ಆಟೋರಿಕ್ಷಾ ಚಾಲನೆ ನೆಪದಲ್ಲಿ ಚಿನ್ನದ ಸರ ದೋಚುತ್ತಿದ್ದ ಇಬ್ಬರ ಬಂಧನ

Team Udayavani, Feb 10, 2017, 12:54 PM IST

hub3.jpg

ಹುಬ್ಬಳ್ಳಿ: ಆಟೋ ರಿಕ್ಷಾ ಚಾಲನೆ ಮಾಡುವ ನೆಪದಲ್ಲಿ ಅವಳಿ ನಗರದಲ್ಲಿ ಕಳೆದ ಐದು ವರ್ಷಗಳಿಂದ ಮಹಿಳೆಯರ ಚಿನ್ನದ ಸರ ದೋಚುತ್ತಿದ್ದ ಇಬ್ಬರನ್ನು ಹಳೇಹುಬ್ಬಳ್ಳಿ ಪೊಲೀಸರು ಬಂಧಿಸಿ, ಅವರಿಂದ ಅಂದಾಜು 8.91 ಲಕ್ಷ ರೂ. ಮೌಲ್ಯದ 237 ಗ್ರಾಂ ಚಿನ್ನಾಭರಣ ಹಾಗೂ ಒಂದು ಆಟೋ ರಿಕ್ಷಾ ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್‌ ಆಯುಕ್ತ ಪಾಂಡುರಂಗ ರಾಣೆ ಹೇಳಿದರು. 

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಆಟೋ ರಿಕ್ಷಾ ಚಾಲಕರಾದ ವಿಜಯನಗರ ಹತ್ತಿರದ ಮಾಧವ ನಗರದ ಸುಭಾನ ಎಚ್‌. ಗಾಡಿ ಹಾಗೂ ಗೋಪನಕೊಪ್ಪ ಸ್ವಾಗತ ಕಾಲೋನಿಯ ಹಜರೇಸಾಬ್‌ ಊರ್ಫ್‌ ಬಾಯಿಜಾನ್‌ ಜಿ. ಜೇಂದಿ ಬಂಧಿತರಾಗಿದ್ದಾರೆ ಎಂದರು. 

ಬಂಧಿತರಲ್ಲಿ ಸುಭಾನಿ ಫೆ.2ರಂದು ಗೋಕುಲ ರಸ್ತೆ ಶಂಭಾಗಿ ಲೇಔಟ್‌ ರಸ್ತೆ ಮುಖಾಂತರ ವಾಸವಿ ಕಲ್ಯಾಣ ಮಂಟಪಕ್ಕೆ ಕುಟುಂಬ ಸಮೇತರಾಗಿ ಮದುವೆ ಕಾರ್ಯಕ್ರಮಕ್ಕೆ ಹೊರಟಿದ್ದ ಲೀಲಾ ಸೋಳಂಕಿ ಎಂಬುವವರ ಮಂಗಲಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದ. ಆಗ ಸಾರ್ವಜನಿಕರು ಹಿಡಿದು ಹಳೇಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದರು.

ಅವನನ್ನು ನ್ಯಾಯಾಲಯದ ಅನುಮತಿ ಮೇರೆಗೆ ವಿಚಾರಣೆಗೊಳಪಡಿಸಿದಾಗ ಈತನೊಂದಿಗಿದ್ದ ಹಜರೇಸಾಬ್‌ನನ್ನು ಬಂಧಿಸಲಾಯಿತು. ಇವರೊಂದಿಗೆ ಇದ್ದ ಇನ್ನೊಬ್ಬ ಪರಾರಿಯಾಗಿದ್ದು, ಅವಳಿ ನಗರದ ವಿವಿಧೆಡೆ 2012ರಿಂದ ಇಲ್ಲಿಯ ತನಕ ಒಟ್ಟು 9 ಕಡೆ ಸರಗಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಇನ್ಸ್‌ಪೆಕ್ಟರ್‌ ಶ್ರೀಪಾದ ಜಲೆª ನೇತೃತ್ವದ ತಂಡ ಉತ್ತಮ ಕಾರ್ಯ ಮಾಡಿದೆ ಎಂದರು. 

ಆಟೋ ರಿಕ್ಷಾಗಳ ಮೇಲೆ ತೀವ್ರ ನಿಗಾ: ಆಟೋ ರಿಕ್ಷಾ ಚಾಲಕರು ಕೆಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಕಂಡುಬಂದಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊಸದಾಗಿ ಬಿಡುಗಡೆ ಮಾಡಲಾಗುವ ಮೊಬೈಲ್‌ ಆ್ಯಪ್‌ ಗಳನ್ನು ಆಟೋ ರಿಕ್ಷಾಗಳ ಮೇಲೆ ತೀವ್ರ ನಿಗಾ ಇರಿಸಲು ಬಳಸಲಾಗುವುದು. ಆ ಮೂಲಕ ಸಂಚಾರ ನಿಯಮ ಉಲ್ಲಂಘನೆ, ಅಪರಾಧ ಕೃತ್ಯಗಳಿಗೆ ಬಳಕೆ ಮಾಡಿದ ರಿಕ್ಷಾಗಳನ್ನು ಪತ್ತೆ ಮಾಡಲಾಗುವುದು ಎಂದರು. 

