ಬ್ಯಾಕ್ ಟು ಬ್ಯಾಕ್ ಸಂಗೀತ, ನುಡಿಯುವ ಮಾತೆಲ್ಲಾ…
Team Udayavani, Feb 10, 2017, 3:45 AM IST
ಸಂಗೀತಾ ಭಟ್ ಬೋಲ್ಡ್ ಆಗಿ ಖಾಲಿ ಬೆನ್ನು ತೋರಿಸಿದ್ದಾರೆ. ಕನ್ನಡದ ನಟಿಯಾಗಿ ಈ ತರಹದ ಒಂದು ನಿರ್ಧಾರ ಮಾಡಿರುವ ಬಗ್ಗೆ ಅನೇಕರು ಅಚ್ಚರಿಪಟ್ಟಿದ್ದಾರೆ ಕೂಡಾ. ಆದರೆ, ಸಂಗೀತಾ ಭಟ್‌ಗೆ ಮಾತ್ರ ಈ ತರಹದ ಒಂದು ನಿರ್ಧಾರದ ಬಗ್ಗೆ ಯಾವುದೇ ಬೇಸರವಾಗಲೀ, ಅಂಜಿಕೆಯಾಗಲೀ ಇಲ್ಲ.
“ಗೋಧಿ ಬಣ್ಣ ಮುದ್ದಾದ ಮೈ ಕಟ್ಟು …’
– ಸಂಗೀತಾ ಭಟ್‌ನ ಕಂಡಾಗ ಈಗ ಈ ತರಹದ್ದೊಂದು ಡೈಲಾಗ್ ಹೇಳಿ ಸ್ಮೈಲ್ ಕೊಡುವ ಜನ ಹೆಚ್ಚಾಗಿದ್ದಾರೆ. ಸಂಗೀತಾ ಕೂಡಾ ಅದನ್ನು ಪಾಸಿಟಿವ್ ಆಗಿಯೇ ತೆಗೆದುಕೊಳ್ಳುತ್ತಾರೆ. ಅವರಿಗೆ ಯಾವ ಬೇಜಾರೂ ಇಲ್ಲ. ಜನ ಗುರುತಿಸುತ್ತಿದ್ದಾರೆಂಬ ಖುಷಿಯಂತೂ ಇದ್ದೇ ಇದೆ. ಈ “ಮುದ್ದಾದ ಮೈ ಕಟ್ಟು’ಗೆ ಕಾರಣವಾಗಿರೋದು ಸಂಗೀತಾ ಭಟ್‌ನ ಬೋಲ್ಡ್‌ನೆಸ್. ನೀವು “ಎರಡನೇ ಸಲ’ ಚಿತ್ರದ ಟ್ರೇಲರ್ ನೋಡಿದ್ದರೆ ನಿಮಗೆ ಸಂಗೀತಾ ಭಟ್ ಅವರ ಬೋಲ್ಡ್‌ಸ್ಟೆಪ್ ಬಗ್ಗೆ ಗೊತ್ತಾಗುತ್ತದೆ. ಸಂಗೀತಾ ಭಟ್ ಬೋಲ್ಡ್ ಆಗಿ ಖಾಲಿ ಬೆನ್ನು ತೋರಿಸಿದ್ದಾರೆ. ಕನ್ನಡದ ನಟಿಯಾಗಿ ಈ ತರಹದ ಒಂದು ನಿರ್ಧಾರ ಮಾಡಿರುವ ಬಗ್ಗೆ ಅನೇಕರು ಅಚ್ಚರಿಪಟ್ಟಿದ್ದಾರೆ ಕೂಡಾ. ಆದರೆ, ಸಂಗೀತಾ ಭಟ್‌ಗೆ ಮಾತ್ರ ಈ ನಿರ್ಧಾರದ ಬಗ್ಗೆ ಯಾವುದೇ ಬೇಸರವಾಗಲೀ, ಅಂಜಿಕೆಯಾಗಲೀ ಇಲ್ಲ. ಕಾರಣ, ಚಿತ್ರದ ಪಾತ್ರ. ಒಂದು ಪಾತ್ರವನ್ನು ಒಪ್ಪಿಕೊಂಡ ಮೇಲೆ ಅದು ಬಯಸಿದ್ದನ್ನು ನೀಡೋದು ಕಲಾವಿದರ ಕರ್ತವ್ಯ ಎಂದು ನಂಬಿದವರು ಸಂಗೀತಾ ಭಟ್. ಅದಕ್ಕಿಂತ ಹೆಚ್ಚಾಗಿ ನಿರ್ದೇಶಕ ಗುರುಪ್ರಸಾದ್ ತೀರ್ಮಾನದ ಮೇಲಿನ ನಂಬಿಕೆ. “ಬೆನ್ನು ಎಕ್ಸ್‌ಫೋಸ್ ಮಾಡಿರುವ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ. ಏಕೆಂದರೆ ಆ ಸನ್ನಿವೇಶಕ್ಕೆ ಅದು ಬೇಕಿತ್ತು. ಅದಕ್ಕಿಂತ ಹೆಚ್ಚಾಗಿ ನಿರ್ದೇಶಕ ಗುರುಪ್ರಸಾದ್ ಅವರಿಗೆ ಸರಿಯಾದ ಆದ ಜಡ್ಜ್ಮೆಂಟ್ ಇದೆ. ಸುಖಾಸುಮ್ಮನೆ ಅವರು ಎಕ್ಸ್‌ಫೋಸ್ ಮಾಡಿಸೋದಿಲ್ಲ. ಅದೇ ಕಾರಣದಿಂದ ಧೈರ್ಯವಾಗಿ ಮಾಡಿದ್ದೇನೆ. ನನಗೆ ಅದರಿಂದ ಪ್ಲಸ್ ಆಯಿತೇ ಹೊರತು ಮೈನಸ್ ಏನೂ ಆಗಿಲ್ಲ’ ಎನ್ನುತ್ತಾರೆ ಸಂಗೀತಾ ಭಟ್.
