ಆಧ್ಯಾತ್ಮಿಕ ನೆಲೆ-ಭಕ್ತಿಯ ಸೆಲೆ ಆಲಂಬಗಿರಿ

Team Udayavani, Feb 11, 2017, 11:47 AM IST

10.jpg

ಕಷ್ಟದಲ್ಲಿ ಶಿವನೇ ಬೇಕು. ನಷ್ಟದಲ್ಲಿ ಶಿವನೇ ಬೇಕು. ಇಷ್ಟರಿಗೂ, ಭ್ರಷ್ಟರಿಗೂ ಬೇಕಾದ ಮೋಕ್ಷಪ್ರದಾಯಕ ಈಶ್ವರ ಸ್ವರೂಪಿ ಆಲಂಬಗಿರಿಯಲ್ಲಿದ್ದರೇನೂ, ಕಾಶಿಯಲ್ಲಿದ್ದರೇನೂ ಭಕ್ತರನ್ನು ಸದಾ ತನ್ನತ್ತ ಸೆಳೆದು ಇಷ್ಟಾರ್ಥಗಳನ್ನು ಪೂರೈಸಿ, ಕೈಡಿದು ಕಾಪಾಡುತ್ತಿರುವ ಆಧ್ಯಾತ್ಮಿಕ ನೆಲೆ, ಈ ಭಕ್ತಿಯ ಸೆಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕು ಆಲಂಬಗಿರಿ ಶ್ರೀ ಗುರುಮೂರ್ತೇಶ್ವರ ಸನ್ನಿಧಿ. 

ದೇವಾಲಯಗಳ ಬೀಡು ಚಿಂತಾಮಣಿ
ನೆರೆಯ ಆಂಧ್ರಪ್ರದೇಶದ ಅಂಚಿಗೆ ಆನಿಕೊಂಡಿರುವ ವ್ಯವಹಾರಿಕ ನಾಡು ಚಿಂತಾಮಣಿ. ಇಲ್ಲಿನ ಮೂಡಣಬಾಗಿಲು, ಶತಶೃಂಗ ಪರ್ವತಗಳು, ಕುರುಡುಮಲೈ, ನಂದೀದುರ್ಗ, ವಿದುರಾಶ್ವತ ಮಹಾಕ್ಷೇತ್ರಗಳ ಮಧ್ಯೆ ಪೂರ್ಣಚಂದ್ರ ತೇಜಸ್ಸಿನಂತೆ ಕಂಗೋಳಿಸುತ್ತಿರುವುದೇ ಗುಡಿ ‘ಆಲಂಬಗಿರಿ’.
ಚಿಂತಾಮಣಿ ನಗರದ ದಕ್ಷಿಣ ದಿಕ್ಕಿಗೆ 6 ಕಿಲೋ ಮೀಟರ್‌ಗಳ ದೂರದಲ್ಲಿರುವ ಆಲಂಬಗಿರಿ ಗ್ರಾಮ, ಕೈವಾರ ಕ್ಷೇತ್ರಕ್ಕೆ 10 ಕಿ.ಮೀ.ಗಳು ಹಾಗೂ ಚಿನ್ನಸಂದ್ರಕ್ಕೆ 3 ಕಿ.ಮೀ.ಗಳ ಅಂತರದಲ್ಲಿದೆ. ಹಸಿರು ಬನಸಿರಿಯ ಮಡಿಲಲ್ಲಿ, ನಿಸರ್ಗ ಸಂಪತ್ತಿನ ಮಹಾನ್‌ಗುಡಿಯಲ್ಲಿ ಗಿರಿಕಂದರಗಳ ಮಧ್ಯೆ, ಗಂಧರ್ವ ಕಲೆಗಳ ಬೀಡಾಗಿದೆ ಆಲಂಬಗಿರಿ ಕ್ಷೇತ್ರ. ಪೂರ್ವಕ್ಕೆ ಮನಸೆಳೆವ ಕುರುಬೂರು ಬೆಟ್ಟಗಳ ಸಾಲು, ಪಶ್ಚಿಮಕ್ಕೆ ಮಡಬಹಳ್ಳಿ ತಿಟ್ಟುಗಳು, ಕಾಡು ಕೊಂಗನಹಳ್ಳಿ (ಚನ್ನಕೇಶವಪುರ) ದಿಣ್ಣೆ, ಮೈಲಾರಪುರ ಗಿರಿಶಿಖರಗಳ ನಡುವೆ ವರ್ಷ ಪೂರ್ತಿ ಬತ್ತದಿರುವ ವೆಂಕಟತೀರ್ಥ (ಚಿಲುಮೆ) ಪ್ರಕೃತಿಯ ವಿಸ್ಮಯಗಳÇÉೊಂದೆನಿಸಿದೆ.

