ಕತೆ ಸಿತಾರ್‌


Team Udayavani, Feb 5, 2017, 3:45 AM IST

sitar.jpg

ತಾನು ನೋಡುತ್ತಿರುವುದು ನಿಜವೇ? ಅಥವಾ ಕನಸೇ? ಅದೇ ಕಣ್ಣು, ಅದೇ ಮೂಗು, ಅದೇ ಚಿಗುರು ಮೀಸೆ. ಇಷ್ಟು ವರ್ಷದ ಮೇಲೆ? ಅಯ್ಯೋ ಕೂಸೆ, ಇದೆಲ್ಲಿಗೆ ಹೋಗಿಬಿಟ್ಟಿ¨ªೆ? ಭಗವಂತಾ ಕಡೆಗೂ ಕಣ್ಣುತೆರೆದೆ. ಸಭಾಂಗಣದ ಮೇಲಿನ ಫ್ಯಾನಿಗೇ ಕೈಮುಗಿದಳು ಪಾರೋತಿ. ಕಣ್ಣಿಂದ ಬಳಬಳಬಳ ನೀರು ಧಾರಾಕಾರವಾಗಿ ಹರಿಯತೊಡಗಿದವು.

ಅವಳೆದುರಿಗೆ ಕೂತು ತಂತಿ ಮೀಟುತ್ತಿದ್ದ ಆಕೃತಿಯನ್ನು ಕಂಡಷ್ಟೂ ಅವಳ ಕಣ್ಣು ತುಂಬಿ ತುಂಬಿ ಬರುತ್ತಿತ್ತು. ಇದೇನು ಕನಸೋ ನನಸೋ ಅರಿಯದ ಅಯೋಮಯದ ಸ್ಥಿತಿಗೆ ತಲುಪಿ, ಗಂಟಲಿಂದ ದನಿ ಹೊರಬರಲಾರದೇ ಕಟ್ಟಿಕೊಂಡಿತ್ತು. 

“ನವೀನ’ ತನ್ನ ಕೂಸಿಗೆ ತಾನೇ ಆರಿಸಿ ಇಟ್ಟ ಹೆಸರದು. ಆಗ ಸಿದ್ದೇಶ, ಸುರೇಶ, ರಮೇಶ ಅಂತಲೋ ಕುಲದೇವರ ಹೆಸರೋ ಇಡುತ್ತಿದ್ದ ಕಾಲದಲ್ಲಿ ಪಾರೋತಿ ಇಟ್ಟ  ನವೀನ ಅನ್ನುವ ಹೆಸರು ನವನವೀನವಾಗೇ ಇತ್ತು. ಆ ಕೂಸು ತಾನೇ ಅದ್ಯಾವ ಕೇಡಿಗೆ ಹಾಂಗೆ ಹುಟ್ಟಿತ್ತೋ. ಹುಟ್ಟುವಾಗಲೇ ಮೂರುಮುಕ್ಕಾಲು ಕೆಜಿ. ತಲೆತುಂಬ ಕೂದಲು, ಕೆಮ್ಮಣ್ಣ ಬಣ್ಣ, ಬೆಣ್ಣೆ ಮು¨ªೆಯಂಥ ಮುಖ.  ನಕ್ಷತ್ರಗಳನ್ನು ಕಿತ್ತು ಅಂಟಿಸಿದಂತಹ ಕಣ್ಣುಗಳು. ಪಾರೋತಿಯದು ಎಣ್ಣೆಗೆಂಪು ಬಣ್ಣ,  ಗಂಡ ಭದ್ರಪ್ಪನದೂ ಸಾಮಾನ್ಯ ಬಣ್ಣವೇ. ಆದರೆ ಭದ್ರನ ಅವ್ವ ಹೇಳುತ್ತಿದ್ದಳು ಅವನು ಹುಟ್ಟಿದಾಗ ಕೆಂಪಗಿದ್ದನಂತೆ.

ಈಗ ಬಿಸಿಲು-ಮಳೆ ಅನ್ನದೇ ಹೊಲದಲ್ಲಿ ದುಡಿದು ಹೀಗಾಗಿದಾನೆ ಅಂತ. ನವೀನ ಹುಟ್ಟಿದಾಗ ಸರಸ್ವತಿಯ ಸಂಭ್ರಮ ಹೇಳತೀರದು. ಕೆಂಪು ತಮ್ಮಯ್ಯ ಹುಟ್ಟವೆ° ಅಂತ ಊರ ತುಂಬ ಹೇಳಿಕೊಂಡು ಬಂದಿದ್ದಳು. ಕೂಸಿನ ವರ್ಣನೆ ಬಾಯಿಂದ ಬಾಯಿಗೆ ಹರಡಿ ಊರಿಗೂರೇ ಬಂದು ನೋಡಿ ಕಣ್ಣು ತುಂಬಿಕೊಂಡು, ಬಾಯ ಮೇಲೆ ಬೆರಳು ಮಡಿಕಂಡಿತ್ತು. ಮುದುಕಿಯರು ಗುಟ್ಟಲ್ಲಿ ಬಂದು “ಪೆದ್ದೀ, ರಾಜಕುಮಾರ ತಪ್ಪಿ ನಿನ್‌ ಹೊಟ್ಟೇಲಿ ಹುಟ್ಟವೆ°, ಬಂದ್‌ ಬಂದೋರಿಗೆಲ್ಲ ತೋರ್ಸಿ ದೃಷ್ಟಿ ತಾಕಿಸಬೇಡ’ ಅಂತ ಹೇಳಿ ಹೋಗಿದ್ದರು.     

