ರಸ್ತೆ ಬದಿ ನೆಟ್ಟಿರುವ ಸಸಿ ಹೆಮ್ಮರವಾಗಲು ಸಹಕರಿಸಿ


Team Udayavani, Feb 10, 2017, 12:30 PM IST

dvg3.jpg

ದಾವಣಗೆರೆ: ಪರಿಸರ ನಾಶದಿಂದ ಆಗುತ್ತಿರುವ ದುಷ್ಪರಿಣಾಮ ಕುರಿತು ಎಲ್ಲರೂ ಪುಂಖಾನುಪುಂಖವಾಗಿ ಮಾತನಾಡಬಲ್ಲರು. ಅದೇ ಪರಿಸರ ಸಂರಕ್ಷಣೆ ಕುರಿತು ತುಟಿ ಬಿಚ್ಚುವವರು, ಕಾರ್ಯೋನ್ಮುಖರಾಗುವವರು ಕೆಲವರು ಮಾತ್ರ. ಪರಿಸರ ನಾಶವಾದಂತೆ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಇವನ್ನು ನಿವಾರಿಸುವ ನಿಟ್ಟಿನಲ್ಲಿ ಯಾರೋ ಒಬ್ಬರು ಕಾರ್ಯೋನ್ಮುಖರಾದರೆ ಸಾಲದು ಎಲ್ಲರೂ ಕೈ ಜೋಡಿಸಬೇಕು. 

ಅಂತಹದ್ದೊಂದು ಕಾರ್ಯ ಮಾಡುವ ಸದಾವಕಾಶ ಇದೀಗ ಪಾಲಿಕೆ ವ್ಯಾಪ್ತಿಯ ಜನರಿಗೆ ಒದಗಿಬಂದಿದೆ. ನಗರದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ ನೂರಾರು ಮರಗಳು ನೆಲಕ್ಕುರುಳಿವೆ. ಇದೀಗ ಜಿಲ್ಲಾಡಳಿತ, ಪಾಲಿಕೆ ಅದೇ ಜಾಗದಲ್ಲಿ ಸಸಿಗಳನ್ನು ನೆಟ್ಟು ಪರಿಸರ ಬೆಳೆಸಲು ಮುಂದಾಗುತ್ತಿವೆ. ಈ ಕಾರ್ಯದಲ್ಲಿ ಪಾಲಿಕೆ ವ್ಯಾಪ್ತಿಯ ಜನರೂ ಕೈ ಜೋಡಿಸಬೇಕಿದೆ. 

ನಗರದ ವಿವಿಧ ರಸ್ತೆಗಳ ಇಕ್ಕೆಲಗಳಲ್ಲಿ ತರೇಹವಾರಿ ಸಸಿಗಳನ್ನು ನೆಡಲಾಗಿದೆ.  ಮಳೆಗಾಲ, ಚಳಿಗಾಲ ಇದ್ದುದರಿಂದ ಜೊತೆಗೆ ಅರಣ್ಯ ಇಲಾಖೆ ಒಂದಿಷ್ಟು ನೀರುಣಿಸಿದ್ದರಿಂದ ಸಸಿಗಳು ಇನ್ನೂ ಹಸಿರಾಗಿ ನಳನಳಿಸುತ್ತಿವೆ. ನೀಡುತ್ತಿವೆ. ಇಂತಹ ಸಸಿಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಗರದ ಪ್ರತಿಯೊಬ್ಬ ನಾಗರಿಕರು ತಮ್ಮ ಜವಾಬ್ದಾರಿ ಸಹ ನಿಭಾಯಿಸಬೇಕಿದೆ. ಸರ್ಕಾರದ ಕೆಲಸವೆಂದರೆ ಎಷ್ಟರ ಮಟ್ಟಿಗೆ ಕಾರ್ಯಗತವಾಗಲಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.

ಈ ಹಿಂದೆ ಅದೆಷ್ಟೋ ಸಸಿಗಳು ನೆಟ್ಟ ಕೆಲವೇ ದಿನಗಳಲ್ಲಿ ನಾಶವಾಗಿ ಹೋಗಿವೆ. ಆದರೆ, ಈ ಬಾರಿ ತೀರಾ ಅಂತಹ ಪರಿಸ್ಥಿತಿ ಇಲ್ಲ. ಒಂದಿಷ್ಟು ಸಸಿಗಳು ಉಳಿದಿವೆ. ತಮ್ಮ ತಮ್ಮ ಮನೆ ಮುಂದೆ ರಸ್ತೆ ಬದಿಯಲ್ಲಿ ನೆಟ್ಟಿರುವ ಸಸಿಗಳಿಗೆ ನಿವಾಸಿಗಳು ನೀರೆರೆಯುವ ಕೆಲಸಮಾಡಿದರೆ ಆ ಸಸಿಗಳು ಮುಂದೆ ಹೆಮ್ಮರವಾಗಿ ನಿಮಗೆ, ನಿಮ್ಮ ಮುಂದಿನ ಪೀಳಿಗೆಗೆ ನೆರಳಾಗಲಿವೆ. ಮಳೆ ಬರಲು ಸಹಕಾರಿಯಾಗಲಿವೆ.

