ಕೊಲೆಯಾದ ಪುಣೆ ಇನ್ಫಿ ಟೆಕ್ಕಿಯ ಕೊನೆ ಮಾತು ಬಹಿರಂಗ!
Team Udayavani, Feb 7, 2017, 3:45 AM IST
ಪುಣೆ: “ನನ್ನ ಕೆಲಸದ ಸ್ಥಳಕ್ಕೆ ಯಾರೋ ಬಂದಿದ್ದಾರೆ. ನಾನು ಮತ್ತೆ ಕರೆ ಮಾಡುತ್ತೇನೆ’ ಇದು ಕಳೆದ ತಿಂಗಳು ಕೊಲೆಯಾಗಿದ್ದ ಇನ್ಫೋಸಿಸ್ ಸಾಫ್ಟ್ವೇರ್ ಎಂಜಿನಿಯರ್ ರಸಿಲಾ ರಾಜು ಅವರ ಕೊನೆಯ ಮಾತು.
ಕಳೆದ ತಿಂಗಳ 29ರಂದು ಕಚೇರಿಯಲ್ಲಿ ಕೊಲೆಯಾದ ರಸೀಲಾ ತನ್ನ ಸೋದರ ಸಂಬಂಧಿ ಅಂಜಲಿ ನಂದಕುಮಾರ್ ಎಂಬುವರೊಂದಿಗೆ ಫೋನ್ನಲ್ಲಿ ಹೀಗೆ ಹೇಳಿದ್ದರು. ಕಲ್ಲಿಕೋಟೆ ಮೂಲದ ರಸಿಲಾ ಮತ್ತೆ ಕೆಲವು ದಿನಗಳಲ್ಲಿ ಬೆಂಗಳೂಧಿರಿಗೆ ವರ್ಗಾಧಿವಣೆಧಿಯಾಗಲಿದ್ದರು. ಆದರೆ ಕಚೇರಿಯಲ್ಲಿ ತಮ್ಮ ಬಾಸ್ ತಮಗೆ ಹೆಚ್ಚು ಕೆಲಸ ನೀಡುತ್ತಾರೆ ಮತ್ತು ತಮ್ಮ ವಿರುದ್ಧ ನಡೆದುಕೊಳ್ಳುತ್ತಿರುವುದಾಗಿ ಆಗಾಗ್ಗೆ ತಮ್ಮ ಸಂಬಂಧಿಗಳೊಂದಿಗೆ ಅವರು ಹೇಳುತ್ತಿದ್ದರು.
“ಫೆಬ್ರವರಿ ಮೊದಲ ವಾರದಲ್ಲಿ ನನಗೆ ಬೆಂಗಳೂರಿಗೆ ವರ್ಗಾವಣೆ ಸಿಗಬಹುದು. ನನ್ನ ಇಂದಿನ ಕೆಲಸದ ಸಲ್ಲಿಕೆಯೊಂದಿಗೆ ಇದು ನಿರ್ಧಾರವಾಗಲಿದೆ. ಯಾರೋ ನನ್ನ ಕೆಲಸದ ಸ್ಥಳಕ್ಕೆ ಬಂದಿದ್ದಾರೆ, ನಾನು ಮತ್ತೆ ಕರೆಮಾಡುತ್ತೇನೆ’ ಎಂದು ಕೊನೆಯದಾಗಿ ಹೇಳಿದ್ದರು. ಆ ಬಳಿಕ ಕಚೇರಿಯ 9ನೇ ಮಹಡಿಯ ಕೋಣೆಯಲ್ಲಿ ರಸೀಲಾ ಶವವಾಗಿ ಪತ್ತೆಯಾಗಿದ್ದರು. ಪ್ರಕರಣದಲ್ಲಿ ಅಸ್ಸಾಂ ಮೂಲದ ಬಹ್ಬೆನ್ ಸೈಕಾ ಎಂಬ ಸೆಕ್ಯೂರಿಟಿ ಗಾರ್ಡ್ನನ್ನು ಪೊಲೀಸರು ಬಂಧಿಸಿದ್ದು, ಆತ ಕೃತ್ಯ ಒಪ್ಪಿಕೊಂಡಿದ್ದ. ತನ್ನನ್ನು ಕೆಟ್ಟದ್ದಾಗಿ ನೋಡಿದ್ದಕ್ಕೆ ರಸೀಲಾ ದೂರು ನೀಡುವುದಾಗಿ ಹೇಳಿದ್ದರಿಂದ ಕೃತ್ಯವೆಸಗಿದ್ದಾಗಿ ಹೇಳಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್ನ ಸದಸ್ಯ ಅರೆಸ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.