ಚಂದನ್‌ ಮಧುರ ಮುರಳೀ ನಾದ

Team Udayavani, Feb 10, 2017, 3:45 AM IST

10-KALA-7.jpg

ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಸಂಗೀತ ವಿದ್ಯಾಲಯದ 20ನೆಯ ವಾರ್ಷಿಕೋತ್ಸವದ ಅಂಗ ವಾಗಿ ನಗರದ ಲಲಿತಕಲಾ ಸದನದಲ್ಲಿ ಈಚೆಗೆ ಜರಗಿದ ಮೈಸೂರು ಎ. ಚಂದನ್‌ಕುಮಾರ್‌ ಅವರ ವೇಣುವಾದನ ಕಛೇರಿ ರಸಿಕರಿಗೆ ರಸಾನುಭೂತಿಯನ್ನು ನೀಡಿತು. ಮಾಧುರ್ಯಭರಿತ ಗಾಯಕಿ ಶೈಲಿಯ ವಾದನ ಇವರದು. ಮೊದಲಿಗೆ ಷಣ್ಮುಖಪ್ರಿಯ ರಾಗ, ಆದಿತಾಳದ ಓಂಕಾರ ಪ್ರಣವ ಎಂಬ ವರ್ಣದಲ್ಲಿ ಕಿರು ಆಲಾಪನೆಯೊಂದಿಗೆ ತೊಡಗಿಸಿಕೊಂಡು ಆಕರ್ಷಕ ಸ್ವರ ಪ್ರಸ್ತಾರಗಳಿಂದ ಚುರುಕಾಗಿ ಪ್ರಸ್ತುತಿಗೊಳಿಸಿದರು. ನಾಟ ರಾಗದ, ದೀಕ್ಷಿತರ ಮಹಾಗಣಪತಿಂ ಕೃತಿಯನ್ನು ಮುಂದಿಟ್ಟುಕೊಂಡು ಮಹಾಕಾವ್ಯ ನಾಟಕಾದಿ ಪ್ರಿಯಂ ಎಂಬಲ್ಲಿ ನೀಡಿದ ಮನೋಜ್ಞವಾದ ಮನೋಧರ್ಮ ಸ್ವರ ವಿನ್ಯಾಸಗಳು ಚೇತೋಹಾರಿಯಾಗಿದ್ದು, ಕೃತಿ ಸುಂದರವಾಗಿ ಮೂಡಿಬಂತು. ಅನಂತರ ನುಡಿಸಿದ ತ್ಯಾಗರಾಜರ ಪಂಚರತ್ನದ ಸಾದಿಂಚನೇ ತುಸು ವೇಗವಾಗಿಯೇ ಮೂಡಿ ಬಂತು. ತ್ಯಾಗರಾಜ ಸ್ವಾಮಿಗಳ ಪೂರ್ವಿಕಲ್ಯಾಣಿ ರಾಗದ ಧ್ಯಾನಮು ಸಖರಾದ ಕೃತಿಗೆ ನೀಡಿದ ರಾಗಾಲಾಪನೆ ಅತ್ಯಂತ ಸೌಖ್ಯಪ್ರದವಾಗಿದ್ದು, ಕೃತಿಯ ಪ್ರಸ್ತುತಿಯಂತೂ ಉಲ್ಲಾಸಭರಿತವಾಗಿತ್ತು. ಪರಮಾತುಡು ಜೀವಾತುಡು ಎಂಬಲ್ಲಿ ಒದಗಿಸಿದ ನೆರವಲ್‌ ವಿವಿಧ ಭಾವಗಳನ್ನು ಸೃಷ್ಟಿಸಿತು. ಕಲ್ಪನಾ ಸ್ವರಗಳ ಸಂಯೋಜನೆ ಮತ್ತು ಚಮತ್ಕಾರಿಕ ವಿನ್ಯಾಸಗಳಿಂದ ಚಂದನ್‌ ಸಭಿಕರನ್ನು ಕುತೂಹಲಭರಿತರನ್ನಾಗಿಸಿದರು.

ನಿರವದಿ ಸುಖದಾ ನವರಸ ಕನ್ನಡ ರಾಗದಲ್ಲಿ ಲವಲವಿಕೆ ಯಿಂದ ಮೂಡಿ ಬಂತು. ರಂಜನಿ ರಾಗಮಾಲಿಕೆಯ ರಂಜಿನಿ, ಶ್ರೀರಂಜಿನಿ, ಮೇಘರಂಜಿನಿ ಮತ್ತು ಜನರಂಜಿನಿ ರಾಗಗಳಿಗೆ ಒಂದೊಂದಕ್ಕೂ ಪ್ರತ್ಯೇಕವಾಗಿ ಒದಗಿಸಿದ ಮನೋಧರ್ಮ ಸ್ವರಗಳು ಪ್ರೌಢಿಮೆಯಿಂದ ಕೂಡಿದ್ದು ಕಲಾವಿದರ ಪರಿಶ್ರಮ ವನ್ನು ಅನಾವರಣಗೊಳಿಸಿತು. ಕದನ ಕುತೂಹಲ ರಾಗ, ಆದಿ ತಾಳದ ರಘುವಂಷ ಸುಧಾಂಬುದಿಯಲ್ಲಿ ಚಂದನ್‌ ಕುಮಾರ್‌ ತೋರಿದ ಚಾಕಚಕ್ಯತೆಯ ಸ್ವರ ಪ್ರಯೋಗ ಆಕರ್ಷಕವಾಗಿತ್ತು. 

