್ತಂತೆ. ಒಂದು ದಿನ ಮನೆಗೆ ನೆಂಟರೊಬ್ಬರು ಬಂದಿದ್ದರು. ರಾತ್ರಿ ಅವರಿಗೆ ಬೆಕ್ಕು ಮಲಗುತ್ತಿದ್ದ ಕುರ್ಚಿಯ ಎದುರು ಬದಿಯ ಗೋಡೆಯ ಪಕ್ಕ ಹಾಸಿಗೆ ಮಾಡಿಕೊಟ್ಟರು. ಅವರೋ ದಿಂಬಿಗೆ ತಲೆಯಿಡುತ್ತಿದ್ದಂತೆಯೇ ಗೊರಕೆ ಪ್ರಾರಂಭಿಸಿದರಂತೆ. ಈ ಗೊರಕೆ ಶಬ್ದವನ್ನು ಎಂದೂ ಕೇಳಿರದ ಬೆಕ್ಕು ಯಾರೋ ತನ್ನ ವೈರಿ ಬಂದಿದೆಯೆಂಬಂತೆ ಮೈಮೇಲಿನ ಕೂದಲನ್ನೆಲ್ಲ ನಿಮಿರಿಸಿಕೊಂಡು, ಬಾಲವನ್ನು ಶತ್ರುಗಳ ಆಕ್ರಮಣವನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಂತೆ ಎತ್ತಿಕೊಂಡು ಕಿವಿಗಳನ್ನು ನಿಮಿರಿಸಿ ಸೆಲ್ಫ್ ಡಿಫೆನ್ಸ್ ಎಂಬಂತೆ “ಗುರ್’ ಎನ್ನಲು ಪ್ರಾರಂಭಿಸಿತಂತೆ. ಇದನ್ನು ನೋಡಿದ ಮನೆಯವರೆಲ್ಲ ಮುನ್ನೆಚ್ಚರಿಕೆಯಾಗಿ ಅವರನ್ನು ತಟ್ಟಿ ಎಬ್ಬಿಸಿದರಂತೆ.
ನನ್ನ ಯಜಮಾನರಿಗೆ ಇಬ್ಬರು ಚಿಕ್ಕಪ್ಪಂದಿರು. ಇಬ್ಬರೂ ಊರಿಗೆ ಬಂದಾಗ ಬೆಳಗಾಗೆದ್ದು “ನೀನು ಗೊರಕೆ ಹೊಡೆಯುತ್ತೀಯೆ, ನೀನು ಗೊರಕೆ ಹೊಡೆಯುತ್ತೀಯೆ’ ಎಂದು ಜಗಳವಾಡುತ್ತಾರೆ. ಅವರವರ ಗೊರಕೆ ಅವರವರಿಗೆ ಕೇಳಿಸಲಾರದು. ನಮಗೆ ಮಾತ್ರ ಗೊತ್ತು, ಇಬ್ಬರೂ ಗೊರಕೆ ಹೊಡೆಯುತ್ತಾರೆಂದು.
ಹೋದ ವರ್ಷ ದೀಪಾವಳಿಯಲ್ಲಿ ನಮ್ಮ ಹಳ್ಳಿಗೆ ನನ್ನ ತಂಗಿ, ಭಾವನನ್ನು ಕರೆದಿ¨ªೆವು. ನನ್ನ ಭಾವನದಂತೂ ಭರ್ಜರಿ ಗೊರಕೆ. ಮಲಗಿದ ಕೂಡಲೇ ಗೊರಕೆ ಪ್ರಾರಂಭಿಸುವ ಅವರು ಬೆಳಗ್ಗೆ ಕಣ್ಣು ಬಿಟ್ಟ ಮೇಲೇ ಗೊರಕೆ ನಿಲ್ಲಿಸುವುದು. ಈ ವಿಷಯ ತಿಳಿಯದೆ ಮೊದಲ ದಿನ ರಾತ್ರಿ ಅವರ ಸಾಲಿನಲ್ಲಿ ಮಲಗಿದ್ದ ಗಂಡಸರೆಲ್ಲರೂ ಅವರ ಗೊರಕೆ ಪ್ರಹಾರಕ್ಕೆ ಸುಸ್ತಾಗಿ ಬೆಳಗಾದರೆ ಸಾಕೆಂದು ಕಾದಿದ್ದರು. ಮಾರನೆಯ ದಿನ ಎಲ್ಲರೂ ಸೇರಿ ಅವರನ್ನು ಹಾಗೂ ಹೀಗೂ ಮಾಡಿ ಪಕ್ಕದಲ್ಲಿದ್ದ ರೂಮಿನಲ್ಲಿ ಮಲಗಲು ಏರ್ಪಾಟು ಮಾಡಿ ಇಂದಾದರೂ ನೆಮ್ಮದಿಯಾಗಿ ನಿದ್ರೆ ಮಾಡೋಣವೆಂದು ಮಲಗಿ ದೀಪ ಆರಿಸಿದ ಹತ್ತು ನಿಮಿಷಗಳಲ್ಲಿ ಗೊರಕೆ ಸದ್ದು ಪಕ್ಕದÇÉೇ ಕೇಳಿಬರುತ್ತಿದೆ. ಬೆಚ್ಚಿಬಿದ್ದು ದೀಪ ಹಾಕಿ ನೋಡಿದರೆ ರೂಮಿನಲ್ಲಿ ಒಬ್ಬರೇ ಮಲಗಲು ಬೇಸರವಾಗಿ ನನ್ನ ಭಾವ ತಮ್ಮ ಹಾಸಿಗೆಯನ್ನು ತಂದು ಹೊರಗೆ ಜಗುಲಿಯ ಸಾಲಿನಲ್ಲಿ ಬಿಡಿಸಿ ಮಲಗಿದ್ದರು. ಮತ್ತೆ ತಲೆಯ ಮೇಲೆ ಕೈ ಹೊತ್ತ ಗಂಡಸರು ಪಕ್ಕದ ಮನೆಯ ಜಗುಲಿ ಖಾಲಿಯಿದೆಯೆಂದು ತಿಳಿದು ಎ¨ªೆವೋ ಬಿ¨ªೆವೋ ಎಂದು ಹಾಸಿಗೆಗಳನ್ನು ತೆಗೆದುಕೊಂಡು ಅಲ್ಲಿಗೆ ದೌಡಾಯಿಸಿದ್ದರು. ಈ ವಿಷಯವನ್ನು ಊರಿಗೆ ಹೋದಾಗಲೆಲ್ಲ ಒಮ್ಮೆ ನೆನಪಿಸಿಕೊಂಡು ನಗುತ್ತೇವೆ.