ಎಲ್ಲಾ ಓಕೆ, ಸಂಗೀತಾಗೆ ಏನೇನು ಪ್ಲಸ್ ಆಯಿತು, ಎಷ್ಟು ಸಿನಿಮಾ ಅವರ “ಬೆನ್ನಿ’ಗೆ ನಿಂತಿವೆ ಎಂದು ನೀವು ಕೇಳಬಹುದು. ಪ್ಲಸ್ ಎಂದಾಕ್ಷಣ ಸಿನಿಮಾ ಆಫರ್ ಸಿಗೋದು ಒಂದೇ ಅಲ್ಲ ಎಂದು ನಂಬಿದವರು ಸಂಗೀತಾ. ಜನ ಗುರುತಿಸೋದು ಕೂಡಾ ಪ್ಲಸ್ ಎಂಬುದು ಸಂಗೀತಾ ಮಾತು. ಹೌದು, ಸಂಗೀತಾ ಭಟ್‌ನ ಈಗ ಹೆಚ್ಚೆಚ್ಚು ಜನ ಗುರುತಿಸುತ್ತಿದ್ದಾರೆ. “ನಿಮ್ಮ ಸಿನಿಮಾದ ಟ್ರೇಲರ್ ನೋಡಿದೆ. ತುಂಬಾ ಮುದ್ದಾಗಿ ಕಾಣುತ್ತೀರಿ’ ಎಂದು ಹೇಳುವ ಮಂದಿ ಹೆಚ್ಚುತ್ತಿದ್ದಾರೆ. “ನಾನು ಚಿತ್ರ ರಂಗಕ್ಕೆ ಬಂದು ಏಳೆಂಟು ವರ್ಷ ಆಗಿದೆ. ಒಂದಷ್ಟು ಸಿನಿಮಾ ಕೂಡಾ ಮಾಡಿದ್ದೇನೆ.
ಆದರೆ ಈ ಮಟ್ಟಕ್ಕೆ ಜನ ನನ್ನನ್ನು ಗುರುತಿಸಿರಲಿಲ್ಲ. ಆದರೆ “ಎರಡನೇ ಸಲ’ ಟ್ರೇಲರ್ ಬಿಡುಗಡೆಯಾದ ನಂತರ ಜನ ಹೆಚ್ಚು ಗುರುತಿಸುತ್ತಿದ್ದಾರೆ. ಕೆಲವರು ಮುದ್ದಾದ ಮೈಕಟ್ಟು ಎಂದು ತಮಾಷೆ ಮಾಡುತ್ತಾರೆ.