ಅದೇ ಆಗುತ್ತಿತ್ತು. ಯಾವುದಾರ ಹೊಸಬಣ್ಣದ ಅಂಗಿ ಹಾಕಿ ಬೀದಿಗೆ ಬಿಟ್ಟರೆ ಸಾಕು ಎಲ್ಲರ ಕಣ್ಣು ಬಿದ್ದು ರಾತ್ರೆಗೆ ಮೈ ಬಿಸಿಯೇರಿಬಿಡುತ್ತಿತ್ತು. ಪಾರೋತಿ ಎದೆ ಬಡಕೊಂಡು “ಹೋ’ ಅಂತ ಅಳಲು ಶುರುಮಾಡುತ್ತಿದ್ದಳು. ಭದ್ರಣ್ಣ ನಡುರಾತ್ರಿಯಲಿ ಸಕ್ರೆ ಬುದ್ಯೋರ ಹಟ್ಟಿಗೆ ಓಡುತ್ತಿದ್ದ. ಸಕ್ಕರೆ ಬುದ್ದಿಗಳು ಸರಿರಾತ್ರಿಯಲಿ ತೊಂದರೆ ಕೊಟ್ಟದ್ದಕ್ಕೆ ಗೊಣಗುತ್ತಿದ್ದರೂ ಎಂದೂ ಆಗಲ್ಲ ಹೋಗು ಅಂತ ಹೇಳಿದವರಲ್ಲ. ಈ ಕೂಸೆಂದರೆ ಅವರಿಗೂ ಮೆಚ್ಚು. ಹದಿನಾರು ವರುಷ ತುಂಬಿದ ಮ್ಯಾಲೆ “ನೋಡು, ನಿನ್ನ ಮಗ ರಾಜ್ಯ ಆಳ್ತಾನೆ ರಾಜ್ಯ. ಅವನ ನೋಡಕೇ ಜನ ಜಾತ್ರೆಯಾಯ್ತಾರೆ. ಏನಂತ ತಿಳ್ಕಂಡಿದ್ದೀಯ?’ ಅನ್ನುತ್ತಿದ್ದರು. ಅಂತಹ ಕೂಸನ್ನು ಕಾಪಾಡುವ ಕರ್ತವ್ಯವನ್ನು ತಮಗೆ ತಾವೇ ಆರೋಪಿಸಿಕೊಂಡಿದ್ದರೆಂದು ತೋರುತ್ತದೆ. ಅದಕ್ಕಾಗೇ ಎಷ್ಟು ಹೊತ್ತಲ್ಲಿ ಬಂದು ಭದ್ರಣ್ಣ ಬಾಗಿಲು ಬಡಿದರೂ “ನಡಿ ಬತ್ತೀನಿ’ ಅನ್ನುತ್ತಿದ್ದರು. ಅವರು ಬಂದು ಚಿಟಕೆ ಹೊಡೆದು ಎಳೆಕಟ್ಟಿ ಹೋದಮೇಲೆ ಕೂಸು ಕಣ್ಣುಬಿಟ್ಟಾಡುತ್ತಿತ್ತು. ಪಾರೋತಿ ಸಭಾಂಗಣದ ಸುತ್ತ ನೋಡಿದಳು. ಈ ಜನ ಜಾತ್ರೆಯಾಗಿರೋದು ತನ್ನ ಮಗನನ್ನ ನೋಡೋಕೇ ಅಲ್ಲವೆ? ಕಣ್ಣು ಕಿವಿಗೋಳೆ°ಲ್ಲ ಅವನ ಮೇಲೇ ನೆಟ್ಟು, ಬ್ಯಾರೆ ಯಾವುದರ ಮೇಲೂ ಗ್ಯಾನವಿಲ್ದಂಗೆ ಕುಂತವರೆ. ಸಕ್ರೆ ಬುದ್ಯೋರ ಮಾತು ಅವರು ಸತೆ¾àಲೆ ನಿಜವೇ ಆಯ್ತÇÉೋ ಸಿವನೇ!