ಜಟೆಯ ಗಂಗೆಯೇ ವೆಂಕಟತೀರ್ಥ
  ಆಲಂಬಗಿರಿ ಗ್ರಾಮದ ನೈರುತ್ಯಕ್ಕಿರುವ ಬೆಟ್ಟ-ಗುಡ್ಡಗಳನ್ನು ಆಧ್ಯಾತ್ಮಿಕ ಕೋನದಲ್ಲಿ ಗಮನಿಸಿದಾಗ ಶ್ರೀ ವೆಂಕಟೇಶ್ವರ ಸ್ವಾಮಿಯ ನಾಮದಂತೆ ಕಂಗೊಳಿಸುತ್ತವೆ. ಈ ಬೆಟ್ಟದಲ್ಲಿ ಶ್ರೀ ಕಲ್ಕಿ ವೆಂಕಟರಮಣ ಸ್ವಾಮಿ (ಶ್ರೀಮನ್ನಾರಾಯಣ) ತಪೋಧ್ಯಾನದಿಂದ ಬಳಲಿದ್ದಾ ಗ ಕುಡಿಯಲು ನೀರು ಕಾಣದೆ ಪರಿತಪಿಸುತ್ತಿದ್ದರಂತೆ. ಆಗ ಸಾಕ್ಷಾತ್‌ ಪರಶಿವ, ಪರಮೇಶ್ವರ (ಶ್ರೀ ಗುರುಸ್ವರೂಪಿ ಗುರುಮೂರ್ತೇಶ್ವರ ಸ್ವಾಮಿ) ಪ್ರತ್ಯಕ್ಷನಾಗಿ ನಾರಾಯಣ ಸ್ವರೂಪ ಶ್ರೀ ವೆಂಕಟರಮಣನಿಗೆ ತನ್ನ ಜಟೆಯಲ್ಲಿದ್ದ ಗಂಗೆಯನ್ನು ನೀಡಿದ್ದರೆಂಬ ಪ್ರತೀತಿ ಇದೆ. ಅದರ ಕುರುಹಾಗಿದೆ ಇಲ್ಲಿರುವ ಸದಾ ಬತ್ತದ ವೆಂಕಟತೀರ್ಥ ಚಿಲುಮೆ. ಈ ಅಧ್ಯಾತ್ಮ ಸತ್ಯದ ಕುರುಹು ಎನ್ನುವಂತೆ ಬೆಟ್ಟಕ್ಕೆ ಅನಿಕೊಂಡಂತೆ ನಿರ್ಮಿಸಿರುವ ಶಂಕು ಮತ್ತು ಚಕ್ರ ಇಲ್ಲಿಯ ನಿಸರ್ಗ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ.

ಪವಾಡ ಸದೃಶ ಶ್ರೀ ಗುರುಮೂರ್ತೇಶ್ವರ ಸ್ವಾಮಿ
ಸಾಕ್ಷಾತ್‌ ಗುರು ಸ್ವರೂಪನಾದ ಗುರುಮೂರ್ತೇಶ್ವರ ಸ್ವಾಮಿ ದೇವಾಲಯ ಎರಡೂವರೆ ದಶಕಗಳ ಹಿಂದೆ ಆಲಂಬಗಿರಿಯಲ್ಲಿ ಸ್ಥಾಪನೆಗೊಂಡಿದ್ದೇ ಒಂದು ಪವಾಡ. ಗ್ರಾಮದ ಈಶಾನ್ಯದಲ್ಲಿ ಈಶ್ವರ ನೆಲೆಸಿದ ನಂತರ ದೈವದತ್ತವಾಗಿ ವಾಸ್ತುಪುರುಷ ಜಾಗೃತನಾಗಿ ಗ್ರಾಮದ ಅಭಿವೃದ್ಧಿಗೆ ಆಸ್ಪದ ನೀಡಿದ ಎನ್ನುವುದರಲ್ಲಿ ಅತಿಶಯೋಕ್ತಿಯಲ್ಲ. ಇಲ್ಲಿ ನೆಲೆಸಿರುವ ಐತಿಹಾಸಿಕ ಶ್ರೀ ಕಲ್ಕಿ ವೆಂಕಟರಮಣ ಸ್ವಾಮಿ ದೇವಾಲಯ ಜೀಣೋದ್ಧಾರ ಕಾರ್ಯ ನಡೆದು ವೈಭವದಿಂದ ಮೆರೆಯುತ್ತಿರುವುದೆ ಸ್ಪಷ್ಟ ಚಿತ್ರಣ.