ಒಮ್ಮೊಮ್ಮೆ ನಾವು ಮಾಡುವ ಪಾತ್ರ ಹಾಗೂ ನಮ್ಮ ಗೆಟಪ್ ಕೂಡಾ ಮುಖ್ಯವಾಗುತ್ತದೆ ಎಂಬುದಕ್ಕೆ ಇದೇ ಉದಾಹರಣೆ’ ಎನ್ನುತ್ತಾರೆ ಸಂಗೀತಾ. ಟ್ರೇಲರ್‌ನಲ್ಲಿ ಬೋಲ್ಡ್‌ನೆಸ್ ಜೊತೆಗೆ ಸಿಕ್ಕಾಪಟ್ಟೆ ಡಬಲ್ ಮೀನಿಂಗ್ ಡೈಲಾಗ್ ಕೂಡಾ ಇವೆ ಎಂಬ ಪ್ರಶ್ನೆಗೆ ಸಂಗೀತಾ ಅದು ಕೇವಲ ಟ್ರೇಲರ್ ಅನ್ನುತ್ತಾರೆ. “ಟ್ರೇಲರ್‌ನಲ್ಲಿ ಒಂದಷ್ಟು ಡಬಲ್ ಮೀನಿಂಗ್ ಮಾತುಗಳಿರಬಹುದು. ಆದರೆ, ಸಿನಿಮಾ ನೋಡಿದಾಗ ಇದೊಂದು ಭಿನ್ನ ಕಥಾಹಂದರವಿರುವ ಸಿನಿಮಾ ಎಂದು ನಿಮಗೆ ಗೊತ್ತಾಗುತ್ತದೆ. ಎರಡು ಟ್ರ್ಯಾಕ್‌ಗಳಲ್ಲಿ ಸಾಗುವ ಈ ಸಿನಿಮಾದಲ್ಲಿ ಗುರುಪ್ರಸಾದ್ ಸಾಕಷ್ಟು ಹೊಸ ವಿಷಯಗಳನ್ನು ಹೇಳಿದ್ದಾರೆ’ ಎಂದು “ಎರಡನೇ ಸಲ’ದ ಬಗ್ಗೆ ಹೇಳುತ್ತಾರೆ.
ಗಾಂಧಿನಗರದಲ್ಲಿ ಬ್ರಾಂಡ್ ಮಾಡಿಬಿಡುವವರ ಸಂಖ್ಯೆ ಹೆಚ್ಚಿದೆ. ಒಂದು ಬಾರಿ ಬೋಲ್ಡ್ ಆಗಿ ಕಾಣಿಸಿಕೊಂಡರೆ ಮತ್ತೆ ಅಂತಹುದೇ ಪಾತ್ರವಿಟ್ಟುಕೊಂಡು ಬರುತ್ತಾರೆ. ಆದರೆ, ಸಂಗೀತಾ ಮಾತ್ರ ಮತ್ತೆ ಆ ತರಹ ಕಾಣಿಸಿಕೊಳ್ಳೋದಿಲ್ಲವಂತೆ. “ಸುಖಾಸುಮ್ಮನೆ ಬೋಲ್ಡ್ ಆದರೆ ಅದಕ್ಕೆ ಅರ್ಥವಿಲ್ಲ. ಪಾತ್ರ ಬಯಸಿದಾಗ ಮತ್ತು ಅದಕ್ಕೊಂದು ಅರ್ಥವಿದ್ದಾಗ ಮಾತ್ರ ಈ ತರಹದ ನಿರ್ಧಾರ ಮಾಡಬೇಕಾಗುತ್ತದೆ’ ಎನ್ನುವ ಮೂಲಕ ಬ್ರಾಂಡ್ ಆಗಲ್ಲ ಎನ್ನುತ್ತಾರೆ. ಮೊದಲೇ ಹೇಳಿದಂತೆ ಸಂಗೀತಾ ಭಟ್ ಚಿತ್ರರಂಗಕ್ಕೆ ಬಂದು ಏಳೆಂಟು ವರ್ಷ ಆಗಿದೆ. ಆದರೂ ಅವರಿಗೆ ದೊಡ್ಡ ಯಶಸ್ಸು, ಗುರುತಿಸಿಕೊಳ್ಳುವಂತ ಅವಕಾಶ ಸಿಕ್ಕಿಲ್ಲ. ಆ ಬೇಸರ ಕೂಡಾ ಸಂಗೀತಾಗಿದೆ. ಆ ಎಲ್ಲಾ ಬೇಸರಗಳನ್ನು ಮುಂದಿನ ಸಿನಿಮಾದ ಪಾತ್ರಗಳು ಮರೆಸುತ್ತವೆ ಎಂಬ ವಿಶ್ವಾಸವಿದೆ. ಇನ್ನು, ಸಿನಿಮಾ ಬಿಟ್ಟರೆ ಸಂಗೀತಾ ತಮ್ಮದೇ ಒಂದು ತಂಡದೊಂದಿಗೆ ಸ್ಟಾಂಡಪ್ ಕಾಮಿಡಿ ಸೇರಿದಂತೆ ಒಂದಷ್ಟು ಕಾರ್ಯ ಕ್ರಮಗಳನ್ನು ನಡೆಸಿಕೊ ಡುತ್ತಾರೆ. ಅವೆಲ್ಲವೂ ಅವರಿಗೆ “ಬ್ಯಾಕ್’ಬೋನ್ ಆಗಿವೆ.
– ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.