ಜಸ್‌ಪ್ರೀತ್‌ ಬುಮ್ರಾ;ಕಡೆಯ ಓವರ್‌ಗಳ ಕಲೆಗಾರ!


Team Udayavani, Feb 11, 2017, 11:37 AM IST

8.jpg

ಏಕೋ ಇನ್ನೂ ಟಿ20 ಕ್ರಿಕೆಟ್‌ ಅಂತಾರಾಷ್ಟ್ರೀಯ ತಂಡಗಳ ನಡುವೆ ಇನ್ನೂ ಹೆಚ್ಚು ಜನಪ್ರಿಯವಾಗಿಲ್ಲ. ಪ್ರವಾಸಗಳ ವೇಳೆ ಟೆಸ್ಟ್‌, ಏಕದಿನಗಳ ನಂತರ ಒಗ್ಗರಣೆಗೆಂಬಂತೆ ಒಂದು ಎರಡು ಟಿ20 ಪಂದ್ಯಗಳನ್ನಾಡಲಾಗುತ್ತಿದೆ. 2005ರಲ್ಲಿಯೇ ಆರಂಭ ಕಂಡರೂ ಯಾವ ತಂಡವೂ ಕನಿಷ್ಟ 50 ಪಂದ್ಯಗಳನ್ನು ಈವರೆಗೆ ಆಡಿಲ್ಲ. ಪಾಕಿಸ್ತಾನ ಆಡಿರುವ 34 ಪಂದ್ಯಗಳೇ ಈವರೆಗಿನ ಗರಿಷ್ಠ ಎಂದರೆ ಊಹಿಸಿಕೊಳ್ಳಿ. ಭಾರತೀಯರಿಗೆ ಐಪಿಎಲ್‌ ಕಾರಣದಿಂದ ಟಿ20 ಎಂಬುದು ಮನೆಮಾತಾಗಿದೆ. ಹಲವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬರಲು, ಮಿನುಗಲು ಇದೇ ಕಾರಣವಾಗಿದೆ. ಗುಜರಾತ್‌ನ 23 ವರ್ಷದ ಜಸ್‌ಪ್ರೀತ್‌ ಜಬ್ಬೀರ್‌ಸಿಂಗ್‌ ಬುಮ್ರಾ ಏಕದಿನ ಹಾಗೂ ಟಿ20 ಕ್ರಿಕೆಟ್‌ನ ಭಾರತೀಯ ತಂಡದಲ್ಲಿ ಕಾಣಿಸಲು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಕಾರಣ. ಬುಮ್ರಾ ಬೌಲಿಂಗ್‌ ಸಾಮರ್ಥ್ಯ ಐಪಿಎಲ್‌ನ ಹುಟ್ಟನ್ನು ಸಮರ್ಥಿಸುವಂತಿದೆ!

ಡೆತ್‌ ಓವರ್‌ನ ಅಸ್ತ್ರ!
ಭಾರತದ ಯಾವತ್ತಿನ ಸಮಸ್ಯೆ ಡೆತ್‌ ಓವರ್‌ ಬೌಲಿಂಗ್‌ನಲ್ಲಿ ರನ್‌ ನಿಯಂತ್ರಿಸುವುದು ಮನೋಜ್‌ ಪ್ರಭಾಕರ್‌, ಜಾವಗಲ್‌ ಶ್ರೀನಾಥ್‌ರ ಕಾಲದಿಂದಲೂ ಈ ಸಮಸ್ಯೆಗೆ ಉತ್ತರ ಕಾಣಲಾಗಿಲ್ಲ. ಇಲ್ಲವಾಗಿದ್ದರೆ ಹೀರೋ ಕಪ್‌ ಫೈನಲ್‌ನಲ್ಲಿ ಬೌಲರ್‌ಗಳ ಹಿಂಜರಿಕೆ ಕಾಣಿಸುತ್ತಿರಲಿಲ್ಲ ಮತ್ತು ಸಚಿನ್‌ ತೆಂಡೂಲ್ಕರ್‌ ಆಗಿದ್ದಾಗಲಿ ಎಂದು ಬೌಲ್‌ ಮಾಡುತ್ತಿರಲಿಲ್ಲ! ಅದಿರಲಿ, 2016ರಲ್ಲಿ ಭಾರತಕ್ಕೆ ಒಂದು ಅಸ್ತ್ರವಂತೂ ಸಿಕ್ಕಿದೆ, ಅದೇ ಬುಮ್ರಾ……

