ಹೊರ ಗುತ್ತಿಗೆ ಪೌರಕಾರ್ಮಿಕರು ಒಂದೂವರೆ ತಿಂಗಳಲ್ಲಿ ಕಾಯಂ


Team Udayavani, Feb 11, 2017, 12:28 PM IST

dvg1.jpg

ದಾವಣಗೆರೆ: ರಾಜ್ಯದ ಸ್ಥಳೀಯ ಸಂಸ್ಥೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 35 ಸಾವಿರಕ್ಕೂ ಅಧಿಕ ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ಪ್ರಕ್ರಿಯೆ ಮಾರ್ಚ್‌ ಅಂತ್ಯ ಇಲ್ಲವೇ ಏಪ್ರಿಲ್‌ ಮೊದಲ ವಾರದಲ್ಲಿ ಪೂರ್ಣಗೊಳ್ಳಲಿದೆ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್‌. ವೆಂಕಟೇಶ್‌ ತಿಳಿಸಿದ್ದಾರೆ. 

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರನ್ನು ರಾಜ್ಯ ಸರ್ಕಾರ ವಿಶೇಷ ನೇಮಕಾತಿ ಆಧಾರದಲ್ಲಿ ಕಾಯಂಗೊಳಿಸಲಿದೆ ಎಂದು ತಿಳಿಸಿದರು. 

ಕಾಯಮಾತಿಗೆ ಕೆಲವು ಮಾನದಂಡ ಅನುಸರಿಸಲಾಗುತ್ತಿದ್ದು, ಹೊರ ಗುತ್ತಿಗೆ ಆಧಾರದಲ್ಲಿ ಕನಿಷ್ಠ 2 ವರ್ಷ ಕೆಲಸ ಮಾಡಿರುವ ಹಾಗೂ ಕನ್ನಡ ಮಾತನಾಡಬೇಕು. ಅಲ್ಲದೆ, ಪೌರ ಕಾರ್ಮಿಕರ ಜೊತೆಗೆ ಆಸ್ಪತ್ರೆ, ಜಲ ಮಂಡಳಿ ಇತರೆಡೆಯಲ್ಲಿನ ಸ್ವತ್ಛತಾ ಕೆಲಸಗಾರರನ್ನು ಕಾಯಂಗೊಳಿಸುವ ಆಯೋಗದ ಚಿಂತನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌. ಆಂಜನೇಯ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು. 

ತಲೆ ಮೇಲೆ ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆ 2013ರಲ್ಲೇ ಜಾರಿಗೆ ಬಂದಿದ್ದರೂ ದಾವಣಗೆರೆಯಲ್ಲಿ 250 ಕುಟುಂಬಗಳಿವೆ. ಹಾವೇರಿಯಲ್ಲಿ ಇನ್ನೂ ಆ ಪದ್ಧತಿ ಜೀವಂತವಾಗಿದೆ. ಮ್ಯಾನುಯೆಲ್‌ ಸ್ಕಾವೆಂಜರ್ಗಳ ಜೀವನ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಮತ್ತಿತರ ಸೌಲಭ್ಯ  ಒದಗಿಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌. ಆಂಜನೇಯ ಅಧ್ಯಕ್ಷತೆಯಲ್ಲಿ ಆಯೋಗ 3 ಸಭೆ ನಡೆಸಿದೆ. 

ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ, ಅವರ ಸ್ಥಿತಿಗತಿ ಬಗ್ಗೆ ಪರಾಮರ್ಶಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ನಿವೇಶನ ಹೊಂದಿರುವಂಥಹ ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಆಯೋಗದಿಂದ 7.5 ಲಕ್ಷ ನೀಡಲಾಗುವುದು. ಸರ್ಕಾರ 6 ಲಕ್ಷ ನೀಡಲಿದ್ದು, ಬಾಕಿ 1.5 ಲಕ್ಷ ಮೊತ್ತವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಭರಿಸುವುದಕ್ಕೆ ಸಚಿವ ಎಚ್‌. ಆಂಜನೇಯ ಒಪ್ಪಿಕೊಂಡಿದ್ದಾರೆ.

