ಮಯೂರ ಲಾಸ್ಯದ ನೃತ್ಯಾರ್ಪಣಂ
Team Udayavani, Feb 10, 2017, 3:45 AM IST
ರಜತಪಥದ ಸಂಭ್ರಮೋತ್ಸವದಲ್ಲಿ ತೊಡಗಿಸಿಕೊಂಡಿರುವ ಉಡುಪಿ – ಕೊಡವೂರಿನ ನೃತ್ಯನಿಕೇತನ ಸಂಸ್ಥೆಯ ನೃತ್ಯ ಗುರುಗಳಾದ ವಿ| ಸುಧೀರ್ ಕೊಡವೂರು ಹಾಗೂ ವಿ| ಮಾನಸಿ ಸುಧೀರ್ ತಮ್ಮ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿನಿ ಕು| ಮಯೂರಿ ಜಿ. ಭಟ್ ಅವರ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನವನ್ನು ವಿದ್ವತೂ³ರ್ಣವಾಗಿ ಸಂಘಟಿಸಿ, ತಮ್ಮ ಸಂಸ್ಥೆ ನೃತ್ಯ ಪದ್ಧತಿಯ ಶಾಸ್ತ್ರೀಯ ಸೊಗಡನ್ನು ಎತ್ತಿ ಹಿಡಿಯುವುದರಲ್ಲಿ ಪರಿಶ್ರಮಿಸುತ್ತಿದೆ ಎಂಬುದನ್ನು ಸಾಬೀತುಪಡಿಸಿದರು.
ಪ್ರದರ್ಶನವು ನಾಟ್ಯಾಧಿದೇವತೆ ನಟರಾಜ, ರಂಗ ದೇವತೆಗಳು, ಗುರುಗಳು, ಹಿಮ್ಮೇಳ ಕಲಾವಿದರು ಹಾಗೂ ನೆರೆದ ರಸಿಕ ಬಾಂಧವರಿಗೆ ವಂದಿಸುತ್ತಾ ಕಾರ್ಯಕ್ರಮಕ್ಕೆ ಶುಭ ನಾಂದಿಯನ್ನು ಆಶಿಸುವ ಪುಷ್ಪಾಂಜಲಿ ಯಿಂದ ತೊಡಗಿತು. ಲಾಲಿತ್ಯಪೂರ್ಣ ಅಡವುಗಳು, ಮುಕ್ತಾಯಗಳು ಹಾಗೂ ವಿN°àಶನ ದ್ವಾದಶನಾಮ ಸ್ತೋತ್ರವನ್ನು ಒಳಗೊಂಡ ಚಂದ್ರ ಕೌಂಸ್ ರಾಗ, ಆದಿತಾಳದ ಈ ನೃತ್ಯ ಮಯೂರಿಯ ದೇಹ ಸೌಷ್ಟವಕ್ಕೆ ಒಪ್ಪುವ ಭಂಗಿಗಳು ಹಾಗೂ ರಂಗಚಲನೆಗಳಿಂದ ಒಪ್ಪವಾಗಿ ಮೂಡಿಬಂತು.
ಭರತನಾಟ್ಯ ಪ್ರದರ್ಶನದ ಕೇಂದ್ರಬಿಂದುವೆನಿಸಿದ ಪದವರ್ಣವು ಸಾಮಾನ್ಯವಾಗಿರುವ ನಾಯಕಿ ಭಾವದ ಶೈಲಿಯಲ್ಲಿರದೆ ವಿಭಿನ್ನವಾಗಿತ್ತು. ಉಡುಪಿಯ ಶತಾವಧಾನಿ ರಾಮನಾಥ ಆಚಾರ್ಯರ ಪರಿಕಲ್ಪನೆಯ, ಮಹಾಭಾರತದಲ್ಲಿ ಸಂಪೂರ್ಣ ಪುರುಷ ಲಕ್ಷಣಗಳಿಂದ ಕಂಗೊಳಿಸುವ, ನವರಸ ಸಮ್ಮಿಳಿತ ಪಾತ್ರವಾದ ನವರಸ ಭೀಮ ಎಂಬ ವಿನೂತನ ಶೈಲಿಯ ಪದವರ್ಣವು ಭೀಮನ ಧೀಮಂತ ವ್ಯಕ್ತಿತ್ವವನ್ನು ಪ್ರತಿಫಲಿಸುವಲ್ಲಿ ಯಶಸ್ವಿಯಾಯಿತು. ಚಿಕ್ಕಂದಿನಲ್ಲಿ ದುರ್ಯೋಧನನ ಕುಟಿಲತೆ ಯಿಂದ ವಿಷ ಸರ್ಪಗಳಿಂದ ಸುತ್ತುವರಿಯಲ್ಪಟ್ಟಾಗ ಉಂಟಾದ ಅರೆಕ್ಷಣದ ಭಯ, ಸೌಗಂಧಿಕಾಪಹರಣದ ಶೃಂಗಾರ, ಅರಗಿನ ಮನೆಯ ಅಗ್ನಿ ಪ್ರಕೋಪದಿಂದ ಅಮ್ಮ, ಸಹೋದರರನ್ನು ರಕ್ಷಿಸುವ ಅದ್ಭುತ, ಬಂಡಿಯ ಸಂಪೂರ್ಣ ಖಾದ್ಯಗಳನ್ನು ಮುಕ್ಕುವಾಗಿನ ಹಾಸ್ಯ, ಬಕಾಸುರ ವಧೆಯ ಸಂದರ್ಭದಲ್ಲಿ ಬ್ರಾಹ್ಮಣ ಕುಟುಂಬದ ಮೇಲೆ ತೋರಿದ ಕರುಣೆ, ಕೀಚಕನನ್ನು ವಧಿಸಿದಾಗಿನ ರೌದ್ರ, ಜರಾಸಂಧನ ವಧೆಯಲ್ಲಿ ತೋರಿದ ವೀರ, ಕುರುಕ್ಷೇತ್ರದಲ್ಲಿ ದುಶಾÏಸನ, ದುರ್ಯೋಧನ ವಧೆಯ ಸಂದರ್ಭದಲ್ಲಿ ಮೆರೆದ ಭೀಭತ್ಸ ಹಾಗೂ ಕೃಷ್ಣ ಪ್ರಜ್ಞೆಯನ್ನು ಜಾಗೃತಗೊಳಿಸಿ ತನ್ನ ಅವತಾರದ ಕಾರ್ಯ ಮುಗಿಸಿದಾಗ ಉಂಟಾದ ಶಾಂತಭಾವ- ಭೀಮನ ಜೀವನದಲ್ಲಿ ಘಟಿಸಿದ ಸನ್ನಿವೇಶಗಳÇÉಾದ ನವರಸೋತ್ಪತ್ತಿಯ ಅಭಿನಯವನ್ನು ಮನೋಧರ್ಮಗಳ ಸಂಚಾರಿ ಹಾಗೂ ಸಮರ್ಪಕವಾದ ನೃತ್ತ ಜತಿಗಳಿಂದ ಹಾಗೂ ಸಂಚಲನೆಗಳಿಂದ ಮಯೂರಿ ಚೆನ್ನಾಗಿಯೇ ಪ್ರಸ್ತುತಪಡಿಸಿದರು.
ಇದರ ನೃತ್ಯ ಸಂಯೋಜನೆ ಔಚಿತ್ಯಪೂರ್ಣವಾಗಿತ್ತು. ಏಕವ್ಯಕ್ತಿ ರೂಪಕಕ್ಕೆ ಹೆಚ್ಚು ತಕ್ಕುದಾದ ಮತ್ತು ವ್ಯಾಪಕವಾದ ಸಂಚಾರಿಗಳ ಜೋಡಣೆಗೆ ಅವಕಾಶವಿರುವ ಈ ಸಾಹಿತ್ಯವು ಪದವರ್ಣದ ಸಂಯೋಜನೆಗೆ ತುಸು ಭಾರವಾಯೊ¤à ಎಂದೆನಿಸಿತು. ಆದರೆ ಮಯೂರಿ ತನ್ನ ಅಭಿನಯ ಸಾಮರ್ಥ್ಯ ದಿಂದ ಈ ವರ್ಣಕ್ಕೆ ನ್ಯಾಯ ಒದಗಿಸಿದಳು. ಈ ವರ್ಣಕ್ಕೆ ರಾಗಮಾಲಿಕೆಯ ಸಂಗೀತ ಸಂಯೋಜನೆಗೈದ ಖ್ಯಾತ ವಯಲಿನ್ ವಾದಕ ವಿ| ಪ್ರಾದೇಶ್ ಆಚಾರ್ ಬೆಂಗಳೂರು ಶ್ಲಾಘÂರು.
