ಶಶಿಕಲಾ-ಸೆಲ್ವಂ ಫೈಟ್ ತಾರಕಕ್ಕೆ; ರಾಜ್ಯಪಾಲರ ಬಳಿ ಈಗ ಚೆಂಡು
Team Udayavani, Feb 10, 2017, 12:40 AM IST
ಚೆನ್ನೈ: ರೆಸಾರ್ಟ್‌ನಲ್ಲಿ ನೆಲೆಗೊಂಡಿದ್ದ ತಮಿಳುನಾಡು ರಾಜಕೀಯ ಈಗ ರಾಜಭವನದ ಅಂಗಳಕ್ಕೆ ಬಂದಿದ್ದು, ಅಧಿಕಾರ “ಕಸಿಯುವ-ಉಳಿಸಿಕೊಳ್ಳುವ’ ಹೋರಾಟ ತಾರಕಕ್ಕೇರಿದೆ.
ಗುರುವಾರ ಸಂಜೆಯಿಂದಲೇ ಇಡೀ ರಾಜಕೀಯ ಚಿತ್ರಣ ಚುರುಕು ಪಡೆ ದಿದ್ದು, ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ, 5 ಗಂಟೆ ಹೊತ್ತಿಗೆ ರಾಜ ಭವನಕ್ಕೆ ಹೋಗಿ, ರಾಜೀನಾಮೆ ವಾಪಸ್ ಪಡೆವ ಮಾತುಗಳನ್ನಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ರಾತ್ರಿ 7.30ರ ವೇಳೆಗೆ ರಾಜಭವನಕ್ಕೆ ತೆರಳಿದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಸರ ಕಾರ ರಚನೆಗೆ ಹಕ್ಕು ಮಂಡಿಸಿ ಹೊರಬಂದಿ ದ್ದಾರೆ. ಈ ಇಬ್ಬರ ಅಭಿಪ್ರಾಯ ಕೇಳಿ ರುವ ರಾಜ್ಯಪಾಲ ವಿದ್ಯಾಸಾಗರ ರಾವ್ ಕಾನೂನು ತಜ್ಞರ ಮೊರೆ ಹೋಗಿದ್ದಾರೆ.
ಬುಧವಾರ ರಾಜ್ಯದಿಂದ ದೂರವಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟ ರಾಜ್ಯಪಾಲ ರಾವ್ ಗುರುವಾರ ಬೆಳಗ್ಗೆ ಚೆನ್ನೈಗೆ ವಾಪಸಾದರು. ಅನಂತರ ಸಂಜೆ 5ಕ್ಕೆ ಪನ್ನೀರ್‌ಸೆಲ್ವಂ, 7.30ಕ್ಕೆ ಶಶಿಕಲಾ ಭೇಟಿಗೆ ಸಮಯ ನಿಗದಿಪಡಿಸಿದರು. ಇದಾದ ಬಳಿಕ ಎರಡೂ ಬಣಗಳ ರಾಜಕೀಯ ಚಟುವಟಿಕೆಗಳು ಬಿರುಸು ಗೊಂಡವು. ಸಂಜೆ 5ಕ್ಕೆ ರಾಜ್ಯಪಾಲರನ್ನು ಭೇಟಿಯಾದ ಪನ್ನೀರ್ ಸೆಲ್ವಂ 15 ನಿಮಿಷ ಮಾತುಕತೆ ನಡೆಸಿದರು.
ಸತ್ಯಕ್ಕೇ ಜಯ: ರಾಜಭವನದಿಂದ ಹೊರಬಂದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೆಲ್ವಂ, “ಶಶಿಕಲಾ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದೆ. ಈಗ ಅದನ್ನು ವಾಪಸ್ ಪಡೆಯಲು ಸಿದ್ಧನಿದ್ದೇನೆ ಎಂದು ರಾಜ್ಯಪಾಲರಲ್ಲಿ ತಿಳಿಸಿದ್ದೇನೆ. ಧರ್ಮ, ಸತ್ಯಕ್ಕೆ ಜಯ ಖಚಿತ’ ಎಂದು ನುಡಿದರು. ಆದರೆ ಪತ್ರಕರ್ತರು ಕೇಳಿದ ಹೆಚ್ಚಿನ ಪ್ರಶ್ನೆಗಳಿಗೆ ಅವರು ಉತ್ತರಿಸಲಿಲ್ಲ. ಇದಾದ ಅನಂತರ ಎಲ್ಲರ ಗಮನ ಶಶಿಕಲಾರತ್ತ ತಿರುಗಿತು. ಸಂಜೆ 7ರ ವೇಳೆಗೆ ಮತ್ತೂಂದು ಪ್ರಹಸನ ನಡೆಯಿತು. ರಾಜ್ಯಪಾಲರ ಭೇಟಿಗೆ ಮುನ್ನ ಶಶಿಕಲಾ ನೇರವಾಗಿ ಅಮ್ಮಾ ಸಮಾಧಿಯತ್ತ ನಡೆದರು. ಅಲ್ಲಿ ಶಾಸಕರು ನೀಡಿರುವ ಬೆಂಬಲಕ್ಕೆ ಸಂಬಂಧಿಸಿದ ಕಡತವನ್ನು ಸಮಾಧಿಯ ಮುಂದಿರಿಸಿ, ಸಮಾಧಿಗೆ ಪುಷ್ಪಾರ್ಚನೆ ಮಾಡಿದರು.