ಐದಾರು ವರ್ಷದವನಾಗುತ್ತಲೂ ಮೈಕೈ ತುಂಬಿಕೊಂಡು ಕೂಸು ಇನ್ನೂ ಸೊಗಸಾಗಿತ್ತು. ಮನೆಯಲ್ಲಿ ಎಷ್ಟೇ ಬಡತನವಿದ್ದರೂ ಕೂಸಿಗೆ ಯಾವುದಕ್ಕೂ ಕೊರತೆ ಮಾಡಬಾರದೆಂದು ಪಾರೋತಿ ತೀರ್ಮಾನಿಸಿದ್ದಳು. ಪಾರೋತಿಯ ಅಣ್ಣ ಬೆಂಗಳೂರಿನಲ್ಲಿ ಕಂಡಕ್ಟರ್‌ ಆಗಿದ್ದ. ಅವನ ಹೆಂಡತಿ ಮಕ್ಕಳನ್ನ ಸಾಕುವ ನಾಜೂಕುಗಳನ್ನೆಲ್ಲ ನೋಡಿ ಕಲಿತಿದ್ದ ಪಾರೋತಿ ಮಗನನ್ನು ಹಾಗೇ ಬೆಳೆಸುತ್ತಿದ್ದಳು. ನವೀನನು ಸ್ಕೂಲಿಗೆ ಸೇರಿದಾಗಂತೂ ಮೇಡಮ್‌ಗಳ ಅಚ್ಚುಮೆಚ್ಚಾದ. ನವೀನ ಮೂರನೇ ಕ್ಲಾಸಿನಲ್ಲಿ¨ªಾಗ ಒಂದು ಶನಿವಾರ ಮಧ್ಯಾಹ್ನ ದಾಟಿದರೂ ನವೀನ ಮನೆಗೆ ಬರಲಿಲ್ಲ. ಪಾರೋತಿ ವಿಚಾರಿಸಲಾಗಿ ಅಕ್ಕಪಕ್ಕದ ಮಕ್ಕಳೆಲ್ಲರೂ ಅದ್ಯಾವಾಗಲೋ ಬಂದರೆಂದು ತಿಳಿಯಿತು. ಪಾರೋತಿ ಸ್ಕೂಲಿಗೆ ಓಡಿದಳು. ಸ್ಕೂಲು ಬೀಗ ಜಡಿದಿತ್ತು. ಯಾರನ್ನು ಕೇಳಿದರೂ “ಬೆಳಗ್ಗೆ ಅಲ್ಲಿ ಕಂಡೆವು, ಇಲ್ಲಿ ಕಂಡೆವು’ ಅನ್ನುತ್ತಾರೆ. ಮಧ್ಯಾಹ್ನದ ಮೇಲೆ ಕಂಡವರೊಬ್ಬರೂ ಇಲ್ಲ. ಊರಮುಂದಲ ಹೊಲದಲ್ಲಿ ಭದ್ರಣ್ಣ ರಾಗಿ ಚೆಲ್ಲಲು ಹೋಗಿದ್ದ. ಪಾರೋತಿ ಟೀ ತಕ್ಕಂಡು ಬರಲೇ ಇಲ್ಲವಲ್ಲ ಅಂತ ಊರ ಕಡೆಯ ದಾರಿಯ ನೋಡುತ್ತಲೇ ಇದ್ದ. ಆಚೆಬೀದಿಯ ಮಾಲಿಂಗ ಓಡೋಡಿ ಬರುವುದು ಕಂಡಿತು. ಭದ್ರಣ್ಣನ ಕಂಡ ಮಾಲಿಂಗ ದಸ್ಸಬುಸ್ಸ ಅಂತ ಏದುಸಿರು ಬುಡ್ತಾ ಎರಡೂ ಮಂಡಿಗಳ ಮೇಲೆ ಎರಡೂ ಕೈಊರಿ ನಿಂತು ಏದುಸಿರÇÉೇ ವಿಷಯ ಒಪ್ಪಿಸಿದ. ರಾಗಿತುಂಬಿದ ಪುಟ್ಟೆಯ ಎಸೆದು ಬರಿಗಾಲÇÉೇ ಭದ್ರಣ್ಣ ಊರಕಡೆಗೆ ಓಡತೊಡಗಿದ. 

