ಡಯಾನಾ ಸಿನೆಯಾನ !
Team Udayavani, Feb 10, 2017, 3:45 AM IST
ಐದು ವರ್ಷದಲ್ಲಿ ನಟಿಸಿದ್ದು ಬರೀ ಎರಡು ಚಿತ್ರದಲ್ಲಿ. ಇಂತಹದ್ದೊಂದು ವಿಶಿಷ್ಟ ದಾಖಲೆ ಹೊಂದಿರುವ ನಟಿ ಡಯಾನ ಪೆಂಟಿ. ಹೆಸರು ಕೇಳುವಾಗ ಯಾವುದೋ ವಿದೇಶಿ ನಟಿ ಎಂದು ಅನ್ನಿಸಿದರೂ ಈಕೆ ಅಪ್ಪಟ ಭಾರತೀಯಳು. ಅದರಲ್ಲೂ ಮುಂಬಯಿಯವಳು. ಎರಡೇ ಚಿತ್ರದಲ್ಲಿ ನಟಿಸಿದ್ದರೂ ಎರಡರಲ್ಲೂ ತನ್ನ ಛಾಪು ಮೂಡಿಸಿ ಭೇಷ್ ಎನಿಸಿಕೊಂಡಿದ್ದಾಳೆ. ಆದರೂ ಹೆಚ್ಚು ಚಿತ್ರಗಳು ಸಿಗದಿರುವುದಕ್ಕೆ ಕಾರಣ, ಡಯಾನ ಭಾರೀ ಚೂಸಿಯಾಗಿರುವುದು.
ಸಂಖ್ಯೆ ಮುಖ್ಯವಲ್ಲ, ಪಾತ್ರ ಮುಖ್ಯ ಎನ್ನುವ ಕಲಾವಿದರ ಸಾಲಿಗೆ ಸೇರಿದವಳು ಡಯಾನ. ಹೀಗಾಗಿ ಅವಳು ಬಾಲಿವುಡ್‌ನಲ್ಲಿ ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುತ್ತಾಳೆ. ಹಾಗೆಂದು ಅವಳಿಗೆ ಇದರಿಂದ ಬೇಸರವಿಲ್ಲ. ಸ್ಪರ್ಧೆಯಲ್ಲಿ ವಿಶ್ವಾಸವಿಲ್ಲದಿರುವುದರಿಂದ ಡಯಾನಳಿಗೆ ಅಂಕಿಸಂಖ್ಯೆಗಳು ಮುಖ್ಯವಾಗುವುದಿಲ್ಲವಂತೆ. ಅವಳು ಬಾಲಿವುಡ್‌ಗೆ ಎಂಟ್ರಿ ಕೊಟ್ಟಾಗ ಬಂದ ಉಳಿದ ನಟಿಯರೆಲ್ಲ ಈಗಾಗಲೇ ಏಳೆಂಟು ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಲವರು ಉಳಿದಿದ್ದಾರೆ ಹಾಗೂ ಉಳಿದವರು ಮರೆಗೆ ಸರಿದಿದ್ದಾರೆ. ಚಿತ್ರಗಳ ಸಂಖ್ಯೆ ಹೆಚ್ಚಿಸುವುದು ಮಾತ್ರ ಉದ್ದೇಶವಾಗಿದ್ದರೆ ಡಯಾನಾ ಕೂಡ ಹತ್ತಾರು ಚಿತ್ರಗಳಿಗೆ ನಾಯಕಿಯಾಗುತ್ತಿದ್ದಳು. ಆದರೆ ಭಿನ್ನ ಹಾದಿಯನ್ನು ಆರಿಸಿಕೊಂಡ ಕಾರಣ ಡಯಾನ ಅಪರೂಪವಾಗಿದ್ದಾಳೆ.
ಕಾಕ್‌ಟೈಲ್ ಮತ್ತು ಹ್ಯಾಪಿ ಭಾಗ್ ಜಾಯೇಗಿ ಡಯಾನ ನಟಿಸಿರುವ ಚಿತ್ರಗಳು. ಇದರಲ್ಲಿ ಹ್ಯಾಪಿ ಭಾಗ್ ಜಾಯೇಗಿ ಅವಳಿಗೆ ಹೆಸರು ತಂದುಕೊಟ್ಟ ಚಿತ್ರ. ಸ್ಟಾರ್‌ಗಳಿಲ್ಲದಿದ್ದರೂ ಹಿಟ್ ಆಗಿ ಗಮನ ಸೆಳೆದಿತ್ತು ಈ ಚಿತ್ರ. ಇದಕ್ಕೆ ಕಾರಣ ಚಿತ್ರದ ಕತೆ ಎನ್ನುತ್ತಾಳೆ ಡಯಾನ. ಈ ಮಾದರಿಯ ಕತೆಗಳು ಸಿಕ್ಕಿದರೆ ಮಾತ್ರ ಕಾಲ್‌ಶೀಟ್ ನೀಡುವ ಡಯಾನಾ ಈಗ ಲಕ್ನೊ ಸೆಂಟ್ರಲ್ ಎಂಬ ಇನ್ನೊಂದು ಭಿನ್ನ ಜಾಡಿನ ಚಿತ್ರದಲ್ಲಿ ನಟಿಸುತ್ತಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
CLP Meeting: ಜ.13ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!
Governer Meet CM: ಸಿ.ಟಿ.ರವಿ ಪ್ರಕರಣ: ಮುಖ್ಯಮಂತ್ರಿ ವರದಿ ಕೇಳಿದ ರಾಜ್ಯಪಾಲ ಗೆಹ್ಲೋಟ್
Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.