ಸಾಲ ಮಾಡಿ ಸೈಕಲ್ ಖರೀದಿಸಿ ಚಿನ್ನ ಗೆದ್ದ!
Team Udayavani, Feb 6, 2017, 12:30 PM IST
ಹುಬ್ಬಳ್ಳಿ: ಸೈಕ್ಲಿಂಗ್ ಸಾಧನೆ ಆಸಕ್ತಿಯಿದ್ದರೂ ಕಿತ್ತು ತಿನ್ನುವ ಬಡತನ. ಸಾಲ ಮಾಡಿ ಖರೀದಿಸಿದ ಸೈಕಲ್‌ನಲ್ಲಿ ಪಾಲ್ಗೊಂಡ ಈ ಯುವಕ ಮೊದಲ ಯತ್ನದಲ್ಲೇ ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದಿಕುವ ಸಾಧನೆ ಮಾಡಿದ್ದಾರೆ.
ಸೈಕ್ಲಿಂಗ್ ಕ್ರೀಡೆಯಲ್ಲಿಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಸಾಧಕರನ್ನು ಪರಿಚಯಿಸಿರುವ ವಿಜಯಪುರ ಜಿಲ್ಲೆಯ ಮಣ್ಣಿನಲ್ಲಿ ಅರಳಿದ ಅಪ್ಪಟ ಗ್ರಾಮೀಣ ಪ್ರತಿಭೆಯಿದು. ಗಡಿಗೆಮೊಸರು ಖ್ಯಾತಿಯ ಕೊರ್ತಿ ಕೊಲ್ಹಾರದ ಸಂತೋಷ ವಿಭೂತಿಹಳ್ಳಿ ಹುಬ್ಬಳ್ಳಿ – ಧಾರವಾಡದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಒಲಿಂಪಿಕ್ಸ್ ಸ್ಪರ್ಧೆಯ 21 ವಯೋಮಿತಿಯ ವಿಭಾಗದಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ತನ್ನ ಕನಸಿಗೆ ರೆಕ್ಕೆ ಮೂಡಿಸಿಕೊಂಡಿದ್ದಾರೆ.
ಗದುಗಿನ ತಾಜ್ ಸಮೀರ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ದ್ವಿತೀಯಪಿಯುಸಿ ಅಧ್ಯಯನ ಮಾಡುತ್ತಿರುವ ಸಂತೋಷ, 4 ವರ್ಷಗಳಿಂದ ಸೈಕ್ಲಿಂಗ್ ಅಭ್ಯಾಸ ಮಾಡುತ್ತಿದ್ದು, ಸತತ ಪರಿಶ್ರಮದ ಫಲವಾಗಿ ರಾಜ್ಯ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಗಮನ ಸೆಳೆಯುವ ಸಾಧನೆ ಮೆರೆದಿದ್ದಾರೆ.
ಸಾಲ ಮಾಡಿ ಸೈಕಲ್ ಖರೀದಿ: ಕ್ರೀಡಾ ಸಾಧನೆಯೊಂದಿಗೆ ಉದ್ಯೋಗ ಪಡೆಯುವ ಮಹತ್ವಾಕಾಂಕ್ಷೆ ಹೊಂದಿರುವ ಸಂತೋಷ, ಸೈಕ್ಲಿಂಗ್‌ನಲ್ಲೂ ವಿಕ್ರಮ ಸ್ಥಾಪಿಸುವ ಉಮೇದಿನಲ್ಲಿದ್ದಾರೆ. ನಾಲ್ಕು ವರ್ಷಗಳಿಂದ ಸೈಕ್ಲಿಂಗ್ ತರಬೇತಿ ಪಡೆಯುತ್ತಿದ್ದರೂ ಸ್ವಂತ ಸೈಕಲ್ ಇರಲಿಲ್ಲ. ದುಬಾರಿಯಾದ ಸೈಕಲ್ ಖರೀದಿಸಲು ಬಡತನವೇ ಅಡ್ಡಿಯಾಗಿತ್ತು.
ಕೂಲಿ ಮಾಡುತ್ತ ಬದುಕು ಕಟ್ಟಿಕೊಳ್ಳುತ್ತಿರುವ ಪಾಲಕರು ಮಗನ ಕನಸು ಈಡೇರಿಸಲು ಶಕ್ತಿ ಇಲ್ಲದಿದ್ದರೂ ನಿರಾಸೆ ಮಾಡಲು ಮನಸ್ಸಾಗದೆ, ಗ್ರಾಮದ ಹಿರಿಯರಿಂದ ಸಾಲ ಪಡೆದು ವರ್ಷದ ಹಿಂದಷ್ಟೇ ಸೈಕಲ್ ಕೊಡಿಸಿದ್ದರು. ಸಂಕಷ್ಟ ಸ್ಥಿತಿಯಲ್ಲೂ ಪಾಲಕರು ತನ್ನ ಕ್ರೀಡಾಸಕ್ತಿಗೆ ತೋರಿದ ಕಾಳಜಿ, ನೀಡಿದ ಪ್ರೋತ್ಸಾಹ ಹಾಗೂ ಗ್ರಾಮದ ಹಿರಿಯರ ಉತ್ತೇಜನಕ್ಕೆ ಪ್ರತಿಯಾಗಿ ಸಂತೋಷ ಈಗ ಚಿನ್ನದ ಬೇಟೆಯಾಡಿದ್ದಾರೆ.
ಅನಂತ ದೇಸಾಯಿ ಮಾರ್ಗದರ್ಶನದಲ್ಲಿ ಪಳಗಿರುವ ಸಂತೋಷ ಅವರಿಗೆ ಇದು ರಾಜ್ಯ ಒಲಿಂಪಿಕ್ಸ್‌ನಲ್ಲಿ ಮೊದಲ ಸ್ಪರ್ಧೆ. ಈ ಹಿಂದೆ ಕೇರಳ (ಪ್ರಥಮ, ತೃತೀಯ ಬಹುಮಾನ), ಪುಣೆ (ಚತುರ್ಥ) ಹಾಗೂ ಜಮಖಂಡಿಯಲ್ಲಿ (ದ್ವಿತೀಯ) ನಡೆದ ಸೈಕ್ಲಿಂಗ್ ರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊಂಡು ಪದಕಗಳನ್ನು ಬಾಚಿದ್ದರು.
* ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.