ಅಲ್ಲದೆ, ತಾಪಮಾನ ಕಡಿಮೆ ಮಾಡುವಲ್ಲಿ ತಮ್ಮದೇ ಕೊಡುಗೆ ನೀಡಲಿವೆ. ಸಾಮಾಜಿಕ ಜವಾಬ್ದಾರಿ ಬಗ್ಗೆ ಮಾತನಾಡುವ ಬಹುತೇಕರು ಇಂತಹ ಸಣ್ಣ ಸಣ್ಣ ವಿಷಯಗಳು ಬಂದಾಗ ನುಣುಚಿಕೊಳ್ಳುತ್ತಾರೆ. ಇದಕ್ಕೊಂದು ಅಪವಾದ ಎಂಬಂತೆ ಪರಿಸರ ಕಾಳಜಿವುಳ್ಳವರು ಸಸಿಗಳ ಉಳಿಸಲು ಮುಂದಾಗಬೇಕು.  

ಕೈ ಬಿಡಲಿರುವ ಅರಣ್ಯ ಇಲಾಖೆ: ನಗರದಲ್ಲಿ ನಿರ್ಮಾಣವಾಗಿರುವ ರಸ್ತೆಗಳ ಬದುಗಳಲ್ಲಿ ಸಸಿಗಳನ್ನು ನೆಡಲಾಗಿದೆ. ಎಸ್‌ಎಸ್‌ ಹೈಟೆಕ್‌  ಆಸ್ಪತ್ರೆ, ಲಕ್ಷ್ಮಿ ಫ್ಲೋರ್‌ ಮಿಲ್‌ ರಸ್ತೆ, ಡೆಂಟಲ್‌ ಕಾಲೇಜು ರಸ್ತೆ, ಎವಿಕೆ ಕಾಲೇಜು ರಸ್ತೆ, ಹದಡಿ ರಸ್ತೆ, ಲೋಕಿಕೆರೆ ರಸ್ತೆ ಸೇರಿದಂತೆ ಬಹುತೇಕ ಎಲ್ಲಾ ಭಾಗಗಳಲ್ಲಿ ಸಸಿಗಳನ್ನು ನೆಡಲಾಗಿದೆ. ಸದ್ಯ ಅರಣ್ಯ ಇಲಾಖೆ ನೀರು ಎರೆಯುತ್ತಿದೆ. ಇಲಾಖೆ ಅಧಿಕಾರಿಗಳು ಹೇಳುವಂತೆ ಪಾಲಿಕೆಯಿಂದ ಬಂದಿರುವ ಅನುದಾನ ಇನ್ನೊಂದು ಬಾರಿ ಮಾತ್ರ ನೀರುಣಿಸಲು ಸಾಕಾಗುತ್ತದೆ. ಮತ್ತೆ ನೀರುಣಿಸುವುದು ಅಸಾಧ್ಯವಂತೆ. 

ಇಷ್ಟು ಮಾಡಿ ಸಾಕು: ನೀವು ಕುಡಿಯುವ ನೀರನ್ನು ಈ ಸಸಿಗಳಿಗೆ ಎರೆಯಬೇಕಿಲ್ಲ. ನಿಮ್ಮ ಮನೆಯಲ್ಲಿನ ತ್ಯಾಜ್ಯ ನೀರು ಈ ಸಸಿಗಳಿಗೆ ಸಾಕು. ನೆಲ, ಪಾತ್ರೆ, ಬಟ್ಟೆ ತೊಳೆದ ನೀರನ್ನು ಚರಂಡಿಗೆ ಸುರಿಯುವ ಬದಲು ಈ ಸಸಿಗಳಿಗೆ ಹಾಕಿ. ಇನ್ನು ಮನೆ ಮುಂದೆ ವಾಹನ ತೊಳೆದ ನೀರು ನೇರ ಸಸಿಯ ಬುಡ ತಲುಪುವಂತೆ ಒಂದಿಷ್ಟು ದಾರಿಮಾಡಿ. ಇನ್ನು ಹೋಟೆಲ್‌, ಇತರೆ ವ್ಯಾಪಾರಿ ಮಳಿಗೆ ಹೊಂದಿದವರು ಕನಿಷ್ಠ ಅರ್ಧಕೊಡ ನೀರು ಸಸಿಗಳಿಗೆ ಎರೆದು ಸಾಮಾಜಿಕ ಜವಾಬ್ದಾರಿ ಮೆರೆಯಬೇಕಿದೆ.

* ಪಾಟೀಲ ವೀರನಗೌಡ

ಟಾಪ್ ನ್ಯೂಸ್

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

1-wewqe

Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MP-R

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

7-dvg

Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ

byndoor

Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

rape

Ashram;89 ವರ್ಷದ ಆಶ್ರಮ ಗುರುವಿನ ಮೇಲೆ ಆತ್ಯಾಚಾ*ರ ಪ್ರಕರಣ ದಾಖಲು

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

Wadi-Pro

Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್‌ ಪ್ರತಿಭಟನೆ, ವಾಡಿ ಬಂದ್

1-bharat

Bharatanatyam; ರಾಜ್ಯ ಮಟ್ಟದ ಶಿಷ್ಯವೇತನಕ್ಕೆ ಅದಿತಿ ಜಿ.ಮಂಡೀಚ,ಸ್ವಾತಿ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.