ಹಿರಿಮಗನ ದೂರದೃಷ್ಠಿ


Team Udayavani, Feb 9, 2017, 3:45 AM IST

story.jpg

ಒಂದೂರಿನಲ್ಲಿ ರಾಮರಾಯ ಎಂಬವರಿಗೆ ಮೂರು ಮಕ್ಕಳಿರುತ್ತಾರೆ. ಅವರಿಗೆ ವಿದ್ಯೆ, ಶಿಸ್ತು ನೀಡಿ ಸುಖವಾಗಿ ಸಾಕಿರುತ್ತಾರೆ. ಹೀಗೆ ದೊಡ್ಡವರಾದ ಮೇಲೆ ಅವರ ಜ್ಞಾನ ಪರೀಕ್ಷೆ ಮಾಡಬೇಕೆಂದು ಮೂವರನ್ನು ಕರೆದು ಅಯ್ನಾ ಮಕ್ಕಳಿರಾ, ನನಗೆ ವಯಸ್ಸಾಯಿತು. ನಿಮ್ಮಗೆ ಓದು, ಬರಹ ಎಲ್ಲವನ್ನು ಕಲಿಸಿ ವಿದ್ಯಾವಂತರನ್ನಾಗಿ ಮಾಡಿದ್ದೇನೆ. ಹಾಗಾಗಿ ನಿಮ್ಮ ವಿದ್ಯೆಗಿಂತ ಜ್ಞಾನ ಎಷ್ಟಿದೆ ಎಂಬುದನ್ನು ನಾನು ಪರೀಕ್ಷಿಸಬೇಕು ಎಂದನು. ಮೂವರು ಒಪ್ಪಿದರು. 

ನೀವು ಮೂವರಿಗೂ ಒಂದೊಂದು ಚಿನ್ನದ ಬಳೆ ನೀಡುತ್ತೇನೆ. ಅದನ್ನು ಸದ್ವಿನಿಯೋಗದಿಂದ ಬಳಸಿಕೊಳ್ಳಿ. ಮೂರು ತಿಂಗಳ ಕಾಲಾವಧಿ ನೀಡುತ್ತೇನೆ ಎಂದು ಚಿನ್ನದ ಬಳೆಯನ್ನು ನೀಡಿ ಶುಭವಾಗಲಿ ಎಂದು ಹಾರೈಸಿ ಕಳಿಸುತ್ತಾನೆ.

ನಂತರ ಮೂವರು ಒದೊಂದು ದಿಕ್ಕಿಗೆ ಹೊರಡುತ್ತಾರೆ. ಮೂರು ತಿಂಗಳ ನಂತರ ಕಿರಿಯವ ಬಂದು ನಾನು ಪೂರ್ವದ ದಿಕ್ಕಿನಲ್ಲಿ ಸಾಗಿ ಅಲ್ಲಿರುವ ಸಾಧುಗಳ ಬಳಿ ಶಿಷ್ಯನಾಗಿ ಉತ್ತಮ ನೀತಿಗಳನ್ನು ಕಲಿತೆ. ಗುರು ಕಾಣಿಕೆಗೆ ಬಳೆ ಅರ್ಪಿಸಿದೆ ಎಂದನು. ರಾಮರಾಯ ಬೇಷ್‌ ಎಂದು ಬೆನ್ನು ತಟ್ಟಿದ. ಮರುದಿನ ಮಧ್ಯಮದವ ಬಂದು ನಾನು ಬಳೆಯನ್ನು ಮಾರಿ. ಬಂದ ಹಣವನ್ನು ಬಡವರಿಗೆ, ನಿರಾ]ತರಿಗೆ ಹಂಚಿದೆ. ಅವರು ನನ್ನನ್ನು ಪ್ರೀತಿ ಆದರಗಳಿಂದ ಸತ್ಕರಿಸಿದರು ಎಂದ. ಜನರ ಮೆಚ್ಚುಗೆ ಪಡೆದನೆಂದು ಸಂತಸಗೊಂಡ ರಾಮರಾಯ. 

ಆದರೆ ಹಿರಿಯ ಮಗ ವರ್ಷವಾದರೂ ಬರಲಿಲ್ಲ. ಅಷ್ಟರಲ್ಲಿ ತನ್ನಿಬ್ಬರೂ ಮಕ್ಕಳಿಗೂ ಮದುವೆ ಮಾಡಿದ. ಇಂದಲ್ಲ ನಾಳೆ ಬರುತ್ತಾನೆಂದು ಕಾದರೂ ಎರಡು, ಮೂರು ವರ್ಷವಾದರೂ ಬರಲಿಲ್ಲ. ತಂದೆ ಹುಡುಕಿಕೊಂಡು ಹೊರಟ. ತಂದಿದ್ದ ಹಣವೆಲ್ಲ ಖಾಲಿಯಾಗಿ ಒಂದೂರಿನಲ್ಲಿ ತಂಗಿದ. 