ಒಂದಿಷ್ಟು ಪೀಠಿಕೆ ಬೇಕೇ ಬೇಕು. ಏಕದಿನ ಅಥವಾ ಟಿ20ಯಲ್ಲಿ ಆರಂಭಿಕ ಹಾಗೂ ಅಂತ್ಯದ ಸ್ಲಾಗ್‌ ಓವರ್‌ ಬೌಲಿಂಗ್‌ ಕಷ್ಟ. ಒಬ್ಬ ಬೌಲರ್‌ನ ಸರಾಸರಿಯನ್ನು ಸ್ಲಾಗ್‌ನ ಎರಡು ಓವರ್‌ ಅಂದಗೆಡಿಸಿಬಿಡಬಹುದು! ವೇಗದ ಬೌಲರ್‌ಗಳ ಕಷ್ಟ ಎಂದರೆ, ಈ ಎರಡೂ ಅವಧಿಯಲ್ಲಿ ಅವರೇ ಬಹುಪಾಲು ಸಂದರ್ಭಗಳಲ್ಲಿ ಜವಾಬ್ದಾರಿ ನಿರ್ವಹಿಸಬೇಕು. ಜಸಿøàತ್‌ ಬುಮ್ರಾ ಆ ಮಟ್ಟಿಗೆ ಇನ್ನಿಂಗ್ಸ್‌ನ
ಆರಂಭದಿಂದ ಅಂತ್ಯದವರೆಗೆ ಒತ್ತಡದಲ್ಲಿಯೇ ನಿರ್ವಹಿಸಬೇಕು. ಏಕೆಂದರೆ ಅವರು ಪವರ್‌ಪ್ಲೇ, ಡೆತ್‌ ಓವರ್‌ ಸ್ಪೆಶಲಿಸ್ಟ್‌!

2016ರಲ್ಲಿ ಅವರು ಪಡೆದ 28 ವಿಕೆಟ್‌ ಟಿ20ಯ ವರ್ಷವೊಂದರ ಅತಿ ಹೆಚ್ಚಿನ ವಿಕೆಟ್‌ ಗಳಿಕೆ. ಅವರು ಡಿರ್ಕ್‌ ನಾನೆಸ್‌ರ ದಾಖಲೆ ಧ್ವಂಸಗೊಳಿಸಿದರು ಎಂಬುದಕ್ಕಿಂತ, ಈ ಸಮಯದಲ್ಲಿ ಅವರು ಓವರ್‌ ಒಂದಕ್ಕೆ ಕೇವಲ 6.62ರಷ್ಟು ರನ್‌ ಬಿಟ್ಟುಕೊಟ್ಟಿದ್ದಾರೆ ಎಂಬುದು ಹೆಚ್ಚು ಆಕರ್ಷಕ. ಅಷ್ಟಾಗಿದ್ದರೂ ಅವರು ಗಮನ ಸೆಳೆಯುತ್ತಿರಲಿಲ್ಲವೇನೋ, ಮೊನ್ನೆ ಇಂಗ್ಲೆಂಡ್‌ ವಿರುದ್ಧದ ಎರಡನೇ ಟಿ20ಯ ಕೊನೆಯ ಓವರ್‌ನಲ್ಲಿ ಎಂಟು ರನ್‌ ಗಳಿಸಿದ್ದರೆ ಜಯಭೇರಿ ಪಡೆಯುತ್ತಿದ್ದ ಬ್ರಿಟಿಷರನ್ನು ಕಟ್ಟಿಹಾಕಿ ಕೇವಲ ಎರಡು ರನ್‌ ಕೊಟ್ಟಿದ್ದು, ಜೊತೆಗೆ ಎರಡು ವಿಕೆಟ್‌ ಪಡೆದಿದ್ದು, ಜೊತೆಗೆ ಪ್ರಪ್ರಥಮ ಬಾರಿಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದಿದ್ದು… ವಾವ್‌!

