ಗಮನಿಸಿ; ಇನ್ನು ಯೂಟ್ಯೂಬ್ ನಲ್ಲೂ Live Stream ಮಾಡಬಹುದು!
Team Udayavani, Feb 9, 2017, 3:46 PM IST
ಹೊಸದಿಲ್ಲಿ : ವಿಡಿಯೋ ತಯಾರಿಸುವವರು ಈಗಿನ್ನು ತಮ್ಮ ವಿಡಿಯೋಗಳನ್ನು ಯೂ ಟ್ಯೂಬ್ನಲ್ಲಿ ಲೈವ್ ಸ್ಟ್ರೀಮ್ ಮಾಡಬಹುದಾಗಿದೆ.
ಇದಕ್ಕಾಗಿ ಯೂ ಟ್ಯೂಬ್ ತನ್ನ ತಾಣದಲ್ಲಿ ಕನಿಷ್ಠ 10,000 ಬಳಕೆದಾರರನ್ನು ಹೊಂದಿರುವ ವಾಹಿನಿಗಳಿಗೆ ಮೊಬೈಲ್ ಲೈವ್ ಸ್ಟ್ರೀಮಿಂಗ್ ಸೌಕರ್ಯವನ್ನು ಕಲ್ಪಿಸಿದೆ.
ಮೊಬೈಲ್ ಲೈವ್ ಸ್ಟ್ರೀಮ್ ಸೌಕರ್ಯ ಈ ತನಕ ಆಯ್ದ ಬಳಕೆದಾರರಾದ ದಿ ಯಂಗ್ ಟರ್ಕ್, ಎಐಬಿ, ಅಲೆಕ್ಸ್ ವಸಾಬಿ, ಪ್ಲಾಟಿಕಾ ಪಾಲಿನೇಶ್ಯ ಮತ್ತು ಸ್ಯಾಕನ್ಜೊಲೀಸ್ ಗೆ ಮಾತ್ರವೇ ಲಭ್ಯವಿತ್ತು.
ಈಗಿನ್ನು 10,000ಕ್ಕೂ ಅಧಿಕ ಬಳಕೆದಾರರನ್ನು ಹೊಂದಿರುವ ಎಲ್ಲ ಅಪ್ಲೋಡರ್ಗಳು ಯೂ ಟ್ಯೂಬ್ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಬಹುದಾಗಿದೆ. ಶೀಘ್ರವೇ ಈ ಸೌಕರ್ಯವನ್ನು ಇತರ ಬಳಕೆದಾರರಿಗೆ ಕೂಡ ದೊರಕಿಸಲಾಗುವುದು ಎಂದು ಕಂಪೆನಿಯು ಹೇಳಿದೆ.
ಕಂಪೆನಿಯ ಮೊಬೈಲ್ ಆಪ್ಲಿಕೇಶನ್ ಮೂಲಕ ಪಡೆಯಬಹುದಾದ ಲೈವ್ ಸ್ಟ್ರೀಮ್ ತಾಂತ್ರಿಕ ಸೌಕರ್ಯವು ಈಗಿನ ಯೂ ಟ್ಯೂಬ್ ವಿಡಿಯೋಗಳಲ್ಲಿ ಇರುವ ತಾಂತ್ರಿಕ ಸೌಕರ್ಯದ ನಮೂನೆಯಲ್ಲೇ ಇದೆ.
ಮೊಬೈಲ್ ಲೈವ್ ಸ್ಟ್ರೀಮಿಂಗ್ ಅನ್ನು ಯೂ ಟ್ಯೂಬ್ ಮೊಬೈಲ್ ಆ್ಯಪ್ನಲ್ಲಿ ನೇರವಾಗಿ ಅಂತರ್ಗತಗೊಳಿಸಲಾಗಿದೆ. ಅಪ್ಲೋಡರ್ಗಳು ಸ್ಟ್ರೀಮಿಂಗ್ ಆರಂಭಿಸಲು ಯೂ ಟ್ಯೂಬ್ ಓಪನ್ ಮಾಡಿ, CAPTURE ಬಟನ್ ಅನ್ನು ಒತ್ತಿದಾಗ “ಯೂ ಆರ್ ಲೈವ್’ ಆಗಿರುವುದನ್ನು ಕಾಣಬಹುದು. ಸ್ಟ್ರೀಮ್ ಮಾಡಲ್ಪಟ್ಟ ವಿಡಿಯೋಗಳು ಯೂ ಟ್ಯೂಬ್ನಲ್ಲಿನ ಇತರ ಯಾವುದೇ ವಿಡಿಯೋಗಳ ಗುಣಲಕ್ಷಣಗಳನ್ನೇ ಹೊಂದಿರುತ್ತವೆ ಎಂದು ಕಂಪೆನಿಯು ಹೇಳಿದೆ.
ಭಾರತ ಸಹಿತ ಇಪ್ಪತ್ತು ದೇಶಗಳ ವಿಡಿಯೋ ತಯಾರಕರು “ಸೂಪರ್ ಚ್ಯಾಟ್’ ಎಂಬ ಹೊಸ ನಗದೀಕರಣ ಸಲಕರಣೆಯನ್ನು ಬಳಸಿಕೊಂಡು ತಮ್ಮ ಲೈವ್ ಸ್ಟ್ರೀಮಿಂಗ್ ಗಾಗಿ ಸಂಪಾದನೆಯನ್ನೂ ಮಾಡಬಹುದಾಗಿದೆ ಎಂದು ಕಂಪೆನಿ ಹೇಳಿದೆ.
ವಿಡಿಯೋ ವೀಕ್ಷಕರಿಗೆ ಈ ಸಲಕರಣೆಯಿಂದ ತಾವು ಸಮೂಹದಿಂದ ಹೊರಗೆ ನಿಂತುಕೊಂಡು, ಕಡುಬಣ್ಣದಲ್ಲಿ ಹೈಲೈಟ್ ಮಾಡಲಾಗುವ ಚ್ಯಾಟ್ ಮ್ಯಾಸೇಜ್ ಗಳನ್ನು ಖರೀದಿಸುವ ಮೂಲಕ ವಿಡಿಯೋ ತಯಾರಕರ ಗಮನಕ್ಕೆ ಪಾತ್ರರಾಗಬಹುದಾಗಿದೆ. ಆಗ ಚ್ಯಾಟ್ ಮ್ಯಾಸೇಜ್ ಐದು ತಾಸುಗಳ ಕಾಲ ಮೇಲ್ಗಡೆಯ ಭಾಗದಲ್ಲಿ ಕಾಣಿಸುತ್ತಿರುತ್ತದೆ ಎಂದು ಕಂಪೆನಿ ಹೇಳಿದೆ.
40ಕ್ಕೂ ಹೆಚ್ಚು ದೇಶಗಳಲ್ಲಿನ ಬಳಕೆದಾರರಿಗೆ ಚ್ಯಾಟ್ ಮೆಸೇಜ್ ಖರೀದಿಸಲು ಮಾನಿಟೈಸೇಶನ್ ಟೂಲ್ (ನಗದೀಕರಣ ಸಲಕರಣೆ) ವೀಕ್ಷಕರಿಗೆ ಕಾಣುವಂತಿರುತ್ತದೆ ಎಂದು ಕಂಪೆನಿಯು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.