ರೋಗ ನಿರೋಧಕತೆ


Team Udayavani, Feb 12, 2017, 3:45 AM IST

injection.jpg

– ಹಿಂದಿನ ವಾರದಿಂದ
ಚುಚ್ಚುಮದ್ದುಗಳು 
ಎಷ್ಟು  ಸುರಕ್ಷಿತ?

ಚುಚ್ಚುಮದ್ದುಗಳು ಬಹಳ ಸುರಕ್ಷಿತ.  ಚುಚ್ಚುಮದ್ದುಗಳಿಂದ ಉಂಟಾಗುವ ಹೆಚ್ಚಿನ ಪ್ರತಿಕ್ರಿಯೆಗಳು ಸಾಮಾನ್ಯವಾಗಿ ಬಹಳ ಸಣ್ಣ ಪ್ರಮಾಣದವುಗಳು ಮತ್ತು ತಾತ್ಕಾಲಿಕ ರೂಪದವುಗಳು. ಅಂದರೆ ಕೈಯಲ್ಲಿ ಸಣ್ಣ ಹುಣ್ಣಾಗುವುದು ಅಥವಾ ಸೌಮ್ಯ ರೂಪದ ಜ್ವರ ಇತ್ಯಾದಿ. ಚುಚ್ಚುಮದ್ದನ್ನು ಬಹಳ ಎಚ್ಚರಿಕೆಯಿಂದ ಗಮನಿಸುವುದರಿಂದ ಮತ್ತು ಆ ಬಗ್ಗೆ ಸೂಕ್ತ ಸಂಶೋಧನೆಗಳನ್ನು ನಡೆಸಿರುವ ಕಾರಣ, ಚುಚ್ಚುಮದ್ದನ್ನು ನೀಡಿದ ಕಾರಣಕ್ಕಾಗಿ ಬಹಳ ಗಂಭೀರ ರೂಪದ ಆರೋಗ್ಯ ಸಮಸ್ಯೆ ಉಂಟಾಗುವುದು ಬಹಳ ಅಪರೂಪ. ಚುಚ್ಚುಮದ್ದಿನಿಂದ ತಡೆಯಬಹುದಾಗಿದ್ದ ಕಾಯಿಲೆಗಳಿಂದ ನೀವು ಹೆಚ್ಚು ರೋಗಗ್ರಸ್ತರಾಗಬಹುದಾದ ಸಾಧ್ಯತೆ ಇದೆಯೆ ಹೊರತು ಚುಚ್ಚುಮದ್ದಿನಿಂದ ಅಲ್ಲ. ಉದಾಹರಣೆಗೆ:  ಪೋಲಿಯೋ ಪ್ರಕರಣದಲ್ಲಿ-ವ್ಯಕ್ತಿಗೆ ಲಕ್ವಾ ಉಂಟಾಗಬಹುದು. ದಡಾರದ ಕಾರಣದಿಂದಾಗಿ ವ್ಯಕ್ತಿಗೆ ಎನ್ಸೆಫಾಲೈಟಿಸ್‌ ಅಂದ್ರೆ ಮೆದುಳಿನ ಉರಿಯೂತ ಮತ್ತು ಕುರುಡುತನ ಉಂಟಾಗಬಹುದು. ಇಷ್ಟೇ ಅಲ್ಲ ಚುಚ್ಚುಮದ್ದಿನಿಂದ ತಡೆಯಬಹುದಾಗಿರುವ ಕೆಲವು ಕಾಯಿಲೆಗಳ ಪರಿಣಾಮದಿಂದ ಮರಣವೂ ಸಂಭವಿಸಬಹುದು. 