ಹಲವರ ಕಿರಿಕ್‌ ಇದೆ. ಮೊದಲ ಎಸೆತದಲ್ಲಿ ಎಲ್‌ಬಿಡಬ್ಲ್ಯು ಆದ ರೂಟ್‌ ಔಟ್‌ ಆಗಿರಲಿಲ್ಲ, ಈ ತಪ್ಪು ತೀರ್ಪು ಪಂದ್ಯದ ಗತಿಯನ್ನು ಬದಲಿಸಿತು. ಇದು ಅರ್ಧ ಸತ್ಯ ಮಾತ್ರ, ಆ ವೇಳೆಗೆ ಕೇವಲ 5 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ ತಂಡದಲ್ಲಿ ಇನ್ನೂ “ಆಡಬಲ್ಲ “ಬ್ಯಾಟ್‌ ಬೀಸಬಲ್ಲ ಬ್ಯಾಟ್ಸ್‌ಮನ್‌ ಇದ್ದರು. ಅವರಿಗೆ ಮುಂದಿನ 5 ಎಸೆತದಲ್ಲಿ ಕೇವಲ ಎರಡು ರನ್‌ ಮಾಡಲಾಯಿತು ಎಂಬುದು ಬುಮ್ರಾರ ವಿಶಿಷ್ಟ ಬೌಲಿಂಗ್‌ ಶೈಲಿ, ನಿಯಂತ್ರಿತ ವೇಗ, ಅಪರೂಪದ ಪಫೆìಕ್ಟ್ ಯಾರ್ಕರ್‌ ಎಸೆತಗಳು ಕಾರಣ. ಬುಮ್ರಾರಿಗೆ ಸಲ್ಲಬೇಕಾದ ಗೌರವದಲ್ಲಿ ಮಿಸ್‌ ಮಾಡಬೇಡಿ, ಪ್ಲೀಸ್‌!

ರನ್‌ ಸುನಾಮಿಯಲ್ಲಿ ಬೌಲಿಂಗ್‌ ಮಿಷನ್‌!
ಬುಮ್ರಾರನ್ನು ಡೆತ್‌ ಓವರ್‌ ಬೌಲರ್‌ ಎಂದು ಘೋಷಿಸಲು ಕಾರಣವಿದೆ. ಟಿ20 ಕ್ಯಾರಿಯರ್‌ನಲ್ಲಿ ಈ ಮನುಷ್ಯ ಮೊದಲ 6 ಓವರ್‌ಗಳಲ್ಲಿ ಈವರೆಗೆ 41 ಓವರ್‌ ಬೌಲ್‌ ಮಾಡಿದ್ದು 6.63ರ ಸರಾಸರಿಯಲ್ಲಿ ರನ್‌ ಕೊಟ್ಟಿದ್ದಾರೆ. ಮುಂದಿನ 9 ಓವರ್‌ ಅಥವಾ 15ನೇ ಓವರ್‌ಗಳ ಸರಾಸರಿ 5.69. ಕೊನೆಯ 5 ಓವರ್‌, 15ರಿಂದ 20ರ ಬೌಲಿಂಗ್‌ನಲ್ಲಿ ಅವರ ರನ್‌ ನೀಡಿಕೆ ಓವರ್‌ಗೆ 6.85ಕ್ಕಷ್ಟೇ ವಿಸ್ತರಿಸುತ್ತದೆ. ಸರಾಸರಿ ಪ್ರತಿ 8 ಚೆಂಡಿಗೆ ಬೌಂಡರಿ, ಸಿಕ್ಸ್‌ ಕೊಡುತ್ತಾರೆ ಎಂಬುದು, ಈ ಅವಧಿಯಲ್ಲೂ ಶೇ. 40ರಷ್ಟು “ರನ್‌ರಹಿತ ಎಸೆತ ಬೌಲ್‌ ಮಾಡುತ್ತಾರೆ ಎಂಬ ಅಂಶ ಗಮನಾರ್ಹ.