ಅಂದಿನ ಕಾರ್ಯಕ್ರಮದಲ್ಲಿ ಕಲಾವಿದರು ಪ್ರಧಾನ ವಾಗಿ ಆಯ್ದುಕೊಂಡದ್ದು ತ್ಯಾಗರಾಜರ ಕಾಪಿ ರಾಗ ಚೌಕ ಕಾಲದ ಇಂಥ ಸೌಖ್ಯಮನೀಸೆ ಕೃತಿ. ಸ್ಥಾಯಿತ್ವದ ಭದ್ರ ನೆಲೆ ಗಟ್ಟಿನ ದೀರ್ಘ‌ ರಾಗಾಲಾಪನೆಯ ಸಂಚಾರದ ಅಪೂರ್ವ ಪ್ರಯೋಗಗಳಿಂದ ಶ್ರೀಮಂತಗೊಳಿಸಿ ಕೃತಿಯನ್ನು ಅತ್ಯಂತ ಸುಂದರವಾಗಿ ನಿರೂಪಿಸಿದರು. ಉಪಾಂಗ ರಾಗವಾದ ಕಾಪಿಯಲ್ಲಿನ ಅನ್ಯಸ್ವರಗಳನ್ನೇ ಪ್ರಧಾನವಾಗಿಸಿ ಜೀವಸ್ವರ ಗಳಾಗಿ ಮನೋಧರ್ಮವನ್ನು ಶ್ರೇಷ್ಠ ರೀತಿಯಲ್ಲಿ ಮುಂದಿಟ್ಟ ಕಲಾವಿದರು ಸ್ವರ ಪ್ರಸ್ತಾರವನ್ನು ಉತ್ತುಂಗಕ್ಕೇರಿಸಿದರು. ಬೆಹಾಗ್‌ ರಾಗದ ಸಾರಮೈನ ಮಾಟಬೆಂತು ಎಂಬ ಸ್ವಾತಿ ತಿರುನಾಳ್‌ ಕೃತಿ ಮಧುರ ವಾಗಿತ್ತು. ಅಲೈಪಾಯುದೇ ಕಣ್ಣಾ ಕಾನಡ ರಾಗದಲ್ಲಿ ಲಯಬದ್ಧತೆಯೊಂದಿಗೆ ಮುದ ನೀಡಿತು. ಧನಶ್ರೀ ರಾಗದ ತಿಲ್ಲಾನ ಚುರುಕಾಗಿದ್ದು ಮಂಗಳದೊಂದಿಗೆ ಕಛೇರಿ ಮುಕ್ತಾಯಗೊಂಡಿತು. ವಯಲಿನ್‌ನಲ್ಲಿ ಸಾಥ್‌ ನೀಡಿದ ಯುವ ಕಲಾವಿದ ಬಿ. ವಿಠಲ್‌ ರಂಗನ್‌ ಕಛೇರಿ ಯುದ್ದಕ್ಕೂ ವಿದ್ವತ್‌ಪೂರ್ಣ ವಾದನದಿಂದ ಗಮನಸೆಳೆದರು. ಮೃದಂಗದಲ್ಲಿ ಎಚ್‌.ಎಸ್‌. ಸುಧೀಂದ್ರ ಅವರ ನಿರ್ವಹಣೆ ಕಾರ್ಯಕ್ರಮದ ಯಶಸ್ಸಿಗೆ ಪೂರಕವಾಗಿತ್ತು. ಘಟಂನಲ್ಲಿ ಬಿ.ಎಸ್‌. ರಾಮಾನುಜಂ ಸಹಕರಿಸಿದರು. 

ಇದಕ್ಕೂ ಮುನ್ನ ಶ್ರೀ ಗೋಪಾಲಕೃಷ್ಣ ಸಂಗೀತ ವಿದ್ಯಾಲಯದ ಗುರು ವಿ| ಉಷಾ ಈಶ್ವರ ಭಟ್ಟರ ಮಾರ್ಗದರ್ಶನದಲ್ಲಿ ತಯಾರಾಗಿರುವ ಸಂಗೀತ ವಿದ್ಯಾರ್ಥಿಗಳು ಸಂಗೀತೋಪಾಸನೆ ನಡೆಸಿದರು. 

ಕೃಷ್ಣ ರಂಜನಿ, ಕಾಸರಗೋಡು

ಟಾಪ್ ನ್ಯೂಸ್

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

National Mourning: Postponement of Mangaluru Beach Festival

National Mourning: ಮಂಗಳೂರಿನ ಬೀಚ್‌ ಉತ್ಸವ ಮುಂದೂಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1(1

Puttur ನಗರಕ್ಕೂ ಬೇಕು ಟ್ರಾಫಿಕ್‌ ಸಿಗ್ನಲ್‌

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

3-ptr

Puttur: ಪೆನ್‌ ಪಾಯಿಂಟ್‌ ಕ್ರಿಕೆಟ್‌: ಸತತ 2ನೇ ಬಾರಿ ಬ್ಲೂ ಹಂಟರ್ಸ್‌ ಚಾಂಪಿಯನ್ಸ್‌

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.