ಎತ್ತಿನಹೊಳೆ: ಇಂದು ತೀರ್ಪು
Team Udayavani, Feb 7, 2017, 3:45 AM IST
ಹೊಸದಿಲ್ಲಿ: ಎತ್ತಿನಹೊಳೆ ಯೋಜನೆ ಸಂಬಂಧ ಮಂಗಳವಾರ ತೀರ್ಪು ನೀಡುವುದಾಗಿ ರಾಷ್ಟ್ರೀಯ ಹಸಿರು ನ್ಯಾಯ ಪೀಠ ಹೇಳಿದೆ. ಜತೆಗೆ ನ್ಯಾಯಾಂಗದ ಶಿಸ್ತು ಪಾಲಿಸಿಲ್ಲವೆಂದು ಪ್ರಕರಣದಲ್ಲಿನ ದೂರುದಾರರನ್ನೇ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.
ಸೋಮವಾರ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿ ಕೊಂಡ ಹಸಿರು ನ್ಯಾಯ ಪೀಠದ ಮುಖ್ಯಸ್ಥ ನ್ಯಾ| ಸ್ವತಂತ್ರ ಕುಮಾರ್ ನೇತೃತ್ವದ ಪೀಠ, ದೂರುದಾರರು ಚೆನ್ನೈ ಹಸಿರು ನ್ಯಾಯ ಪೀಠದ ಆದೇಶದಲ್ಲಿ ಉಲ್ಲೇಖೀಸಿದ್ದ ಅಂಶಗಳನ್ನು ನ್ಯಾಯ ಪೀಠದಲ್ಲಿ ಮತ್ತೆ ಪ್ರಶ್ನಿಸಿದ್ದನ್ನು ತರಾಟೆಗೆ ತೆಗೆದುಕೊಂಡು, ಪ್ರಕರಣದ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.
ಎತ್ತಿನಹೊಳೆ ಯೋಜನೆಯನ್ನು ಪ್ರಶ್ನಿಸಿರುವ ದೂರು ದಾರರಾದ ಕೆ. ಎನ್. ಸೋಮಶೇಖರ್, ಕಿಶೋರ್ ಕುಮಾರ್ ಪರ ವಕೀಲರಿಗೆ 2013ರ ಮಾರ್ಚ್‌ನಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯವು ಕುಡಿಯುವ ನೀರಿನ ಯೋಜನೆಯನ್ನು ಪರಿಸರ ಅನುಮತಿಯಿಂದ ಹೊರಗಿಟ್ಟು ಬರೆದಿದ್ದ ದಾಖಲೆಗೆ ಶಾಸನಬದ್ಧ ಮಾನ್ಯತೆ ಇದೆಯೇ, ಇಲ್ಲವೇ ಎಂಬುದನ್ನು ಮಂಗಳವಾರ ಮನವರಿಕೆ ಮಾಡಿಕೊಡಬೇಕೆಂದು ನ್ಯಾಯ ಪೀಠ ತಾಕೀತು ಮಾಡಿದೆ.
ಕುಡಿಯುವ ನೀರಿಗೆ ಆಕ್ಷೇಪವಿಲ್ಲ: ನ್ಯಾ| ಕುಮಾರ್, ಕುಡಿಯುವ ನೀರಿನ ಯೋಜನೆಗೆ ನಿಮ್ಮದೇನು ತಕರಾರು ಎಂದು ದೂರುದಾರರ ವಕೀಲರನ್ನು ಪ್ರಶ್ನಿಸಿದರು. ಸೋಮಶೇಖರ್ ಪರ ವಕೀಲ ಋತ್ವಿಕ್ ದತ್ತಾ ಮತ್ತು ಪ್ರಿನ್ಸ್ ಇಸಾಕ್ “ಯೋಜನೆಗೆ ನಮ್ಮ ತಕರಾರಿಲ್ಲ. ಆದರೆ ಸರಕಾರ ಕಾನೂನು ಪಾಲಿಸಲಿ. ಕಾನೂನಿನ ಪ್ರಕಾರ ಈ ಯೋಜನೆಗೆ ಅನುಮತಿ ಸಿಗಲು ಸಾಧ್ಯವೇ ಇಲ್ಲ. ಈ ಯೋಜನೆಯ ಕಾಮಗಾರಿ ಅತ್ಯಂತ ಸೂಕ್ಷ್ಮ ಪರಿಸರ ವಲಯದಲ್ಲಿ ನಡೆಯುತ್ತಿದೆ’ ಎಂದು ತಿಳಿಸಿದರು.
