ಗುಡಿಸಲಿಗೆ ಬೆಂಕಿ ತಗುಲಿ ಹಸುಳೆ ಸಜೀವ ದಹನ
Team Udayavani, Feb 11, 2017, 3:45 AM IST
ಹನೂರು: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಆಲಂಬಾಡಿ ಗಿರಿಜನರ ಹಾಡಿಯಲ್ಲಿ ಆನೆ ಓಡಿಸಲು ಹಾಕಿದ್ದ
ಬೆಂಕಿಯ ಕಿಡಿ ಗುಡಿಸಲಿಗೆ ತಗುಲಿ 9 ತಿಂಗಳ ಹಸುಳೆಯೊಂದು ಸಜೀವ ದಹನವಾಗಿದೆ.
ಆಲಂಬಾಡಿಯ ಸುರೇಶ್ ಮತ್ತು ಮುತ್ತುಲಕ್ಷ್ಮೀ ದಂಪತಿಯ ಮಗು ಮೃತಪಟ್ಟಿರುವ ದುರ್ದೈವಿ. ವರ್ಷದ ಹಿಂದೆ ಇವರಿಬ್ಬರಿಗೆ ವಿವಾಹವಾಗಿದ್ದು, ದಂಪತಿಗೆ 9 ತಿಂಗಳ ಮಗುವಿತ್ತು. ಗ್ರಾಮದ ಅರಣ್ಯದಂಚಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಜಮೀನು ನೀಡಲಾಗಿದ್ದು, ಇಲ್ಲಿಯೇ ಗುಡಿಸಲು ಕಟ್ಟಿಕೊಂಡು ಅವರು ಜೀವನ ಸಾಗಿಸುತ್ತಿದ್ದರು. ಜಮೀನಿಗೆ ಆನೆಗಳು ಆಗಾಗ್ಗೆ ಲಗ್ಗೆ ಇಡುತ್ತಿದ್ದು, ಆನೆಗಳನ್ನು ಓಡಿಸಲು ನಿತ್ಯ ಬೆಂಕಿ ಹಾಕುತ್ತಿದ್ದರು.
ಎಂದಿನಂತೆ ಬುಧವಾರ ರಾತ್ರಿಯೂ ಬೆಂಕಿ ಹಾಕಿದ್ದರು. ಗುರುವಾರ ಬೆಳಗಿನವರೆಗೂ ಅದರ ಕಿಡಿಗಳು ಉಳಿದಿದ್ದವು. ಗುರುವಾರ
ಬೆಳಗ್ಗೆ ಗಾಳಿಗೆ ಬೆಂಕಿಯ ಕಿಡಿಗಳು ಹಾರಿ ಬಂದು ಗುಡಿಸಲಿಗೆ ಬೆಂಕಿ ತಗುಲಿತು. ಈ ವೇಳೆ, ಸುರೇಶ ಕೆಲಸ ನಿಮಿತ್ತ ಹೊರಗಡೆ
ತೆರಳಿದ್ದರು. ಮುತ್ತುಲಕ್ಷ್ಮೀ ನೀರು ತರಲು ನದಿ ಕಡೆಗೆ ತೆರಳಿದ್ದರು. ಹೀಗಾಗಿ ಗುಡಿಸಲಿಗೆ ಬೆಂಕಿ ಬಿದ್ದುದು ಯಾರಿಗೂ ತಿಳಿಯಲಿಲ್ಲ. ಬೆಂಕಿಯ ಕೆನ್ನಾಲಿಗೆಗೆ ಗುಡಿಸಲು ಭಸ್ಮವಾಗಿದ್ದು, ಒಳಗಿದ್ದ ಮಗು ಜೀವಂತ ದಹನಗೊಂಡಿದೆ. ಗುಡಿಸಲೊಳಗಿದ್ದ ಧವಸ-ಧಾನ್ಯಗಳೂ
ಬೆಂಕಿಗಾಹುತಿಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್ ಭೇಟಿ ಸಾಧ್ಯತೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.