ಊರಾಚೆಯ ಕ್ರಿಕೆಟ್‌ ಮೈದಾನದ ಹತ್ತಿರ, ಸ್ಕೂಲಿನ ಹಿಂದಲ ಹೊಲಗಳು, ಊರ ಬೀದಿಗಳು ಎಲ್ಲವನ್ನೂ ಪರಗಾಳಿಯಂತೆ ಸುತ್ತಿ ಸುತ್ತಿ ಬರುತ್ತಿದ್ದ ಪಾರೋತಿಯನ್ನು ಹಿಡಿದು ಕೂರಿಸುವ ಧೈರ್ಯ ಯಾರಿಗೂ ಇರಲಿಲ್ಲ. ಗಂಡನನ್ನು ಅಕ್ಕಪಕ್ಕದೂರಿಗೂ ಓಡಿಸಿದಳು. ಇಬ್ಬರ ಕಾಲೂ ಸವೆದವು. ಒಡಲ ದ್ರವ ಆರಿ ಬೀಳುವಂತಾಯ್ತು. ಹೊತ್ತು ಮುಳುಗಿ ಎಷ್ಟೋ ಹೊತ್ತಾಗಿತ್ತು. ನವೀನ ನಾಪತ್ತೆ.  ಪಾರೋತಿಯ ಕಣ್ಣುಗಳು ನದಿಯಾಗಿದ್ದವು. ರಾತ್ರೆ ಎಲ್ಲ ಉಯಿಲು. ಊರ ಜನರೆಷ್ಟು ಸಮಾಧಾನ ಹೇಳಿದರೂ ಕೇಳಲೊಲ್ಲಳು. ಭದ್ರಣ್ಣನೂ ಮಂಕು ಹಿಡಿದು ಕೂತುಬಿಟ್ಟ. ಮರುದಿನ ಬೆಳಗಾದರೂ ಅದೇ ಕತೆ. ಎಲ್ಲಿ ಹುಡುಕುವುದು? ಯಾರನ್ನು ಕೇಳುವುದು? ಭಾನುವಾರವೂ ಬರಲಿಲ್ಲ ನವೀನ.

ಪಾರೋತಿಯ ರೋದನಕ್ಕೆ ಕೊನೆಮೊದಲಿರಲಿಲ್ಲ. ನೆಂಟರಿಷ್ಟರ ಮನೆಗೆ ಹೋಗುವಷ್ಟು ದೊಡ್ಡ ಹುಡುಗನಲ್ಲ. ಮತ್ತೆಲ್ಲಿ ಹೋದ? ಎಲ್ಲಿ ನಾಪತ್ತೆಯಾದ? ಸಕ್ರೆ ಬುದ್ಯೋರು “ಬರ್ತಾನೆ ಇÇÉೆ ಅವನೆ’ ಅನ್ನುವುದನ್ನು ಬಿಟ್ಟು ಬ್ಯಾರೆ ಒಂದು ಶಬ್ದ ಆಡಲಿಲ್ಲ.  ಹಾಗೆಯೇ ಆಯ್ತು ಕೂಡ. ಸೋಮವಾರ ಬೆಳಗ್ಗೆ ನವೀನ ಮನೆಗೆ ಬಂದ. ಅವನ ಸ್ಕೂಲಿನ ಮೇಡಮೊಬ್ಬಳು ಇವನನ್ನು ಮೈಸೂರಿನ ತನ್ನ ಮನೆಗೆ ಕರಕೊಂಡು ಹೋಗಿದ್ದಳು. ನವೀನ ಹೋಟೆಲಲಿ ಮಸಾಲೆ ತಿಂದದ್ದು, ಅರಮನೆ ನೋಡಿದ್ದು, ಅವರ ಮನೆಯಲ್ಲಿ ಮೆತ್ತನೆ ಹಾಸಿಗೆ, ಉದ್ದ ಕನ್ನಡಿ, ಕೂತುಕೊಂಡೇ ಹೋಗೋ ಕಕ್ಕಸು ಇದ್ದದ್ದನ್ನೆಲ್ಲ ಬಲು ಖುಷಿಯಿಂದ ಅವ್ವನ ಬಳಿ ಹೇಳುತ್ತಿದ್ದರೆ, ಯಾವತ್ತೂ ಅವನ ಮೈಮುಟ್ಟದ ಪಾರೋತಿ ಅವತ್ತು ಹಿಡಿದ್ದು ಚಚ್ಚಿದ್ದಳು. ಊರ ಜನ, “ಆ ಕೂಸೆYàನು ಗೊತ್ತಾಯ್ತದೆ? ಆವಮ್ಮನಿಗ್‌ ಬುದ್ಧಿ ಬ್ಯಾಡ್ವಾ?’ ಅಂದದ್ದೇ ಪಾರೋತಿ ನವೀನನನ್ನೂ ದರದರನೆ ಎಳಕೊಂಡು ಸ್ಕೂಲಿಗೆ ಹೋದಳು. “ಅಲ್ಲ ಕಣ್‌ ನನ್‌ ಸವತೀ’ ಅಂತ ಸುರೂ ಮಾಡಿ, ಟೀಚರಮ್ಮ ಮದ್ಯ ಬಾಯಿ ಹಾಕಲೂ ಬಿಡದೆ ತೃಪ್ತಿಯಾಗುವಷ್ಟು ಬೈದು ಮುಗಿಸುವಾಗ ಟೀಚರಮ್ಮ ಗೋಳ್ಳೋ ಅಂತ ಅಳುತ್ತಾ ನಿಂತುಕೊಂಡಿದ್ದಳು. ಅವಳಿಗೆ ನವೀನ ತುಂಬ ಇಷ್ಟವಾಗಿದ್ದನಂತೆ. ಮದುವೆಯಾಗಿ ಏಳುವರ್ಷವಾದರೂ ಮಕ್ಕಳಿಲ್ಲ ಬೇರೆ. “ನಂಜೊತೆ ಬರ್ತೀಯಾ?’ ಅಂದರೆ ಇವನು “ಹೂnಂ’ ಅಂದಿದಾನೆ. ಬಸ್ಸು ಬಂದಿದೆ. ಹತ್ತುವಾಗ ಸ್ಕೂಲಿನ ಕೆಲಸಕ್ಕೆ ಬರುವ ಶಂಭುವಿಗೆ ಹೇಳಿ¨ªಾಳೆ. ಆದರೆ ಶಂಭು ಹೆಂಡತಿ ಮನೆಗೆ ಹೋದವನು ಬಂದೂ ಇಲ್ಲ.