ಹಿಂಗೂ ನೋಡಬಹುದು. ಬುಮ್ರಾ ರನ್‌ ಕೊಡದೆ ಜುಗ್ಗತನ ತೋರುವುದು ಜೊತೆಯಾಗಿ ಬೌಲ್‌ ಮಾಡುವವರಿಗೂ ಸಹಾಯ ಮಾಡಬಲ್ಲದು. ಬುಮ್ರಾ ಆಡಿದ ಪಂದ್ಯಗಳ ಪೈಕಿ ಡೆತ್‌ ಓವರ್‌ಗಳ 535 ಎಸೆತಗಳಲ್ಲಿ ಬುಮ್ರಾ ಪಾಲು 211 ಚೆಂಡು. ಈ 35.1 ಓವರ್‌ಗಳಲ್ಲಿ ಬುಮ್ರಾ 24 ಬೌಂಡರಿ ಹೊಡೆತ ಸೇರಿ 241 ರನ್‌ ಕೊಟ್ಟಿದ್ದಾರೆ. ಪ್ರತಿ 8.79 ಎಸೆತಕ್ಕೆ ಒಂದು ಮೈದಾನ ದಾಟಿಸಿದ ಹಿಟ್‌. ಇವರೊಂದಿಗೆ ಬೌಲ್‌ ಮಾಡಿದವರು 30.4 ಓವರ್‌ನಲ್ಲಿ 30 ಹಿಟ್‌, ಓವರ್‌ಗೆ 8 ರನ್‌ ಹಾಗೂ ಪ್ರತಿ 6.13 ಎಸೆತಕ್ಕೇ ಓಡುವ ಅವಶ್ಯಕತೆ ಇಲ್ಲದ ರನ್‌ ನೀಡಿದ್ದಾರೆ. ಬುಮ್ರಾ ತಾಕತ್ತು ಇಲ್ಲದಿದ್ದರೆ ಈ ಅಂಕಿಅಂಶ ಬಿಗಡಾಯಿಸಿರುತ್ತಿತ್ತು. ನೆನಪಿರಲಿ, ಇಲ್ಲಿ ಕೊಟ್ಟಿರುವ ಅಷ್ಟೂ ಲೆಕ್ಕಾಚಾರ 15ನೇ ಓವರ್‌ನ ನಂತರದ್ದು, ಎದುರಾಳಿ ತಂಡ ಚೇಸಿಂಗ್‌ನಲ್ಲಿದ್ದಾಗಿನದ್ದು ಮತ್ತು ಮುಖ್ಯವಾಗಿ ಆ ತಂಡ 5ಕ್ಕಿಂತ ಕಡಿಮೆ ವಿಕೆಟ್‌ ಕಳೆದುಕೊಂಡ ಸಂದರ್ಭಗಳನ್ನು ಮಾತ್ರ ಪರಿಗಣಿಸಿದ್ದು!

ಕೊನೆಮಾತು 
ಕ್ರಿಕೆಟ್‌ ಆಟವಾಗಿಯಲ್ಲದೆ, ಅದರ ಅಂಕಿಅಂಶಗಳ ಮೂಲಕವೂ ಆಟವಾಡಬಹುದಾದ ವಿಶಿಷ್ಟ ಕ್ರೀಡೆ. ಸಾಂ ಕ ಆಟವಾಗಿಯೂ ವೈಯುಕ್ತಿಕ ಅಂಕಿಅಂಶಗಳ ಸಂಭ್ರಮವನ್ನು ಇಲ್ಲಿ ನಾವು ಕಾಣಬಹುದು. ಇನ್‌ಪ್ಯಾಕ್ಟ್, ಈ ಅಂಕಿಅಂಶಗಳ ಸಾಧ್ಯತೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿರುವುದು ಕೂಡ ಕ್ರಿಕೆಟ್‌ ಮಾತ್ರವೇ. ಬುಮ್ರಾ ಬಗ್ಗೆ ತೀರಾ ಹೆಚ್ಚಿನ ಮಾತು ಬೇಡ. ಹಿಂದೆ ನಾವು ಇರ್ಫಾನ್‌ ಪಠಾಣ್‌ರ ಕುರಿತೂ ಇದೇ ರೀತಿ ಭವಿಷ್ಯವನ್ನು ಕನಸಿದ್ದೆವು. ಬಾಂಗ್ಲಾದ ಮುಸ್ತಫಿಝರ್‌ ರಹಮಾನ್‌ ಭಾರತೀಯರಿಗೆ ಬಾಂಗ್ಲಾದಲ್ಲಿ ಕಬ್ಬಿಣದ ಕಡಲೆಯಾಗಿದ್ದರೆ ನ್ಯೂಜಿಲೆಂಡಿಗೆ ಹೋಗಿ ಇನ್ನಿಲ್ಲದಂತೆ ಹೊಡೆಸಿಕೊಂಡಿದ್ದಾರೆ. ಮತ್ತೆ ಅವರು ಆತ್ಮವಿಶ್ವಾಸ ಪಡೆಯಬೇಕು ಎಂದರೂ ಆಫ್ಘಾನಿಸ್ತಾನದ ಎದುರು ಸರಣಿಯಾಡಬೇಕಾಗುವಂತಾಗಿದೆ!

