ವಾಲಿಬಾಲ್‌: ಧಾರವಾಡ-ಬೆಂಗಳೂರು ಚಾಂಪಿಯನ್‌

Team Udayavani, Feb 10, 2017, 12:48 PM IST

hub1.jpg

ಹುಬ್ಬಳ್ಳಿ: ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದ ವಾಲಿಬಾಲ್‌ನ ಮಹಿಳೆಯರ ವಿಭಾಗದಲ್ಲಿ ಧಾರವಾಡ ತಂಡ ಹಾಗೂ ಪುರುಷರ ವಿಭಾಗದಲ್ಲಿ ಬೆಂಗಳೂರು ತಂಡ ಚಾಂಪಿಯನ್‌ಗಳಾಗಿ ಹೊರಹೊಮ್ಮಿವೆ. ಮಹಿಳೆಯರ ಫೈನಲ್‌ನಲ್ಲಿ ಧಾರವಾಡ 3-1ರಿಂದ ಬಳ್ಳಾರಿ ತಂಡವನ್ನು ಮಣಿಸಿತು.

ರೋಚಕ ಪಂದ್ಯದಲ್ಲಿ ಧಾರವಾಡ ಜಿಲ್ಲೆಯನ್ನು ಪ್ರತಿನಿಧಿಸಿದ ಬ್ಯಾಹಟ್ಟಿ ತಂಡ ಮೊದಲ ಸೆಟ್‌ 20-25ರಿಂದ ಸೋತ ನಂತರ ಚೇತರಿಸಿಕೊಂಡು 25-22ರಿಂದ ದ್ವಿತೀಯ ಸೆಟ್‌, 25-20ರಿಂದ ತೃತೀಯ ಹಾಗೂ 25-16ರಿಂದ ಚತುರ್ಥ ಸೆಟ್‌ ಗೆದ್ದುಕೊಂಡು ಟ್ರೋಫಿ ತನ್ನದಾಗಿಸಿಕೊಂಡಿತು. ನೆಹರು ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯಗಳಿಗೆ ಸಾವಿರಾರು ಪ್ರೇಕ್ಷಕರು ಸಾಕ್ಷಿಯಾದರು.

ಪಂದ್ಯ ಆರಂಭವಾದಾಗಿನಿಂದ ಮುಗಿಯುವವರೆಗೂ ತವರು ತಂಡಕ್ಕೆ ಪ್ರೇಕ್ಷಕರು ಬೆಂಬಲ ನೀಡಿ, ಚಪ್ಪಾಳೆ ಮೂಲಕ ತಂಡದ ಆಟಗಾರ್ತಿಯರನ್ನು ಪ್ರೋತ್ಸಾಹಿಸಿದರು. ಚತುರ್ಥ ಸೆಟ್‌ನಲ್ಲಿ ಎದುರಾಳಿ ತಂಡ ಬಳ್ಳಾರಿ ಆತ್ಮವಿಶ್ವಾಸ ಕಳೆದುಕೊಂಡಂತೆ ಕಂಡು ಬಂತು. ಧಾರವಾಡ ತಂಡ ಅಂತರ ಹೆಚ್ಚಿಸಿಕೊಳ್ಳುತ್ತ, ಪ್ರೇಕ್ಷಕರ ನಿರೀಕ್ಷೆಯಂತೆ ಚಾಂಪಿಯನ್‌ ಪಟ್ಟ ಪಡೆಯಿತು. 

ಪುರುಷರ ಫೈನಲ್‌ನಲ್ಲಿ ಬೆಂಗಳೂರು ತಂಡ 25-21, 25-22, 25-14ರಿಂದ ಚಾಮರಾಜನಗರವನ್ನು ಪರಾಭವಗೊಳಿಸಿತು. ಮೊದಲೆರಡು ಸೆಟ್‌ಗಳು ಹಣಾಹಣಿಯಿಂದ ಕೂಡಿದ್ದರೂ ತೃತೀಯ ಸೆಟ್‌ನಲ್ಲಿ ಬೆಂಗಳೂರು ತಂಡ ನಿರಾಯಾಸವಾಗಿ ಅಂಕಗಳನ್ನು ಪಡೆದುಕೊಳ್ಳುತ್ತ ಸಾಗಿತು. ಒತ್ತಡಕ್ಕೆ ಸಿಲುಕಿದ ಎದುರಾಳಿ ಚಾಮರಾಜನಗರ ತಂಡ 3ನೇ ಸೆಟ್‌ನಲ್ಲಿ ಪಂದ್ಯ ಉಳಿಸಿಕೊಳ್ಳಲು ಪ್ರಯತ್ನ ಮಾಡಿತಾದರೂ ಯಾವುದೇ ಫ‌ಲ ಸಿಗಲಿಲ್ಲ. 