ಸುದ್ದಿಯನ್ನೂ ಮುಟ್ಟಿಸಿಲ್ಲ. ನೆನಪಿನಲ್ಲಿ ಮುಳುಗಿದ್ದವಳಿಗೆ ಚಪ್ಪಾಳೆಯ ಸದ್ದಿಗೆ ಎಚ್ಚರವಾದಂತಾಗಿ, ಸುತ್ತಲವರನ್ನು ನೋಡೀ ತಾನೂ ಕೈ ಬಡಿದಳು.  ನವೀನನ ಕೈಯ ತಂತಿ ಇನ್ನೊಂದು ಹಾಡಿಗೆ ಶೃತಿ ತಯಾರಿ ನಡೆಸುತ್ತಿತ್ತು. ಇಂತಹುದೇ ಯಾವುದೋ ಕಣRಟ್ಟು ನಡೆದು ಮಗ ಇಷ್ಟು ವರ್ಷ ದೂರವಾಗಿದ್ದನೇ? ಅವತ್ತಾದರೋ ಎರಡು ದಿನ. ಆಮೇಲೆ 16 ವರುಷ. ಅಷ್ಟು ವರುಷದ ಕಣ್ಣೀರನ್ನು ತುಂಬಿಸಿದ್ದರೆ ಕೆರೆಯಾಗುತ್ತಿತ್ತೋ ಕಟ್ಟೆಯಾಗುತ್ತಿತ್ತೋ. ಇವತ್ತು ಈ ರೂಪದಲ್ಲಿ ಬಂದು ಕುಂತುಕೊಳ್ತಾನೆ ಅಂತ ಕನಸು ಮನಸಲ್ಲೂ ಎಣಿಸಿರಲಿಲ್ಲವÇÉಾ… ಎಂಥ ರೂಪು, ಎಂಥ ಲಾವಣ್ಯ, ಎದೆಯೇನು… ಭುಜವೇನು… ಹೊಳೆವ ಕಣ್ಣೇನು… ಮಗನ ನೋಡಿದಷ್ಟೂ ಅತೃಪ್ತಿ!  

ನವೀನನ ಚೆಂದಕ್ಕೆ ಚತುರತೆಗೆ ಮೆಚ್ಚದವರಿದ್ದರೇ? ರಾಧೇ! ಬೇಸಗೆಯÇÉೊಮ್ಮೆ ಊರವರೆಲ್ಲ ಸೇರಿ ನಾಟಕವಾಡುತ್ತಿದ್ದರು. ನಾಟಕದಲಿ ನಡುನಡುವೆ ಡಾನ್ಸು ಮಾಡಲು, ಮೈಸೂರಿನಿಂದ ನರ್ತಕಿಯರು ಬರುತ್ತಿದ್ದರು. ರಾತ್ರಿಯ ನಾಟಕಕೆ ಸಂಜೆಯೇ ಬರುತ್ತಿದ್ದ ಅವರು, ಸಾಮಾನು ಸರಂಜಾಮಿನ ಸಮೇತ ಉಳಿಯಲು, ರಾತ್ರಿಯ ಊಟ ಉಪಚಾರ ನೋಡಲು ಪಾರೋತಿಯ ಮನೆಯನ್ನು ಗೊತ್ತುಮಾಡಲಾಗಿತ್ತು. ಪಾರೋತಿಯ ಕೈಯ ಒಬ್ಬಟ್ಟು ಅಂದರೆ ಒಬ್ಬಟ್ಟು.  ಇಷ್ಟಿಷ್ಟಗಲ. ಮನೆಯ ತುಪ್ಪ. ಭರ್ಜರಿಯಾಗಿ ಉಂಡರು. ನವೀನ ಅವರೊಟ್ಟಿಗೇ ಊಟ ಮಾಡಿದ. ಅವರ ಝಗಝಗ ಮಿಂಚುವ ಬಟ್ಟೆಗಳು, ಮೇಕಪ್ಪಿನ ಡಬ್ಬಿಗಳು, ತುಟಿಯ ಬಣ್ಣ ಎಲ್ಲವೂ ಅವನ ಕಣ್ಣು ಹೊಳೆಯಿಸುತ್ತಿದ್ದವು. ಒಟ್ಟು ಮೂವರು ನಟಿಯರ ಗುಂಪಿನಲಿ ರಾಧಾ ಎಂಬಾಕೆ ನವೀನನ ಕೆನ್ನೆ ಕಚ್ಚಿದ್ದಕ್ಕೆ ಲೆಕ್ಕವಿಲ್ಲ. ಅವಳು ಮೇಕಪ್ಪು ಮಾಡಿಕೊಳ್ಳುವುದನ್ನು ನೋಡುತ್ತಾ ನಿಂತುಬಿಟ್ಟಿದ್ದ. ಅವಳು ಹೇಳಿಕೊಟ್ಟ ನಾಟಕದ ಡೈಲಾಗನ್ನು ಸಲೀಸಾಗಿ ಹೇಳಿಬಿಟ್ಟ. ಖುಷಿಬಂದು ಅವರೆಲ್ಲ ಒಂದೊಂದು ಡೈಲಾಗು ಹೇಳಿಕೊಟ್ಟರೆ ಹಾಗೇ ಹೇಳುತ್ತಿದ್ದ. ಹೀಗೆ ನಿÇÉೆಂದರೆ ಅದೇ ಭಂಗಿಯಲೇ ನಿಲ್ಲುತ್ತಿದ್ದ. “ನಾಟಕಕ್ಕೆ ಸೇರಿಸಿ, ದೊಡ್ಡ ಕಲಾವಿದನಾಗ್ತಾನೆ’ ಅಂತ ಹೇಳಿದಾಗ ಭದ್ರಣ್ಣ ಹಲ್ಲುಕಿರಿದ.

