3 ಲಕ್ಷಕ್ಕೂ ಹೆಚ್ಚು ನಗದು ಪಡೆದ್ರೆ ಸಮಾನ ದಂಡ
Team Udayavani, Feb 6, 2017, 3:45 AM IST
ಹೊಸದಿಲ್ಲಿ: ಕ್ಯಾಶ್‌ಲೆಸ್ ವ್ಯವ ಹಾರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮತ್ತೂಂದು ಮಹತ್ವದ ಹೆಜ್ಜೆ ಇರಿಸಿದೆ. ಎ.1ರಿಂದ 3 ಲಕ್ಷ ರೂ.ಗಳಿಗಿಂತ ಹೆಚ್ಚಿನ ಮೊತ್ತದ ನಗದು ವಹಿ ವಾಟು ನಡೆಸುವಂತಿಲ್ಲ. ಒಂದು ವೇಳೆ ನಿಯಮ ಮೀರಿದರೆ ಅದಕ್ಕೆ ಅಷ್ಟೇ ಮೊತ್ತದ ದಂಡ ವಿಧಿಸಲಾಗುತ್ತದೆ. ಅದೂ ನಗದು ಸ್ವೀಕರಿಸಿದವರು ಈ ದಂಡ ಕಟ್ಟಬೇಕು.
ಒಂದು ವೇಳೆ ನಗದು ವ್ಯವಹಾರ 4 ಲಕ್ಷ ರೂ. ಎಂದಾದಲ್ಲಿ ನಾಲ್ಕು ಲಕ್ಷ ರೂ.ಗಳನ್ನು ದಂಡದ ರೂಪದಲ್ಲಿ ನೀಡಬೇಕಾಗುತ್ತದೆ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ಹಸು¾ಖ್ ಅಧಿಯಾ ಹೇಳಿದ್ದಾರೆ. ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಇದನ್ನು ತಿಳಿಸಿದ್ದಾರೆ. ಫೆ. 1ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟಿÉ ಮಂಡಿಸಿದ ಬಜೆಟ್‌ನಲ್ಲಿ 3 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ನಗದು ವಹಿವಾಟಿಗೆ ನಿಷೇಧ ಹೇರುವ ಅಂಶ ಪ್ರಸ್ತಾವಿಸಿದ್ದರು.
ಕಪ್ಪುಹಣದ ಮೇಲೆ ನಿಯಂತ್ರಣ ಸಾಧಿ ಸುವ ನಿಟ್ಟಿನಲ್ಲಿ ಇಂಥ ಕ್ರಮ ಅನುಸರಿಸ ಲಾಗುತ್ತದೆ ಎಂದು ಅಧಿಯಾ ಹೇಳಿದ್ದಾರೆ. ವಿಲಾಸಿ ಖರೀದಿಗಳ ಮೇಲೂ ಕೇಂದ್ರ ಸರಕಾರ ನಿಗಾ ಇರಿಸಲಿದೆ ಎಂದು ಹೇಳಿದ ಅವರು, ದಾಖಲೆರಹಿತ ನಗದು ಹೊಂದಿ ರುವವರು ವಿದೇಶ ಪ್ರವಾಸ, ವಿಲಾಸೀ ಕಾರು, ಚಿನ್ನಾಭರಣಗಳ ಖರೀದಿ ನಡೆಸುತ್ತಾರೆ. ನಗದು ವ್ಯವಹಾರಕ್ಕೆ ಕಡಿವಾಣ ಹಾಕಿದರೆ ಇಂಥ ವಹಿವಾಟು ನಡೆಯುವುದಿಲ್ಲ. ಅದಕ್ಕೆ ಉದಾಹರಣೆಯನ್ನೂ ನೀಡಿದ ಅವರು ಬೆಲೆ ಬಾಳುವ ಕೈಗಡಿಯಾರ ಖರೀದಿಸಿದರೆ, ಮಳಿಗೆಯ ಮಾಲಕನೇ ತೆರಿಗೆ ನೀಡಬೇಕಾಗುತ್ತದೆ ಎಂದು ಹಸು¾ಖ್ ಅಧಿಯಾ ಹೇಳಿದರು.
ನೋಟುಗಳ ಅಪಮೌಲ್ಯದ ಬಳಿಕ ಕಪ್ಪುಹಣದ ಪ್ರಮಾಣ ತಗ್ಗಿದೆ. ಮುಂದಿನ ಪೀಳಿಗೆಗೂ ಅದನ್ನೇ ಮುಂದುವರಿಸಬೇಕಾಗಿದೆ ಎಂದು ಹೇಳಿದ ಅವರು, 2 ಲಕ್ಷ ರೂ. ಮೇಲ್ಪಟ್ಟ ವಹಿವಾಟಿಗೆ ಪ್ಯಾನ್ ನಂಬರ್ ನೀಡಿಕೆಯನ್ನು ಕಡ್ಡಾಯ ಮಾಡಲಾಗಿದೆ. ಆ ನಿಯಮವನ್ನು ಮುಂದುವರಿಸಲಾಗುತ್ತದೆ ಎಂದರು.