ಮುಂದೆ ತುಳಸೀದಾಸರ ಪ್ರಸಿದ್ಧ ಭಜನ್ ನೃತ್ಯ ಪ್ರಸ್ತುತಿಯಲ್ಲಿ ಮಯೂರಿ ದಾಸರ ಕಲ್ಪನೆಯ ವಿವಿಧ ರೂಪ ಸನ್ನಿವೇಶಗಳನ್ನು ಪುಟ್ಟ ಸಂಚಾರಿ ಅಭಿನಯಗಳಿಂದ ಪ್ರದರ್ಶಿಸಿದಳು. ಈ ನೃತ್ಯ ಹೊಸ ಪರಿಕಲ್ಪನೆಯಿಂದಾಗಿ ರಂಜಿಸಿತು. ಪ್ರೇಮಕವಿ ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರ “ನೀ ಇರದೇ…’ ಎಂಬ ವಿರಹ ಗೀತೆಯ ಅಭಿನಯ ಗುರುಗಳ ಪ್ರಯೋಗಶೀಲತೆಗೆ ಸಾಕ್ಷಿಯಾಯಿತು. ವಿವಿಧ ಭಾವಗಳನ್ನು ಚುರುಕಾಗಿ ಹಾಡಿನ ಅಂತಃಸತ್ವವಾದ ವಿರಹದ ಸ್ಥಾಯೀಭಾವಕ್ಕೆ ಕುಂದಾಗದಂತೆ ಪ್ರಕಟಿಸಿ, ಕೊನೆಗೆ ರಾಧೆ ತನ್ನÇÉೇ ಕೃಷ್ಣನನ್ನು ಕಂಡುಕೊಳ್ಳುವ ಅನುಭೂತಿಯನ್ನು ಪ್ರಕಟಿಸುವಲ್ಲಿ ಮಯೂರಿಯ ಪ್ರಯತ್ನ ಸ್ತುತ್ಯರ್ಹ. ಆಹಿರ್ ಭೈರವ್ ರಾಗಭಾವ ದೀಪಕ್ ಹೆಬ್ಟಾರರ ಕೊಳಲಿನಲ್ಲಿ ಮಧುರವಾಗಿ ಧ್ವನಿಸಿತು. ಮಯೂರಿ ಪ್ರದರ್ಶನ ವನ್ನು ಪೂರ್ವಿ ರಾಗ, ಟಿ. ವೈದ್ಯನಾಥ ಭಾಗವತರ ರೂಪಕ ತಾಳದ ತಿಲ್ಲಾನದೊಂದಿಗೆ ಸಮಾಪನಗೊಳಿಸಿದಳು. ವಿಶಿಷ್ಟ ಸ್ವರ, ಶೊಲ್ಕಟ್ಟು , ಸಾಹಿತ್ಯವಿರುವ ಈ ತಿಲ್ಲಾನ ದ್ರುತಗತಿಯ ಚಲನೆ, ಮೈಯಡವು, ರಂಗಾಕ್ರಮಣಗಳಿಂದ ಶೋಭಿಸಿತು.
ಪ್ರದರ್ಶನವು ಶುದ್ಧ ಸಂಪ್ರದಾಯ ಪದ್ಧತಿಯಲ್ಲಿದ್ದು, ಮಯೂರಿಯ ಪ್ರತಿಭೆಯನ್ನು ಪ್ರಕಟಿಸಿತು. ನೀಳಕಾಯದ ಈ ತರುಣಿ ತನ್ನ ಅಂಗಶುದ್ಧಿ, ಹಸ್ತ ಕ್ಷೇತ್ರಗಳ ವಿನ್ಯಾಸ, ಅಡವುಗಳ ಬಗ್ಗೆ ಇನ್ನಷ್ಟು ಕಾಳಜಿ ಪಕ್ವತೆ ವಹಿಸುವುದು ಅವಶ್ಯ. ಅಭಿನಯದ ಪ್ರೌಢತೆ ಇವಳ ಪ್ರಧಾನ ಗುಣ. ಗುರು ವಿ| ಸುಧೀರ್ ಅವರ ನಟ್ಟುವಾಂಗ, ಎ. ಸ್ವರಾಗ್ ಅವರ ಮಧುರಗಾನ, ದೇವೇಶರ ಮೃದಂಗ, ದೀಪಕ್ ಅವರ ಸುಶ್ರಾವ್ಯ ಕೊಳಲುವಾದನ ಹಾಗೂ ಶ್ರೀಧರ್ ಆಚಾರ್ಯರ ವಯಲಿನ್ ವಾದನ ನೃತ್ಯದ ಗಟ್ಟಿತನವನ್ನು ಕಾಪಾಡಿತು. ಪ್ರಸಾಧನದ ಪ್ರಕಾಶ್ ಕೆ., ಧ್ವನಿ ಬೆಳಕಿನ ಚಿತ್ತಾರಗೈದ ಐತಾಳ್ ಬಂಧುಗಳು, ಇಡೀ ಪ್ರದರ್ಶನಕ್ಕೆ ಬೆನ್ನೆಲುಬಾಗಿ ನಿಂತ ಗುರು ಮಾನಸಿ ಸುಧೀರ್ ಧನ್ಯರು.
ವಿ| ಪ್ರತಿಭಾ ಎಲ್. ಸಾಮಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jasprit Bumrah ಬೌಲಿಂಗ್ ಶೈಲಿಯನ್ನೇ ಶಂಕಿಸಿದ ಆಸೀಸ್ ಮಾಧ್ಯಮಗಳು!
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.