ಪಾರೋತಿಯ ಮುಖದ ಗಂಟು ಮಾತ್ರ ಕರಗಲಿಲ್ಲ. ಅವತ್ತು ನವೀನ ಹಾರ್ಮೋನಿಯಂ ಪಕ್ಕದಲಿ ಕೂತು, ಕಣ್ಣು ಪಿಳುಕಿಸುತ್ತ ಬೆಳಗಾನ ನಾಟಕ ನೋಡಿದ್ದ. ರಾಧಾ ಅವನನ್ನು ನೋಡುತ್ತಾ ನಗುತ್ತಾ ಪದ ಹಾಡಿ ನರ್ತಿಸಿದರೆ ಅವನಿಗೇನೋ ಖುಷಿ. ಬೆಳಗ್ಗೆ ನಾಟಕ ಮುಗಿದು ಎಲ್ಲರೂ ಹೊರಟು ನಿಂತರೂ ರಾಧೆ ಹೊರಡಲಿಲ್ಲ.

ಫೋಟೋಗ್ರಾಫ‌ರನನ್ನೂ ಹೋಗಲು ಬಿಡಲಿಲ್ಲ. ನವೀನನಿಗೆ ಅವಳು ಕೃಷ್ಣನ ವೇಷ ಹಾಕಿದಳು. ರಾಜನ ವೇಷ ಹಾಕಿದಳು. ದನಕಾಯುವ ಹುಡುಗನ ವೇಷ ಹಾಕಿದಳು. ರಾಜಕಾರಣಿಯ ಪೋಷಾಕು ಹಾಕಿದಳು. ಅವನು ಯಾವ ವೇಷ ಹಾಕಿದರೆ ಅದಾಗಿ ಕಾಣುತ್ತಿದ್ದ. ಹೀಗೆ ಕಾಣುವುದೇ ಕಲಾವಿದನಾಗಲು ಮುಖ್ಯವಾಗಿ ಬೇಕಾಗಿರುವುದು ಅನ್ನುತ್ತಿದ್ದಳವಳು. ಕಣ್ಣಲ್ಲಿ ನೀರು ಕಚ್ಚಿಕೊಂಡೇ ಹೊರಟು ನಿಂತಿದ್ದಳÇÉಾ… ಫೋಟೋಗಳನ್ನು ಎರಡೆರಡು ಕಾಪಿ ತೊಳೆಯಲು ಹೇಳಿ, ಅದು ಪ್ರಿಂಟಾಗಿ ಬಂದಾಗ  ತಾನೂ ಒಂದು ಇಟ್ಟುಕೊಂಡು, ಭದ್ರಣ್ಣನ ಕೈಗೂ ಒಂದು ಕೊಟ್ಟಿದ್ದಳು. ಫೋಟೋ ಜೊತೆಗೆ ನವೀನನಿಗಾಗಿ ಸ್ವೀಟು ಖಾರಾಗಳನ್ನೂ ಬೇಕರಿಯ ತಿಂಡಿಗಳನ್ನೂ ಕಳಿಸಿದ್ದಳು. ಮಗನನ್ನು ಕಳಕೊಂಡ ಮೇಲೆ ಅವನ್ನೆಲ್ಲ ಎದೆಗೊತ್ತಿಕೊಂಡು ಎಷ್ಟು ಅತ್ತಳ್ಳೋ ಪಾರೋತಿ.  “ಇವನ್ನೆಲ್ಲ ನೋಡೀ ನೋಡಿ ಎಷ್ಟು ಅಂತ ಅಳ್ತೀ?’ ಅಂತ ಅಣ್ಣ ಬೆಂಗಳೂರಿಗೆ ತಗಂಡು ಹೋದ. ಈಗ ಅವೆಲ್ಲ ರೂಪಾಳ ಮನೆಯಲ್ಲಿರಬಹುದು. ಅದನ್ನು ಇವನಿಗೆ ತೋರಿಸಬೇಕು. ಊರಿನವರ್ಯಾರೋ ನವೀನನಿಲ್ಲ ಅಂತ ಹೇಳಿದ್ದು ಕೇಳಿ ರಾಧಾ ಮನೆಗೇ ಬಂದಿದ್ದಳಲ್ಲ.