ಒಂದು ಬಾರಿಗೆ ಒಂದಕ್ಕಿಂತ ಹೆಚ್ಚು   ಚುಚ್ಚು ಮದ್ದನ್ನು ನೀಡುವುದು ಸುರಕ್ಷಿತವೇ?
ಹೌದು, ಹಲವಾರು ಚುಚ್ಚುಮದ್ದುಗಳನ್ನು ಒಟ್ಟಿಗೆ ನೀಡುವುದರಿಂದ ಮಗುವಿನ ರೋಗನಿರೋಧಕ ವ್ಯವಸ್ಥೆಯ ಮೇಲೆ ಯಾವ ಅಡ್ಡ ಪರಿಣಾಮವೂ ಉಂಟಾಗುವುದಿಲ್ಲ ಎಂದು ವೈಜ್ಞಾನಿಕ ಸಂಶೋಧನೆಗಳು ತೋರಿಸಿಕೊಟ್ಟಿವೆ.  ಆದರೆ ಪ್ರತಿ ಚುಚ್ಚುಮದ್ದನ್ನು ಬೇರೆ ಬೇರೆ ಜಾಗದಲ್ಲಿ ಕೊಡಬೇಕಾಗುವುದು. ಅನೇಕ ಚುಚುಮದ್ದುಗಳನ್ನು ಒಂದೇ ಬಾರಿ ಕೊಡುವುದರಿಂದ ಸಿಗುವ ಮುಖ್ಯ ಪ್ರಯೊಜನ ಏನೆಂದರೆ, ಹಲವು ಬಾರಿ ಕ್ಲಿನಿಕ್‌ಗೆ ಭೇಟಿಕೊಡುವ ಪ್ರಮೇಯ ತಪ್ಪುವುದು ಮತ್ತು ಇದು ಹಣ, ಸಮಯವನ್ನೂ ಸಹ ಉಳಿಸುತ್ತದೆ. ಹಲವು ಚುಚ್ಚುಮದ್ದುಗಳನ್ನು ಅಥವಾ ರೋಗನಿರೋಧಕಗಳನ್ನು ಒಟ್ಟಿಗೆ ಪಡೆಯುವುದರಿಂದ ಮಕ್ಕಳು ನಿಗದಿತ ಅವಧಿಯೊಳಗಾಗಿ ಶಿಫಾರಸುಗೊಳಿಸಿದ ಚುಚ್ಚುಮದ್ದನ್ನು ಪಡೆಯಲು ಸಾಧ್ಯ ವಾಗುವುದು. ಉದಾಹರಣೆಗೆ MMR (ದಡಾರ, ಕೆಪ್ಪಟೆ ಮತ್ತು ರುಬೆಲ್ಲಾ) ಮತ್ತು (ಲಿಕ್ವಿಡ್‌ ಪೆಂಟಾವೇಲೆಂಟ್‌ ವ್ಯಾಕ್ಸಿನ್‌) ರೀತಿಯ ಜಂಟೀ ಚುಚ್ಚುಮದ್ದು ನೀಡಿಕೆ ಎಂದರೆ ಕೆಲವೇ ಚುಚ್ಚುಮದ್ದುಗಳ ನೀಡಿಕೆಯ ಸಾಧ್ಯತೆ.  