ತರಹಾವರಿ ಗೊರಕೆಗಳನ್ನು ಕೇಳಬೇಕೆಂದರೆ ರಾತ್ರಿ ಬಸ್ಸಿನಲ್ಲಿ ಪ್ರಯಾಣ ಮಾಡಬೇಕು. ಕೆಲವರದು ಸಿಳ್ಳು ಹೊಡೆಯುವಂತಹ ಗೊರಕೆಯಾದರೆ, ಮತ್ತೆ ಕೆಲವರದ್ದು ಗುರ್ ಗುರ್ ಎಂದು ಮಂಗ ಗುರುಗುಟ್ಟುವಂತಹ ಗೊರಕೆ. ಕೆಲವರದ್ದಂತೂ ಗರಗಸದಿಂದ ಕೊಯ್ಯುತ್ತಿರುವ ಶಬ್ದ ಬಂದರೆ ಇನ್ನೂ ಕೆಲವರದ್ದು ತಗ್ಗು ಸ್ಥಾಯಿಯಲ್ಲಿ ಪ್ರಾರಂಭವಾಗಿ ತಾರಕ ಸ್ಥಾಯಿಗೆ ಹೋಗಿ ಹತ್ತು ಸೆಕೆಂಡ್ ನಿಲ್ಲಿಸಿದಾಗ ಸದ್ಯ ನಿಲ್ಲಿಸಿದರು ಎಂದುಕೊಳ್ಳುವ ಹೊತ್ತಿಗೆ ಮತ್ತೆ ಗೊರಕೆಯ ಇಂಜಿನ್ ಚಾಲು. ಒಟ್ಟಿನಲ್ಲಿ ಒಂದು ಮೃಗಾಲಯದಲ್ಲಿ ಇರುವ ಅನುಭವವಂತೂ ಖಂಡಿತ.
ಹಾಸ್ಯವಾಗಿ ಮಾತನಾಡಲು ಗೊರಕೆ ಒಂದು ಉತ್ತಮ ವಿಷಯವಾದರೆ, ಇದೇ ಗೊರಕೆಯ ಸಲುವಾಗಿ ಎಷ್ಟೋ ದಾಂಪತ್ಯಗಳು ಮುರಿದು ಬಿದ್ದ ಉದಾಹರಣೆಗಳೂ ಇವೆ. ಗಂಡಂದಿರು ಹೆಂಡತಿಯ, ಹೆಂಡತಿಯರು ಗಂಡಂದಿರ ಗೊರಕೆಯನ್ನು ಹಾಸ್ಯ ಮಾಡುವುದು ಸರ್ವೇಸಾಮಾನ್ಯ. ನಿದ್ರೆ ಮಾಡುವುದು ನಾಕವಾದರೆ ಗೊರಕೆ ಹೊಡೆಯುವವರು ಪಕ್ಕದಲ್ಲಿದ್ದರೆ ಅದುವೇ ನರಕ. “ಗೊರಕಾತುರಾಣಾಂ ನ ಭಯಂ ನ ಲಜ್ಜಾ ‘ ಎಂದು ಹೊಸ ಸುಭಾಷಿತಗಳನ್ನು ಪ್ರಚಲಿತಗೊಳಿಸಬಹುದು.
ವಿಶೇಷವೇನು ಗೊತ್ತಾ? ಈಗ ರಾತ್ರಿ ಹನ್ನೆರಡು ಮೂವತ್ತು. ಇಷ್ಟು ಹೊತ್ತಿನಲ್ಲಿ ಏಕೆ ಬರೆಯುತ್ತಿದ್ದೇನೆಂದುಕೊಂಡಿರಾ? ಪಕ್ಕದಲ್ಲಿ ಮಲಗಿರುವ ಪತಿರಾಯನ ಗೊರಕೆಯ ಶಬ್ದ ತಡೆಯಲಾಗದೆ ಎದ್ದು ಕೂತು ಬರೆಯುತ್ತಿದ್ದೇನೆ. ಸಾಕಪ್ಪಾ ಈ ಗೊರಕಾ ಪುರಾಣ. ಕಿವಿಯಲ್ಲಿ ಹತ್ತಿಯಿಟ್ಟುಕೊಂಡು ಮಲಗಲು ಪ್ರಯತ್ನ ಮಾಡುತ್ತಿದ್ದೇನೆ.
– ಇಂದಿರಾ ವಿವೇಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.