ಅವಳಿಗಾಗಲೇ ನಲವತ್ತಾಗಿತ್ತು. ಅವನನ್ನು ಹತ್ತು ವರ್ಷದ ಹಿಂದೆ ನೋಡಿದ್ದ ನೆನಪಿನಿಂದಲೇ ಅತ್ತು ನನಗೂ ಸಮಾಧಾನ ಮಾಡಿ ಹೋಗಿದ್ದಳು. ಅವಳಿಗೆ ಈಗ ಅರವತ್ತರ ಹತ್ತಿರತ್ತಿರವಾಗಿರಬಹುದು. ಸತ್ತಿರಲಿಕ್ಕಿಲ್ಲ. ಯಾರ ಕೈಲಾದರೂ ಹುಡುಕಿಸಿ ವಿಷಯ ಮುಟ್ಟಿಸಬೇಕು. ಇವನು ನುಡಿಸಿದರೆ ಅವಳು ಈ ವಯಸಿನಲೂ ಕುಣಿದಾಳು. ಪಾರೋತಿಯ ಕಣ್ಣೀರೊಳಗೆ ಹೊಸ ಕನಸು ತೇಲುತ್ತಿತ್ತು. 

ಎಲ್ಲ ಸರಿ, ಈಗ ಅವನ ಪಕ್ಕದಲಿ ಕೂತು ಹಾಡಲು ಬಂದ ಹುಡುಗಿ ಯಾರು? ಮದುವೆ ಮಾಡಿಕೊಂಡನೇ? ಅವರಿಬ್ಬರೂ ಕಣ್ಣÇÉೇ ಎಷ್ಟು ಮಾತಾಡುತ್ತಾರೆ? ಪಕ್ಕದ ಕುರ್ಚಿಯವರನ್ನು ಕೇಳಿದಳು. ಅವರು ವಿಚಿತ್ರವಾಗಿ ನೋಡಿದರು. “ಗಂಡ ಹೆಂಡತಿ ಅಲ್ಲ, ಆ ಹುಡುಗ ಅವಳಿಗಿಂತ ಸಣ್ಣವನು. ಅವರು ಶೃತಿ ಸರಿಹೊಂದುತ್ತಿದೆಯೇ? ಅಂತ ಹಾಗೆ ಕಣ್ಣÇÉೆ ಮಾತಾಡಿಕೊಳ್ಳೋದು’ ಅಂತ ವಿವರಿಸಿದರು. ಪಾರೋತಿಗೆ ಸಮಾಧಾನ. ಆ ಹಾಡುವ ಹುಡುಗಿಯನ್ನು ನೋಡುತ್ತ ಏನೋ ಹೇಳುವಾಗ ನವೀನನ  ಕಣ್ಣಲ್ಲಿ ಎಂತಾ ಮಿಂಚು! ಮುಖದಲ್ಲೇನೋ ಗಾಂಭೀರ್ಯ!  ಸಿತಾರನ್ನು ಇಟ್ಟುಕೊಳ್ಳಲು ಅನುಕೂಲವಾಗಲಿ ಅಂತ ಒಂದು ಕಾಲನ್ನು ಇನ್ನೊಂದರ ಮೇಲಿಟ್ಟುಕೊಂಡಿ¨ªಾನೆ. ನುಡಿಸುವಾಗ ಮೇಲಿಟ್ಟುಕೊಂಡ ಕಾಲಿನ ಬೆರಳುಗಳನ್ನು ಕುಣಿಸುತ್ತಿ¨ªಾನೆ. ಅದೋ.. ಅದೇ ಮೀಸೆ, ಹೆಸರುಕಾಯಿಯಂಥ ತುಟಿಗಳು, ಕಾಲಬೆರಳುಗಳ ಸಮೇತ ಅದದೇ… ಮತ್ತು ರೇಷಿಮೆಯ ಕೂದಲೂ… ಚೆನ್ನಿ ಯಾವಾಗಲೂ ಹೇಳುತ್ತಿದ್ದಳು. ಇವನು ಹುಡುಗಿಯಾಗಿದ್ದರೆ ಮಾರುದ್ದ ಜಡೆ ಇರುತ್ತಿತ್ತು. ಮೂರು ವರ್ಷದವನಿ¨ªಾಗಲೇ ಜಡೆ ಹೆಣೆಯಲಿಕ್ಕೆ ಸಿಗುವಷ್ಟು ಕೂದಲಿತ್ತಲ್ಲ? ಆಮೇಲೆ ದೊಡ್ಡವನಾಗುತ್ತಲೂ ಹದಿನೈದೇ ದಿನಕ್ಕೆ ಕೂದಲು