ಇದಕ್ಕೂ ಮುನ್ನ ಪುರುಷರ ವಿಭಾಗದಲ್ಲಿ ತೃತೀಯ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಶಿವಮೊಗ್ಗ 3-2ರಿಂದ ಬಳ್ಳಾರಿ ತಂಡವನ್ನು ಸೋಲಿಸಿತು. ಶಿವಮೊಗ್ಗ ಹಾಗೂ ಬಳ್ಳಾರಿ ಪಂದ್ಯ ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಉಭಯ ತಂಡಗಳು 2 ಸೆಟ್‌ ಜಯಿಸಿದ್ದರಿಂದ ಪಂದ್ಯ 5ನೇ ಸೆಟ್‌ ನಡೆಯಿತು. ಶಿವಮೊಗ್ಗ 25-22, 18-25, 25-23, 24-26, 15-11ರಿಂದ ಎದುರಾಳಿ ತಂಡವನ್ನು ಹೊಸಕಿತು. 

ತೃತೀಯ ಸ್ಥಾನಕ್ಕೆ ನಡೆದ ಮಹಿಳೆಯರ ಪಂದ್ಯದಲ್ಲಿ ಕೋಲಾರ 3-0 ನೇರ ಸೆಟ್‌ಗಳಿಂದ ಮೈಸೂರು ತಂಡವನ್ನು ಸೋಲಿಸಿತು. ಕೋಲಾರ 25-16, 25-16, 26-24 ಅಂತರದಿಂದ ಮೈಸೂರು ತಂಡವನ್ನು ಪರಾಭವಗೊಳಿಸಿತು. ಸಂಸದ ಪ್ರಹ್ಲಾದ ಜೋಶಿ, ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ, ಮಾಜಿ ಶಾಸಕ ಶಂಕರಪಾಟೀಲ ಮುನೇನಕೊಪ್ಪ, ತಹಶೀಲ್ದಾರ ಶಶಿಧರ ಮಾಡ್ಯಾಳ, ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಮಹಾನಗರ ಪೊಲೀಸ್‌ ಆಯುಕ್ತ ಪಾಂಡುರಂಗ ರಾಣೆ ಪಂದ್ಯ ವೀಕ್ಷಿಸಿದರಲ್ಲದೆ ವಿಜೇತರಿಗೆ ಪದಕ, ಟ್ರೋಫಿ ವಿತರಿಸಿದರು.  

ಟಾಪ್ ನ್ಯೂಸ್

Channapatna ByPoll: ಜೆಡಿಎಸ್ ಗೆ ಟಿಕೆಟ್ ನೀಡುವಂತೆ ಒತ್ತಾಯವಿಲ್ಲ, ಆದರೆ…: ನಿಖಿಲ್‌

Channapatna ByPoll: ಜೆಡಿಎಸ್ ಗೆ ಟಿಕೆಟ್ ನೀಡುವಂತೆ ಒತ್ತಾಯವಿಲ್ಲ, ಆದರೆ…: ನಿಖಿಲ್‌

Tahshildar: ತೀರ್ಥಹಳ್ಳಿಯ ನೂತನ ಪ್ರಭಾರ ತಹಶೀಲ್ದಾರ್ ಆಗಿ ರಂಜಿತ್ ಎಸ್. ನೇಮಕ!

Tahshildar: ತೀರ್ಥಹಳ್ಳಿಯ ನೂತನ ಪ್ರಭಾರ ತಹಶೀಲ್ದಾರ್ ಆಗಿ ರಂಜಿತ್ ಎಸ್. ನೇಮಕ!

