ಸುಳ್ಯಕ್ಕೊಂದು ಕಲಾ ಕೇಂದ್ರದ ಯೋಜನೆ: ಅಂಗಾರ
Team Udayavani, Feb 5, 2017, 3:45 AM IST
ಸುಳ್ಯ: ಕಲೆ, ಸಾಹಿತ್ಯ, ಸಂಸ್ಕೃತಿ ಸುಳ್ಯ ತಾಲೂಕಿನಲ್ಲಿ ಸಮೃದ್ಧವಾಗಿದೆ. ಸುಳ್ಯದ ಸಂಸ್ಕೃತಿಗೆ ಕಲಾ ಕೇಂದ್ರ ರಂಗಮನೆಯ ಕೊಡುಗೆ ಅನನ್ಯ. ಸದಭಿರುಚಿಯ ಕಲಾರಸಿಕರು, ಕಲಾ ಪೋಷಕರು ನಾಡಿನೆಲ್ಲೆಡೆ ಇದ್ದಾರೆ. ಆದರೆ ಕಲೆ, ಕಲಾವಿದರನ್ನು ಸೃಷ್ಟಿಸುವ ಕೇಂದ್ರಗಳು ಬೇಕಾಗಿವೆ. ಈ ನಿಟ್ಟಿನಲ್ಲಿ ಸುಳ್ಯ ತಾಲೂಕಿನಲ್ಲೊಂದು ಕಲಾ ಕೇಂದ್ರ ರೂಪಿಸುವ ಚಿಂತನೆ ಮಾಡಲಾಗುವುದು ಎಂದು ಶಾಸಕ ಎಸ್. ಅಂಗಾರ ತಿಳಿಸಿದರು.
ಅವರು ಸುಳ್ಯದ ರಂಗಮನೆಯಲ್ಲಿ ನಡೆದ ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸಿದ್ಧ ರಂಗ ನಿರ್ದೇಶಕ ಪ್ರಸನ್ನ ಹೆಗ್ಗೊàಡು ಉದ್ಘಾಟಿಸಿ, ಮಕ್ಕಳು ಸುಲಭಸಾಧ್ಯಗಳಿಗೆ ಅಂಟಿಕೊಂಡು ನೈಜ ಬದುಕಿನ ಮುಗªತೆ ಕಳೆದುಕೊಳ್ಳುತ್ತಿದ್ದಾರೆ. ಯಂತ್ರಪ್ರಣೀತ ಸ್ಮಾರ್ಟ್‌ಸಿಟಿ, ಆರ್ಥಿಕ ವ್ಯವಸ್ಥೆ ಎಲ್ಲವನ್ನು ರೂಪಿಸಬಹುದು. ಆದರೆ ಸಾಂಸ್ಕೃತಿಕ ಮೌಲ್ಯಗಳನ್ನು ಅದು ಕೊಡಲು ಸಾಧ್ಯವಿಲ್ಲ. ಆದರೆ ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆಗಳನ್ನು ರಂಗಭೂಮಿ ಮೂಲಕ ತುಂಬಿಕೊಡಲು ಸಾಧ್ಯವಿದೆ ಎಂದರು.
ಕರ್ಣಾಟಕ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಶ್ರೀನಿವಾಸ ದೇಶಪಾಂಡೆ ಮಾತನಾಡಿ, ಪ್ರೇಕ್ಷಕ ಮತ್ತು ನಟರಿಗಿರುವ ಸಂಬಂಧ ಕೃಷ್ಣ-ಸುಧಾಮರಿಗಿರುವ ಸಂಬಂಧ. ಇಲ್ಲಿ ಕೃಷ್ಣ ಪ್ರೇಕ್ಷಕನಾದರೆ ಸುಧಾಮ ನಟ ಎಂದರು.ವೇದಿಕೆಯಲ್ಲಿ ಕಲಾವಿದ ಸುಜನಾ ಸುಳ್ಯ ಉಪಸ್ಥಿತರಿದ್ದರು.
ಸಮ್ಮಾನ
ಪದ್ಮಶ್ರೀ ಪ್ರಶಸ್ತಿ ಪಡೆದ ತೂಗುಸೇತುವೆ ಸರದಾರ ಗಿರೀಶ ಭಾರದ್ವಾಜ ಮತ್ತು ಖ್ಯಾತ ವ್ಯಂಗ್ಯಚಿತ್ರಕಾರ ದಿನೇಶ್ ಕುಕ್ಕುಜಡ್ಕ ಅವರನ್ನು ಸಮ್ಮಾನಿಸಲಾಯಿತು.
ರಂಗಮನೆ ಅಧ್ಯಕ್ಷ ಜೀವನ್‌ರಾಂ ಸುಳ್ಯ ಸ್ವಾಗತಿಸಿ, ಡಾ| ವೀಣಾ ನಿರೂಪಿಸಿದರು. ಡಾ| ಸುಂದರ ಕೇನಾಜೆ ವಂದಿಸಿದರು. ಡಾ| ಮೌಲ್ಯಜೀವನ್, ಡಾ| ವಿದ್ಯಾಶಾರದೆ ಸಮ್ಮಾನಪತ್ರ ವಾಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.