ಚುಚ್ಚುಮದ್ದುಗಳ ಮೂಲಕ ರೋಗನಿರೋಧಕತೆಯನ್ನು ಪಡೆಯುವುದಕ್ಕಿಂತ ಕಾಯಿಲೆಯ ಮೂಲಕ ನೈಸರ್ಗಿಕವಾಗಿ ರೋಗನಿರೋಧಕತೆಯನ್ನು ಬೆಳೆಸುವುದು ಹೆಚ್ಚು ಉತ್ತಮವೇ? 
ನೈಸರ್ಗಿಕ ಸೋಂಕಿನ ರೀತಿಯಲ್ಲಿಯೇ ಚುಚ್ಚುಮದ್ದೂ ಸಹ ರೋಗನಿರೋಧಕ ವ್ಯವಸ್ಥೆಯ ಮಧ್ಯೆ ಪ್ರವೇಶಿಸಿ, ಪ್ರತಿಕ್ರಿಯೆಯನ್ನು ಉತ್ಪಾದಿಸಲು, ಪ್ರತಿರಕ್ಷಣಾ ವ್ಯವಸ್ಥೆಯನ್ನು ಅಂದರೆ ರೋಗನಿರೋಧಕತೆಯನ್ನು ಪ್ರಚೋದಿಸುತ್ತದೆ.  ರೋಗನಿರೋಧಕ ಚುಚ್ಚುಮದ್ದು ಕಾಯಿಲೆಯನ್ನು ಉಂಟು ಮಾಡುವುದಿಲ್ಲ ಅಥವಾ ರೋಗನಿರೋಧಕವನ್ನು ಪಡೆದ ವ್ಯಕ್ತಿಯನ್ನು ಅದರ ತೊಡಕುಗಳಿಗೆ ಈಡಾಗುವ ಅಪಾಯವನ್ನು ಉಂಟು ಮಾಡುವುದಿಲ್ಲ. ಇದಕ್ಕೆ ಪ್ರತಿಯಾಗಿ, ನೈಸರ್ಗಿಕ ಸೋಂಕಿನ ಮೂಲಕ ರೋಗನಿರೋಧಕತೆಯನ್ನು ಗಳಿಸುವುದು. ಅಂದರೆ ಅದು ಹೆಮೋಫಿಲಸ್‌ ಇನ್‌ಫ‌ುÉಯೆಂಝಾ ಟೈಪ್‌-ಬಿ (ಹಿಬ್‌) ಸೋಂಕಿನಿಂದ ಬುದ್ಧಿಮಾಂದ್ಯತೆಗೆ ಈಡಾಗುವುದು, ರುಬೆಲ್ಲಾ ಸೋಂಕಿನಿಂದ ಜನ್ಮಜಾತ ವೈಕಲ್ಯವನ್ನು ಅನುಭವಿಸುವುದು, ಹೆಪಟೈಟಿಸ್‌ ಬಿ ವೈರಸ್‌ ಸೋಂಕಿನಿಂದ ಪಿತ್ತಜನಕಾಂಗದ ಕ್ಯಾನ್ಸರ್‌ಗೆ ಒಳಗಾಗುವುದು ಅಥವಾ ದಡಾರದ ಕಾರಣದಿಂದ ಮರಣಕ್ಕೆ ತುತ್ತಾಗುವಂತಹ ಬೆಲೆಯನ್ನು ತೆರುವುದು ಎಂದು ಅರ್ಥಮಾಡಿಕೊಳ್ಳಬಹುದು. 

ಜಾಗತಿಕ ರೋಗನಿರೋಧಕ 
ಸಪ್ತಾಹ

ಜಾಗತಿಕ ರೋಗನಿರೋಧಕ ಸಪ್ತಾಹ ಎಂಬುದು  ಜನರಲ್ಲಿ ರೋಗನಿರೋಧಕತೆಯ ಬಗ್ಗೆ ಜಾಗೃತಿಯನ್ನು ಉಂಟು ಮಾಡಲು ಮತ್ತು ಚುಚ್ಚುಮದ್ದಿನಿಂದ ತಡೆಯಲು ಸಾಧ್ಯವಿರುವ ರೋಗಗಳ ವಿರುದ್ಧ ರೋಗನಿರೋಧಕ ಪ್ರಮಾಣವನ್ನು ಹೆಚ್ಚಿ ಸಲು ಆಯೋಜಿಸುವ ಒಂದು ಜಾಗತಿಕ ಅಭಿಯಾನ. 

ಟಾಪ್ ನ್ಯೂಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-health

Mother: ತಾಯಂದಿರ ಮಾನಸಿಕ ಆರೋಗ್ಯ

16

Vaccines: ವಯಸ್ಕರಿಗೆ ಲಸಿಕೆಗಳು

5-

ಅಂತಾರಾಷ್ಟ್ರೀಯ ಫ್ಲೂ ದಿನ: ಇನ್‌ಫ್ಲುಯೆಂಜಾ ಅರಿವು ಮತ್ತು ತಡೆ: ಕಾರ್ಯಾಚರಣೆಯ ಕರೆ

4–Lupus-Nephritis

Lupus Nephritis: ಲೂಪಸ್‌ ನೆಫ್ರೈಟಿಸ್‌: ರೋಗಿಗಳಿಗೆ ಒಂದು ಮಾರ್ಗದರ್ಶಿ

3

Mental health: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.