ಶ್ರೀ ಗುರುಮೂರ್ತೇಶ್ವರ ಸ್ವಾಮಿ ದಂಪತಿ ಹಾಗೂ ಕುಟುಂಬ ಸಮೇತರಾಗಿ ಇಲ್ಲಿ ನೆಲೆಸಿದ್ದಾರೆ. ಶ್ರೀ ಪ್ರಸನ್ನ ಪಾರ್ವತಿ, ಬಲಮುರಿ ಗಣಪತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ, ನವಗ್ರಹಗಳು ಹಾಗೂ ನಾಗದೇವತೆಗಳನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜೆ, ಮಂಗಳ ಕಾರ್ಯಗಳು ನಡೆಯುತ್ತಿವೆ. ವಿಶೇಷ ದಿನಗಳಾದ ಸೋಮವಾರ, ಕಾರ್ತಿಕ ಮಾಸದಲ್ಲಿ ವೈಭವದಿಂದ ದೀಪೋತ್ಸವ, ಶಿವರಾತ್ರಿಯಲ್ಲಿ ಪಂಚದಿನ ದೀಕ್ಷಾ ಪ್ರಕಾರ ಅಂಕುರಾರ್ಪಣ, ಧ್ವಜಾರೋಹಣ, ನಂದಿವಾಹನೋತ್ಸವ, ನಿತ್ಯ ಕ್ಷೀರಾಭಿಷೇಕ, ಶೇಷ ವಾಹನೋತ್ಸವ, ಕಲ್ಯಾಣೋತ್ಸವ, ಮುತ್ತಿನ ಪಲ್ಲಕ್ಕಿ ಮೆರವಣಿಗೆ, ಮಾರನೆ ದಿನದಂದು ಬ್ರಹ್ಮರಥೋತ್ಸವ ಹೀಗೆ ನಾನಾ ಕೈಂಕರ್ಯಗಳು  ನಡೆಯುತ್ತಿವೆ. ಸುತ್ತಮುತ್ತಲ ಹಳ್ಳಿಗಳ ಸಹಸ್ರಾರು ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿ ಅನ್ನಸಂತರ್ಪಣೆ ಸೇವಿಸಿ ತೃಪ್ತರಾಗುತ್ತಾರೆ.

ಅದ್ಧೂರಿ ಬ್ರಹ್ಮರಥೋತ್ಸವ
ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ಕೋಲಾರ ಜಿಲ್ಲೆಗಳಲ್ಲಿ ಭಕ್ತಾದಿಗಳಿಗೆ ಇರುವುದೆಂದೇ ಶ್ರೀ ಗುರುಮೂತೇಶ್ವರ. ದೂರದ ಊರುಗಳಿಂದ ಬಂದು ತಮ್ಮ ಹರಕೆ ತೀರಿಸಿ ಶ್ರೀ ಗುರುಮೂತೇìಶ್ವರ ಸ್ವಾಮಿ ಮತ್ತು ಪ್ರಸನ್ನ ಪಾರ್ವತಾಂಬೆಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಪ್ರತಿ ಸಲದಂತೆ ಈ ಬಾರಿ ಶಿವರಾತ್ರಿ ಪೂಜಾ ವಿಧಿ ವಿಧಾನಗಳು ಫೆ.23 ರಿಂದ ಆರಂಭವಾಗಿ ಫೆ.28ರಂದು ಮುಗಿಯಲಿವೆ. ಪ್ರಮುಖವಾಗಿ 24 ರಂದು ಶಿವರಾತ್ರಿ ಅಭಿಷೇಕ ಪೂಜೆಗಳಾದರೆ ಬ್ರಹ್ಮರಥೋತ್ಸವ ಮಾಘ ಬಹುಳ ಚತುರ್ದಶಿ ಶನಿವಾರ ಫೆ.25 ರಂದು ನಡೆಯಲಿದೆ ಎಂದು ಪ್ರಧಾನ ಅರ್ಚಕ  ಸತ್ಯನಾರಾಯಣ ಶರ್ಮ ಹೇಳುತ್ತಾರೆ.

 ಗೋಪಾಲ್‌ ತಿಮ್ಮಯ್ಯ

ಟಾಪ್ ನ್ಯೂಸ್

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

IPL Mega Auction: Here’s what RCB’s team looks like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್‌ ಸಿಬಿ ತಂಡ ಹೀಗಿದೆ ನೋಡಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

IPL Mega Auction: Here’s what RCB’s team looks like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್‌ ಸಿಬಿ ತಂಡ ಹೀಗಿದೆ ನೋಡಿ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.