ಗೃಹ ಭಾಗ್ಯ ಯೋಜನೆಯಲ್ಲಿ ನಿವೃತ್ತ ಹಾಗೂ ಹೊರ ಗುತ್ತಿಗೆ ಆಧಾರದ ಕಾರ್ಮಿಕರಿಗೂ ಸಹ ವಿಸ್ತರಿಸಲಾಗುವುದು. ನಿವೇಶನರಹಿತರಿಗೆ ಜಿಲ್ಲಾಡಳಿತದಿಂದ ನಿವೇಶನ ಖರೀದಿಸಿ ಕೊಡಲು ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್‌ ಪ್ರಕಟಿಸಲಾಗುವುದು. ಪೌರ ಕಾರ್ಮಿಕರಿಗೆ ಸೂರು ಒದಗಿಸುವುದಕ್ಕೆ ಆಯೋಗ ಸದಾ ಬದ್ಧ ಎಂದು ತಿಳಿಸಿದರು.  

ಟಾಪ್ ನ್ಯೂಸ್

Daily Horoscope

Daily Horoscope; ಈ ರಾಶಿಯ ಅವಿವಾಹಿತರಿಗೆ ಬಾಳ ಸಂಗಾತಿ ಲಭಿಸುವ ಚಿಂತೆ.

1-rrttt

Yakshagana;ಕಲೆ ಬದುಕಿನ ಸಂಪಾದನೆಗಲ್ಲ, ನಮ್ಮ ಸಂತೋಷಕ್ಕೆ:ಸಂಜೀವ ಸುವರ್ಣ

tirupati

Tirupati; ಶೀಘ್ರ ಕಲಬೆರಕೆ ಪತ್ತೆ ಯಂತ್ರ ಅಳವಡಿಸಲು ನಿರ್ಧಾರ

Vijayendra (2)

BJP; ಬೇಗುದಿಗೆ ವರಿಷ್ಠರ ಸೂತ್ರ : ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ ಇಲ್ಲ

Thavar chand gehlot

Karnataka Govt; ರಾಜ್ಯಪಾಲ ಅರ್ಕಾವತಿ ಬಾಣ :ಕಾಳಗ ಈಗ ಮತ್ತೊಂದು ಸುತ್ತಿಗೆ!

MDNL

Kasaragodu: ಎಂಡಿಎಂಎ ಬೆಂಗಳೂರಿನಿಂದ ಪೂರೈಕೆ: ಎಸ್‌ಪಿ ಶಿಲ್ಪಾ

1-qwewqwqe

World Book of Records; ಪ್ರಜಾಪ್ರಭುತ್ವ ಮಾನವ ಸರಪಳಿಗೆ ವಿಶ್ವದಾಖಲೆ ಗರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

Davanagere: Judicial custody of 14 accused in Ganesh procession stone pelting case

Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ

ಕೋಡಿಹಳ್ಳಿ ಚಂದ್ರಶೇಖರ್

Davanagere: ಗ್ಯಾರಂಟಿ ಯೋಜನೆಗಳು ಮತ ಪಡೆಯಲೆಂದೇ ರೂಪಿಸಿರುವ ಕಾರ್ಯಕ್ರಮ: ಕೋಡಿಹಳ್ಳಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Daily Horoscope

Daily Horoscope; ಈ ರಾಶಿಯ ಅವಿವಾಹಿತರಿಗೆ ಬಾಳ ಸಂಗಾತಿ ಲಭಿಸುವ ಚಿಂತೆ.

tirupati

Tirupati; ಶೀಘ್ರ ಕಲಬೆರಕೆ ಪತ್ತೆ ಯಂತ್ರ ಅಳವಡಿಸಲು ನಿರ್ಧಾರ

1-rrttt

Yakshagana;ಕಲೆ ಬದುಕಿನ ಸಂಪಾದನೆಗಲ್ಲ, ನಮ್ಮ ಸಂತೋಷಕ್ಕೆ:ಸಂಜೀವ ಸುವರ್ಣ

Aranthodu: ವಿದ್ಯಾರ್ಥಿಯ ಮರ್ಮಾಂಗ ಹಿಡಿದೆಳೆದು ಹಲ್ಲೆ

Aranthodu: ವಿದ್ಯಾರ್ಥಿಯ ಮರ್ಮಾಂಗ ಹಿಡಿದೆಳೆದು ಹಲ್ಲೆ

Iceland: 8 ವರ್ಷ ಬಳಿಕ ಐಸ್‌ಲ್ಯಾಂಡ್‌ಗೆ ಹಿಮಕರಡಿ ಭೇಟಿ; ಗುಂಡಿಕ್ಕಿ ಹತ್ಯೆ

Iceland: 8 ವರ್ಷ ಬಳಿಕ ಐಸ್‌ಲ್ಯಾಂಡ್‌ಗೆ ಹಿಮಕರಡಿ ಭೇಟಿ; ಗುಂಡಿಕ್ಕಿ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.