ಸುನಾದದಲ್ಲಿ ಸಂಗೀತೋತ್ಸವ


Team Udayavani, Feb 10, 2017, 3:45 AM IST

10-KALA-2.jpg

ಕಲೆ ಮನವನ್ನು ಅರಳಿಸಬೇಕು ಎಂಬ ಮೂಲ ಆಶಯದೊಂದಿಗೆ ಹುಟ್ಟಿಕೊಂಡದ್ದು ಸುನಾದ ಸಂಗೀತ ಶಾಲೆಯ ಸಂಗೀತೋತ್ಸವ. ಸುನಾದ ಸಂಗೀತ ಶಾಲೆಯ ಪುತ್ತೂರು ಶಾಖೆ ಜ.14 ಹಾಗೂ 15ರಂದು ಬಹಳ ವಿಜೃಂಭಣೆಯಿಂದ ಎರಡು ದಿನಗಳ ಕಾಲ ಸಂಗೀತೋತ್ಸವವನ್ನು ಆಚರಿಸಿಕೊಂಡಿತು. ಶಾಲೆಯ ನಿರ್ದೇಶಕ ಹಾಗೂ ಗುರು ವಿ| ಕಾಂಚನ ಎ. ಈಶ್ವರ ಭಟ್‌ ಇವರ ಮಾರ್ಗದರ್ಶನದಲ್ಲಿ ಜರಗಿದ ಈ ಉತ್ಸವದಲ್ಲಿ ಸಂಗೀತ ಶಾಲೆಯ ಎಲ್ಲ ವಿದ್ಯಾರ್ಥಿಗಳೂ ವೇದಿಕೆಯನ್ನೇರಿ ತಮ್ಮ ಕಲಾ ಪ್ರೌಢಿಮೆಯನ್ನು ಮೆರೆದುದು ವಿಶೇಷ. ಈ ಎರಡೂ ದಿನ ಬೆಳಗ್ಗಿನಿಂದ ಸಂಜೆಯವರೆಗೆ ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮ ನಡೆದರೆ, ಇಳಿಸಂಜೆ ಖ್ಯಾತ ಕಲಾವಿದರು ಕಛೇರಿ ನೀಡುವುದು ರೂಢಿ. 

ಮೊದಲ ದಿನ ಸಂಜೆ ಸಂಗೀತೋತ್ಸವದ ಪ್ರಧಾನ ಕಛೇರಿಯನ್ನು ನಡೆಸಿಕೊಟ್ಟವರು ವಿ| ಶೆರ್ತೆಲೈ ರಂಗನಾಥ ಶರ್ಮ ಮಧುರೈ. ಇವರಿಗೆ ವಯಲಿನ್‌ನಲ್ಲಿ ವಿ| ಟಿ. ಎಚ್‌. ಸುಬ್ರಹ್ಮಣ್ಯಂ, ಮೃದಂಗದಲ್ಲಿ ವಿ| ಕಾಂಚನ ಎ. ಈಶ್ವರ ಭಟ್‌, ಘಟಂನಲ್ಲಿ ವಿ| ಉಡುಪಿ ಶ್ರೀಧರ್‌ ತ್ರಿವೇಂಡ್ರಂ  ಇವರು ಸಾಥ್‌ ನೀಡಿದರು. ಬಹುದಾರಿ ರಾಗದ ಸುಂದರವಾದ ವರ್ಣ ಎಂತೋ ಪ್ರೇಮದಿಂದ ಆರಂಭಗೊಂಡ ಕಛೇರಿ ಗಣಪತಿ ಸ್ತುತಿ ಗಣನಾಯಕಂ ಭಜೇ (ರುದ್ರಪ್ರಿಯ)ಯೊಂದಿಗೆ ಮುಂದುವರಿಯಿತು. ಮುಂದೆ ಧೇನುಕ ರಾಗದಲ್ಲಿ ಚುಟುಕಾದ ರಾಗ, ಸ್ವರ ಕಲ್ಪನೆಯೊಂದಿಗೆ ಮೂಡಿಬಂದ ತೆಲಿಯಲೇರು ರಾಮ ಕಛೇರಿಗೆ ಉತ್ತಮವಾದ ವೇಗವನ್ನು ಒದಗಿಸಿಕೊಟ್ಟಿತು. ಬಹಳ ಗಂಭೀರವಾಗಿ ವಿಳಂಬ ಲಯದಲ್ಲಿ ಮೂಡಿಬಂದ ದರ್ಬಾರ್‌ ರಾಗದ ಕೃತಿ ಮುಂದುವೆನುಗಾ ಕಲಾವಿದರ ಕಲಾ ಪ್ರೌಢಿಮೆಗೆ ಸಾಕ್ಷಿಯಾಯಿತು. ಹಂಸಾನಂದಿ ರಾಗದ ಸಚಾಮರ ರಮಾವಾಣಿ ಸುಂದರವಾದ ಆಲಾಪನೆಯ ಪೋಷಣೆಯೊಂದಿಗೆ ಆರಂಭಗೊಂಡು ಮುಂದೆ ಪಲ್ಲವಿಯ ಸಾಲುಗಳೇ ನೆರವಲ್‌ಗೆ ಒಳಪಟ್ಟು ವಾದಿ-ಸಂವಾದಿ ಸ್ವರಗಳಿಂದ ಅಲಂಕರಿಸಲ್ಪಟ್ಟ ಸ್ವರಗಳೊಂದಿಗೆ ಕೇಳುಗರನ್ನು ಭಕ್ತಿ ಭಾವದಲ್ಲಿ ಮುಳುಗೇಳಿಸಿತು. 