50 ಸಂಚಾರ ಆ್ಯಪ್‌ ಬಿಡುಗಡೆ: ಸಂಚಾರ ಮೊಬೈಲ್‌ ಆ್ಯಪ್‌ನಿಂದ ಅವಳಿ ನಗರದಲ್ಲಿ ಸಂಚಾರದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಕಳೆದ 15 ದಿನಗಳಲ್ಲಿ 37,14,500 ರೂ. ಸ್ಥಳದಲ್ಲೆ ದಂಡ ವಿಧಿಸಲಾಗಿದೆ. 9500 ಜನರಿಗೆ ನೊಟೀಸ್‌ ಜಾರಿ ಮಾಡಲಾಗಿದೆ. ವಾರದೊಳಗೆ ಇನ್ನು 50 ಆ್ಯಪ್‌ಗ್ಳನ್ನು ಬಿಡುಗಡೆ ಮಾಡಲಾಗುವುದು ಎಂದರು. 

ಟಾಪ್ ನ್ಯೂಸ್

Tender Scam: ಹಿರಿಯ ಐಎಎಸ್ ಅಧಿಕಾರಿ, ಮಾಜಿ ಆರ್‌ಜೆಡಿ ಶಾಸಕ ಅರೆಸ್ಟ್

Tender Scam: ಹಿರಿಯ ಐಎಎಸ್ ಅಧಿಕಾರಿ, ಮಾಜಿ ಆರ್‌ಜೆಡಿ ಶಾಸಕ ಅರೆಸ್ಟ್

Mudhol: ಘಟಪ್ರಭಾ ನದಿಗೆ ಹರಿದು ಬಂದ ಹೆಚ್ಚಿನ‌ ನೀರು… ಮುಳುಗಿದ ಬ್ಯಾರೇಜ್

Mudhol: ಘಟಪ್ರಭಾ ನದಿಗೆ ಹರಿದು ಬಂದ ಹೆಚ್ಚಿನ‌ ನೀರು… ಮುಳುಗಿದ ಬ್ಯಾರೇಜ್

Threat: ದೆಹಲಿಯಿಂದ ಲಂಡನ್ ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ.. ತುರ್ತು ಲ್ಯಾಂಡಿಂಗ್

Threat: ದೆಹಲಿಯಿಂದ ಲಂಡನ್ ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ.. ತುರ್ತು ಲ್ಯಾಂಡಿಂಗ್

3-siruguppa

Siruguppa: ಆಸ್ತಿಗಾಗಿ ಮಗಳನ್ನು ಕೊಲೆ ಮಾಡಲು ಮುಂದಾದ ತಂದೆ

2-vijayapura

Vijayapura: ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಕೇಸ್ ದಾಖಲು

Modi-putin

BRICS Meet: ಅ.22ಕ್ಕೆ ಬ್ರಿಕ್ಸ್‌ ಶೃಂಗ: 2ನೇ ಬಾರಿಗೆ ರಷ್ಯಾಕ್ಕೆ ಪ್ರಧಾನಿ ಮೋದಿ ಭೇಟಿ

Indian Railways: ಈ ವರ್ಷಾಂತ್ಯಕ್ಕೆ ಬರಲಿದೆ…ಹೈಡ್ರೋಜನ್‌ ರೈಲು!

Indian Railways: ಈ ವರ್ಷಾಂತ್ಯಕ್ಕೆ ಬರಲಿದೆ…ಹೈಡ್ರೋಜನ್‌ ರೈಲು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

By Election: ಸಿಪಿವೈ ಎನ್‌ಡಿಎ ಅಭ್ಯರ್ಥಿ ಆದರೆ ಒಳ್ಳೆಯದು: ಜೋಶಿ

By Election: ಸಿಪಿವೈ ಎನ್‌ಡಿಎ ಅಭ್ಯರ್ಥಿ ಆದರೆ ಒಳ್ಳೆಯದು: ಜೋಶಿ

ಟಿಕೆಟ್‌ ವಂಚನೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ: ಜೋಶಿ

Pralhad Joshi: ಟಿಕೆಟ್‌ ವಂಚನೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ

Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ

Flight: ಹುಬ್ಬಳ್ಳಿ-ಅಹ್ಮದಾಬಾದ್‌ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ

Flight: ಹುಬ್ಬಳ್ಳಿ-ಅಹ್ಮದಾಬಾದ್‌ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

5-health

Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ

Tender Scam: ಹಿರಿಯ ಐಎಎಸ್ ಅಧಿಕಾರಿ, ಮಾಜಿ ಆರ್‌ಜೆಡಿ ಶಾಸಕ ಅರೆಸ್ಟ್

Tender Scam: ಹಿರಿಯ ಐಎಎಸ್ ಅಧಿಕಾರಿ, ಮಾಜಿ ಆರ್‌ಜೆಡಿ ಶಾಸಕ ಅರೆಸ್ಟ್

4-thirthahalli

Thirthahalli: ಬೈಕ್‌- ಲಾರಿ ಅಪಘಾತ; ಸವಾರನಿಗೆ ಗಂಭೀರ ಗಾಯ

Mudhol: ಘಟಪ್ರಭಾ ನದಿಗೆ ಹರಿದು ಬಂದ ಹೆಚ್ಚಿನ‌ ನೀರು… ಮುಳುಗಿದ ಬ್ಯಾರೇಜ್

Mudhol: ಘಟಪ್ರಭಾ ನದಿಗೆ ಹರಿದು ಬಂದ ಹೆಚ್ಚಿನ‌ ನೀರು… ಮುಳುಗಿದ ಬ್ಯಾರೇಜ್

Threat: ದೆಹಲಿಯಿಂದ ಲಂಡನ್ ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ.. ತುರ್ತು ಲ್ಯಾಂಡಿಂಗ್

Threat: ದೆಹಲಿಯಿಂದ ಲಂಡನ್ ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ.. ತುರ್ತು ಲ್ಯಾಂಡಿಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.