12-biggboss

BBK11: ಜಗದೀಶ್ ಗೆ ನ್ಯಾಯ ಸಿಗಬೇಕು.. ವಕೀಲ್ ಸಾಬ್ ಪರ ನಿಂತ ಜನ

Udupi: Scooter caught fire near petrol pump

Udupi: ಪೆಟ್ರೋಲ್‌ ಪಂಪ್‌ ಬಳಿಯೇ ಹೊತ್ತಿ ಉರಿದ ಸ್ಕೂಟರ್‌; ತಪ್ಪಿದ ಭಾರೀ ಅನಾಹುತ

Road Mishap: ಹಸುಗಳನ್ನು ತಪ್ಪಿಸಲು ಹೋಗಿ ಕಾರಿಗೆ ಡಿಕ್ಕಿ ಹೊಡೆದ ಬಸ್… ಕಾರು ಜಖಂ

Road Mishap: ಹಸುಗಳನ್ನು ತಪ್ಪಿಸಲು ಹೋಗಿ ಕಾರಿಗೆ ಡಿಕ್ಕಿ ಹೊಡೆದ ಬಸ್… ಕಾರು ಜಖಂ

Tragedy: ಅನ್ನ, ನೀರು ಬಿಟ್ಟು ಮನೆಯೊಳಗೆ ನಿಗೂಢ ಪೂಜೆ… 2 ಮೃತ್ಯು, ನಾಲ್ವರ ಸ್ಥಿತಿ ಗಂಭೀರ

Tragedy: ಅನ್ನ, ನೀರು ಬಿಟ್ಟು ಮನೆಯೊಳಗೆ ನಿಗೂಢ ಪೂಜೆ… 2 ಮೃತ್ಯು, ನಾಲ್ವರ ಸ್ಥಿತಿ ಗಂಭೀರ

11-malpe

Malpe: ಮನೆ ಬಿಟ್ಟು ಬಂದಿರುವ ಅಪ್ರಾಪ್ತ ಬಾಲಕಿಯರ ರಕ್ಷಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUDA Case: Siddaramaiah should resign and face investigation: MP Yaduveer

MUDA Case: ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಲಿ: ಸಂಸದ ಯದುವೀರ್

ByPoll: No worries about Channapatnam constituency; committed to NDA decision: Nikhil Kumaraswamy

ByPoll: ಚನ್ನಪಟ್ಟಣ ಕ್ಷೇತ್ರದ ಬಗ್ಗೆ ಹಪಾಹಪಿ ಇಲ್ಲ; ಎನ್‌ಡಿಎ ನಿರ್ಧಾರಕ್ಕೆ ಬದ್ಧ: ನಿಖಿಲ್

By Election: ಸಿಪಿವೈ ಎನ್‌ಡಿಎ ಅಭ್ಯರ್ಥಿ ಆದರೆ ಒಳ್ಳೆಯದು: ಜೋಶಿ

By Election: ಸಿಪಿವೈ ಎನ್‌ಡಿಎ ಅಭ್ಯರ್ಥಿ ಆದರೆ ಒಳ್ಳೆಯದು: ಜೋಶಿ

ಟಿಕೆಟ್‌ ವಂಚನೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ: ಜೋಶಿ

Pralhad Joshi: ಟಿಕೆಟ್‌ ವಂಚನೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Channapatna ByPoll: ಜೆಡಿಎಸ್ ಗೆ ಟಿಕೆಟ್ ನೀಡುವಂತೆ ಒತ್ತಾಯವಿಲ್ಲ, ಆದರೆ…: ನಿಖಿಲ್‌

Channapatna ByPoll: ಜೆಡಿಎಸ್ ಗೆ ಟಿಕೆಟ್ ನೀಡುವಂತೆ ಒತ್ತಾಯವಿಲ್ಲ, ಆದರೆ…: ನಿಖಿಲ್‌

Tahshildar: ತೀರ್ಥಹಳ್ಳಿಯ ನೂತನ ಪ್ರಭಾರ ತಹಶೀಲ್ದಾರ್ ಆಗಿ ರಂಜಿತ್ ಎಸ್. ನೇಮಕ!

Tahshildar: ತೀರ್ಥಹಳ್ಳಿಯ ನೂತನ ಪ್ರಭಾರ ತಹಶೀಲ್ದಾರ್ ಆಗಿ ರಂಜಿತ್ ಎಸ್. ನೇಮಕ!

12-biggboss

BBK11: ಜಗದೀಶ್ ಗೆ ನ್ಯಾಯ ಸಿಗಬೇಕು.. ವಕೀಲ್ ಸಾಬ್ ಪರ ನಿಂತ ಜನ

Udupi: Scooter caught fire near petrol pump

Udupi: ಪೆಟ್ರೋಲ್‌ ಪಂಪ್‌ ಬಳಿಯೇ ಹೊತ್ತಿ ಉರಿದ ಸ್ಕೂಟರ್‌; ತಪ್ಪಿದ ಭಾರೀ ಅನಾಹುತ

Road Mishap: ಹಸುಗಳನ್ನು ತಪ್ಪಿಸಲು ಹೋಗಿ ಕಾರಿಗೆ ಡಿಕ್ಕಿ ಹೊಡೆದ ಬಸ್… ಕಾರು ಜಖಂ

Road Mishap: ಹಸುಗಳನ್ನು ತಪ್ಪಿಸಲು ಹೋಗಿ ಕಾರಿಗೆ ಡಿಕ್ಕಿ ಹೊಡೆದ ಬಸ್… ಕಾರು ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.