ಅಲ್ಲಿಗೆ ಧಾವಿಸಿದ ಅಪರಿಚಿತ ಯುವಕ ರಾಮರಾಯನ ಸ್ಥಿತಿ ತಿಳಿದು, “ಅಯ್ನಾ ನೀನೇನು ಚಿಂತಿಸಬೇಡ. ನಮ್ಮೂರಿನ ನಾಯಕರು ಈ ತರ ಬರಿದಾದ ಜನಗಳಿಗೋಸ್ಕರವೇ ಒಂದು ಶಾಲೆಯನ್ನು ನಿರ್ಮಿಸಿ¨ªಾರೆ. ಅಲ್ಲಿ ನೀನು ನಮ್ಮ ನಾಯಕರು ಹೇಳಿದ ಕೆಲಸ ಮಾಡು. ಅದು ಕೃಷಿಯಾಗಿರಲಿ, ಗೋ ಸಾಕಾಣೆ ಅಥವ ಬೇರಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸು. ನಿನ್ನ ಯೋಗ ಕ್ಷೇಮಗಳನ್ನ ಅವರು ನೋಡಿಕೊಳ್ಳುತ್ತಾರೆ, ಆದರೆ ನೀನು ನಿಯತ್ತಿನಿಂದ ಶ್ರಮಿಸಿ ದುಡಿಯಬೇಕು’ ಎಂದು ತಿಳಿಸುತ್ತಾನೆ. 

ಅಪರಿಚಿತನ ಮಾತಿಗೆ ಒಪ್ಪಿ ರಾಮರಾಯರು ನಾಯಕನಿರುವ ಕಡೆ ಹೋಗುತ್ತಾರೆ. ಈತನನ್ನು ಕಂಡಕೂಡಲೇ ನಾಯಕನು ಸಂತೋಷದಿಂದ ರಾಮರಾಯನ ಕಾಲಿಗೆ ಬೀಳುತ್ತಾನೆ. 

ವಿಚಾರಿಸಿದಾಗ ಅವನೇ ರಾಮರಾಯನ ಹಿರಿಮಗನೆಂದು ತಿಳಿಯುತ್ತದೆ. ಅವನು ತನ್ನ ವೃತ್ತಾಂತವನ್ನು ತಂದೆಗೆ ವಿವರಿಸುತ್ತಾನೆ. 

” ನೀವು ನೀಡಿದ ಬಳೆಯನ್ನು ನೀಡಿ ಒಬ್ಬ ಬಡವನಿಂದ ಜಮೀನನ್ನು ಪಡೆದೆ. ಅಲ್ಲಿ ದವಸ, ಧಾನ್ಯಗಳನ್ನ ಬಿತ್ತಿ ಕಷ್ಟ ಪಟ್ಟು ಬೆವರು ಹರಿಸಿ ದುಡಿದೆ. ಫ‌ಸಲು ಚೆನ್ನಾಗಿ ಬರಲು ಅದನ್ನು ಮಾರಾಟ ಮಾಡಿ ಒಳ್ಳೆಯ ಮತ್ತಷ್ಟು ಜಾಗ ಖರೀದಿಸಿ ಬಡವರಿಗೆ, ನಿರುದ್ಯೋಗಿಗಳಿಗೆ ಕೆಲಸ ನೀಡಿ ಆಶ್ರಯ ನೀಡುತ್ತಿದ್ದೇನೆ. ಕಾಯಕವೇ ಕೈಲಾಸವೆಂದು ಅವರು ಸ್ವಾವಲಂಬಿಗಳಾಗಿ ಬದುಕುತ್ತಿ¨ªಾರೆ’ ರಾಮರಾಯ ಮಗನ ಸಾತ್ವಿಕ ಗುಣಗಳಿಗೆ ಸೋತು ಖುಷಿಯಿಂದ  ತಬ್ಬಿಕೊಳ್ಳುತ್ತಾನೆ. ಇಬ್ಬರು ಮಕ್ಕಳನ್ನು ಕರೆಸಿಕೊಂಡು ಎಲ್ಲರೂ ಸುಖದಿಂದ ಬಾಳುತ್ತಾರೆ. 
ನೀತಿ: ಮಾಡುವ ಕೆಲಸದಲ್ಲಿ ಸಾತ್ವಿಕ ಚಿಂತನೆಗಳಿದ್ದರೆ ಫ‌ಲ ದೊರೆಯುತ್ತದೆ.

– ಎಡೆಯೂರು ಪಲ್ಲವಿ

ಟಾಪ್ ನ್ಯೂಸ್

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

8

Hampankatte: ಸಿಟಿ ಮಾರ್ಕೆಟ್‌ ರಸ್ತೆಗೆ ಬೇಕಿದೆ ಕಾಯಕಲ್ಪ

7

Mangaluru: ಪಿ.ಎಂ. ರಾವ್‌ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

6(1

Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.