ಆದ್ರೂ ಕೊನೆ ಅಂಕಿಅಂಶ ಹೀಗೆ ಹೇಳುತ್ತದೆ, ಕಡೆಯ ನಾಲ್ಕು ಓವರ್‌ಗಳಲ್ಲಿ ಚೆಂಡಿಗೊಂದಕ್ಕಿಂತ ಕಡಿಮೆ ರನ್‌ ಕೊಟ್ಟ ದಾಖಲೆ ಪರಿಶೀಲಿಸಿದರೆ ಬುಮ್ರಾರಿಗೆ ಎರಡನೇ ಸ್ಥಾನ. ಅವರು ಇಂತಹ  ಒಟ್ಟು 32 ಓವರ್‌ ಸ್ಪೆಲ್‌ನಲ್ಲಿ 17 ಬಾರಿ ಓವರ್‌ನಲ್ಲಿ ಚೆಂಡಿಗೆ ಒಂದಕ್ಕಿಂತ ಕಡಿಮೆ ರನ್‌ ಕೊಟ್ಟಿದ್ದುಂಟು. ಕನಿಷ್ಟ 25 ಇಂತಹ ಓವರ್‌ ಬೌಲ್‌ ಮಾಡಿದವರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಕೇ ಅಬ್ಟಾಟ್‌ 28ರಲ್ಲಿ 15 ಬಾರಿ ಈ ವಿಕ್ರಮ ಮಾಡಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನೆಂತ ಹೇಳುವುದು?

ಅಮ್ಮನ ನಿದ್ದೆಯಿಂದ ಯಾರ್ಕರ್‌ ಜನ್ಮ!
ತಮ್ಮ ಎಂಟರ ಎಳವೆಯಲ್ಲಿ ಹೆಪಟೈಸಸ್‌ ಬಿಗೆ ತಂದೆಯನ್ನು ಕಳೆದುಕೊಂಡ ಬುಮ್ರಾರಿಗೆ ಅಕ್ಷರ ತಲೆಗೆ ಹತ್ತಿದ್ದು ಅಷ್ಟಕಷ್ಟೇ. ಮೂರು ಹೊತ್ತೂ ಕ್ರಿಕೆಟ್‌ ಅಂತಿದ್ದವನಿಗೆ ಬೇಸಿಗೆ ಸಮಯದಲ್ಲಿ ಮನೆ ಹೊರಗಡೆ ಬೌಲಿಂಗ್‌ ಅಭ್ಯಾಸ ಮಾಡುವುದು ಕಷ್ಟವಾಗಿತ್ತು. ಮನೆಯೊಳಗೆ ಬೌಲ್‌ ಮಾಡಲು ಅವಕಾಶವಿತ್ತ ತಾಯಿ ದಲ್ಜಿತ್‌ ಬುಮ್ರಾ ಒಂದು ಸೂಚನೆಯನ್ನು ಕೂಡ ಕೊಟ್ಟರು, ಆದಷ್ಟು ಕಡಿಮೆ ಶಬ್ಧ ಬರುವಂತೆ ಬೌಲ್‌ ಮಾಡು, ನನಗೆ ಮಧ್ಯಾಹ್ನದ ಚಿಕ್ಕ ನಿದ್ದೆಯನ್ನು ಮಾಡಲಿಕ್ಕಿದೆ! 12ರ ಬಾಲ ಬುಮ್ರಾ ಇದಕ್ಕೊಂದು ಪರಿಹಾರವನ್ನು ಕಂಡುಕೊಂಡ. ಮನೆಯ ಗೋಡೆ ಹಾಗೂ ನೆಲ ಒಂದಕ್ಕೊಂದು ಬೆಸೆಯುವ ಜಾಗಕ್ಕೆ ಬೌಲ್‌ ಮಾಡಿದರೆ ಶಬ್ಧ ಕಡಿಮೆ ಬರುತ್ತದೆ ಎಂಬುದನ್ನು ಸಂಶೋಧಿಸಿ, ಆ ಜಾಗಕ್ಕೇ ನೇರವಾಗಿ ಎಸೆಯಲಾರಂಭಿಸಿದ. ಅದೇ ಇಂದು ಟ್ರೇಡ್‌ಮಾರ್ಕ್‌ ಯಾರ್ಕರ್‌ ಆಗ ಪರಿಣಮಿಸಿದೆ. ಅಮ್ಮಾ ಮಾಡಿದ್ದು ಒಳ್ಳೆಯದಕ್ಕಾಯಿತು!

ಮಾ.ವೆಂ.ಸ.ಪ್ರಸಾದ್‌

ಟಾಪ್ ನ್ಯೂಸ್

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

2-hunsur

Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು

Kalaburagi: 6 acres of sugarcane crop caught fire after being struck by an electric wire

Kalaburagi: ವಿದ್ಯುತ್​ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ

Sandalwood: ತೆರೆಮೇಲೆ ʼಅನಾಥʼನ ಕನಸು

Sandalwood: ತೆರೆಮೇಲೆ ʼಅನಾಥʼನ ಕನಸು

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.