1 ಕೋಟಿ ಖಾತೆಗಳ ಪರಿಶೀಲನೆ
ಆದಾಯ ತೆರಿಗೆ ಇಲಾಖೆ ನೀಡಿದ ಮಾಹಿತಿ ಪ್ರಕಾರ 1 ಕೋಟಿ ಖಾತೆಗಳನ್ನು ಪರಿಶೀಲಿಸಲಾಗಿದೆ. ನೋಟು ಅಪಮೌಲ್ಯದ ಬಳಿಕ ಠೇವಣಿ ಇರಿಸಿದ ವ್ಯಕ್ತಿಗಳು ನೀಡಿದ ಮಾಹಿತಿ ತಾಳೆಯಾಗದಿದ್ದರೆ ನೋಟಿಸ್ ನೀಡಲಾಗಿದೆ. ಇದುವರೆಗೆ 18 ಲಕ್ಷ ಮಂದಿಗೆ ಇಂಥ ನೋಟಿಸ್ ಕಳುಹಿಸಿ ಠೇವಣಿಯ ಮೂಲ ವಿವರಿಸುವಂತೆ ಸೂಚಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಇಲಾಖೆಯ ದಾಖಲೆಗಳ ಪ್ರಕಾರ 2014-15ನೇ ಹಣಕಾಸು ವರ್ಷದಲ್ಲಿ 3.65 ಕೋಟಿ ರಿಟರ್ನ್ಸ್ ಸಲ್ಲಿಕೆ ಮಾಡಿದ್ದಾರೆ. ಈ ಪೈಕಿ 7 ಲಕ್ಷ ಕಂಪೆನಿಗಳು, 9.40 ಹಿಂದೂ ಅವಿಭಕ್ತ ಕುಟುಂಬಗಳು, 9.18 ಲಕ್ಷ ಸಂಸ್ಥೆಗಳು. ಇದೇ ಅವಧಿಯಲ್ಲಿ ಹಣಕಾಸು ಸೇರ್ಪಡೆಯನ್ವಯ ಶೂನ್ಯ ಠೇವಣಿ ಇರುವ 25 ಲಕ್ಷ ಜನಧನ ಖಾತೆಗಳನ್ನೂ ತೆರೆಯಲಾಗಿದೆ.
ಇದರ ಜತೆಗೆ ನ. 8ರಿಂದ ಡಿ. 30ರ ವರೆಗೆ 10 ಲಕ್ಷ ಕೋಟಿ ರೂ.ಗಳಷ್ಟು ಠೇವಣಿಗಳು ಸಂಗ್ರಹವಾಗಿದೆ. ಅವುಗಳ ಮೇಲೂ ಆದಾಯ ತೆರಿಗೆ ಕಣ್ಣಿರಿಸಿದೆ. ತೆರಿಗೆ ಇಲಾಖೆಗೆ ಇಷ್ಟು ಮೊತ್ತದ ಠೇವಣಿ ಸಂಗ್ರಹವಾಗಿದ್ದು ಅಚ್ಚರಿ ತಂದಿದೆ.
ಬಡ್ಡಿದರದಲ್ಲಿ ಯಥಾಸ್ಥಿತಿ?
ಮಂಗಳವಾರ ಮುಂಬಯಿಯಲ್ಲಿ ಆರ್‌ಬಿಐ ತ್ತೈಮಾಸಿಕ ಸಾಲನೀತಿ ಪರಿಶೀಲನ ಸಭೆ ನಡೆಯಲಿದೆ. ಬಜೆಟ್ ಘೋಷಣೆಗಳ ಹಿನ್ನೆಲೆಯಲ್ಲಿ ಬಡ್ಡಿ ದರಗಳಲ್ಲಿ ಇಳಿಕೆಯಾಗಲಿವೆ ಎಂದು ಹೇಳಲಾಗಿತ್ತು. ಆದರೆ ಹಾಲಿ ನೀತಿಗಳನ್ನೇ ಮುಂದುವರಿಸಲು ಮತ್ತು ಬಡ್ಡಿ ದರಗಳಲ್ಲಿ ಬದಲು ಮಾಡದೇ ಇರುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳೇ ಹೆಚ್ಚು
ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.