ಸರಕಾರ ರಚನೆಗೆ ಅವಕಾಶ ಕೋರಿಕೆ: ರಾಜ್ಯಪಾಲ ರಾವ್‌ರನ್ನು ಭೇಟಿಯಾದ ಶಶಿಕಲಾ, ಸರಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಶಾಸಕ ಪಕ್ಷದ ಸಭೆಯಲ್ಲಿ ಕೈಗೊಂಡ ನಿರ್ಣಯದ ಪ್ರತಿ ಹಾಗೂ ತನ್ನನ್ನು ಬೆಂಬಲಿಸಿ ಸಹಿ ಹಾಕಿರುವ ಶಾಸಕರ ಪಟ್ಟಿಯನ್ನು ಅವರು ರಾಜ್ಯಪಾಲರ ಮುಂದಿಟ್ಟು, ತನಗೆ 131 ಶಾಸಕರ ಬೆಂಬಲವಿದೆ ಎಂದು ಹೇಳಿದರು. ಜತೆಗೆ, ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಸಿದ್ಧವಾಗಿರುವುದಾಗಿಯೂ ಹೇಳಿದರು. ಇದೇ ವೇಳೆ, ಭ್ರಷ್ಟಾಚಾರ ಪ್ರಕರಣದಲ್ಲಿ ಹೈಕೋರ್ಟ್ ತನ್ನನ್ನು ಖುಲಾಸೆಗೊಳಿಸಿರುವ ಕಾರಣ, ಸುಪ್ರೀಂ ಕೋರ್ಟ್‌ನಲ್ಲೂ ತನ್ನ ಪರವೇ ತೀರ್ಪು ಬರಬಹುದೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ರಾಜ್ಯಪಾಲರ ಮುಂದಿರುವ ಆಯ್ಕೆಗಳೇನು?
ಶಶಿಕಲಾ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತೀರ್ಪು ಬರುವವರೆಗೆ ಕಾಯಬಹುದು.
ಬೆಂಬಲಿಗ ಶಾಸಕರ ಸಂಖ್ಯೆ ಆಧ ರಿಸಿ, ಸರಕಾರ ರಚಿಸಲು ಶಶಿಕಲಾಗೆ ಆಹ್ವಾನ ನೀಡಬಹುದು.
ಸೆಲ್ವಂ ರಾಜೀನಾಮೆ ನೀಡಿರುವು ದನ್ನು ಒಪ್ಪಿ, ಬಹುಮತ ಸಾಬೀತಿಗೆ ಸೂಚಿಸಬಹುದು.
ಸ್ಪಷ್ಟ ನಿರ್ಧಾರಕ್ಕೆ ಬರುವವರೆಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬಹುದು.
ರಾಜ್ಯಪಾಲರಲ್ಲಿ ಪನ್ನೀರ್ ಸೆಲ್ವಂ ಹೇಳಿದ್ದೇನು?
ಶಶಿಕಲಾ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದೆ. ಈಗ ಅದನ್ನು ವಾಪಸ್ ಪಡೆಯಲು ಸಿದ್ಧನಿದ್ದೇನೆ
ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ನಾನು ಸಿದ್ಧ
ಎಲ್ಲವೂ ಒಳ್ಳೆಯದಾಗಲಿದೆ. ನ್ಯಾಯ ಸಿಕ್ಕೇ ಸಿಗುತ್ತದೆ. ಸತ್ಯ ಗೆದ್ದೇ ಗೆಲ್ಲುತ್ತದೆ
ಶಶಿಕಲಾ ನಟರಾಜನ್ ಹೇಳಿದ್ದೇನು?
ನನಗೆ 131 ಶಾಸಕರ ಬೆಂಬಲವಿದೆ. ಶಾಸಕ ಪಕ್ಷದ ನಿರ್ಣಯದ ಪ್ರತಿಯೂ ಇದೆ.
ಸರಕಾರ ರಚನೆಗೆ ಅವಕಾಶ ಕೊಡಿ. ಬಹುಮತ ಸಾಬೀತಿಗೆ ರೆಡಿ.
ಭ್ರಷ್ಟಾಚಾರ ಕೇಸಲ್ಲಿ ಹೈಕೋರ್ಟ್ ನನ್ನನ್ನು ಖುಲಾಸೆ ಗೊಳಿಸಿದೆ. ಸುಪ್ರೀಂ ಕೂಡ ಇದನ್ನು ಎತ್ತಿಹಿಡಿಯುವ ನಂಬಿಕೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್ ಹೇಳಿಕೆ
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.