ಕಾರ್ಯಕ್ರಮದ ಪ್ರಧಾನ ಪ್ರಸ್ತುತಿಯಾಗಿ ಮೂಡಿಬಂದ ಪರಾಕು ಮಾಡದೆ (ಖರಹರಪ್ರಿಯ) ಸಾಹಿತ್ಯ ಶುದ್ಧಿ, ರಾಗ ಸೌಖ್ಯದಿಂದ ಸಂಗೀತ ರಸಿಕರಿಗೆ ಕರ್ಣಾನಂದವನ್ನುಂಟು ಮಾಡಿತು. ನರರೊಳು ಪಾಮರನು ನಾನು ಎಂಬ ಸಾಹಿತ್ಯ ಭಾಗವು ನೆರವಲ್‌ಗೆ ಒಳಪಟ್ಟು ಸಭೆಯಲ್ಲಿ ಶರಣಾಗತಭಾವ ಲಹರಿಯನ್ನು ಪಸರಿಸಿತು. ಇದರೊಂದಿಗೆ ಮೂಡಿಬಂದ ತನಿ ಆವರ್ತನವು ದಿನದ ಮಾಸ್ಟರ್‌ ಪೀಸ್‌. ಲಯದ ಖಚಿತತೆ ನಾದಮಯವಾಗಿ ಮೂಡಿಬಂದರೆ ಲಯವಾದನ ಮನಕ್ಕೆ ಹೇಗೆ ತಂಪೆರೆಯಬಲ್ಲದು ಎಂಬುದನ್ನು ಮೃದಂಗ ಹಾಗೂ ಘಟ ವಾದ್ಯಗಳ ತನಿ ಆವರ್ತನ ತೋರಿಸಿಕೊಟ್ಟಿತು. ತದನಂತರ ದೇವರನಾಮಗಳೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು. ಸುಖವಾದ ವಯಲಿನ್‌ ಸಾಥ್‌ ಕಛೇರಿಯ ಯಶಸ್ಸಿಗೆ ಪೂರಕವಾಗಿ ಕಿಕ್ಕಿರಿದು ನೆರೆದ ಕಲಾರಸಿಕರಿಗೆ ಸಂಗೀತ ಸುಧೆಯುಣಿಸಿತು.

ಎರಡನೇ ದಿನದಂದು ದಿನದ ಪ್ರಧಾನ ಗಾಯನ ಕಾರ್ಯಕ್ರಮ ನಡೆಸಿಕೊಟ್ಟವರು ವಿ| ವಾಣೀ ಸತೀಶ್‌ ಬೆಂಗಳೂರು. ಅಪರೂಪದ ವನಜಾಕ್ಷ (ಮಂದಾರಿ ರಾಗ, ಆದಿತಾಳ) ವರ್ಣದೊಂದಿಗೆ ಕಛೇರಿಯನ್ನು ಆರಂಭಿಸಿದ ಇವರು ಅಖೀಲಾಂಡೇಶ್ವರಿಯ ಪ್ರಸ್ತುತಿಯೊಂದಿಗೆ ಕಛೇರಿ ಭಕ್ತಿರಸದೊಂದಿಗೆ ಗಂಭೀರವಾಗಿ ಮುಂದುವರಿಯುವ ಸೂಚನೆಯನ್ನು ನೀಡಿದರು. ಚುರುಕು ಗತಿಯಲ್ಲಿ ಮುಂದೆ ಚಂದ್ರಕೌನ್ಸ್‌ ರಾಗದಲ್ಲಿ ಚಂದ್ರಶೇಖರಂ ಕೃತಿ ಪ್ರಸ್ತುತಿಗೊಂಡ ಬಳಿಕ ತ್ಯಾಗರಾಜರ ಪ್ರಸಿದ್ಧ ಕೃತಿ ರಾಮ ನೀ ಸಮಾನಮೆವರು ಉತ್ತಮ ರಾಗಾಲಾಪನೆ, ನೆರವಲ್‌ ಹಾಗೂ ಸ್ವರಪ್ರಸ್ತಾರಗಳ ಮೂಲಕ ಸುಂದರವಾಗಿ ಮೂಡಿಬಂತು. 

