ನಂಜುಂಡಿ ಕಲ್ಯಾಣದಲ್ಲಿ ನೆಲ್ಸನ್ ಪೇಸ್ ನಟನೆ
Team Udayavani, Feb 7, 2017, 11:48 AM IST
ನಿರ್ದೇಶಕ ರಾಜೇಂದ್ರ ಕಾರಂತ್ “ನಂಜುಂಡಿ ಕಲ್ಯಾಣ’ ಎಂಬ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಆ ಚಿತ್ರದಲ್ಲಿ ತನುಷ್ ಮತ್ತು ಶ್ರಾವ್ಯಾ ಜೋಡಿ ಅನ್ನೋದು ಗೊತ್ತು. ಆದರೆ, ಚಿತ್ರದಲ್ಲಿ ವಿಶೇಷ ವ್ಯಕ್ತಿಯೊಬ್ಬರು ಸದ್ದಿಲ್ಲದೆಯೇ ನಟಿಸಿರುವುದು ಬಹುಶಃ ಯಾರಿಗೂ ಗೊತ್ತಿರಲಿಕ್ಕಿಲ್ಲ. ಅಂದಹಾಗೆ, ಆ ವಿಶೇಷ ವ್ಯಕ್ತಿ ಬೇರಾರೂ ಅಲ್ಲ. ಅದು ನೆಲ್ಸನ್ ಪೇಸ್. ಹೌದು, ಯಾರಿದು ನೆಲ್ಸನ್ ಪೇಸ್ ಎಂಬ ಪ್ರಶ್ನೆ ಎದುರಾಗುವುದು ಸಹಜ.
ಈ ನೆಲ್ಸನ್ ಪೇಸ್ಗೂ, ಸಿನಿಮಾರಂಗಕ್ಕೂ ಯಾವುದೇ ಸಂಬಂಧವಿಲ್ಲ. ನೆಲ್ಸನ್ ಪೇಸ್ “ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್’ (ಎಂಎಂಎ)ನ ಖ್ಯಾತ ಪಟು. ಮೂಲತಃ ಗೋವಾದವರಾದ ನೆಲ್ಸನ್, ಮಾರ್ಷಲ್ ಆರ್ಟ್ಸ್ನಲ್ಲಿ ಬರುವಂತಹ ಎಲ್ಲಾ ಕಲೆಗಳಲ್ಲೂ ನಿಪುಣರು. ಭಾರತದಲ್ಲಿ ಇರುವ ಕೆಲವೇ ಕೆಲವು ಎಂಎಂಎ ಪಟುಗಳಲ್ಲಿ ನೆಲ್ಸನ್ ಕೂಡ ಒಬ್ಬರು. ಇದೇ ಮೊದಲ ಸಲ ಸಿನಿಮಾದಲ್ಲಿ ಅದರಲ್ಲೂ ಕನ್ನಡದಲ್ಲಿ ತಯಾರಾಗುತ್ತಿರುವ ಹೊಸ “ನಂಜುಂಡಿ ಕಲ್ಯಾಣ’ ಚಿತ್ರದಲ್ಲಿ ನಟಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಬಾಕ್ಸಿಂಗ್ನಲ್ಲಿ ಏಳು ಬಾರಿ ಚಾಂಪಿಯನ್ ಆದವರು. ಫೈಟ್ ದೃಶ್ಯವೊಂದರಲ್ಲಿ ವಿಶೇಷ ವ್ಯಕ್ತಿಯೊಬ್ಬರು ಇದ್ದರೆ ಚೆನ್ನಾಗಿರಲಿದೆ ಎಂಬುದನ್ನು ಮನಗಂಡ, ನಿರ್ದೇಶಕ ರಾಜೇಂದ್ರ ಕಾರಂತ್ ಹಾಗೂ ನಾಯಕ ತನುಷ್, ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ನ ಖ್ಯಾತ ಪಟು ನೆಲ್ಸನ್ ಅವರ ಮೊರೆ ಹೋದಾಗ, ಸಿನಿಮಾದ ಕಥೆ ಮತ್ತು ಫೈಟ್ ಸನ್ನಿವೇಶವನ್ನು ಪೂರ್ಣವಾಗಿ ಅರಿತುಕೊಂಡು, ಖುಷಿಯಿಂದಲೇ ಕ್ಯಾಮೆರಾ ಮುಂದೆ ನಿಂತಿದ್ದಾರೆ.
ನಾಯಕ ತನುಷ್ ಮತ್ತು ಖ್ಯಾತ ಎಂಎಂಎ ಪಟು ನೆಲ್ಸನ್ ಇವರಿಬ್ಬರು ಸಿನಿಮಾದಲ್ಲಿ ಸೆಣೆಸಾಟ ನಡೆಸುವಂತಹ ಅಪರೂಪದ ದೃಶ್ಯಗಳಿವೆಯಂತೆ. ಆದರೆ, ಇಬ್ಬರ ನಡುವೆ ಯಾಕೆ ಫೈಟ್ ನಡೆಯುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು ಎಂಬುದು ಚಿತ್ರತಂಡದ ಮಾತು. ಫೈಟ್ ಮಾಸ್ಟರ್ ಥ್ರಿಲ್ಲರ್ ಮಂಜು ಅವರು ಇವರಿಬ್ಬರು ಸೆಣಸಾಟ ನಡೆಸುವ ದೃಶ್ಯವನ್ನು ಅದ್ಭುತವಾಗಿಯೇ ಸಂಯೋಜನೆ ಮಾಡಿದ್ದಾರಂತೆ.
“ನಂಜುಂಡಿ ಕಲ್ಯಾಣ’ ಸಿನಿಮಾ ಬಹುತೇಕ ಮುಗಿದಿದ್ದು, ಹಾಡುಗಳ ಬಾಕಿ ಉಳಿದಿದೆ. ಮೂರು ಹಾಡುಗಳನ್ನು ಚಿತ್ರೀಕರಿಸಿದರೆ, ಸಿನಿಮಾಗೆ ಕುಂಬಳಕಾಯಿ ಬೀಳಲಿದೆ. ಚಿತಗ್ರಕ್ಕೆ ಸತೀಶ್ ಅವರು ಸಂಗೀತ ನೀಡಿದ್ದಾರೆ. ಮಂಜುನಾಥ್ ಬಿ.ನಾಯಕ್ ಅವರು ಕ್ಯಾಮೆರಾ ಹಿಡಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anandapura: ಬಟ್ಟೆ ತೊಳೆಯಲು ಹೋದ ಮಹಿಳೆ ಕೆರೆಗೆ ಬಿದ್ದು ಮೃತ್ಯು
Mallikarjun kharge; ಹೇಳಿಕೆಯಿಂದ ಗ್ಯಾರಂಟಿ ಚುನಾವಣೆಗಾಗಿ ಎನ್ನುವುದು ಸ್ಪಷ್ಟ : ಜೋಶಿ
Poll promises; ಖರ್ಗೆ, ರಾಹುಲ್ ಗಾಂಧಿ ಕ್ಷಮೆಗೆ ಒತ್ತಾಯಿಸಿದ ಬಿಜೆಪಿ
INDvsNZ: ಮತ್ತೆ ಬ್ಯಾಟಿಂಗ್ ಕುಸಿತ; ಮುಂಬೈನಲ್ಲೂ ಸಂಕಷ್ಟಕ್ಕೆ ಸಿಲುಕಿದ ಭಾರತ
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.