ಬೆಳೆದುಬಿಡುತ್ತಿತ್ತು. ವಾರಕ್ಕೆರಡು ದಿನ ಊರಿಗೆ ಬರುತ್ತಿದ್ದ ಸಿದ್ದನೇ ಊರವರ ತಲೆಗೂದಲಿಗೆಲ್ಲ ಕತ್ತರಿಯಾಡಿಸುತ್ತಿದ್ದವನು. ನವೀನನಿಗೆ ಕಟ್ಟಿಂಗು ಮಾಡುವಾಗ ಅವನಿಗೂ ಹುಕಿ ಬರುತ್ತಿತ್ತು. ಚೆಂದದ ಹುಡುಗ ತನ್ನ ಕಟ್ಟಿಂಗಿನಿಂದ ಮತ್ತಷ್ಟು ಚೆಂದಗೆ ಕಾಣಬೇಕು ಅಂತ. ತಲೆಬುಂಡೆ ನೋಡಿ ಒಂದ್‌ ದಪ್‌ ತಳ್ಳಗಾಯಿ ಗಾತ್ರ ಅದೆ ಅನ್ನುವುದು ಮೇಲ್ನೋಟಕ್ಕೆ ಛೇಡಿಸುವ ಮಾತಾದರೂ ಒಳಾರ್ಥದಲಿ ಪ್ರೀತಿಯಿರುತ್ತಿತ್ತು. ಇವನು ಹೈಸ್ಕೂಲಿಗೆ ಬರುತ್ತ ಊರಿಗೆ ಹೊಸ ಫ್ಯಾಷನಿನ ಕಟ್ಟಿಂಗ್‌ ಶಾಪು ಬಂತÇÉಾ… ಸಿದ್ದನನ್ನು ಇವನೇ ಛೇಡಿಸುತ್ತಿದ್ದ. “ನಿನ್ನ ಹತ್ರ ಬ್ರಶ್‌ ಇದೆಯಾ? ಕತ್ತರಿ  ಸ್ಟೆರಲೈಸ್‌ ಮಾಡ್ತೀಯಾ? ತಿರುಗೋ ಕುರ್ಚಿ ಇದೆಯಾ?’ ಅಂತೆಲ್ಲ. ಅವನೂ ತನ್ನ ಮೂವತ್ತು ವರ್ಷದ ಕೆಲಸವನ್ನು ಸಮರ್ಥಿಸಿಕೊಳ್ತಾ ವಾದ ಹೂಡುತ್ತಿದ್ದ. ಭದ್ರಣ್ಣ ಪಾಪ ಸಿದ್ದನನ್ನ ಗೋಳುಹುಯ್ಕಬೇಡ್ವೋ ಅಂದರೂ ನವೀನ ಕೇಳ್ತಿರಲಿಲ್ಲ. ಈಗ ಯಾರು ಕತ್ತರಿಸಿದರೋ ಅವನ ಕೂದಲು. ನುಡಿಸುವಾಗ ಮುಖ ಅತ್ತಿತ್ತ ಮಾಡುತ್ತ ಹಣೆಯ ಮೇಲೆ ಅಲೆಯಂತೆ ಬರುವ ಕೂದಲನ್ನು ಕುತ್ತಿಗೆ ಕೊಂಕಿಸಿ ಮೇಲೇರಿಸುತ್ತಾನೆ. ಆಗಲೂ ಈಗಲೂ ಅದೇ ಶಿಸ್ತುಗಾರ. 

“ಎಷ್ಟೊತ್‌ ಕನ್ನಡಿ ಮುಂದೆ ನಿಲ್ತಿàಯೋ ಮಾರಾಯ? ಸಾಕು ಬಾ ಹೊಲಕ್‌ ಹೊತ್ತಾಯ್ತು’ ಪಾರೋತಿಯ ಮಾತಿನೊಳಗಿದ್ದ ಪ್ರೀತಿ, ಹೆಮ್ಮೆಗಳು ಮಗನಿಗೂ ಅರ್ಥವಾಗದೇ ಇರುತ್ತಿರಲಿಲ್ಲ. ಗೋಡೆಗೆ ಆನಿಸಿದ ಆ ಒಂದಡಿಯ ಪುಟಾಣಿ ಕನ್ನಡಿಯಲ್ಲಿ ಮೂರೊತ್ತೂ ನಿÇÉೋದೇ. ಹದಿನಾರರ ಪ್ರಾಯ. ಆಗತಾನೇ ಮೂಡುತ್ತಿದ್ದ ಮೊಡವೆಗಳ 

– ಕುಸುಮಬಾಲೆ

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.