ಕಲಾವಿದರು ಕಛೇರಿಯ ಪ್ರಧಾನ ರಾಗವಾಗಿ ಕಾಂಭೋಜಿಯನ್ನು ಎತ್ತಿಕೊಂಡು ರತ್ನ ಕಂಚುಕಧಾರಿಣಿಯನ್ನು ಪ್ರಸ್ತುತಪಡಿಸಿದರು. ಬಹಳ ಗಂಭೀರ ರಾಗವನ್ನು ಸಮರ್ಥ ವಾಗಿ ನಿರ್ವಹಿಸಿ ಕ್ಲಿಷ್ಟ ಸ್ವರಕಲ್ಪನೆಗಳೊಂದಿಗೆ ಕೃತಿಯನ್ನು ಪೋಷಿಸಿದ ಪರಿ ಅನನ್ಯವಾಗಿತ್ತು. ಎಂತ ದಯವಂತನೋ, ಕ್ಷೀರಾಬ್ಧಿ ಕನ್ನಿಕೆ, ಮನವ ಶೋಧಿಸಬೇಕು ಮೊದಲಾದ ಪ್ರಸಿದ್ಧ ಕೀರ್ತನೆಗಳನ್ನು ಪ್ರಸ್ತುತಪಡಿಸಿದ ಕಲಾವಿದೆ ಭಕ್ತಿ ಹಾಗೂ ಗಾಂಭೀರ್ಯ ಸಮರಸಗೊಂಡಾಗ ಕಲೆ ಮನವನ್ನು ಅರಳಿಸಬಲ್ಲುದು ಎಂಬುದನ್ನು ನಿರೂಪಿಸಿಕೊಟ್ಟರು. ಅಪರೂಪದ ರೇವತಿ ರಾಗದ ರಾಗಮಾಲಿಕೆ ಒಳಗೊಂಡ ತಿಲ್ಲಾನದೊಂದಿಗೆ ಕಛೇರಿ ಸಂಪನ್ನಗೊಂಡಿತು. 

ಎರಡೂ ದಿನಗಳಂದು ನಿರಂತರವಾಗಿ ನಡೆದ ಅನ್ನ ದಾಸೋಹ, ಸಂಗೀತ ದಾಸೋಹ, ಶಿಸ್ತುಬದ್ಧವಾಗಿ ನಡೆದ ಕಾರ್ಯಕ್ರಮ ಗುರು ವಿ| ಕಾಂಚನ ಎ. ಈಶ್ವರ ಭಟ್‌ ಅವರ ಸಂಘಟನಾ ಚತುರತೆಗೆ, ಕತೃìತ್ವ ಶಕ್ತಿಗೆ ಹಿಡಿದ ಕೈಗನ್ನಡಿಯಾಯಿತು. ಶಾಲೆಯ ವಿದ್ಯಾರ್ಥಿಗಳಾದ ದತ್ತಾತ್ರೇಯ ರಾವ್‌, ವಿ| ಮಾಲತಿ, ವಿ| ಶಿಲ್ಪಾ, ಕು| ಧನ್ಯತಾ, ಕು| ಧನ್ಯಶ್ರೀ, ಸಂಧ್ಯಾ, ಕು| ಸಾಯಿಲಕ್ಷ್ಮೀ, ಕು| ಚೈತ್ರಶ್ರೀ, ಕು| ಹರ್ಷಿತಾ, ರಾಕೇಶಕೃಷ್ಣ ಮೊದಲಾದವರು ವಿವಿಧ ಕಾರ್ಯಕ್ರಮಗಳನ್ನು ನಿರೂಪಿಸಿ ನಿರ್ವಹಿಸಿದರು. ಎರಡೂ ದಿನಗಳ ಕಾರ್ಯಕ್ರಮ ಪುತ್ತೂರಿನ ವಸತಿಯುತ ಶಾಲೆಯ ಆವರಣದಲ್ಲಿ ನಡೆಯಿತು. ಕಲೆ ಹೃದಯಗಳನ್ನು ಬೆಸೆಯುವಲ್ಲಿ, ಮನವನ್ನು ಅರಳಿಸುವಲ್ಲಿ ಅದ್ಭುತವಾದ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಸಂಗೀತೋತ್ಸವ ನಿರೂಪಿಸಿಕೊಟ್ಟಿತು.

ಸುನಾದ ಪ್ರಿಯ

ಟಾಪ್ ನ್ಯೂಸ್

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.