ಮಣಿಪಾಲ ಎಂಐಟಿ-ಎಂಟಿಎಲ್ “ಇಂಪ್ರಶನ್-17′; ಮಣಿಪಾಲ ಎಂಐಟಿ ಚಾಂಪಿಯನ್
Team Udayavani, Feb 5, 2017, 3:45 AM IST
ಉಡುಪಿ: ಮಣಿಪಾಲ ಎಂಐಟಿಯ ಪ್ರಿಂಟಿಂಗ್ ಆ್ಯಂಡ್ ಮೀಡಿಯಾ ಎಂಜಿನಿಯರಿಂಗ್ ವಿಭಾಗ ಮತ್ತು ಮಣಿಪಾಲ ಟೆಕ್ನಾಲಜೀಸ್ ಲಿ. (ಎಂಟಿಎಲ್) ವತಿಯಿಂದ “ತಂತ್ರಜ್ಞಾನಗಳ ಸವಾಲುಗಳು’ ಇದರ ಕುರಿತು ಮಣಿಪಾಲ ಎಂಐಟಿಯಲ್ಲಿ ನಡೆದ “ಇಂಪ್ರಶನ್-17′ ಎನ್ನುವ 5ನೇ ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಸ್ಪರ್ಧಾ ಕಾರ್ಯಕ್ರಮದಲ್ಲಿ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಚಾಂಪಿಯನ್ ಆಗಿದೆ.
ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ-ಮಣಿಪಾಲ ಎಂಐಟಿ, ದ್ವಿತೀಯ-ಕ್ಯಾಲಿಕಟ್ ವಿಶ್ವವಿದ್ಯಾನಿಲಯ. ಪಾಲಿಟೆಕ್ನಿಕ್ ಡಿಪ್ಲೋಮಾ ವಿಭಾಗದಲ್ಲಿ ಪ್ರಥಮ-ಶೋರೂ°ರ್ ಪಾಲಿಟೆಕ್ನಿಕ್, ದ್ವಿತೀಯ-ಸಿಗಾ ಪಾಲಿಟೆಕ್ನಿಕ್ ಚೆನ್ನೈ ಪಡೆದುಕೊಂಡಿತು.
ಎಂಜಿನಿಯರಿಂಗ್ ವಿಭಾಗದಲ್ಲಿ ವಿನ್ನರ್ ಆದ ಎಂಐಟಿ ತಂಡಕ್ಕೆ ಹಾಗೂ ಡಿಪ್ಲೋಮಾ ವಿಭಾಗದಲ್ಲಿ ವಿನ್ನರ್ ಆದ ಶೋರೂ°ರ್ ತಂಡಕ್ಕೆ ಡಾ| ಟಿಎಂಎ ಪೈ ಸ್ಮಾರಕ ಪ್ರಶಸ್ತಿ ಫಲಕ ಮತ್ತು ಎಂಜಿನಿಯರಿಂಗ್ ರನ್ನರ್ ಅಪ್ ತಂಡಕ್ಕೆ ದಿ| ಪ್ರೊ| ಪಿ.ಎಸ್. ಶಿವರಾಮ್ ಸ್ಮಾರಕ ಪ್ರಶಸ್ತಿ ಹಾಗೂ ಡಿಪ್ಲೋಮಾ ರನ್ನರ್ ಅಪ್ ತಂಡಕ್ಕೆ ದಿ| ಪ್ರೊ| ಭಾಸ್ಕರ್ ರಾವ್ ಸ್ಮಾರಕ ಪ್ರಶಸ್ತಿ ನೀಡಲಾಯಿತು.
ಕಠಿನ ಪರಿಶ್ರಮವಿರಲಿ: ಶಶಿರಂಜನ್
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಹುಮಾನ ವಿತರಿಸಿದ ಮಣಿಪಾಲ ಟೆಕ್ನಾಲಜೀಸ್ ಲಿ.ನ (ಎಂಟಿಎಲ್) ಉಪಾಧ್ಯಕ್ಷ ಮತ್ತು ಎಸ್‌ಬಿಯು ಹೆಡ್ ಶಶಿರಂಜನ್ ಮಾತನಾಡಿ, ಜೀವನವನ್ನು ಹೇಗೆ ಸಾಗಿಸಬೇಕು ಎನ್ನುವುದರ ಕುರಿತು ನಿರ್ದಿಷ್ಟ ಗುರಿ ಇರಬೇಕು. ಸಂತೋಷದ ಬದುಕು, ಉತ್ತಮ ಕೆಲಸ ಸಿಗಬೇಕಾದರೆ ಜೀವನದಲ್ಲಿ ಕಷ್ಟ ಪಡಲೇಬೇಕು. ಕಠಿನ ಪರಿಶ್ರಮವಿಲ್ಲದೆ ಏನೂ ಸಾಧಿಸಲು ಸಾಧ್ಯವಾಗದು. ತಂತ್ರಜ್ಞಾನಗಳು ಇಂದಿನ ಸವಾಲಾಗಿದೆ. ಡಿಜಿಟಲ್ ಯುಗಕ್ಕೆ ನಾಂದಿಯಾಗುತ್ತಲಿದೆ. ಪ್ರತಿದಿನ ಕಲಿಯುವ ಮನೋಸ್ಥಿತಿ ಬೆಳೆಸಿಕೊಳ್ಳಬೇಕು. ಬದಲಾವಣೆಗಳು ಸಾಗುತ್ತಿರುತ್ತದೆ. ಅಪ್‌ಡೇಟ್ ಆಗುತ್ತಾ ಮುನ್ನಡೆಯಬೇಕು ಎಂದರು.
ಎಂಐಟಿಯ ಜಂಟಿ ನಿರ್ದೇಶಕ ಡಾ| ಬಿ.ಎಚ್.ವಿ. ಪೈ ಅಧ್ಯಕ್ಷತೆ ವಹಿಸಿದ್ದರು. ಅಡ್ಮಿಶನ್ ನಿರ್ದೇಶಕ ಡಾ| ಶ್ರೀಕಾಂತ್ ರಾವ್, ಎಂಐಟಿಯ ಪ್ರಿಟಿಂಗ್ ಆ್ಯಂಡ್ ಮೀಡಿಯಾ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ| ಅಮೃತರಾಜ್ ಎಚ್.ಕೆ. ಉಪಸ್ಥಿತರಿದ್ದರು.
ಉಪನ್ಯಾಸಕ ನಾಗರಾಜ್ ಕಾಮತ್ ಸ್ವಾಗತಿಸಿದರು. ತಂತ್ರಜ್ಞಾನಗಳ ಕುರಿತ ಸ್ಫರ್ಧೆಯಲ್ಲಿ ಬಹುಮಾನಿತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.