ಕಷ್ಟಪಟ್ಟರೆ ಸಿಗಲಿದೆ ಸುಖದ ಸುಪ್ಪತ್ತಿಗೆ
Team Udayavani, Feb 7, 2017, 1:25 PM IST
ಜಮಖಂಡಿ: ಬದಲಾದ ಸನ್ನಿವೇಶದಲ್ಲಿ ಮಹಿಳೆಗೆ ಶಿಕ್ಷಣ ಮತ್ತು ಉದ್ಯೋಗ ಅಗತ್ಯಗಳು ಅವಶ್ಯವಾಗಿವೆ. ಕೌಟುಂಬಿಕ ಜವಾಬ್ದಾರಿ ಹಾಗೂ ಕರ್ತವ್ಯದ ಹುದ್ದೆಯ ಹೊಣೆ ಸಮರ್ಪಕವಾಗಿ ನಿರ್ವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜಿಎಲ್‌ಬಿಸಿ ಕಾರ್ಯನಿರ್ವಾಹಕ ಎಂಜಿನಿಯರ್ ಪದ್ಮಾ ಜೋಶಿ ಹೇಳಿದರು.
ನಗರದ ಬಿಎಲ್‌ಡಿಇ ಸಂಸ್ಥೆಯ ಕಾಲೇಜಿನ ಸಭಾಭವನದಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಜೀವನ ಸರಳವಿಲ್ಲ. ಎಲ್ಲರಿಗೂ ಸುಖದ ಸುಪತ್ತಿಗೆ ಸಿಗುವುದಿಲ್ಲ. ತಮ್ಮ ಎಲ್ಲ ಶಕ್ತಿ, ಸಾಮರ್ಥ್ಯವನ್ನು ಒಗ್ಗೂಡಿಸಿ ಕೆಲಸಕ್ಕೆ ಒಳ್ಳೆಯ ಪ್ರತಿಫಲ ಲಭಿಸುತ್ತದೆ.
ಸಹನಶೀಲತೆಯ ಭಾವನೆ ಮೂಲಕ ಶ್ರಮವಹಿಸಿ ದುಡಿಯುವ ಮನಸ್ಸು ಬೆಳೆಸಿಕೊಳ್ಳಬೇಕು. ಇಂದಿನ ಗಳಿಕೆ ಮುಂದಿನ ಜೀವನಕ್ಕೆ ಬುತ್ತಿ ಎಂಬ ಸಂಗತಿಯನ್ನು ಅರಿಯಬೇಕು. ಸಮಯ ಕಳೆಯಲು, ಕಾಲ ಹರಣ ಮಾಡಲು ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಇರಬಾರದು.
ವಿದ್ಯಾರ್ಥಿ ಜೀವನದಲ್ಲಿ ಅರಿತು ಕಲಿತದ್ದು ಭವಿಷ್ಯದ ದಿನಗಳಲ್ಲಿ ಪ್ರಯೋಜನಕ್ಕೆ ಬರುತ್ತದೆ. ಗುರಿ ಸಾಧನೆಯಲ್ಲಿ ಸದಾ ಗಮನ ಇರಬೇಕು ಎಂದು ಹೇಳಿದರು. ಪ್ರಾಚಾರ್ಯ ಡಾ| ಎಸ್.ಸಿ. ಹಿರೇಮಠ ಮಾತನಾಡಿ, ವಿದ್ಯಾರ್ಥಿನಿಯರು ಒಳ್ಳೆಯ ಹುದ್ದೆಗಳಲ್ಲಿ ಇರಬೇಕು.
ವಿದ್ಯಾರ್ಥಿನಿಯರು ತಮ್ಮ ವೈಯಕ್ತಿಕ, ಕೌಟುಂಬಿಕ ಮತ್ತು ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬ ಕನಸು ನಮ್ಮದಾಗಿದೆ ಎಂದರು. ಅನಿತಾ ಶಹಾ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ನಾರಾಯಣಕರ, ವಸತಿ ನಿಲಯದ ಡೀನ್ ಪೂರ್ಣಿಮಾ ಸುರಪುರ ಇದ್ದರು.
ವಸತಿ ನಿಲಯ ವಿದ್ಯಾರ್ಥಿನಿಯರಾದ ಅಕ್ಷತಾ ಕಸ್ತೂರಿ, ಸಂಗೀತಾ ಚೌಧರಿ, ಪ್ರಿಯಾಂಕಾ ಬೋಸಲೆ, ಸುಪ್ರಿಯಾ ಸಂಕೋನಟ್ಟಿ ತಮ್ಮ ಅನಿಸಿಕೆ ಹಂಚಿಕೊಂಡರು. ಶ್ರೇಯಾ ಘಂಟಿ ಪ್ರಾರ್ಥಿಸಿದರು. ಸಾದ್ವಿ ಪೂಜಾರ ಸ್ವಾಗತಿಸಿದರು. ಪ್ರಿಯಾಂಕಾ ಮಾನೆ ಅತಿಥಿಗಳನ್ನು ಪರಿಚಯಿಸಿದರು. ಸುಪ್ರಿಯಾ ಹರಳೆ, ಪವಿತ್ರಾ ಮುನ್ಯಾಳ, ಸಹನಾ ಬಂಟವಾಳಕರ ನಿರೂಪಿಸಿದರು. ಪ್ರೀತಿ ಕೊಟ್ಟಲಗಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Mudhol: ಟ್ರ್ಯಾಕ್ಟರ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.