ಇದೊಂದು ಕುಡಿಯುವ ನೀರಿನ ಯೋಜನೆ ಎನ್ನುತ್ತಾರೆ. ಇಡೀ ಪಶ್ಚಿಮ ಘಟ್ಟವೇ ಕುಡಿಯುವ ನೀರಿನ ಮೂಲ. ಈ ಯೋಜನೆ ಜಾರಿಯ ಸಂದರ್ಭದಲ್ಲಿ ಪರಿಸರ ಪರಿಣಾಮ ಅಧ್ಯಯನವೇ ನಡೆದಿಲ್ಲ ಎಂದು ದೂರದಾರರ ಪರ ವಕೀಲರು ವಾದಿಸಿದರು.
ಈ ಯೋಜನೆಯ ವೆಚ್ಚ ಮತ್ತು ಲಾಭದ ವಿಶ್ಲೇಷಣೆಯನ್ನು ನಡೆಸಲಾಗಿಲ್ಲ, ಈ ಯೋಜನೆ ಅತ್ಯಂತ ಸೂಕ್ಷ್ಮ ಜೈವಿಕ ಪರಿಸರದಲ್ಲಿ ನಡೆಯುತ್ತಿದೆ. ರಾಜ್ಯ ಸರಕಾರ ಹೇಳಿದಂತೆ ಆ ಪ್ರದೇಶದಲ್ಲಿ 24 ಟಿಎಂಸಿ ನೀರು ಲಭ್ಯವಿಲ್ಲ. ಕುಡಿಯುವ ನೀರಿನ ನೆಪದಲ್ಲಿ ಕಿರು ನೀರಾವರಿ ಯೋಜನೆಗೆಳಿಗೂ ನೀರು ಎತ್ತುವ ಮತ್ತು ವಿದ್ಯುತ್ ಉತ್ಪಾದಿಸುವ ಲೆಕ್ಕಾಚಾರವನ್ನು ರಾಜ್ಯ ಸರಕಾರ ಹಾಕಿಕೊಂಡಿದೆ ಎಂದು ವಾದಿಸಿದರು. ರಾಜ್ಯ ಸರಕಾರ ಮತ್ತು ನೀರಾವರಿ ನಿಗಮದ ವಕೀಲರಾದ ನವೀನ್ ನಾಥ್ ಮತ್ತು ಅಶೋಕ್ ದೇವರಾಜ್, ಕರಡು ವಿಸ್ತೃತ ಯೋಜನಾ ವರದಿಯಲ್ಲಿ ಆ ರೀತಿ ಇತ್ತು. ಆದರೆ ಪರಿಷ್ಕೃತ ಯೋಜನಾ ವರದಿಯಲ್ಲಿ ಕುಡಿಯುವ ನೀರಿಗಾಗಿಯೇ ಯೋಜನೆ ಎಂದು ಉಲ್ಲೇಖೀಸಲಾಗಿದೆ. ಕೆರೆಗಳನ್ನು ಅರ್ಧ ತುಂಬಿಸುವ ಮೂಲಕ ಅಂತರ್ಜಲವನ್ನು ಹೆಚ್ಚಿಸುವ ಉದ್ದೇಶವಷ್ಟೆ ನಮ್ಮದು ಎಂದು ಪ್ರತಿವಾದ ಮಂಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ
Bengaluru: ಕದ್ದ ಮೊಬೈಲ್ ಕೊರಿಯರ್ ಮೂಲಕ ಕೇರಳಕ್ಕೆ ರವಾನೆ!
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.